ಅಮುಲ್-ನಂದಿನಿ ಬಗ್ಗೆ ಹೊಸ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿ; ಆಪ್ ಸಲಹೆ

Date:

  • ಅಮುಲ್-ನಂದಿನಿ ವಿಚಾರ ಚುನಾವಣೆ ಸಂದರ್ಭದಲ್ಲಿ ಬರಬಾರದಾಗಿತ್ತು
  • ವಿಜಯ ಬ್ಯಾಂಕ್ ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನ ಆಗಿದೆ

ನಂದಿನಿ ಮತ್ತು ಅಮುಲ್ ವಿವಾದಕ್ಕೆ ಸಂಬಂಧಿಸಿದಂತೆ, ಮೊದಲ ಬಾರಿಗೆ ಈ ರೀತಿಯ ಪರಿಸ್ಥಿತಿ ಉಂಟಾಗಿದೆ. ಕೇಂದ್ರದ ಅಮುಲ್‌ನ ನಿರ್ಧಾರ ಸದ್ಯಕ್ಕೆ ಪಕ್ಕಕ್ಕೆ ಇಡಿ. ಈ ಬಗ್ಗೆ, ಹೊಸ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಬ್ರಿಜೇಶ್ ಕಾಳಪ್ಪ ಹೇಳಿದರು.

ಆಮ್ ಆದ್ಮಿ ಪಕ್ಷದ ಮೂರನೇ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದೇ ವೇಳೆ, ನಂದಿನಿ-ಅಮುಲ್‌ ವಿವಾದವನ್ನು ಇತ್ಯರ್ಥ ಪಡಿಸಲು ಸಲಹೆ ನೀಡಿದೆ.

ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಬ್ರಿಜೇಶ್‌ ಕಾರಪ್ಪ, “ನಂದಿನಿ ಮತ್ತು ಅಮುಲ್ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡುವ ಬಗ್ಗೆ ಅಮಿತ್ ಶಾ ಈ ಹಿಂದೆ ಮಾತನಾಡಿದ್ದರು. ಇಂತಹ ದೊಡ್ಡ ನಿರ್ಧಾರಗಳನ್ನು ಮಾಡುವ ಮುನ್ನ ರಾಜ್ಯ ಸರ್ಕಾರದ ಅನುಮತಿ ತೆಗೆದುಕೊಳ್ಳಬೇಕು. ಈಗ ಲಕ್ಷಾಂತರ ಜನರು ಕೆಎಂಎಫ್‌ಗೆ ಹಾಲನ್ನು ಕೊಡುತ್ತಿದ್ದಾರೆ. ಅದೇ ರೀತಿ ಖರೀದಿ ಕೂಡ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಈ ವಿಚಾರ ಬರಬಾರದಾಗಿತ್ತು. ಈ ನಿರ್ಣಯದಿಂದ ಜನರಲ್ಲಿ ಆಕ್ರೋಶ ಉಂಟಾಗಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕಳ್ಳನನ್ನು ಬಂಧಿಸಿ ಹತ್ಯೆಗೈದ ಆರೋಪಿಗಳು

“ವಿಜಯ ಬ್ಯಾಂಕ್ ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನ ಆಗಿದೆ. ಸ್ಟೇಟ್ ಬ್ಯಾಂಕ್ ಮೈಸೂರ್ ಕೂಡ ವಿಲೀನ ಆಗಿದೆ. ಅದೇ ರೀತಿ ನಂದಿನಿಯನ್ನು ಮಾಯ ಮಾಡುವ ಕಾರ್ಯಕ್ರಮವನ್ನು ಕೇಂದ್ರ ಮಾಡುತ್ತಿದೆ. ನಾಳೆ ಲಾ ಅಂಡ್ ಆರ್ಡರ್ ಪರಿಸ್ಥಿತಿ ಬರಬಾರದು ಎಂದರೆ ಈ ಸಲಹೆಯನ್ನು ಸರ್ಕಾರ ಪಾಲಿಸಲೇಬೇಕು. ಈಗ ಈ ಚುನಾವಣೆ ಮುಗಿದ ಮೇಲೆ ಹೊಸ ಸರ್ಕಾರ ಬರುತ್ತದೆ. ಆಗ ಆ ಸರ್ಕಾರವೇ ಈ ಸಮಸ್ಯೆಯನ್ನು ಬಗೆಹರಿಸಲಿ” ಎಂದು ತಿಳಿಸಿದರು.

“ನಮ್ಮ ಮಾತನ್ನು ಮೀರಿ ಮುಂದಿನ ದಿನದಲ್ಲಿ ನಿರ್ಧಾರ ತೆಗೆದುಕೊಂಡರೆ ಲಾ ಅಂಡ್ ಆರ್ಡರ್ ಪರಿಸ್ಥಿತಿ ಉಂಟಾದರೆ ನೀವೇ ಜವಾಬ್ದಾರಿ” ಎಂದು ಸರ್ಕಾರವನ್ನು ಎಚ್ಚರಿಸಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಬ್ರ್ಯಾಂಡ್‌ ಹೆಸರು ಬಳಸಿ ನಕಲಿ ಬಟ್ಟೆ ತಯಾರು: ಸಿಸಿಬಿ ದಾಳಿ

ಅರ್ಮಾನಿ, ಲಿವೈಸ್, ಅಲ್ಲೆನ್ ಸೊಲ್ಲಿ, ಬುರ್ಬೆರಿ ಲೆದರ್ ಟ್ಯಾಗ್ಸ್, ಪೋಲೊ, ಎಲ್​ಪಿ...

ಝೀರೋ ಟ್ರಾಫಿಕ್‌ನಲ್ಲಿ ಬಂದ ಮಗುವಿಗೆ ಚಿಕಿತ್ಸೆ ನೀಡದ ನಿಮ್ಹಾನ್ಸ್‌; ಸಾವು

ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಒಂದು ವರ್ಷದ ಪುಟ್ಟ ಕಂದಮ್ಮನಿಗೆ...

ಬೆಂಗಳೂರು | ಪ್ರಿಯಕರನ ಮೊಬೈಲ್‌ನಲ್ಲಿತ್ತು 13 ಸಾವಿರ ನಗ್ನ ಫೋಟೋ: ದೂರು ದಾಖಲಿಸಿದ ಪ್ರಿಯತಮೆ

ಸಹೋದ್ಯೋಗಿ, ಪ್ರಿಯತಮೆ ಸೇರಿದಂತೆ ಮಹಿಳೆಯರ 13,000ಕ್ಕೂ ಹೆಚ್ಚು ನಗ್ನ ಫೋಟೋಗಳನ್ನು ಮೊಬೈಲ್‌ನಲ್ಲಿ...

ಭಾರತದ ಅಭಿವೃದ್ಧಿಗೆ ಬಂಡವಾಳಶಾಹಿ ಮಾತ್ರವೇ ಏಕೈಕ ಪರಿಹಾರ: ಇಸ್ಫೋಸಿಸ್ ನಾರಾಯಣ ಮೂರ್ತಿ

ಭಾರತದಂತಹ ಬಡ ದೇಶವು ಅಭಿವೃದ್ಧಿ ರಾಷ್ಟ್ರವಾಗಲು ಸಹಾನುಭೂತಿಯುಳ್ಳ ಬಂಡವಾಳಶಾಹಿಯ ಅಗತ್ಯವಿದೆ. ಅದೊಂದೇ...