ಸಮಸಮಾಜದ ಕಲ್ಪನೆ ಪ್ರತಿಪಾದಿಸಿದವರಲ್ಲಿ ನಯಸೇನ ಆಚಾರ್ಯರೂ ಒಬ್ಬರು: ಪ್ರೊ. ಹಾ ಮಾ ನಾಗಾರ್ಜುನ

Date:

ಜನರು ಹಂಚಿ ತಿನ್ನಬೇಕೆಂದು ತಿಳಿಸಿದ್ದು ಹಾಗೂ ಸಮಸಮಾಜದ ಕಲ್ಪನೆ ಮೊದಲಿಗೆ ಪ್ರತಿಪಾದಿಸಿದವರಲ್ಲಿ ನಯಸೇನ ಆಚಾರ್ಯರು ಒಬ್ಬರು ಎಂದು ಪ್ರೊ. ಹಾ ಮಾ ನಾಗಾರ್ಜುನ ಅವರು ಅಭಿಪ್ರಾಯಪಟ್ಟರು.

- Advertisement -

ಜೈನ ಮಿಲನ್(ಸೆಂಟ್ರಲ್ ಬೆಂಗಳೂರು) ಹಾಗೂ ಜಯನಗರದ ಶ್ರೀಚಕ್ರೇಶ್ವರಿ ಮಹಿಳಾ ಸಮಾಜದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಜೈನ ಸಾಹಿತ್ಯ ಸಿರಿ’ ಕಾರ್ಯಕ್ರಮದ ತಿಂಗಳ ಉಪನ್ಯಾಸದಲ್ಲಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕೋಲಾರ ಕಾಂಗ್ರೆಸ್‌ಗೆ ಹೊಸ ಸಾರಥಿ: ಬಣ ರಾಜಕೀಯಕ್ಕೆ ಬೀಳುವುದೇ ತೆರೆ?

ಕೋಲಾರದ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮ್ಯಾಕಲ ನಾರಾಯಣಸ್ವಾಮಿ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಒಂದು ಪ್ರಮುಖ ಘಟ್ಟವಾಗಿದೆ. ಸಾರ್ವಜನಿಕ ವಲಯದಲ್ಲಿ 'ರಮೇಶ್ ಕುಮಾರ್ ಬಣ'ದ ಬೆಂಬಲದೊಂದಿಗೆ ಬಂದಿದ್ದಾರೆಂಬ ಚರ್ಚೆಗಳಿದ್ದರೂ, ಎಲ್ಲರನ್ನೂ ಒಗ್ಗೂಡಿಸಿ ಬೂತ್...

ವ್ಯವಸ್ಥೆ V/S ವಿದ್ಯಾರ್ಥಿ: ಇಂದೋರ್‌ನಲ್ಲಿ ರಾಹುಲ್ ಕಟ್ಟಿದ ಹೊಸ...

“ಅಂಧಭಕ್ತ ಯಾರು? ಅಂಧಭಕ್ತ- ವಿದ್ಯಾರ್ಥಿ ವಿರೋಧಿ. ವಿದ್ಯಾರ್ಥಿ ಎಲ್ಲಿ ಪ್ರಶ್ನೆ ಕೇಳುತ್ತಾನೋ, ವಿದ್ಯಾರ್ಥಿ ಎಲ್ಲಿ ಕುತೂಹಲದಿಂದ ಇರುತ್ತಾನೋ, ಅಲ್ಲಿ ಅಂಧಭಕ್ತ ಭ್ರಮೆಯಲ್ಲಿ, ತನ್ನದೇ ಲೋಕದಲ್ಲಿ ವಾಸಿಸುತ್ತಾನೆ. ವಿದ್ಯಾರ್ಥಿ ಎಲ್ಲಿ ಪ್ರೀತಿಯಿಂದ ಮಾತನಾಡುತ್ತಾನೋ, ಗೌರವದಿಂದ...

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ:...

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನೆಲಮಟ್ಟದಲ್ಲಿ ಆರಂಭವಾಗಬೇಕು. ಕೆಲಸ ವಿಳಂಬವಾದರೆ ಜನರಲ್ಲಿ ನಿರಾಸೆ ಮೂಡುವುದು ಖಂಡಿತ. ಈ ರಾಜಕೀಯ ಲಾಭವು ಚುನಾವಣೆಯಲ್ಲಿ ಮತಗಳಾಗಿ ಬದಲಾಗಬೇಕಾದರೆ,...

“ಜೈನಧರ್ಮಕ್ಕೆ ನಯಸೇನನ ಕಾಲಕ್ಕೆ ಬಂದ ಬಾಹ್ಯ ಆಘಾತಗಳನ್ನು ಎದುರಿಸಲು ಹಾಗೂ ತನ್ನ ಧರ್ಮವನ್ನು ಉಳಿಸಿಕೊಳ್ಳಲು ಅವನು ತನ್ನ ‘ಧರ್ಮಾಮೃತ’ ಕೃತಿಯಲ್ಲಿ ಹೇಳಬೇಕಾದ ಜರೂರು ಇತ್ತು. ಅವರು ಸ್ವಮತದ ಶ್ರೇಷ್ಠತೆ ಹಾಗೂ ತನ್ನ ಕಾಲಘಟ್ಟವಾದ 12ನೇ ಶತಮಾನದಲ್ಲಿ ಬೇರೆ ಮತಗಳು ಹೇಗೆ ವರ್ತಿಸುತ್ತಿದ್ದವು ಎಂಬುದನ್ನು ತನ್ನ ಗ್ರಂಥವಾದ ʼಧರ್ಮಾಮೃತʼದಲ್ಲಿ ಹೇಳುತ್ತಾನೆ. ಲೌಕಿಕವನ್ನು ಜಯಿಸುತ್ತಲೇ ಅಲೌಕಿಕ ಜಗತ್ತಿಗೆ ಸಾಗುವ ಕ್ರಿಯೆಯನ್ನು ನಯಸೇನ ತಿಳಿಸುತ್ತಾನೆ. ಕತೆಗಳನ್ನು ಹೇಳುತ್ತಲೇ ಜನಸಾಮಾನ್ಯರಿಗೆ ಧರ್ಮವನ್ನು ತಿಳಿಸುವ ಪ್ರಯತ್ನ ಮಾಡಿದ್ದಾನೆ. ಜತೆಗೆ ಕಾವ್ಯಗಳನ್ನು ಕೇಳಿಸಿಕೊಂಡರೂ ಸದ್ಗತಿ ಸಿಗುತ್ತದೆಂದು ನಯಸೇನ ತನ್ನ ಗ್ರಂಥದಲ್ಲಿ ತಿಳಿಸುತ್ತಾನೆ” ಎಂದು ಹೇಳಿದರು.

“ಧರ್ಮವನ್ನು ಪ್ರಶ್ನಿಸುವುದಕ್ಕಿಂತ ಪಾಲನೆ ಮಾಡುವುದರಿಂದ ಮಾತ್ರ ಧರ್ಮ ನಮ್ಮದಾಗುತ್ತದೆ. ನಯಸೇನ ದೇಸಿ ನುಡಿಗಟ್ಟನ್ನು ಅತ್ಯಂತ ಸಮರ್ಥವಾಗಿ ಬಳಸಿದ್ದಾನೆ. ಕಥಾಪ್ರಪಂಚಕ್ಕೆ ಮಹತ್ವವಾದ ಕತೆಗಳನ್ನು ಕೊಟ್ಟಂಥವನು ನಯಸೇನ. ಅವನ ಕತೆಗಳು ಮನುಷ್ಯ ಜೀವನ ಪ್ರೀತಿಯನ್ನು ತಿಳಿಸುತ್ತವೆ. ತನ್ನ ಕಾವ್ಯದಲ್ಲಿ ಭೂಮಿಯ ಹದ, ಮಳೆ, ಕೀಟ ಪ್ರಪಂಚವನ್ನು ವಿವರಿಸುತ್ತಾನೆ” ಎಂದು ಡಾ. ಹಾ ಮಾ ನಾಗಾರ್ಜುನ ಪ್ರತಿಪಾದಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾರಾಗೃಹ ಇಲಾಖೆಯ ಐಡಿಜಿಪಿ ಜಿನೇಂದ್ರ ಖನಗಾವಿ ಮಾತನಾಡಿ, “ಧಾರ್ಮಿಕ ಸಂಘರ್ಷ ಕಾಲದಲ್ಲಿ ಬಂದ ನಯಸೇನ, ರಾಜಾಶ್ರಯ ಕಳೆದುಕೊಂಡ ಕಾಲದಲ್ಲಿ ಜನಾಶ್ರಯ ಪಡೆಯಲು ಸಾಮಾನ್ಯ ಕತೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾನೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿದ್ದೀರಾ? ಗದಗ | ಇವತ್ತಿನ ಸರ್ಕಾರ ಕಾರ್ಪೋರೇಟಗಳ ಉದ್ದಾರಕ್ಕಾಗಿ ಕೆಲಸ ಮಾಡುತ್ತಿದೆ: ಪರಮ ಪೂಜ್ಯ ಪ್ರಭು ಮಹಾಂತ ಸ್ವಾಮಿ

ಸೆಂಟ್ರಲ್ ಜೈನ್ ಮಿಲನ್ ಉಪಾಧ್ಯಕ್ಷೆ ಅರುಣ ಆದಿರಾಜ್ ಹಾಗೂ ಚಕ್ರೇಶ್ವರಿ ಮಹಿಳಾ ಸಮಾಜದ ಅಧ್ಯಕ್ಷೆ ನಾಗಶ್ರೀ ಮುಪ್ಪಾನೆ, ಸಂಚಾಲಕರಾದ ಡಾ.ಪದ್ಮಿನಿ ನಾಗರಾಜು, ಬ್ರಾಹ್ಮಿಲ ಮದನಕುಮಾರ ಇದ್ದರು. ಸೌದಾಮಿನಿ ಅಜಿತ್ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಗನಕ್ಕೇರಿದ ದಿನಬಳಕೆ ವಸ್ತುಗಳ ದರ: ‘ಕ್ಯಾ ಹುವಾ ತೇರಾ ವಾದಾ’ – ಪ್ರಧಾನಿ ಮೋದಿಗೆ ಕಾಂಗ್ರೆಸ್ ಪ್ರಶ್ನೆ

ದೇಶದಲ್ಲಿ ಪ್ರಮುಖ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರುತ್ತಿರುತ್ತಿದೆ. ಇದನ್ನು ಖಂಡಿಸಿ ಕಾಂಗ್ರೆಸ್...

ಹಾವೇರಿ‌ | ಈ ಬಾರಿ ಕಬ್ಬಿಗೆ ಟನ್‌ಗೆ ₹ 5,500 ದರ ನಿಗದಿಗೆ ರೈತ ಸಂಘದ ಅಧ್ಯಕ್ಷ ಚೂನಪ್ಪ‌ಪೂಜಾರಿ ಆಗ್ರಹ

"ಮಳೆ‌ ಕೊರತೆಯಿಂದ‌ ಎಲ್ಲ ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಈ ಬಾರಿ...

BREAKING NEWS: ಸೌಜನ್ಯ ಕೊಲೆ ಪ್ರಕರಣ: ಮರು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಆದೇಶ

ರಾಜ್ಯಾದ್ಯಂತ ತೀವ್ರ ಸಂಚಲನ ಹಾಗೂ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದ್ದ ಧರ್ಮಸ್ಥಳದ ಸೌಜನ್ಯ...