ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕರ್ನಾಟಕದ ಬಹುಮುಖ ಪರಂಪರೆಯನ್ನು ಪ್ರತಿನಿಧಿಸುವ ‘ಕನ್ನಡ ಸಾಮರಸ್ಯ ನೆಲೆಗಳು’ 41 ಕೃತಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಏಪ್ರಿಲ್.15ರಂದು ಬೆಂಗಳೂರಿನ ವಿಧಾನಸೌಧದ, ಬ್ಯಾಂಕ್ವೆಟ್ ಸಭಾಂಗಣದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆಯವರು ರಾಜ್ಯದಲ್ಲಿ ಕನ್ನಡವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು, ಅದರ ಭಾಗವಾಗಿ 41 ಕೃತಿಗಳನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಸಿದ್ದಗೊಳಿಸಿ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಮುಂದಾಗಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆ ಹಾಗೂ ಕೃತಿಗಳ ಲೋಕಾರ್ಪಣೆಯನ್ನು ಸಿಎಂ ಸಿದ್ದರಾಮಯ್ಯ ನಡೆಸಿಕೊಡಲಿದ್ದು, ಮುಖ್ಯ ಅತಿಥಿಗಳಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಂಸದ ಪಿ.ಸಿ. ಮೋಹನ್ ಭಾಗಿಯಾಗಲಿದ್ದಾರೆ. ಪ್ರಾಸ್ತವಿಕ ನುಡಿಯನ್ನು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದ ಶಿವರಾಜ ಎಸ್. ತಂಗಡಗಿ ನಡೆಸಿಕೊಡಲಿದ್ದು, ಅಧ್ಯಕ್ಷತೆ ಶಾಸಕ ರಿಜ್ವಾನ್ ಅರ್ಷದ್ ವಹಿಸಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಡಗು | ಮಾಜಿ ಸೈನಿಕರ ಕುಂದುಕೊರತೆ ಆಲಿಸಿದ ಜಿಲ್ಲಾಧಿಕಾರಿ

ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜೆ. ಮಂಜುನಾಥ್, ಹಿರಿಯ ಲೇಖಕ ಹಾಗೂ ಯೋಜನಾ ಸಂಪಾದಕ ಬೊಳುವಾರು ಮಹಮ್ಮದ್ ಕುಂಞಿ, ಕಅಪ್ರಾ ಕಾರ್ಯದರ್ಶಿ ಸಂತೋಷ ಹಾನಗಲ್ಲ, ನಾಮ ನಿರ್ದೇಶಿತ ಸದಸ್ಯರು ಹಾಗೂ ರಾಜ್ಯದ ಎಲ್ಲಾ ಜಿಲ್ಲೆ, ಮಹಾನಗರ ಪಾಲಿಕೆ ಮತ್ತು ಬೆಂಗಳೂರು ವಿಧಾನಸಭಾ ಕ್ಷೇತ್ರದ ಕನ್ನಡ ಜಾಗೃತಿ ಸಮಿತಿ ಸದಸ್ಯರುಗಳು ಭಾಗಿಯಾಗಲಿದ್ದಾರೆ.
ಲೋಕಾರ್ಪಣೆಗೊಳ್ಳಲಿರುವ ಕೃತಿಗಳು:
- ಸಾಮರಸ್ಯದ ಒಡಲು:ಉಡುಪಿ
- ಸಾಮರಸ್ಯದ ನೆಲೆಯಾಗಿ ಶ್ರವಣಬೆಳಗೊಳ
- ಹಾಸನ ಜಿಲ್ಲೆಯ ಸಾಮರಸ್ಯದ ನೆಲೆಗಳು
- ಉತ್ತರ ಕನ್ನಡ ಜಿಲ್ಲೆಯ ಸಾಮರಸ್ಯದ ನೆಲೆಗಳು ದೇವಿ ಮತ್ತು ಬಂಗಾರ
- ಅತ್ತೂರು ಸಾಂತ್ ಮಾರಿ
- ಹಾಜಿ ಅಬ್ದುಲ್ಲಾ ಸಾಹೇಬರು
- ದಕ್ಷಿಣ ಕನ್ನಡ ಜಿಲ್ಲೆಯ ಬಾಷಾ ಸಾಮರಸ್ಯ ಮತ್ತು ಸಾಂಸ್ಕೃತಿಕ ವೈವಿದ್ಯ
- ತುಳುನಾಡಿನ ದೈವರಾಧನೆ
- ಮಂಟೇದಯ್ಯ
- ಮಲೆಯ ಮಹದೇಶ್ವರ
- ಸಾಮರಸ್ಯದ ಸುಧಾಕರ:ಶಿರಹಟ್ಟಿ ಶ್ರೀ ಫಕಿರೇಶ್ವರ
- ಭಾವೈಕ್ಯತೆಯ ಬೆಳಗು ಬಾಗಲಕೋಟೆ
- ಇಂಚಗೇರಿ ಮಠ
- ಚಿತ್ರದುರ್ಗ ಜಿಲ್ಲೆಯ ಸಾಮರಸ್ಯದ ನೆಲೆಗಳು
- ಆರ್ ಗೋಪಾಲಸ್ವಾಮಿ ಅಯ್ಯರ್: ಜೀವನ ಮತ್ತು ಸಾಧನೆ
- ಅವಿಭಜಿತಹುನಗುಂದ ಪರಿಸರದ ಸಾಮರಸ್ಯ ನೆಲೆಗಳು
- ವಿಜಯಪುರ ಜಿಲ್ಲೆಯ ಸೌಹಾರ್ದ ಪಥ
- ಕುದ್ಮುಲ್ ರಂಗರಾಯರು
- ಕೆಳದಿ ರಾಜ್ಯ ದಕ್ಷಿಣ ಭಾರತದ ಸಂಪತ್ತಿನ ಕಣಜ
- ಸಗರನಾಡು
- ರಾಯಚೂರು ಜಿಲ್ಲೆಯ ಸಾಮರಸ್ಯದ ನೆಲೆಗಳು
- ಮೈಲಾರಲಿಂಗ: ಸಾಮರಸ್ಯದ ನೆಲೆಗಳು
- ತಿಂಥಣಿ ಮೌನೇಶ್ವರ
- ಝಟ್ ಪಟ್ ಬೀಬಿ ಮತ್ತಿತರ ಸೂಫಿ ಸಾಧಕಿಯರು
- ಸೂಫಿ ಸಂತ ಖ್ವಾಜಾ ಬಂದೇ ನವಾಜ್
- ಯಾದಗಿರಿ ಜಿಲ್ಲೆಯ ಸೌಹಾರ್ದ ನೆಲೆಗಳು
- ಸಾವಳಗಿ ಶಿವಲಿಂಗೇಶ್ವರರು
- ಹಾಲುಮತ ಸಂಸ್ಕೃತಿ ಮತ್ತು ಬೀರಪ್ಪ ಪರಂಪರೆ
- ದೇವುಗಾನಿಕೆ ದೊಡ್ಡಮ್ಮ(ಕಾವಲಮ್ಮ)
- ರಾಜಾ ಕುರಂಗರಾಯ
- ಕಡಲೆಕಾಯಿ ಪರಿಷೆ
- ಕೈವಾರ ತಾತಯ್ಯ
- ಕರ್ನಾಟಕ ಗೋವ
- ಗುರುನಾನಕರು
- ಮಹಾಮೂದ್ ಗವಾನ್
- ಕಾಯಕಯೋಗಿ ಚರಬಸವರು
- ತತ್ವಪದ ಸಾಹಿತ್ಯ
- ಸಾಮರಸ್ಯಕ್ಕೆ ದುಡಿದ ಸಂತರು
- ದಕ್ಷಿಣ ಪ್ರಸ್ಥಭೂಮಿಯ ಸೌಹಾರ್ದ ನೆಲೆಗಳು
- ಬೈಲುಕುಪ್ಪೆಯ ಬೌದ್ಧರು
- ನಾಥ ಪರಂಪರೆ





