ಬೆಂಗಳೂರು | ವಿದ್ಯುತ್ ಬಿಲ್ ಜಾಸ್ತಿ ಬಂತೆಂದು ಮೀಟರ್ ರೀಡರ್ ಮೇಲೆ ಹಲ್ಲೆ; ದೂರು ದಾಖಲು

Date:

  • ಗೋವಿಂದಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ
  • ವಿದ್ಯುತ್ ಮೀಟರ್ ರೀಡ್ ಮಾಡಿ ಬಿಲ್ ನೀಡುವಾಗ ನಡೆದ ಘಟನೆ

ಕಳೆದ ಬಾರಿಗಿಂತ ಈ ತಿಂಗಳು ವಿದ್ಯುತ್ ದರ ಹೆಚ್ಚಳ ಬಂದ ಹಿನ್ನೆಲೆ, ಬೆಂಗಳೂರು ವಿದ್ಯುತ್ ಸರಬರಾಜು ನಿಗಮ (ಬೆಸ್ಕಾಂ)ದ ಮೀಟರ್ ರೀಡರ್ ಸಿಬ್ಬಂದಿಯೊಬ್ಬರನ್ನು ಥಳಿಸಿರುವ ಘಟನೆ ಬೆಂಗಳೂರಿನ ಗೋವಿಂದಪುರದಲ್ಲಿ ನಡೆದಿದೆ.

ಬೆಸ್ಕಾಂ ಸಿಬ್ಬಂದಿ ನಾಗರಾಜ್ ನಾಯಕ್ ಎಂಬವರ ಮೇಲೆ ಶಂಶಾದ್ ಖಾನ್‌ ಎಂಬಾತ ಹಲ್ಲೆ ಮಾಡಿದ್ದಾರೆ. ಎಂದಿನಂತೆ ನಾಗರಾಜ್ ಅವರು ಮೀಟರ್ ರೀಡಿಂಗ್ ಮಾಡಿ ವಿದ್ಯುತ್ ಬಿಲ್ ನೀಡುವ ಕೆಲಸದಲ್ಲಿ ತೊಡಗಿದ್ದರು. ಆ.4 ರಂದು ಬೆಳಿಗ್ಗೆ 11:30ರ ಸುಮಾರಿಗೆ ಬೆಂಗಳೂರಿನ ಗೋವಿಂದಪುರದ 16ನೇ ಕ್ರಾಸ್‌ನಲ್ಲಿರುವ ಶಂಶಾದ್‌ ಖಾನ್ ಎಂಬುವವರ ಮನೆಯ ವಿದ್ಯುತ್ ಮೀಟರ್ ರೀಡಿಂಗ್ ಮಾಡಿ ₹458 ಬಾಕಿ ಬಿಲ್​ ಸೇರಿದಂತೆ ಒಟ್ಟು ₹4,026 ಬಿಲ್​ ನೀಡಿದ್ದಾರೆ.

ಇದಕ್ಕೆ ಕೋಪಗೊಂಡ ಶಂಶಾದ್ ಖಾನ್ ಕಳೆದ ಬಾರಿಗಿಂತ ಈ ಬಾರಿ ಮೂರರಿಂದ ನಾಲ್ಕು ಪಟ್ಟು ಹೆಚ್ಚು ಮೊತ್ತದ ಬಿಲ್ ಬಂದಿದೆ ಎಂದು ಸಿಬ್ಬಂದಿ ಜತೆಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಅವರ ಜತೆಗೆ ನಾಗರಾಜ್ ಜಗಳ ಮುಂದುವರೆಸದೆ ಮುಂದಿನ ಮನೆಗಳಿಗೆ ಬಿಲ್ ನೀಡಲು ತೆರಳಿದ್ದಾರೆ. ಅವರನ್ನೇ ಹಿಂಬಾಲಿಸಿಕೊಂಡ ಬಂದ ಶಂಶಾದ್ ಖಾನ್ ಪದೇಪದೆ ಜಗಳಕ್ಕೆ ಇಳಿದಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮೀಟರ್​ ರೀಡಿಂಗ್​ ಆಧರಿಸಿಯೇ ಬಿಲ್​ ನೀಡಿದ್ದೇನೆ. ಬೆಸ್ಕಾಂ ಕಚೇರಿಗೆ ಭೇಟಿ ನೀಡುವಂತೆ ಶಂಶಾದ್ ಕಾನ್ ಅವರಿಗೆ ಸಲಹೆ ನೀಡಿದ್ದಾರೆ. ಆದರೂ ಕೇಳದ ಶಂಶಾದ್ ಖಾನ್ ನಾಗರಾಜ್ ಅವರ ಮುಖಕ್ಕೆ ನಾಲ್ಕೈದು ಬಾರಿ ಗುದ್ದಿದ್ದಾರೆ. ಇದರಿಂದ ನಾಗರಾಜ್ ಅವರ ಒಂದು ಹಲ್ಲು ಮುರಿದಿದೆ.

ನಾಗರಾಜ್​ ನಾಯಕ್  ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಅಧಿಕಾರಿಗಳು ನಾಗರಾಜ್​ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಡ್ಯೂಟಿ ನೀಡದ್ದಕ್ಕೆ ಬಿಎಂಟಿಸಿ ಬಸ್ ಡಿಪೋ‌ ಮುಂದೆಯೇ ಚಾಲಕ ಆತ್ಮಹತ್ಯೆ

ಗೋವಿಂದಪುರ ಪೊಲೀಸ್​ ಠಾಣೆಗೆ ನಾಗರಾಜ್​ ನಾಯಕ್ ಅವರು ದೂರು ನೀಡಿದ್ದು, ಪೊಲೀಸರು ಶಂಶಾದ್​ ಖಾನ್​ಅವರನ್ನು ಬಂಧಿಸಿ ಠಾಣಾ ಜಾಮೀನು ನೀಡಿ ಬಿಡುಗಡೆ ಮಾಡಿದ್ದಾರೆ.

“300ಕ್ಕೂ ಹೆಚ್ಚು ಯೂನಿಟ್‌ ವಿದ್ಯುತ್​ ಅನ್ನು ಶಂಶಾದ್​ ಖಾನ್ ಅವರು ಬಳಸಿದ್ದರಿಂದ ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್‌ಗೆ ಅರ್ಹರಲ್ಲ” ಎಂದು ನಾಗರಾಜ್​ ನಾಯಕ್ ತಿಳಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ವಿರಾಟ್ ಕೊಹ್ಲಿ ಮಾಲೀಕತ್ವದ ಪಬ್ ವಿರುದ್ಧ ಎಫ್ಐಆರ್ ದಾಖಲು

ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಮಾಲೀಕತ್ವದ ಬೆಂಗಳೂರಿನಲ್ಲಿರುವ ಒನ್ 8 ಕಮ್ಯೂನ್...

ಬೆಂಗಳೂರು | ನಡುರಸ್ತೆಯಲ್ಲೇ ಹೊತ್ತಿ ಉರಿದ ಬಿಎಂಟಿಸಿ ಬಸ್; ತಪ್ಪಿದ ಅನಾಹುತ

ಸುಮಾರು 30 ಪ್ರಯಾಣಿಕರಿಂದ ಬಿಎಂಟಿಸಿ ಬಸ್ ನಡುರಸ್ತೆಯಲ್ಲೇ ಹೊತ್ತಿ ಉರಿದ ಘಟನೆ...

ಬೆಂಗಳೂರು | ಈ ರಸ್ತೆಯಲ್ಲಿ 4 ದಿನ ಸಂಚಾರ ನಿರ್ಬಂಧ; ಪರ್ಯಾಯ ಮಾರ್ಗ ಪ್ರಕಟ

ಬೆಂಗಳೂರಿನ ವೈಟ್​ ಫೀಲ್ಡ್​​ನ ಪಣತ್ತೂರು ದಿಣ್ಣೆಯಿಂದ ಪಣತ್ತೂರು ರೈಲ್ವೆ ಬ್ರಿಡ್ಜ್‌ವರೆಗಿನ ರಸ್ತೆಯಲ್ಲಿ...

ಬೆಂಗಳೂರು | ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

ಬೆಂಗಳೂರಿನಲ್ಲಿ ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ಪಶ್ಚಿಮ ಬಂಗಾಳ‌ ಮೂಲದ ವಿದ್ಯಾರ್ಥಿನಿ ಆತ್ಮಹತ್ಯೆ...