ಬಿಡದಿ ಟೌನ್‌ಶಿಪ್ ಯೋಜನೆ, ಅಭಿವೃದ್ಧಿ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿಯನ್ನು ಸ್ವಾಧೀನಗೊಳಿಸಲು ಮುಂದಾಗಿರುವ ಸರ್ಕಾರ, ರೈತರ ಎದೆಯ ಮೇಲೆ ಮರಣಶಾಸನ ಬರೆಯಲು ಹೊರಟಿದೆ. ಕ್ಷೇತ್ರದಲ್ಲಿರುವ ಶಾಸಕರು ನೂತನವಾಗಿ ಸಚಿವರಾಗಿದ್ದಾರೆ. ಅವರು ರೈತರ ಸಂಕಷ್ಟಕ್ಕೆ ಮಿಡಿದ್ದಾರೆಯೇ? ರೈತರು ಚಳಿ, ಮಳೆ, ಗಾಳಿ ಲೆಕ್ಕಿಸದೆ ರೈತರು ತಮ್ಮ ಭೂಮಿ ಉಳಿಸಿಕೊಳ್ಳಲು ಹೋರಾಡುತ್ತಿದ್ದರೂ ಸರ್ಕಾರದ ಯಾವೊಬ್ಬರೂ ತಿರುಗಿ ನೋಡಲಿಲ್ಲ ಎಂದು ಜೆಡಿಎಸ್ ಯುವ ಘಟಕದ ಮುಖಂಡ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಬಿಡದಿ ಟೌನ್‌ಶಿಪ್(GBIT) ಯೋಜನೆ ಮತ್ತು ಭೂಸ್ವಾಧೀನ ವಿರೋಧಿಸಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ರೈತರು, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳಿಂದ ನಡೆಯುತ್ತಿರುವ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದರು.
“ರೈತ ಪರ ನಾಯಕರು ಅವರ ಜೀವನದುದ್ದಕ್ಕೂ ರೈತರ ಚಳವಳಿಗಳಲ್ಲಿ ಗುರುತಿಸಿಕೊಂಡಿರುವ ದೇವೇಗೌಡರು ನಮ್ಮನ್ನು ಬೆಂಬಲಿಸಲು ಆಗಮಿಸಿದ್ದಾರೆ. ರೈತರ ಮೇಲಿನ ಕಳಕಳಿಯಿಂದಾಗಿ ರೈತರ ಸಾಲಮನ್ನಾ ಮಾಡಿರುವ ಸಂಪೂರ್ಣ ಕೀರ್ತಿ ಕುಮಾರಸ್ವಾಮಿಯವರಿಗೆ ಸಲ್ಲುತ್ತದೆ ಅಂತಹ ಮಣ್ಣಿನ ಮಗ ಕುಮಾರಣ್ಣ ಅವರೂ ಕೂಡ ನಮ್ಮ ಜೊತೆಗಿದ್ದಾರೆ. 526 ದಿನದ ಈ ಚಳವಳಿಯಲ್ಲಿ ಮೊದಲಿನಿಂದಲೂ ಭಾಗಿಯಾಗಿರುವ ರಾಮಣ್ಣ ಅವರು ನಮ್ಮ ಜೊತೆಗಿದ್ದಾರೆ. ಕುಮಾರಣ್ಣನವರು ಬಿಡದಿ ಟೌನ್‌ಶಿಪ್ ಕುರಿತು ಕೇವಲ ಪ್ರಸ್ತಾವನೆಯನ್ನು ಮಾತ್ರ ಮುಂದಿಟ್ಟರೋ ಹೊರತು, ಅಧಿಕೃತ ಸೂಚನೆ ಹೊರಡಿಸಲಿಲ್ಲ” ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧ ಹರಿಹಾಯ್ದರು.
“ಯಾವುದೇ ಕಾರಣಕ್ಕೂ ಒತ್ತಾಯಪೂರ್ವಕವಾಗಿ ರೈತರನ್ನು ಒಕ್ಕಲೆಬ್ಬಿಸಿ ಯೋಜನೆ ಅಭಿವೃದ್ಧಿಗೆ ಮುಂದಾಗುವುದಿಲ್ಲವೆಂದು 2007ರಲ್ಲಿಯೇ ಸಚಿವ ಸಂಪುಟದ ಕಲಾಪದಲ್ಲಿಯೇ ಮುಂದಿಟ್ಟಿದ್ದರು. ನಂತರದ ಬಿಜೆಪಿ ಸರ್ಕಾರವೂ ಈ ಯೋಜನೆಯನ್ನು ಕೈಗೊಳ್ಳಲಿಲ್ಲ….. ಆದರೆ ಕಾಂಗ್ರೆಸ್ ಸರ್ಕಾರ 20025ರಂದು ಬಿಡದಿ ಟೌನ್‌ಶಿಪ್‌ಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿತು. ಪರಿಶೀಲನೆ ನಡೆಸದೆ ಅಂತಿಮ ಅಧಿಸೂಚನೆಯನ್ನೂ ಹೊರಡಿಸಲಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಸೆ.17ಕ್ಕೆ ಮದ್ದೂರು ತಾಲೂಕು ಸಾಹಿತ್ಯ ಸಮ್ಮೇಳನ ನಿಗದಿ: ಏಕಪಕ್ಷೀಯವಾಗಿರದೆ ಎಲ್ಲರನ್ನೂ ಒಳಗೊಳ್ಳುವಂತೆ ಕರವೇ ಆಗ್ರಹ
200 ಪುಟಗಳಷ್ಟು ಸತ್ಯಶೋಧಕ ಸಮಿತಿ ರಚಿಸಿದ್ದರೂ ಮುಖ್ಯಮಂತ್ರಿಗಳು ಮತ್ತೆ ಪರಿಶೀಲನಾ ಸಮಿತಿ ರಚಿಸುವುದಾಗಿ ಹೇಳುತ್ತಿದ್ದಾರೆ. ಹಾಗಿದ್ದರೆ ಸತ್ಯಶೋಧಕ ಸಮಿತಿ ಏನಾಯಿತು? ಒಟ್ಟರೆಯಾಗಿ ಇಂದು ಮುಖ್ಯಮಂತ್ರಿಗಳು ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು. ಇಲ್ಲದಿದ್ದಲ್ಲಿ ಅಂತಿಮ ನ್ಯಾಯ ಸಿಗುವವರೆಗೂ ಈ ಹೋರಾಟದಲ್ಲಿ ದೇವೇಗೌಡರ ಕುಟುಂಬ ಮತ್ತು ಜೆಡಿಎಸ್ ರೈತರೊಟ್ಟಿಗೆ ನಿಂತಿರುತ್ತದೆ” ಎಂದು ಹೇಳಿದರು.




