ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ವತಿಯಿಂದ ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಅಂಗವಾಗಿ ಮತದಾರರ ಜಾಗೃತಿಗಾಗಿ “ರಾಜ್ಯ ಮಟ್ಟದ ವ್ಯಂಗ್ಯ ಚಿತ್ರಕಾರರ ಕಾರ್ಯಾಗಾರ ಮತ್ತು ಪ್ರದರ್ಶನ”ವನ್ನು ವಿಧಾನಸೌಧ ಪೂರ್ವ ದಿಕ್ಕಿನಲ್ಲಿರುವ ಬಸವಣ್ಣನ ಪ್ರತಿಮೆಯ ಮುಂಭಾಗ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಚುನಾವಣಾಧಿಕಾರಿಯಾದ ಮನೋಜ್ ಕುಮಾರ್ ಮೀನಾ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ವೀಕ್ಷಿಸಿದರು.
ಈ ಕಾರ್ಯಕ್ರಮದಲ್ಲಿ ಕಲಾವಿದರು ಮತದಾನದ ಕುರಿತು ಜಾಗೃತಿ ಹಾಗು ಮಹತ್ವವನ್ನು ಸಾರುವಂತಹ ಚಿತ್ರಗಳನ್ನು ರಚಿಸಿ, ಆಯ್ಕೆಯಾದ ಚಿತ್ರಗಳನ್ನು ಜನವರಿ 21ರಂದು ವಿಶೇಷ ಕಾರ್ಯಕ್ರಮದ ಮೂಲಕ ಪ್ರದರ್ಶನ ಮಾಡಲಾಯಿತು. ಜಾಗೃತಿ ಮೂಡಿಸುವ ಅತ್ಯುತ್ತಮ 25 ಚಿತ್ರಗಳನ್ನು ಮುಖ್ಯ ಚುನಾವಣಾ ಆಯೋಗದಿಂದ ಮತದಾನದ ಜಾಗೃತಿಗಾಗಿ ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗುತ್ತದೆ.
2024ರ ಲೋಕಸಭಾ ಚುನಾವಣೆಯ ಪ್ರಯುಕ್ತ ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ಮುಖ್ಯ ಚುನಾವಣಾಧಿಕಾರಿ ಕಛೇರಿಯಿಂದ ವ್ಯಂಗ್ಯಚಿತ್ರಗಳನ್ನು ಆಹ್ವಾನಿಸಲಾಗಿತ್ತು. ಅದರಂತೆ ಕಲಾವಿದರು, ವ್ಯಂಗ್ಯಚಿತ್ರಕಾರರು, ಹವ್ಯಾಸಿ ಕಲಾವಿದರು ಸೇರಿದಂತೆ ವಿಧ್ಯಾರ್ಥಿಗಳು ಈ ಅಭಿಯಾನದಲ್ಲಿ ಭಾಗವಹಿಸಿದ್ದರು.
ಕಲಾವಿದರು ಮತದಾನದ ಕುರಿತು ಜಾಗೃತಿ ಹಾಗೂ ಮಹತ್ವವನ್ನು ಸಾರುವಂತಹ ಚಿತ್ರಗಳನ್ನು ರಚಿಸಿ, ಆಯ್ಕೆಯಾದ ಚಿತ್ರಗಳನ್ನು ಜನವರಿ 21ರಂದು ವಿಶೇಷ ಕಾರ್ಯಕ್ರಮದ ಮೂಲಕ ಪ್ರದರ್ಶನ ಮಾಡಲಾಯಿತು. ಜಾಗೃತಿ ಮೂಡಿಸುವ ಅತ್ಯುತ್ತಮ 25 ಚಿತ್ರಗಳನ್ನು ಮುಖ್ಯ ಚುನಾವಣಾ ಆಯೋಗದಿಂದ ಮತದಾನದ ಜಾಗೃತಿಗಾಗಿ ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗುವುದು ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ರಾಮಮಂದಿರ ಉದ್ಘಾಟನೆ | ರಾಜ್ಯದಲ್ಲಿ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿ; ಪೊಲೀಸರಿಗೆ ಸಿಎಂ ಸೂಚನೆ
ಈ ವೇಳೆ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಆರ್. ರಾಮಚಂದ್ರನ್, ಸ್ವೀಪ್ ನೋಡಲ್ ಅಧಿಕಾರಿಯಾದ ಪಿ.ಎನ್ ವಸ್ತ್ರದ್, ಮಾಹಿತಿ ತಂತ್ರಜ್ಞಾನದ ವಿಶೇಷ ಅಧಿಕಾರಿಯಾದ ಸೂರ್ಯ ಸೇನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.