ಬಿಜೆಪಿ ಶಾಸಕ ರಘು ಬೆಂಬಲಿಗರಿಂದ ಎಎಪಿ ಕಾರ್ಯಕರ್ತರ ಮೇಲೆ ಹಲ್ಲೆ; ದೂರು ದಾಖಲು

Date:

  • ಚುನಾವಣೆ ಪ್ರಚಾರದ ವೇಳೆ ಮನೋಜ್ ಕುಮಾರ್ ಮತ್ತು ಶಶಿಕುಮಾರ್ ಎಂಬುವವರಿಂದ ಹಲ್ಲೆ
  • ವಿಡಿಯೋ ಮಾಡುವ ವೇಳೆ, ಮೊಬೈಲ್‌ ಕಿತ್ತುಕೊಂಡು ಹಲ್ಲೆ ಮಾಡಲಾಗಿದೆ: ಎಎಪಿ ಆರೋಪ

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ರಂಗೇರಿದೆ. ಈ ಹಿನ್ನಲೆ, ಬೆಂಗಳೂರಿನ ಸರ್ ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪ್ರಚಾರ ನಡೆಸುವ ವೇಳೆ ಅವರ ಮೇಲೆ ಬಿಜೆಪಿ ಶಾಸಕ ರಘು ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂದು ಎಎಪಿ ಆರೋಪಿಸಿದೆ.

- Advertisement -

ಕೋವಿಡ್ ಸಮಯದಲ್ಲಿ ನಿಮ್ಮ ಪಕ್ಷದಿಂದ ಏನ್ ಮಾಡಿದ್ದೀರಿ. ನಮಗೆ ನಮ್ಮ ಶಾಸಕರೇ ಸಾಕು. ನೀವು ಇಲ್ಲಿಗೆ ಬರುವ ಅವಶ್ಯಕತೆ ಇಲ್ಲ ಎಂದು ಪ್ರಚಾರದ ವೇಳೆ ಬಿಜೆಪಿ ಶಾಸಕ ರಘು ಬೆಂಬಲಿಗರು ಬಂದು ಅಡ್ಡಿಪಡಿಸಿದ್ದಾರೆ. ವಿಡಿಯೋ ಮಾಡುವ ವೇಳೆ, ಮೊಬೈಲ್‌ ಕಿತ್ತುಕೊಂಡು ಹಲ್ಲೆ ಮಾಡಲಾಗಿದೆ ಎಂದು ಆಪ್ ತಿಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಧಾರವಾಡ | ಹುಲಕೊಪ್ಪ‌ ಶಾಲೆ ಶೌಚಾಲಯ ಕಾಮಗಾರಿ ಅಪೂರ್ಣ;...

ಧಾರವಾಡ ಜಿಲ್ಲೆಯ ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ‌ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೈಟೆಕ್ ಶೌಚಾಲಯ ಆರಂಭವಾಗಿ ಸುಮಾರು ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಶಾಲೆಯ...

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮತ್ತು ಸದ್ಯದ ಬಿಕ್ಕಟ್ಟುಗಳು

ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಜಾಗತಿಕವಾಗಿ ಕುಸಿಯುತ್ತಿರುವ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಸೆಪ್ಟಂಬರ್ 15ನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸುವ ಘೋಷಣೆ ಮಾಡಿತು. ಪರಿಣಾಮ ಇಂಟರ್ ಪಾರ್ಲಿಮೆಂಟರಿ ಯೂನಿಯನ್...

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮೇ 10ರಂದು ತಪ್ಪದೆ ಮತದಾನ ಮಾಡಲು ಐಟಿ-ಬಿಟಿ ಉದ್ಯೋಗಿಗಳಿಗೆ ಸಂಬಳ ಸಹಿತ ರಜೆ

ಈ ಸಂಬಂಧ ಆಮ್ ಆದ್ಮಿ ಪಕ್ಷದ ಸರ್ ಸಿವಿ ರಾಮನ್ ನಗರ ಅಭ್ಯರ್ಥಿ ಮೋಹನ್ ದಾಸರಿ ಪ್ರತಿಕ್ರಿಯಿಸಿದ್ದು, “ಸಿವಿ ರಾಮನ್ ನಗರದ ಸುದ್ದಗುಂಟೆಪಾಳ್ಯದಲ್ಲಿ ಚುನಾವಣೆ ಪ್ರಚಾರದ ವೇಳೆ ಮನೋಜ್ ಕುಮಾರ್ ಮತ್ತು ಶಶಿಕುಮಾರ್ ಎನ್ನುವವರು ನಮ್ಮ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಮೋಹನ್ ಮತ್ತು ನಾಗರಾಜ್ ಸಂಗಡಿಗರು ಬಿಜೆಪಿಗೆ ಸೇರಿದವರಾಗಿದ್ದು, ಪ್ರಚಾರ ಆರಂಭಕ್ಕೂ ಮೊದಲೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ. ಹಾಗೆ ನಮ್ಮ ಕಾರ್ಯಕರ್ತರು ವಿಡಿಯೋ ತೆಗೆಯಲು ಹೋದಾಗ ಮೊಬೈಲ್‌ ಕಿತ್ತುಕೊಂಡು ಹಲ್ಲೆ ಮಾಡಿದ್ದಾರೆ ಎಂದು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾಲೇಜಿಗೆ ಹೋದವಳು ಎಂಟು ತಿಂಗಳ ನಂತರ ಪತ್ತೆ: ಆಧಾರ್‌ ಒಟಿಪಿ ಆಧರಿಸಿ ರಹಸ್ಯ ಭೇದಿಸಿದ ಸಿಐಡಿ

ಕಾಲೇಜಿಗೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿ, ಸುಮಾರು ಎಂಟು ತಿಂಗಳುಗಳಿಂದ ನಿಗೂಢವಾಗಿ...

ಶಾಸಕ ಮುನಿರತ್ನ ಸೇರಿ 8 ಜನರ ವಿರುದ್ಧ ಎಫ್‌ಐಆರ್

ಮಹಿಳೆಯೊಬ್ಬರನ್ನು ಗುರಿಯಾಗಿಸಿಕೊಂಡು ಪಿತೂರಿ ನಡೆಸಿ, ಅವರ ವಿರುದ್ಧ ಸುಳ್ಳು ಎಫ್‌ಐಆ‌ರ್ ದಾಖಲಿಸಿ...

ಕೆಪಿಎಸ್‌ಸಿಯಲ್ಲಿ ಸಮಗ್ರ ಸುಧಾರಣೆ ತರಲು ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ ಆಗ್ರಹ

ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್‌ಸಿ) ನಿರಂತರವಾಗಿ ನಡೆಯುತ್ತಿರುವ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ,...

​‘ಪ್ರೊ. ಸಿ.ಎನ್.ಆರ್. ರಾವ್‌ಗೆ ನೋಟಿಸ್ ನೀಡಿಲ್ಲ’: ಚುನಾವಣಾ ಆಯೋಗ

ಭಾರತ ರತ್ನ ಪುರಸ್ಕೃತ, ಹಿರಿಯ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ...