ಈ ದಿನ ಸಂಪಾದಕೀಯ | ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗ, ಕಾರ್ಯಸಾಧ್ಯವೇ?

Date:

ಇಲ್ಲಿ, ಸರೋಜಿನಿ ಮಹಿಷಿ ವರದಿಯೂ ಜಾರಿಯಾಗಲಿಲ್ಲ, ಕನ್ನಡ ಭಾಷೆ ಅನ್ನದ ಭಾಷೆಯೂ ಆಗಲಿಲ್ಲ, ಈಗ ಇಂಗ್ಲಿಷ್ ಕಲಿತ ಕನ್ನಡದ ಮಕ್ಕಳ ಭವಿಷ್ಯವೂ ಭದ್ರವಾಗುತ್ತಿಲ್ಲ, ಕನ್ನಡ ಬೌದ್ಧಿಕ ಜಗತ್ತು ಕೂಡ ಕಳವಳ ವ್ಯಕ್ತಪಡಿಸುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗ ಕಾರ್ಯಸಾಧ್ಯವೇ ಎಂಬ ಪ್ರಶ್ನೆ, ಪ್ರಶ್ನೆಯಾಗಿಯೇ ಉಳಿದರೆ ಆಶ್ಚರ್ಯವಿಲ್ಲ.

ಅಕ್ಟೋಬರ್ ಕೊನೆ ವಾರದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಐಟಿ ಉದ್ಯೋಗಾಕಾಂಕ್ಷಿ ಯುವತಿಯೊಬ್ಬರು, ‘ರೆಸ್ಯೂಮ್‌ನಲ್ಲಿ ಕನ್ನಡವನ್ನು ಮಾತೃಭಾಷೆ ಎಂದು ನಮೂದಿಸಿದ್ದಕ್ಕೆ ಐಟಿ ಕಂಪನಿಯೊಂದು ಉದ್ಯೋಗಾವಕಾಶ ನಿರಾಕರಿಸಿದೆ. ಕರ್ನಾಟಕದಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ’ ಎಂದು ಅಳಲು ತೋಡಿಕೊಂಡಿದ್ದರು.

- Advertisement -

ಅದು ಕನ್ನಡ ರಾಜ್ಯೋತ್ಸವಕ್ಕೆ ಕನ್ನಡಿಗರು ಸಿದ್ಧಗೊಳ್ಳುವ ಸಂದರ್ಭವಾದ್ದರಿಂದ ಸಹಜವಾಗಿಯೇ ಕನ್ನಡ ಯುವತಿಯ ವಿಡಿಯೋ ವೈರಲ್ ಆಯಿತು. ಕನ್ನಡಿಗರಲ್ಲಿ ಕನ್ನಡದ ಪ್ರಜ್ಞೆ ಜಾಗೃತವಾಯಿತು. ಕರ್ನಾಟಕದಲ್ಲಿ ಕನ್ನಡಿಗರಿಗೆ ಅನ್ಯಾಯ ಎಂಬುದು ಮುನ್ನೆಲೆಗೆ ಬಂದಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮನುಷ್ಯ ಜಾತಿ ಒಂದೇ; ಮೇಲು–ಕೀಳು ಎಂಬ ಭೇದವೇಕೆ?

ಒಂದೆಡೆ ಧರ್ಮದ ಭೇದ ಮರೆತು ಸಹಬಾಳ್ವೆ ನಡೆಸುವ ಹಳ್ಳಿಗಳು; ಮತ್ತೊಂದೆಡೆ ಜಾತಿಯ ಹೆಸರಿನಲ್ಲಿ ಅಸ್ಪೃಶ್ಯತೆ, ಹಲ್ಲೆ ಮತ್ತು ಸಾಮಾಜಿಕ ಬಹಿಷ್ಕಾರ! ರಾಯಚೂರಿನ ತಿಡಿಗೋಳ ಘಟನೆ ಮನುಷ್ಯತ್ವ, ಸಮಾನತೆ ಮತ್ತು ಸಂವಿಧಾನದ ಆಶಯಗಳ ಕುರಿತು...

ʼಸ್ಟಿಂಗ್‌ʼ ಸರ್ಕಸ್‌ | ಬೇಳೆ ಬೇಯಿಸಿಕೊಂಡವರಾರೋ, ಸಂತ್ರಸ್ತರಾರೋ!

ರಾಜ್ಯಾದ್ಯಂತ ಈಗ ಭಾರೀ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ಪ್ರಕರಣವು ಹೊಸ ಪರ-ವಿರೋಧ ಚರ್ಚೆಗಳಿಗೆ ವೇದಿಕೆ ಸೃಷ್ಟಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಕುಗ್ಗಿಸಲು ಮತ್ತು ಅವರ ತೇಜೋವಧೆ ಮಾಡಲೆಂದೇ ಈ...

ರಾಹುಲ್ ಗಾಂಧಿಯವರನ್ನು ಕೆಣಕಿದವರೇ, ಅವರು ಸಿಡಿದೇಳಲು ಕಾರಣರಾದರು! ಅದು...

ರಾಹುಲ್ ಗಾಂಧಿಯವರನ್ನು ರಾಜಕೀಯವಾಗಿ ಅಪ್ರಸ್ತುತಗೊಳಿಸಲು ನಿರಂತರವಾಗಿ ಪ್ರಯತ್ನಿಸಿದವರು, ಅವರ ಹೆಸರನ್ನು ದೇಶದ ರಾಜಕೀಯ ಚರ್ಚೆಯಿಂದ ಅಳಿಸಲು ಸಾಧ್ಯವಾಗಲಿಲ್ಲ. ಬದಲಾಗಿ ಅವರ ರಾಜಕೀಯ ಚಟುವಟಿಕೆಗಳು ಮತ್ತು ಅವರು ಎತ್ತುವ ಪ್ರಶ್ನೆಗಳೇ ಸಾರ್ವಜನಿಕ ಚರ್ಚೆಯ ಭಾಗವಾದವು. ರಾಜಕೀಯದಲ್ಲಿ...

ಇದಕ್ಕೆ ಪೂರಕವಾಗಿ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ನಿರಾಕರಿಸುವ, ರಾಜಧಾನಿ ಬೆಂಗಳೂರಿಗೆ ವಲಸಿಗರು ನೀರಿನಂತೆ ಹರಿದುಬರುತ್ತಿರುವ, ಕನ್ನಡ ಕಡೆಗಣಿಸುವವರ ಸಂಖ್ಯೆ ಹೆಚ್ಚಾಗುತ್ತಿರುವ, ಕರ್ನಾಟಕದಲ್ಲಿ ಕನ್ನಡವೇ ಕಣ್ಮರೆಯಾಗುತ್ತಿರುವ ಕುರಿತ ಚರ್ಚೆ ವ್ಯಾಪಕತೆ ಪಡೆಯಿತು. ಅದನ್ನು ಸೋಷಿಯಲ್ ಮೀಡಿಯಾ ಮತ್ತು ಮುಖ್ಯವಾಹಿನಿ ಮಾಧ್ಯಮಗಳು ಜೀವಂತವಾಗಿಟ್ಟವು.

ಅದೇ ಸಮಯಕ್ಕೆ ಸರಿಯಾಗಿ ನವೆಂಬರ್ 1 ಬಂದಿತು. ಕನ್ನಡ ರಾಜ್ಯೋತ್ಸವ ಆಚರಣೆ, ಸಾಧಕರನ್ನು ಗುರುತಿಸಿ ಸನ್ಮಾನ-ಸಂಭ್ರಮ ಸರ್ಕಾರದ ಭಾಗವಾಯಿತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಹಜವಾಗಿಯೇ ಆ ವಾರ ಹೆಚ್ಚು ಚರ್ಚೆಯಲ್ಲಿದ್ದ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡದೆ ಕಡೆಗಣಿಸಿದ ಸಂಗತಿಯತ್ತ ಗಮನ ಹರಿಸಿದರು. ತಕ್ಷಣ ಎಚ್ಚೆತ್ತವರಂತೆ ಐಟಿ ಕಂಪನಿಗಳಿಗೆ ಕಟು ಎಚ್ಚರಿಕೆ ನೀಡಿದರು. ‘ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಕನ್ನಡಿಗರನ್ನು ಉದ್ದೇಶಪೂರ್ವಕವಾಗಿ ಉದ್ಯೋಗದಿಂದ ಕಡೆಗಣಿಸಿದ್ದರೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ’ ಎಂದೆಲ್ಲಾ ಗುಡುಗಿದರು.

ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿ ಒಂದು ವಾರ ಕಳೆಯಿತು. ಆದರೆ, ಆ ಎಚ್ಚರಿಕೆಯ ನಂತರ ನಡೆದ ಬೆಳವಣಿಗೆಗಳೇನು, ಖಾಸಗಿ ಕಂಪನಿಗಳಿಗೆ ನೋಟಿಸ್ ನೀಡಲಾಗಿದೆಯೇ, ತನಿಖೆ ಯಾವ ಹಂತದಲ್ಲಿದೆ, ಯಾವ ಕ್ರಮ ಜರುಗಿಸಲಾಗಿದೆ, ದೂರುದಾರರಿಗೆ ನ್ಯಾಯ ಒದಗಿಸಲು ಸರ್ಕಾರ ಏನು ಕ್ರಮ ಕೈಗೊಂಡಿದೆ- ಈ ಪ್ರಶ್ನೆಗಳಿಗೆ ಇದುವರೆಗೂ ಸ್ಪಷ್ಟ ಉತ್ತರವಿಲ್ಲ.

ಇದನ್ನು ಓದಿದ್ದೀರಾ?: ಮೋದಿಗೆ ರಾಹುಲ್‌ ಸವಾಲು; ʼದೂಧ್‌ ಕಾ ದೂಧ್‌, ಪಾನಿ ಕಾ ಪಾನಿ ಆಗಿಬಿಡಲಿ!

ಇದೇ ರೀತಿ ಹಿಂದೊಮ್ಮೆ, ಜುಲೈ 2024ರಲ್ಲಿ, ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಕನ್ನಡಿಗರ ಉದ್ಯೋಗಾವಕಾಶಗಳನ್ನು ರಕ್ಷಿಸುವ ಉದ್ದೇಶದಿಂದ, ‘ಬೆಂಗಳೂರಿನ ಐಟಿ-ಬಿಟಿ ಕಂಪನಿಗಳು ಸೇರಿದಂತೆ ಕರ್ನಾಟಕ ರಾಜ್ಯ ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಮಸೂದೆ, 2024’ಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಆದರೆ ಅದಾಗಿ ಇಲ್ಲಿಗೆ 18 ತಿಂಗಳು ಉರುಳಿ ಹೋಗಿವೆ. ಖಾಸಗಿ ವಲಯದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ಆ ಪ್ರಸ್ತಾವಿತ ಮಸೂದೆ ಇವತ್ತಿಗೂ ಜಾರಿಯಾಗಿಲ್ಲ.

ಕುತೂಹಲಕರ ಸಂಗತಿ ಎಂದರೆ, ಆಗ ಐಟಿ ವಲಯದ ದಿಗ್ಗಜರು ಆ ಮಸೂದೆಯನ್ನು ತೀವ್ರವಾಗಿ ವಿರೋಧಿಸಿದರು. ಇದು ನೇಮಕಾತಿ ಪ್ರಕ್ರಿಯೆ, ವ್ಯವಹಾರ ನಿರ್ವಹಣೆ ಮತ್ತು ಕರ್ನಾಟಕದಲ್ಲಿನ ಹೂಡಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಮಸೂದೆಯ ಕರಡನ್ನು ತಡೆಹಿಡಿಯಿತು ಮತ್ತು ಅದನ್ನು ವಿಧಾನಸಭೆಯಲ್ಲಿ ಮಂಡಿಸದೆ ಮೌನಕ್ಕೆ ಜಾರಿತು.

ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ಬದಲಾಗಿ ಖಾಸಗಿ ಕಂಪನಿಗಳು ತಮ್ಮ ಲಾಭದ ಒಂದು ಭಾಗವನ್ನು ಬಡವರ ಕಲ್ಯಾಣ, ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ ಮುಂತಾದ ಸಾರ್ವಜನಿಕ ಹಿತಾಸಕ್ತಿಯ ಕೆಲಸಗಳಿಗಾಗಿ ಖರ್ಚು ಮಾಡುವ ಅಲಿಖಿತ ಒಪ್ಪಂದ ಮಾಡಿಕೊಂಡವು. ಅದಕ್ಕೆ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿ(CSR fund) ಎಂದು ಕರೆಯಲಾಗುತ್ತದೆ. ನಿವ್ವಳ ಲಾಭದ ಕನಿಷ್ಠ ಶೇ. 2ರಷ್ಟನ್ನು CSR ಚಟುವಟಿಕೆಗಳಿಗೆ ಖರ್ಚು ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಆದರೆ, ಎಷ್ಟು ಖಾಸಗಿ ಕಂಪನಿಗಳು ಸಿಎಸ್ಆರ್ ಫಂಡನ್ನು ಸಮಾಜದ ಅಭಿವೃದ್ಧಿಗಾಗಿ ವಿನಿಯೋಗಿಸುತ್ತಿವೆ, ಅದು ಸರ್ಕಾರದ ಗಮನಕ್ಕೆ ಬಂದಿದೆಯೇ, ಕಂಪನಿಗಳು ಲೆಕ್ಕ ಕೊಟ್ಟಿವೆಯೇ… ಪ್ರಶ್ನಿಸುವಂತಹ ಸ್ಥಿತಿಯಲ್ಲಿ ಸರ್ಕಾರವೂ ಇಲ್ಲ, ಖಾಸಗಿ ವಲಯವೂ ಅದನ್ನು ಬಯಸುವುದಿಲ್ಲ.

ಈ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯು ಕನ್ನಡಿಗರ ಉದ್ಯೋಗದ ಹಕ್ಕುಗಳ ರಕ್ಷಣೆಗಾಗಿ ನವೆಂಬರ್ 1, ಕನ್ನಡ ರಾಜ್ಯೋತ್ಸವದ ದಿನದಿಂದ ಒಂದು ತಿಂಗಳ ಕಾಲ ರಾಜ್ಯದ ಐಟಿ–ಬಿಟಿ ಸಂಸ್ಥೆಗಳನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸುವ ಹಾಗೂ ಸ್ಥಳೀಯ ಅಭ್ಯರ್ಥಿಗಳಿಗೆ ನ್ಯಾಯಯುತ ಉದ್ಯೋಗಾವಕಾಶ ಕಲ್ಪಿಸುವಂತೆ ಆಗ್ರಹಿಸುವ ರಾಜ್ಯವ್ಯಾಪಿ ಅಭಿಯಾನವನ್ನು ಹಮ್ಮಿಕೊಂಡಿದೆ. ಅವರು ಮಾಹಿತಿ ಸಂಗ್ರಹಿಸಿ, ಸರ್ಕಾರವನ್ನು ಆಗ್ರಹಿಸಬಹುದೇ ಹೊರತು, ಕನ್ನಡಿಗರಿಗೆ ಕೆಲಸ ಕೊಡಿಸಲು ಸಾಧ್ಯವೇ ಎಂಬ ಪ್ರಶ್ನೆ ಎದುರಾಗುತ್ತದೆ.

ಇನ್ನು ಬೇರೆ ರಾಜ್ಯಗಳ ಸ್ಥಿತಿಗತಿ ಗಮನಿಸಿದರೆ, ಆಂಧ್ರಪ್ರದೇಶದಲ್ಲಿ ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಶೇ. 75ರಷ್ಟು ಉದ್ಯೋಗಗಳನ್ನು ಮೀಸಲಿರಿಸುವ ನಿಯಮ ಕಾನೂನಾತ್ಮಕ ಸವಾಲುಗಳನ್ನು ಎದುರಿಸುತ್ತಿದೆ. ತಮಿಳುನಾಡಿನಲ್ಲಿ ನೇರವಾಗಿ ಖಾಸಗಿ ವಲಯದಲ್ಲಿ ಕಡ್ಡಾಯ ಕೋಟಾ ಜಾರಿಗೆ ತಂದಿಲ್ಲವಾದರೂ, ಸ್ಥಳೀಯರಿಗೆ ಶೇ. 75ರಷ್ಟು ಉದ್ಯೋಗ ನೀಡುವ ಖಾಸಗಿ ಕಂಪನಿಗಳಿಗೆ ಜಿಎಸ್‌ಟಿ ಮತ್ತು ವಿದ್ಯುತ್ ಶುಲ್ಕದಲ್ಲಿ ಸಬ್ಸಿಡಿ ನೀಡುವಂತಹ ಪ್ರೋತ್ಸಾಹಕ ಯೋಜನೆ, ಚರ್ಚೆಯ ಹಂತದಲ್ಲಿದೆ. ಹರಿಯಾಣದಲ್ಲಿ ಜಾರಿಯಾಗಿದ್ದು, ನ್ಯಾಯಾಲಯದ ತಡೆಯಾಜ್ಞೆಯ ನಂತರ ಯಥಾಸ್ಥಿತಿ ಮುಂದುವರೆದಿದೆ.

2007-08ರಲ್ಲಿ ಉತ್ತರ ಪ್ರದೇಶದಲ್ಲಿ ಮಾಯಾವತಿಯವರು ಮುಖ್ಯಮಂತ್ರಿಯಾಗಿದ್ದಾಗ, ಖಾಸಗಿ ವಲಯದಲ್ಲಿ 30% ಉದ್ಯೋಗ ಮೀಸಲಾತಿಯನ್ನು ಜಾರಿಗೆ ತರಲು ಯತ್ನಿಸಿದ್ದರು. ಪರಿಶಿಷ್ಟ ಜಾತಿಗೆ 10, ಹಿಂದುಳಿದ ವರ್ಗಕ್ಕೆ 10, ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗಕ್ಕೆ 10 ಎಂದು ವಿಂಗಡಿಸಲಾಗಿತ್ತು. ಇದು ಮುಖ್ಯವಾಗಿ ಸರ್ಕಾರದಿಂದ ಭೂಮಿ, ಸಬ್ಸಿಡಿ, ತೆರಿಗೆ ರಿಯಾಯಿತಿ ಅಥವಾ ಇತರ ವಿಶೇಷ ಸೌಲಭ್ಯಗಳನ್ನು ಪಡೆಯುವ ಹೊಸ ಖಾಸಗಿ ಉದ್ಯಮಗಳಿಗೆ ಅನ್ವಯಿಸುವ ವ್ಯವಸ್ಥೆಯಾಗಿತ್ತು. ಆದರೆ, ಕಾಲಾನಂತರ ಅದು ಕಾಯ್ದೆಯಾಗಲಿಲ್ಲ. ಜಾರಿಗೂ ಬರಲಿಲ್ಲ.

ಕರ್ನಾಟಕ ರಾಜ್ಯ ಕೂಡ ಬಂಡವಾಳ ಆಕರ್ಷಿಸುವ ನಿಟ್ಟಿನಲ್ಲಿ ಸಚಿವರು-ಅಧಿಕಾರಿಗಳು ದೇಶ-ವಿದೇಶಗಳಿಗೆ ಭೇಟಿ ನೀಡುತ್ತಾರೆ. ಪ್ರತಿಷ್ಠಿತ ಖಾಸಗಿ ಕಂಪನಿ ಮಾಲೀಕರನ್ನು ರಾಜ್ಯಕ್ಕೆ ಬರಮಾಡಿಕೊಳ್ಳುತ್ತಾರೆ. ಅದಕ್ಕಾಗಿ ನಾಡಿನ ನೆಲ, ಜಲ, ವಿದ್ಯುತ್‌, ರಸ್ತೆಗಳು, ರಕ್ಷಣೆ, ಮಾನವ ಸಂಪನ್ಮೂಲ, ಸಾರ್ವಜನಿಕ ವ್ಯವಸ್ಥೆಗಳು ಹಾಗೂ ಸರ್ಕಾರದ ನೀತಿಗಳನ್ನು ಖಾಸಗಿ ಕಂಪನಿಗಳಿಗೆ ಅನುಕೂಲವಾಗುವಂತೆ ನೋಡಿಕೊಳ್ಳುತ್ತಾರೆ. ಅವರು ಇಲ್ಲಿ ಕಂಪನಿ-ಕಾರ್ಖಾನೆ ತೆರೆಯುವುದೇ ಭಾಗ್ಯವೆಂದು ಭ್ರಮಿಸುತ್ತಾರೆ. ಭಾರೀ ಉಮೇದಿನಲ್ಲಿ ಉದ್ಯೋಗ ಸೃಷ್ಟಿ ಮತ್ತು ಅಂಕಿ-ಸಂಖ್ಯೆಗಳ ಲೆಕ್ಕ ಕುರಿತು ಮಾತನಾಡುತ್ತಾರೆ.

ಆದರೆ ಸ್ಥಳೀಯ ಅಭ್ಯರ್ಥಿಗಳಿಗೆ- ಕನ್ನಡಿಗರಿಗೆ ಉದ್ಯೋಗದ ಅವಕಾಶ ನೀಡುವ ವಿಚಾರದಲ್ಲಿ ನಿರ್ಲಕ್ಷ್ಯ, ತಾರತಮ್ಯ ಅಥವಾ ಅಸ್ಪಷ್ಟ ನೇಮಕಾತಿ ಪದ್ಧತಿಗಳಿಗೆ ಅವಕಾಶವಿರಬಾರದು ಎಂಬುದನ್ನು ಯಾವ ಸರ್ಕಾರಗಳೂ ಒತ್ತಿ ಹೇಳುವುದಿಲ್ಲ, ಕಡ್ಡಾಯ ಮಾಡಿದ್ದಿಲ್ಲ.

ಇದನ್ನು ಓದಿದ್ದೀರಾ?: ಕಬ್ಬು ಬೆಳೆಗಾರರ ಬಿಕ್ಕಟ್ಟನ್ನು ಬಗೆಹರಿಸಲಿ; ಆಗದಿದ್ದರೆ, ಅಧಿಕಾರ ಬಿಟ್ಟು ತೊಲಗಲಿ

ಕರ್ನಾಟಕದ ಪ್ರತಿಭಾವಂತ ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಕನ್ನಡಿಗರಿಗೆ ನೀಡುವ ಭಿಕ್ಷೆಯಲ್ಲ. ಅದು ಅವರ ಸಾಮಾಜಿಕ ಹೊಣೆಗಾರಿಕೆ. ಖಾಸಗಿ ಸಂಸ್ಥೆಗಳು ಸ್ಥಳೀಯರೊಂದಿಗೆ ಪ್ರೀತಿ, ಅಭಿಮಾನ, ಗೌರವದಿಂದ ಗುರುತಿಸಿಕೊಳ್ಳಬೇಕು. ಕನ್ನಡಿಗರಿಗೆ ಸೂಕ್ತ ಅವಕಾಶಗಳು ದೊರೆಯದಿದ್ದರೆ, ಅಂತಹ ಪರಿಸ್ಥಿತಿಯನ್ನು ಪರಿಶೀಲಿಸುವುದು ಮತ್ತು ಸರಿಪಡಿಸುವುದು ಸರ್ಕಾರದ ಕರ್ತವ್ಯವಾಗಬೇಕು, ಆಗಿಲ್ಲ.

ನವೆಂಬರ್ ಬಂದಾಗ ಕನ್ನಡ ಭಾಷಾ ಪ್ರೀತಿ ಮತ್ತು ಪ್ರಜ್ಞೆ ಎಚ್ಚರಗೊಳ್ಳುವುದು, ರಾಜ್ಯೋತ್ಸವದ ಮಾಸ ಮುಗಿಯುತ್ತಿದ್ದಂತೆ ಮರೆತು ಮಲಗುವುದು. ಹೀಗಾಗಿ ಇಲ್ಲಿ, ಸರೋಜಿನಿ ಮಹಿಷಿ ವರದಿಯೂ ಜಾರಿಯಾಗಲಿಲ್ಲ, ಕನ್ನಡ ಭಾಷೆ ಅನ್ನದ ಭಾಷೆಯೂ ಆಗಲಿಲ್ಲ, ಈಗ ಇಂಗ್ಲಿಷ್ ಕಲಿತ ಕನ್ನಡದ ಮಕ್ಕಳ ಭವಿಷ್ಯವೂ ಭದ್ರವಾಗುತ್ತಿಲ್ಲ, ಕನ್ನಡ ಬೌದ್ಧಿಕ ಜಗತ್ತು ಕೂಡ ಕಳವಳ ವ್ಯಕ್ತಪಡಿಸುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗ ಕಾರ್ಯಸಾಧ್ಯವೇ ಎಂಬ ಪ್ರಶ್ನೆ, ಪ್ರಶ್ನೆಯಾಗಿಯೇ ಉಳಿದರೆ ಆಶ್ಚರ್ಯವಿಲ್ಲ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮನುಷ್ಯ ಜಾತಿ ಒಂದೇ; ಮೇಲು–ಕೀಳು ಎಂಬ ಭೇದವೇಕೆ?

ಒಂದೆಡೆ ಧರ್ಮದ ಭೇದ ಮರೆತು ಸಹಬಾಳ್ವೆ ನಡೆಸುವ ಹಳ್ಳಿಗಳು; ಮತ್ತೊಂದೆಡೆ ಜಾತಿಯ...

ಹಾಲು, ಬಸ್ ದರ ಏರಿಕೆ; ಕಾಂಗ್ರೆಸ್ ಸರ್ಕಾರದ ಸರಣಿ ಎಡವಟ್ಟು!

ರಾಜ್ಯದಲ್ಲಿ ನವೆಂಬರ್ ತಿಂಗಳು ಜನಸಾಮಾನ್ಯರ ದೈನಂದಿನ ಬದುಕಿನ ಮೇಲಿನ ಭಾರೀ ಆರ್ಥಿಕ...

ಹಣಬಲ ಮಣಿಸಿದ ಜನಬಲ: ಅಮೆರಿಕದ ಸೆನೇಟ್‌ಗೆ ಮೊದಲ ಮುಸ್ಲಿಂ ಪ್ರತಿನಿಧಿ ‘ಅಬ್ದುಲ್ ಎಲ್ ಸಯ್ಯದ್’ ಆಯ್ಕೆ

ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಹೊಸ ಶಕೆಯೊಂದು ಆರಂಭವಾಗಿದೆ. ಮಿಶಿಗನ್ ರಾಜ್ಯದಿಂದ ಡೆಮಾಕ್ರಟಿಕ್...

ಯುಪಿಗೆ ಚಿರಾಗ್-ನಿತಿನ್ ಎಂಟ್ರಿ; ‘ಮಹಾ ಸಮರ’ಕ್ಕೆ ಸಜ್ಜಾದ ಎನ್‌ಡಿಎ

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ, ಬಿಹಾರದ...