ದತ್ತಾಂಶ ಆಧಾರಿತ ಯುಗದಲ್ಲಿ ನಿರ್ಧಾರಗಳನ್ನು ರೂಪಿಸುವುದು

Date:

- Advertisement -

ಭಾರತದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು (ಒಂಟು) ಜಿಡಿಪಿಯ ಹೊಸ ಸರಣಿಯ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. 2022-23ನ್ನು ಮೂಲವರ್ಷವಾಗಿಟ್ಟುಕೊಂಡು ಇದನ್ನು ಲೆಕ್ಕಹಾಕಲಾಗಿದೆ. ಈ ಅಂಕಿಅಂಶಗಳ ಪ್ರಕಾರ, ಮೂಲವರ್ಷವನ್ನು ಪರಿಷ್ಕರಿಸಿದ ಮೇಲೂ ಆರ್ಥಿಕತೆಯ ಬೆಳವಣಿಗೆ ಸದೃಡವಾಗಿಯೇ ಇದೆ. 2023-24 ರಿಂದ 2025-26ರ ಅವಧಿಯಲ್ಲಿ ನೈಜ ಜಿಡಿಪಿ ಬೆಳವಣಿಗೆಯ ದರ ಸರಾಸರಿ 7% ಕ್ಕಿಂತ ಹೆಚ್ಚಿದೆ. ಮತ್ತು ಅಂಕಿತ ಜಿಡಿಪಿ (Nominal GDP) ಬೆಳವಣಿಗೆಯ ದರ 9%ಕ್ಕಿಂತ ಹೆಚ್ಚಿದೆ. ಹಣಕಾಸು ವರ್ಷ 2026ರ ಎರಡನೇ ಮುಂಗಡ ಅಂದಾಜಿನ ಪ್ರಕಾರ. ನೈಜ ಜಿಡಿಪಿ ಶೇಕಡಾ 7.6ರಷ್ಟು ಬೆಳೆದಿದ್ದರೆ, ಅಂಕಿತ ಜಿಡಿಪಿ ಶೇಕಡಾ 8.6ರಷ್ಟು ಹೆಚ್ಚಿದೆ. ಮೂಲ ವರ್ಷವನ್ನು ಪರಿಷ್ಕರಿಸುವಾಗ ಜಿಡಿಪಿ ಲೆಕ್ಕಾಚಾರದ ಕ್ರಮದಲ್ಲೂ ಹಲವಾರು ಬದಲಾವಣೆಗಳನ್ನು ಅಳವಡಿಸಿಕೊಳ್ಳಲಾಗಿದೆ. ದತ್ತಾಂಶ ಸಂಗ್ರಹಕ್ಕೆ ಹೊಸ ಮೂಲಗಳನ್ನು ಬಳಸಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಈ ಅಂಕಿಅಂಶಗಳ ಮಹತ್ವವು ಇನ್ನೂ ಎದ್ದು ಕಾಣುತ್ತದೆ. ಹಣದುಬ್ಬರದ ಪರಿಣಾಮವನ್ನು ಸರಿದೂಗಿಸುವುದಕ್ಕೆ (Deflation) ಹೆಚ್ಚು ಸಂಸ್ಕರಿಸಿದ ವಿಧಾನಗಳ ಅಳವಡಿಕೆ, ವಾರ್ಷಿಕ ಸಮೀಕ್ಷಾ ವರದಿಗಳು ಮತ್ತು ವ್ಯಾಪಕವಾದ ಆಡಳಿತಾತ್ಮಕ ದತ್ತಾಂಶಗಳ ಕ್ರೋಡೀಕರಣದಿಂದ ಆರ್ಥಿಕತೆಯ ಬದಲಾಗುತ್ತಿರುವ ಚಲನಶೀಲತೆಯನ್ನು ಹೆಚ್ಚು ಸ್ಪಷ್ಟವಾಗಿ ಸೆರೆಹಿಡಿಯಲು ಸಾಧ್ಯವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...
Untitled design 2024 05 31T075322.772

ಭಾರತದ ಜಿಡಿಪಿ ಲೆಕ್ಕಾಚಾರದ ವಿಧಾನದ ಬಗ್ಗೆ ವ್ಯಾಪಕವಾದ ಆಸಕ್ತಿಯನ್ನು ವ್ಯಕ್ತಪಡಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿಯೂ ಇದು ಮುಖ್ಯವಾಗುತ್ತದೆ. ಏಕೆಂದರೆ ಲೆಕ್ಕಾಚಾರದ ವಿಧಾನವೇ ಆಗಾಗ್ಗೆ ಆರ್ಥಿಕತೆಯ ಕಾರ್ಯಕ್ಷಮತೆಯ ಬಗೆಗಿನ ಬಹುತೇಕ ಚರ್ಚೆಗಳಲ್ಲಿ ಲೆಕ್ಕಾಚಾರದ ವಿಧಾನದ ಬಗ್ಗೆಯೇ ಪ್ರಧಾನವಾಗಿ ಚರ್ಚಿಸಲಾಗಿದೆ. ಪರಿಷ್ಕೃತ ಜಿಡಿಪಿ ಸಂಖ್ಯೆಗಳು ಕೇವಲ ಅಂಕಿಅಂಶಗಳಲ್ಲ. ಅವು ಅದಕ್ಕಿಂತ ಹೆಚ್ಚಾಗಿ ವಿವಿಧ ಸರ್ಕಾರಿ ಯೋಜನೆಗಳು ನೀತಿಗಳನ್ನು ವಾಸ್ತವದಲ್ಲಿ ಹೇಗೆ ಜಾರಿಗೆ ತರಲಾಗುತ್ತಿದೆ ಮತ್ತು ‘ವಿಕಸಿತ ಭಾರತ @ 2047’ರ ವಿಶಾಲ ದೃಷ್ಟಿಕೋನವನ್ನು ಹೇಗೆ ಮುನ್ನಡೆಸಸಲಾಗುತ್ತಿದೆ ಎಂಬುದನ್ನು ಅವು ಪ್ರತಿಬಿಂಬಿಸುತ್ತವೆ.

2023-24ರಿಂದ 2025-26ರ ಅವಧಿಯಲ್ಲಿ ತಯಾರಿಕಾ ವಲಯವು ಸರಾಸರಿ ಶೇಕಡಾ 11ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಅಂದರೆ ‘ಡಬಲ್ ಡಿಪ್ಲೇಷನ್’ ಅಂತಹ ಸುಧಾರಿತ ವಿಧಾನಗಳ ಬಳಕೆ ಮತ್ತು ಹೊಸ ದತ್ತಾಂಶ ಮೂಲಗಳ ಅಳವಡಿಕೆಯಿಂದ ಈ ವಲಯದ ನೈಜ ವೇಗವನ್ನು ಹೆಚ್ಚು ಪರಿಣಾಮಕಾರಿಯಾಗಿ ಸೆರೆಹಿಡಿಯಲು ಸಾಧ್ಯವಾಗಿದೆ. ಉತ್ಪಾದನಾ ಆಧಾರಿತ ಪ್ರೋತ್ಸಾಹಕ (PLI) ಯೋಜನೆಯೂ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಸರ್ಕಾರವು ಈ ತಯಾರಿಕಾ ವಲಯದ ಬೆಳವಣಿಗೆಯನ್ನು ಸಕ್ರಿಯವಾಗಿ ಉತ್ತೇಜಿಸುತ್ತಿದೆ. ಹೊಸ ಜಿಡಿಪಿ ಸರಣಿಯು ಕೃಷಿ ವಲಯದಲ್ಲಿ ಹೆಚ್ಚಿನ ಬೆಳವಣೆಗೆಯಾಗಿದೆ ಎಂದು ಸೂಚಿಸುತ್ತಿದೆ. ಕೃಷಿ ವಲಯದ ಜಿಡಿಪಿ ಏರಿಕೆಗೆ ಡೀಸೆಲ್ ಬಳಕೆಯಲ್ಲಿ ಇಳಿಕೆಯಾಗಿರುವುದು ಮತ್ತು ಹಣ್ಣು ಹಾಗೂ ತರಕಾರಿಗಳ ವೆಯಟೇಜ್ (ಮೌಲ್ಯವನ್ನು) ಹೆಚ್ಚಿರುವುದು ಮುಖ್ಯ ಕಾರಣವಾಗಿದೆ. ವೆಚ್ಚದ ಒತ್ತಡ ಕಡಿಮೆಯಾಗಿರುವುದು. ಸರ್ಕಾರದ ಪ್ರೇರಣೆಯಿಂದ ರೈತರು ಸೌರಶಕ್ತಿಯನ್ನು ಹೆಚ್ಚಾಗಿ ಬಳಸುತ್ತಿರುವುದು ಮತ್ತು ನೀತಿಗಳು ಹೆಚ್ಚಿನ ಮೌಲ್ಯವರ್ಧಿತ ಕೃಷಿಯನ್ನು ಪ್ರೋತ್ಸಾಹಿಸುತ್ತಿರುವುದು ಇತ್ಯಾದಿ ಬದಲಾವಣೆಗಳು ಸ್ವಾಗತಾರ್ಹ. ಇದರಿಂದ ಕೃಷಿ ಹೆಚ್ಚು ಲಾಭದಾಯಕವಾಗುತ್ತದೆ. ಮತ್ತು ರೈತರ ಆದಾಯ ಸುಧಾರಿಸುತ್ತದೆ. ಅಸಂಘಟಿತ ವಲಯದ ಉದ್ಯಮಗಳ ವಾರ್ಷಿಕ ಸಮೀಕ್ಷೆ (ASUSE) ಮತ್ತು ಕಾಲಿಕ ಕಾರ್ಮಿಕ ಬಲ ಸಮೀಕ್ಷೆಯಂತಹ (ಕಐಈಖ) ಹೊಸ ಸಮಿಕ್ಷೆಗಳಿಂದ ಸಂಗ್ರಹವಾದ ದತ್ತಾಂಶಗಳನ್ನು ಬಳಸುತ್ತಿರುವುದರಿಂದ ಜಿಡಿಪಿ ಅಂದಾಜು ಸ್ವರೂಪ ಬದಲಾಗಿದೆ.

ಮುಖ್ಯವಾಗಿ ಅಸಂಘಟಿತ ವಲಯದ ಪ್ರಾಬಲ್ಯವಿರುವ ವ್ಯಾಪಾರ, ಸಾರಿಗೆ ಮತ್ತು ಇತರ ಸೇವಾ ವಲಯಗಳಲ್ಲಿ ಈ ಬದಲಾವಣೆಯನ್ನು ಸ್ಪಷ್ಟವಾಗಿ ಕಾಣಬಹುದು. ಹಿಂದೆ ಇಂತಹ ಅಸಂಘಟಿತ ವಲಯದ ಉದ್ಯಮಗಳ ಅಂದಾಜನ್ನು ಲೆಕ್ಕಹಾಕಲು ಪರೋಕ್ಷ ಅಂದಾಜುಗಳನ್ನು ಬಳಸಲಾಗುತ್ತಿತ್ತು. ಆದರೆ ಈಗ ನೇರ ಅಂದಾಜುಗಳನ್ನು ಬಳಸಲಾಗುತ್ತಿದೆ. ಉದಾಹರಣೆಗೆ, ವ್ಯಾಪಾರ, ಹೋಟೆಲ್‌ಗಳು, ಸಾರಿಗೆ ಮತ್ತು ಸಂವಹನ ಉಪ-ವಲಯವು 2023-24 ರಿಂದ 2025-26ರ ಅವಧಿಯಲ್ಲಿ ಸರಾಸರಿ ಶೇಕಡಾ 9ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಇದಕ್ಕೆ ಸ್ವಲ್ಪಮಟ್ಟಿಗೆ ಉತ್ತಮ ದತ್ತಾಂಶದ ಬಳಕೆ ಕಾರಣ. ASUSE ಮತ್ತು PLFSನಂತಹ ಸಮೀಕ್ಷೆಗಳಿಂದಾಗಿ ಈಗ ಅಸಂಘಟಿತ ವಲಯ ಮತ್ತು ಕಾರ್ಮಿಕರ ಉತ್ಪಾದಕತೆಯ ಬಗ್ಗೆ ಹೆಚ್ಚು ಸ್ಪಷ್ಟವಾದ ಚಿತ್ರ ಕಾಣುತ್ತಿದೆ. ಈಗ ಅಸಂಘಟಿತ ವಲಯದ ಬೆಳವಣಿಗೆಯನ್ನು ಹೆಚ್ಚು ನಿಖರವಾಗಿ ಗುರುತಿಸಬಹುದು. ಅದೇ ರೀತಿ, ನವೀಕರಿಸಿದ ದತ್ತಾಂಶ ಮೂಲಗಳನ್ನು ಬಳಸಿರುವುದರಿಂದ ಮನೆ ಹೊಂದಿರುವವರ ಸಂಖ್ಯೆಯಲ್ಲಿ ಏರಿಕೆಯಾಗಿರುವುದು ತಿಳಿಯುತ್ತಿದೆ. ಇದಕ್ಕೆ ಸರ್ಕಾರ ಅಗ್ಗದ ದರದಲ್ಲಿ ವಸತಿ ಕಲ್ಪಿಸುವ ಯೋಜನೆಗಳನ್ನು ರೂಪಿಸಿದ್ದು ಕಾರಣ, ‘ಡಿಜಿಟಲ್ ಇಂಡಿಯಾ’ದಂತಹ ಸರ್ಕಾರಿ ಯೋಜನೆಗಳ ಮೂಲಕ ಹೊಸ ಡಿಜಿಟಲ್ ದತ್ತಾಂಶಗಳು ಲಭ್ಯವಿದೆ. ಈ ದತ್ತಾಂಶಗಳೂ ಜಿಡಿಪಿ ಅಂದಾಜು ಮಾಡುವ ಪ್ರಕ್ರಿಯೆಗೆ ನೆರವಾಗಿವೆ.

ಇ-ವಾಹನ (e-Vahan), ಎಂಜಿಟಿ-7 (ಒಉಖಿ-7) ಕಾರ್ಪೊರೇಟ್ ರಿಟರ್ನ್ಸ್, ಜಿಎಸ್‌ಟಿ (ಉಖಖಿ) ದತ್ತಾಂಶ ಮತ್ತು ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆಯ (PFMS) ದತ್ತಾಂಶಗಳು ಈಗ ನೇರವಾಗಿ ರಾಷ್ಟ್ರೀಯ ಲೆಕ್ಕಪತ್ರಕ್ಕೆ ಮಾಹಿತಿ ಒದಗಿಸುತ್ತವೆ. ಜಿಎಸ್‌ಟಿ ದತ್ತಾಂಶವು ವಿಶೇಷವಾಗಿ ತ್ರೈಮಾಸಿಕ ಅಂದಾಜುಗಳನ್ನು ಚುರುಕುಗೊಳಿಸಿದೆ ಮತ್ತು ಇದರಿಂದ ರಾಜ್ಯವಾರು ಹಂಚಿಕೆಗಳಲ್ಲಿ ಸುಧಾರಣೆಯಾಗುತ್ತದೆ. ಜಿಡಿಪಿ ಅಂದಾಜು ಈಗ ಹೆಚ್ಚು ನಿಖರವಾಗಿದೆ. ಮತ್ತು ಆಂತರಿಕವಾಗಿ ಹೆಚ್ಚು ವ್ಯವಸ್ಥಿತವಾದ ವ್ಯವಸ್ಥೆ ರೂಪುಗೊಂಡಿದೆ. ಜಿಡಿಪಿ ಅಂದಾಜಿನ ನಿಖರತೆಯನ್ನು ಹೆಚ್ಚಿಸಲು ಆಡಳಿತಾತ್ಮಕ ದತ್ತಾಂಶವನ್ನು ಹೊಸ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಈ ಕ್ರಮವು ‘ಸಂಪೂರ್ಣ ಸರ್ಕಾರಿ ವಿಧಾನ’ದಲ್ಲಿ ಆಗಿರುವ ಬದಲಾವಣೆಯನ್ನು ತೋರಿಸುತ್ತದೆ. ಆಡಳಿತಾತ್ಮಕ ದತ್ತಾಂಶಗಳನ್ನು ಸಚಿವಾಲಯವು ಕೇವಲ ಜಿಡಿಪಿ ಲೆಕ್ಕಾಚಾರಕ್ಕೆ ಬಳಸಿಕೊಳ್ಳುತ್ತಿಲ್ಲ. ದೇಶಾದ್ಯಂತ ತೆಗೆದುಕೊಳ್ಳುತ್ತಿರುವ ನಿರ್ಧಾರಗಳ ಪರಿಣಾಮಕಾರಿತ್ವವನ್ನು ಪರಿಶೀಲಿಸಿ ನೋಡಲು ಆಡಳಿತಾತ್ಮಕ ದತ್ತಾಂಶಗಳನ್ನು ಹೆಚ್ಚೆಚ್ಚು ಬಳಸಿಕೊಳ್ಳುವ ವಿಶಾಲವಾದ ಗುರಿಯನ್ನು ಇಟ್ಟುಕೊಂಡಿದೆ. ದತ್ತಾಂಶದ ಗುಣಮಟ್ಟವನ್ನು, ಅದರ ತುಲನಾತ್ಮಕತೆಯನ್ನು ಮತ್ತು ಪರಸ್ಪರ ಕಾರ್ಯಸಾಧ್ಯತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಆವಶ್ಯಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ರಾಷ್ಟ್ರ ಮಟ್ಟದಲ್ಲಿ ಮತ್ತು ರಾಜ್ಯಗಳ ಮಟ್ಟದಲ್ಲಿ ಸ್ಥಿರತೆ ಮತ್ತು ಪರಿಣಾಮಕಾರಿ ಬಳಕೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳೊಂದಿಗೆ ನಿಕಟ ಸಂಪರ್ಕವಿಟ್ಟುಕೊಳ್ಳಲಾಗುತ್ತಿದೆ. ಇದು ದತ್ತಾಂಶಗಳನ್ನು ಆಧರಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಕಾಲ. ಇಂತಹ ಸಮಯದಲ್ಲಿ ಸ್ಥಳೀಯ ಆರ್ಥಿಕತೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಉದ್ದೇಶಿತ ನೀತಿಗಳನ್ನು ರೂಪಿಸಲು ರಾಜ್ಯಗಳ ಮಟ್ಟದ ದತ್ತಾಂಶಗಳು ಅತ್ಯಂತ ನಿರ್ಣಾಯಕವಾಗಿವೆ. ಇದಕ್ಕಾಗಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಹೆಚ್ಚು ನಿಖರವಾದ ಜಿಡಿಪಿಯ ಅಂದಾಜು ಬೇಕಾಗುತ್ತದೆ. ಅಂತಹ ನಿಖರವಾದ ಅಂದಾಜುಗಳನ್ನು ಪಡೆಯಲು ಹೆಚ್ಚೆಚ್ಚು ಗಮನಹರಿಸಬೇಕಾಗಿದೆ.

GRuvTmfa8AAvhAX

ಇದಕ್ಕೆ ಬೇಕಾದ ತಾಂತ್ರಿಕ ಬೆಂಬಲವನ್ನು ರಾಜ್ಯಗಳಿಗೆ ನೀಡಲು ಪ್ರಾರಂಭಿಸಲಾಗಿದೆ, ಜೊತೆಗೆ, ರಾಜ್ಯಗಳಿಗೆ ಅಥವಾ ಕೇಂದ್ರಾಡಳಿತ ಪ್ರದೇಶಗಳಿಗೆ ಜಿಲ್ಲಾ ಮಟ್ಟದ ಅಂದಾಜುಗಳನ್ನು ಮಾಡುವುದಕ್ಕೆ ಸಾಧ್ಯವಾಗಬೇಕು. ಈ ಪ್ರಕ್ರಿಯೆಯಲ್ಲಿ ಅವುಗಳಿಗೆ ನೆರವಾಗುವುದಕ್ಕೆ ಬೇಕಾದ ಮಾಹಿತಿಯನ್ನು ಸಂಗ್ರಹಿಸುವುದಕ್ಕೆ ಪ್ರಸ್ತುತ ಮಾದರಿ ಸಮೀಕ್ಷೆಗಳಲ್ಲಿ ಅವಕಾಶಗಳನ್ನು ಕಲ್ಪಿಸಲಾಗಿದೆ. ಂಖಗಿ ಇ ಮತ್ತು ಕಿಐಈಖ ಸಮೀಕ್ಷೆಗಳು ನೀಡುವ ಉಪ-ರಾಜ್ಯ ಮಟ್ಟದ ಸಮೀಕ್ಷಾ ಅಂದಾಜುಗಳಿಂದ ರಾಜ್ಯ/ಉಪ-ರಾಜ್ಯದ ಜಿಡಿಪಿ ಲೆಕ್ಕಾಚಾರಗಳು ಹೆಚ್ಚು ನಿಖರವಾಗುತ್ತವೆ. ರಾಜ್ಯಗಳಿಗೆ ಹೆಚ್ಚು ವಿಶ್ವಾಸಾರ್ಹವಾದ ಆರ್ಥಿಕ ಮಾಹಿತಿಗಳಿರಬೇಕು. ಅದಕ್ಕಾಗಿ ಹತ್ತು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳಿಗೆ ಸಂಬಂಧಿಸಿದಂತೆಯೂ ೦ಖಗ ಇ ಮತ್ತು ಕಿಐಈಖ ಅಂದಾಜುಗಳನ್ನು ಸಿದ್ಧಪಡಿಸಲಾಗುವುದು. ಅಲ್ಲದೆ, ಮುಂಬರುವ ‘ಭಾರತದ ಸಂಘಟಿತ ಸೇವಾವಲಯದ ಉದ್ಯಮಗಳ ಸಮೀಕ್ಷೆ’ (ASISSE) ಮತ್ತು ಜಿಎಸ್‌ಟಿ ದತ್ತಾಂಶದ ಬಳಕೆಯಿಂದ ಉಪ-ರಾಷ್ಟ್ರಗಳಿಗೆ ಸಂಬಂಧಿಸಿದ ಮಾಹಿತಿಗಳು ಹೆಚ್ಚು ನಿಖರವಾಗುತ್ತವೆ. ಮೂಲ ವರ್ಷವನ್ನು ಬದಲಿಸಿರುವುದರಿಂದ ಇದಕ್ಕೆ ಬೇಕಾದ ಬುನಾದಿ ಸಿದ್ದವಾಗಿದೆ. ಅಷ್ಟೇ ಅಲ್ಲ ಇದಕ್ಕೆ ಸಂಬಂಧಿಸಿದಂತೆ ಅವಶ್ಯಕವಾದ ಅನೇಕ ಸುಧಾರಣೆಗಳೂ ಆಗಿದೆ. ಮತ್ತು ನಮ್ಮ ಸಾಂಖ್ಯಿಕ ವ್ಯವಸ್ಥೆಯ ಬುನಾದಿ ಈಗ ಹೆಚ್ಚು ಭದ್ರವಾಗಿದೆ.

ಇದು ಬದಲಾವಣೆಯ ಪ್ರಯಾಣದ ಪ್ರಾರಂಭವಷ್ಟೆ, ಹೊಸ ಸಾಂಖ್ಯಿಕ ವರದಿಗಳನ್ನು ಹಾಗೂ ಆಡಳಿತಾತ್ಮಕ ದತ್ತಾಂಶಗಳನ್ನು ಸಮನ್ವಯಗೊಳಿಸುವ ಯೋಜನೆಗಳನ್ನು ಹಾಕಿಕೊಳ್ಳಲಾಗುತ್ತಿದೆ. ಈ ಮೂಲಕ ಸಾಂಖ್ಯಿಕ ವ್ಯವಸ್ಥೆ ಅಭಿವೃದ್ಧಿಹೊಂದುತ್ತದೆ. ಒಟ್ಟಾರೆಯಾಗಿ, ಈ ಪ್ರಯತ್ನಗಳಿಂದ ಹೆಚ್ಚು ಕ್ರಿಯಾತ್ಮಕವಾದ, ಅವಶ್ಯಕತೆಗೆ ಕ್ರಿಯಾತ್ಮಕವಾದ, ಅವಶ್ಯಕತೆಗೆ ಸ್ಪಂದಿಸಬಲ್ಲ ಮತ್ತು ಮತ್ತು ಭವಿಷ್ಯದ ದೃಷ್ಟಿಕೋನವುಳ್ಳ ಸಾಂಖ್ಯಿಕ ವ್ಯವಸ್ಥೆ ರೂಪುಗೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಇದು ನೀತಿಗಳನ್ನು ರೂಪಿಸುವವರಿಗೆ ಸಕಾಲಿಕವಾದ, ಹೆಚ್ಚು ವಿಶ್ವಾಸಾರ್ಹವಾದ ಮತ್ತು ಕಾರ್ಯರೂಪಕ್ಕೆ ತರಬಹುದಾದ ಒಳನೋಟಗಳನ್ನು ನೀಡುತ್ತದೆ.

ChatGPT Image Jan 14 2026 05 19 46 PM 2

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್‌ನಲ್ಲಿ ಪ್ರಕಟವಾಗುತ್ತಿರುವ ಈ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್‌ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್‌ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.

https://Lokayatha.com

lokayatha logo 220x67 1
lokayatha.com
Website |  + posts

ಅರ್ಥಶಾಸ್ತ್ರವನ್ನು ಕುರಿತು ಪ್ರಕಟವಾಗಿರುವ ಬರಹಗಳು ಇಲ್ಲವೆ.

ಪೋಸ್ಟ್ ಹಂಚಿಕೊಳ್ಳಿ:

lokayatha.com
lokayatha.comhttps://lokayatha.com/
ಅರ್ಥಶಾಸ್ತ್ರವನ್ನು ಕುರಿತು ಪ್ರಕಟವಾಗಿರುವ ಬರಹಗಳು ಇಲ್ಲವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆರ್ಥಿಕ ಬೆಳವಣಿಗೆ: ಟ್ರಂಪೋನಾಮಿಕ್ಸ್‌ ವೈಫಲ್ಯ

ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದು ಒಂದು ವರ್ಷಕ್ಕೂ ಹೆಚ್ಚು...

ಯುದ್ಧದ ಆರ್ಥಿಕ ಮತ್ತು ರಾಜಕೀಯ ತಲ್ಲಣಗಳು

ಅಲೆಕ್ಸಾಂಡರ್ ಪೋಪ್ ಅವರು ಹೇಳಿದ್ದು ಸರಿ. "ತಪ್ಪು ಮಾಡುವುದು ಮನುಷ್ಯ ಸಹಜ...

ಕನಿಷ್ಠ ಕೂಲಿ ಖಾತ್ರಿಗೆ ಕಳೆದು ಹೋದ ಅವಕಾಶ

ಕಳೆದ ಕೆಲವು ತಿಂಗಳುಗಳಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ...

ಸೀಬೇ ನಿನ್ನಂಡ್ರೆ ನಂಗ್ಟಲು ಇಷ್ಟ

ನಾನು ಸಾಹಸದ ಕಥೆಗಳನ್ನೇ ಓದುತ್ತಾ ಪಟ್ಟಣದಲ್ಲಿ ಬೆಳೆದ ಹುಡುಗ. ನನಗೆ ಮರ...