ದೇವನಹಳ್ಳಿಯಲ್ಲಿ ಸರ್ಕಾರಿ ಪ್ರಮಾಣೀಕೃತ ವಾಹನ ಗುಜರಿ ಕೇಂದ್ರ ಶೀಘ್ರದಲ್ಲೇ ಆರಂಭ

Date:

ಬೆಂಗಳೂರಿನ ದೇವನಹಳ್ಳಿಯಲ್ಲಿ ಸರ್ಕಾರಿ ಪ್ರಮಾಣೀಕೃತ ವಾಹನ ಗುಜರಿ ಕೇಂದ್ರ ಶೀಘ್ರದಲ್ಲೇ ಆರಂಭವಾಗಲಿದೆ. ಇದು ಕರ್ನಾಟಕದಲ್ಲಿಯೇ ಮೊದಲನೇ ವಾಹನ ಗುಜರಿ (ಸ್ಕ್ರ್ಯಾಪಿಂಗ್‌) ಕೇಂದ್ರವಾಗಲಿದೆ.

ಈ ವಾಹನ ಗುಜರಿ ಕೇಂದ್ರದಲ್ಲಿ 15 ವರ್ಷಕ್ಕಿಂತ ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡಲಾಗುತ್ತದೆ. ರಾಜ್ಯ ಸರ್ಕಾರವು ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯವನ್ನು (ಆರ್‌ವಿಎಸ್‌ಎಫ್) ಸ್ಥಾಪಿಸಲು ಮೂರು ಖಾಸಗಿ ಕಂಪನಿಗಳನ್ನು ಅಂತಿಮಗೊಳಿಸಿದೆ. ಈ ತಿಂಗಳ ಅಂತ್ಯದ ವೇಳೆಗೆ ಅದಕ್ಕೆ ಅನುಮೋದನೆ ನೀಡುವ ನಿರೀಕ್ಷೆಯಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ಮತ್ತು ಕೊಪ್ಪಳದಲ್ಲಿ ಇನ್ನೂ ಎರಡು ಗುಜರಿ ಕೇಂದ್ರ ಸ್ಥಾಪಿತವಾಗಲಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಹೊಸ ನೀತಿಯನ್ವಯ ಇದು ಆರಂಭವಾಗಿದೆ. “15 ವರ್ಷಕ್ಕಿಂತ ಹಳೆಯದಾದ, ಅನರ್ಹ ವಾಹನಗಳು ಹಾಗೂ ಮಾಲಿನ್ಯವನ್ನು ಉಂಟುಮಾಡುವ ವಾಹನಗಳನ್ನು ನೋಂದಾಯಿತ ವಾಹನ ಗುಜರಿ ಕೇಂದ್ರಕ್ಕೆ ತಂದು (ಆರ್‌ವಿಎಸ್‌ಎಫ್) ರದ್ದುಗೊಳಿಸಬೇಕು. ಭಾರತದಾದ್ಯಂತ ಸುಮಾರು 60 ಆರ್‌ವಿಎಸ್‌ಎಫ್‌ಗಳಿವೆ. ಆದರೆ, ಕರ್ನಾಟಕದಲ್ಲಿ ಯಾವುದೂ ಇಲ್ಲ” ಎಂದು ಸಾರಿಗೆ ಇಲಾಖೆಯ ಮೂಲಗಳು ತಿಳಿಸಿವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“15 ವರ್ಷಗಳಿಂದ ಓಡುತ್ತಿರುವ ಎಲ್ಲ ಸರ್ಕಾರಿ ವಾಹನಗಳನ್ನು ರದ್ದುಪಡಿಸಬೇಕು. 15 ವರ್ಷ ಮೇಲ್ಪಟ್ಟು ಓಡಿದ ಮತ್ತು ಫಿಟ್‌ನೆಸ್ ಪ್ರಮಾಣ ಪತ್ರ ಪಡೆಯದ ಖಾಸಗಿ ವಾಹನಗಳನ್ನು ಕಡ್ಡಾಯವಾಗಿ ರದ್ದುಗೊಳಿಸಬೇಕು. ಫಿಟ್‌ನೆಸ್ ಪ್ರಮಾಣಪತ್ರ ಪಡೆದಿರುವ ಖಾಸಗಿ ವಾಹನಗಳನ್ನು ರದ್ದುಪಡಿಸುವ ಅಗತ್ಯವಿಲ್ಲ” ಎಂದು ಹೆಚ್ಚುವರಿ ಸಾರಿಗೆ ಆಯುಕ್ತ (ದಕ್ಷಿಣ) ಮಲ್ಲಿಕಾರ್ಜುನ ಸಿ ತಿಳಿಸಿದರು.

“ಗುಜರಿ ಕೇಂದ್ರಕ್ಕೆ ಹೋಗುವ ವಾಹನಗಳ ಮೇಲೆ ಯಾವುದೇ ಪೊಲೀಸ್ ಪ್ರಕರಣಗಳು ಇರಬಾರದು. ಅವರು ಯಾವುದೇ ಬಾಕಿ ಇರುವ ಸಂಚಾರ ದಂಡವನ್ನು ಹೊಂದಿರಬಾರದು. ಆರ್‌ವಿಎಸ್‌ಎಫ್ ಪರಿಸರ ಸ್ನೇಹಿ ರೀತಿಯಲ್ಲಿ ವಾಹನಗಳನ್ನು ಸ್ಕ್ರ್ಯಾಪ್ ಮಾಡುತ್ತದೆ. ಅಪಾಯಕಾರಿ ತ್ಯಾಜ್ಯಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲಾಗುವುದು” ಎಂದರು.

ಈ ಸುದ್ದಿ ಓದಿದ್ದೀರಾ? ವಂಚನೆ ಪ್ರಕರಣ | ಸ್ವಾಮೀಜಿ ಬಂಧನವಾದ್ರೆ, ಸತ್ಯ ಹೊರಬರಲಿದೆ: ಚೈತ್ರಾ ಕುಂದಾಪುರ

“ಸ್ಕ್ರ್ಯಾಪ್ ಮಾಡಿದ ನಂತರ, ವಾಹನ ಮಾಲೀಕರಿಗೆ ಡಿಸ್ಟ್ರಕ್ಷನ್ ಪ್ರಮಾಣಪತ್ರ (ಸಿಒಡಿ) ನೀಡಲಾಗುವುದು. ಅದನ್ನು ರಿಯಾಯಿತಿಗಳನ್ನು ಪಡೆಯಲು ಹೊಸ ವಾಹನಗಳನ್ನು ಖರೀದಿಸುವಾಗ ಉಪಯೋಗಿಸಬಹುದು” ಎಂದು ಹೇಳಿದರು.

“ಇಂತಹ ಸೌಲಭ್ಯವನ್ನು ಸ್ಥಾಪಿಸಲು ಸುಮಾರು ₹10 ಕೋಟಿ ವೆಚ್ಚವಾಗಲಿದೆ. ಡಿಸೆಂಬರ್ ಅಂತ್ಯದ ವೇಳೆಗೆ ದೇವನಹಳ್ಳಿಯಲ್ಲಿ ಕಾರ್ಯಾಚರಣೆ ಪ್ರಾರಂಭವಾಗುವ ಸಾಧ್ಯತೆಯಿದೆ” ಎಂದು ಮೂಲಗಳು ತಿಳಿಸಿವೆ.

ಮುಖ್ಯ ಅಂಶಗಳು

  • ಮಾಲಿನ್ಯಕಾರಕವಾಗಿರುವ 15 ವರ್ಷ ಮತ್ತು ಅದಕ್ಕೂ ಹಳೆಯ ವಾಹನಗಳನ್ನು ರದ್ದುಗೊಳಿಸಬೇಕು
  • ಸ್ಕ್ರ್ಯಾಪಿಂಗ್ ಪರಿಸರ ಸ್ನೇಹಿ ಆಗಿರಬೇಕು
  • ಆರ್‌ವಿಎಸ್‌ಎಫ್‌ನಲ್ಲಿ ಸ್ಕ್ರ್ಯಾಪಿಂಗ್ ಮಾಡಬೇಕು.
  • ಭಾರತದಲ್ಲಿ 60 ಆರ್‌ವಿಎಸ್‌ಎಫ್‌ಗಳಿವೆ. ಕರ್ನಾಟಕದಲ್ಲಿ ಯಾವುದೂ ಇಲ್ಲ
  • ಬೆಂಗಳೂರು, ತುಮಕೂರು, ಕೊಪ್ಪಳದಲ್ಲಿ ಘಟಕ ಸ್ಥಾಪಿಸಲು 3 ಕಂಪನಿಗಳಿಗೆ ಸರ್ಕಾರ ಅನುಮತಿ ನೀಡಿದೆ
  • ಸ್ಕ್ರ್ಯಾಪ್ ವಾಹನ ಮಾಲೀಕರು ಡಿಸ್ಟ್ರಕ್ಷನ್ ಪ್ರಮಾಣ ಪತ್ರವನ್ನು ಪಡೆಯಲು, ರಿಯಾಯಿತಿ ಪಡೆಯಲು ಹೊಸ ವಾಹನಗಳನ್ನು ಖರೀದಿಸುವಾಗ ಉಪಯೋಗಿಸಬಹುದು.
  • ರಾಜ್ಯದಲ್ಲಿ ಸುಮಾರು 15 ಲಕ್ಷ ವಾಹನಗಳು ಸ್ಕ್ರ್ಯಾಪಿಂಗ್‌ಗೆ ಯೋಗ್ಯವಾಗಿವೆ

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಪದೇಪದೆ ಡ್ರಗ್ಸ್‌ ಖರೀದಿ ಮಾಡುತ್ತಿದ್ದವನ ಬಳಿ ಹೆಚ್ಚು ಹಣ ಇರಬಹುದೆಂದು ಅಪಹರಣ: ಆರೋಪಿಗಳ ಬಂಧನ

ಪದೇಪದೆ ಡ್ರಗ್ಸ್‌ ಖರೀದಿ ಮಾಡುತ್ತಿದ್ದವನ ಬಳಿ ಹೆಚ್ಚು ಹಣ ಇರಬಹುದೆಂದು ಭಾವಿಸಿ...

ಬೆಂಗಳೂರು | ಯುವನಿಧಿ ಪ್ರತಿ ತಿಂಗಳು ಸ್ವಯಂ ಘೋಷಣೆ ಕಡ್ಡಾಯ

ಯುವನಿಧಿ ಯೋಜನೆ ಪ್ರಯೋಜನವನ್ನು ಪ್ರತಿ ತಿಂಗಳೂ ಪಡೆಯಬೇಕಿದ್ದರೆ, ಪ್ರತಿ ತಿಂಗಳು ಸ್ವಯಂ...

ಬೆಂಗಳೂರು | ಹಳೆ ವೈಷಮ್ಯ; ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಯುವಕನ ಕೊಚ್ಚಿ ಕೊಲೆ

ಹಳೆ ವೈಷಮ್ಯದ ಹಿನ್ನೆಲೆ, ಯುವಕನೊಬ್ಬನನ್ನು ನಡುರಸ್ತೆಯಲ್ಲಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ...

‘ದೇವಾಲಯದ ತೀರ್ಥ ಪ್ರಸಾದ ಬೇಡ, ಉನ್ನತ ಶಿಕ್ಷಣಕ್ಕಾಗಿ ಬಸ್‌ ಬೇಕು’; ಸಿಎಂಗೆ ಪತ್ರ ಬರೆದ ವಿದ್ಯಾರ್ಥಿನಿ

“ನಮಗೆ ದೇವಾಲಯದ ತೀರ್ಥಪ್ರಸಾದ ಬೇಡ. ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ...