ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಮೊಳಗಿಸಿದ್ದ ಮತ ಹಕ್ಕಿನ ಕೂಗಿಗೆ 131 ವರ್ಷ: SIR ಹುನ್ನಾರಕ್ಕೆ ಬೇಕಿದೆ ಮತ್ತೊಂದು ಸತ್ಯಾಗ್ರಹ!

Date:

ಮತದಾನ ಕೇವಲ ಹಕ್ಕಲ್ಲ, ಅದು ಪ್ರಜೆಯೊಬ್ಬನ ಘನತೆ ಹಾಗೂ ಅಸ್ತಿತ್ವದ ಸಂಕೇತ. 131 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಇದೇ ಮತಾಧಿಕಾರಕ್ಕಾಗಿ ಗಾಂಧೀಜಿ ಬ್ರಿಟಿಷರ ವಿರುದ್ಧ ಸಿಡಿದೆದ್ದಿದ್ದರು. ಆದರೆ, ಇಂದು ಸ್ವತಂತ್ರ ಭಾರತದಲ್ಲಿ ‘ಎಸ್.ಐ.ಆರ್’ ಹೆಸರಿನಲ್ಲಿ ಕೋಟ್ಯಂತರ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತಿರುವುದು ಅಂದಿನ ವಸಾಹತುಶಾಹಿ ಕರಾಳ ಇತಿಹಾಸವನ್ನು ಮತ್ತೊಮ್ಮೆ ಕಣ್ಣಿಗೆ ಕಟ್ಟುವಂತೆ ಮಾಡಿದೆ

- Advertisement -

ಗಾಂಧೀಜಿ ಎಂದರೆ ಕೇವಲ ಅಹಿಂಸೆ, ಸತ್ಯಾಗ್ರಹದ ಪ್ರತಿರೂಪವಷ್ಟೇ ಅಲ್ಲ, ಪ್ರಜಾಪ್ರಭುತ್ವದ ಅಡಿಪಾಯವಾದ ‘ಮತದಾನದ ಹಕ್ಕಿಗಾಗಿ’ ಧ್ವನಿ ಎತ್ತಿದ ಅಪ್ರತಿಮ ಹೋರಾಟಗಾರ. ಗಾಂಧೀ ಜಯಂತಿಯ ಈ ಸಂದರ್ಭದಲ್ಲಿ ದೇಶಾದ್ಯಂತ ‘ವಿಶೇಷ ತೀವ್ರ ಪರಿಷ್ಕರಣೆ’ (Special Intensive Revision – SIR) ಪ್ರಕ್ರಿಯೆಯ ಹೆಸರಿನಲ್ಲಿ ನಡೆಯುತ್ತಿರುವ ಸಾಮೂಹಿಕ ಮತದಾರರ ಪಟ್ಟಿಯ ಕಡಿತದ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಇಂದಿನ ವ್ಯವಸ್ಥೆ ಮತ್ತು ಪ್ರಸ್ತುತ ಸರ್ಕಾರದ ‘ಎಸ್.ಐ.ಆರ್’ ಕ್ರಮಗಳು ಪ್ರಜಾಪ್ರಭುತ್ವದ ಕಗ್ಗೊಲೆ ಎಂಬ ಟೀಕೆಗಳ ಬೆನ್ನಲ್ಲೇ, 1894ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಹಾಗೂ 1924ರಲ್ಲಿ ಭಾರತೀಯರ ಮತದಾನದ ಹಕ್ಕಿಗಾಗಿ ಮೋಹನ್‌ದಾಸ್ ಕರಮಚಂದ್ ಗಾಂಧಿ ನಡೆಸಿದ ಐತಿಹಾಸಿಕ ಹೋರಾಟಗಳು ಇಂದಿನ ಪರಿಸ್ಥಿತಿಗೆ ಕನ್ನಡಿ ಹಿಡಿದಂತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು ಗ್ರಹಿಸಲು ಅವರ ದಿನಚರಿಯ ಭಾಗವೇ ಆಗಿದ್ದ ಕೆಲವು ತುಣುಕುಗಳು ನಿಮ್ಮ ಓದಿಗಾಗಿ... ಆರೆಸ್ಸೆಸ್‌ಗೊಂದು ಕಿವಿಮಾತುಅದು ದೇಶ ವಿಭಜನೆಯ ಕಾಲ. ಎಲ್ಲೆಲ್ಲೂ ಹಿಂದೂ-ಮುಸ್ಲಿಂ...

​1894ರಲ್ಲಿ ದಕ್ಷಿಣ ಆಫ್ರಿಕಾದ ನಟಾಲ್ ಪ್ರಾಂತ್ಯದ ವಸಾಹತುಶಾಹಿ ಸರ್ಕಾರವು ಭಾರತೀಯರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ‘ಫ್ರಾಂಚೈಸಿ ಲಾ ಅಮೆಂಡ್‌‌ಮೆಂಟ್ ಬಿಲ್’ ಅನ್ನು ಮಂಡಿಸಿತ್ತು. ಗಾಂಧೀಜಿಯವರ ಮೊದಲ ರಾಜಕೀಯ ಹೋರಾಟ ಶುರುವಾಗಿದ್ದೇ ಈ ಮತಾಧಿಕಾರ ನಿರಾಕರಣೆಯ ವಿರುದ್ಧ. ಕೇವಲ 50 ಪೌಂಡ್ (ಅಂದಿನ ಕಾಲಕ್ಕೆ ಸುಮಾರು 750 ರೂಪಾಯಿ) ಮೌಲ್ಯದ ಆಸ್ತಿ ಹೊಂದಿರುವವರಿಗೆ ಮಾತ್ರ ಮತದಾನದ ಹಕ್ಕನ್ನು ಸೀಮಿತಗೊಳಿಸುವ ಮೂಲಕ, ಬಹುಪಾಲು ಭಾರತೀಯರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ಬ್ರಿಟಿಷರ ಹುನ್ನಾರವನ್ನು ಗಾಂಧೀಜಿ ತೀವ್ರವಾಗಿ ವಿರೋಧಿಸಿದ್ದರು. ಒಂದು ದೇಶದ ನಾಗರಿಕನಿಗೆ ಮತದಾನದ ಹಕ್ಕೇ ಆತನ ‘ಸ್ವಾಭಿಮಾನದ ಸಂಕೇತ’ ಎಂದು ಅವರು ಅಂದೇ ಪ್ರತಿಪಾದಿಸಿದ್ದರು.

​ಬ್ರಿಟಿಷ್ ವಸಾಹತುಶಾಹಿ ಕಾರ್ಯದರ್ಶಿ ಲಾರ್ಡ್ ರಿಪ್ಪನ್‌ಗೆ ಅಂದು ಗಾಂಧೀಜಿ ಬರೆದ ಪತ್ರದಲ್ಲಿ, ಮತದಾನದ ಹಕ್ಕಿಲ್ಲದ ಭಾರತೀಯರು ವಸಾಹತುಶಾಹಿ ನೆಲದಲ್ಲಿ ತಮ್ಮ ಸ್ವಾಭಿಮಾನವನ್ನು ಕಳೆದುಕೊಳ್ಳುತ್ತಾರೆ ಎಂದು ಎಚ್ಚರಿಸಿದ್ದರು. ನಟಾಲ್ ಪ್ರಾಂತ್ಯದಲ್ಲಿ ಮತದಾನದ ಹಕ್ಕು ಬೇಕಿದ್ದರೆ, ತಾವು ಭಾರತದಲ್ಲೂ ಮತದಾರರಾಗಿದ್ದೆವು ಎಂಬುದನ್ನು ಭಾರತೀಯರು ಸಾಬೀತುಪಡಿಸಬೇಕು ಎಂಬ ವಿಚಿತ್ರ ಷರತ್ತನ್ನು ಬ್ರಿಟಿಷರು ವಿಧಿಸಿದ್ದರು. ಇದು ಬ್ರಿಟಿಷರ ವಸಾಹತುಶಾಹಿ ಕುತಂತ್ರದ ಪರಮಾವಧಿಯಾಗಿತ್ತು. ಇಂದಿನ 2026ರ ‘ಎಸ್.ಐ.ಆರ್’ ಪ್ರಕ್ರಿಯೆಯು ಅಕ್ಷರಶಃ ಇದನ್ನೇ ಮರುಕಳಿಸುತ್ತಿದ್ದು, ನವ ಮತದಾರರು 2002ರ ಮತದಾರರ ಪಟ್ಟಿಯಲ್ಲಿ ತಮ್ಮ ಪೋಷಕರ ಹೆಸರು ಇತ್ತೇ ಎಂಬುದನ್ನು ಸಾಬೀತುಪಡಿಸಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ.

gandhi 2 1

​ಬ್ರಿಟಿಷ್ ಆಡಳಿತಗಾರರು ಅಂದು ಭಾರತೀಯರನ್ನು ‘ನುಸುಳುಕೋರರು’ (Intruders) ಎಂದು ಕರೆದು ಮತಾಧಿಕಾರ ನಿರಾಕರಿಸಿದ್ದರು. ಇಂದಿನ ಸರ್ಕಾರದ ‘ಎಸ್.ಐ.ಆರ್’ ಪ್ರಕ್ರಿಯೆಯ ಹಿಂದೆಯೂ ಇದೇ ‘ನುಸುಳುಕೋರ’ (Ghuspatia) ಕಥನವನ್ನು ಬಳಸಿಕೊಳ್ಳಲಾಗುತ್ತಿದೆ. ಮತದಾರರ ಪಟ್ಟಿಯಿಂದ ನುಸುಳುಕೋರರನ್ನು ತೆಗೆದುಹಾಕುವ ನೆಪದಲ್ಲಿ, ಕೋಟ್ಯಂತರ ನೈಜ ಭಾರತೀಯರನ್ನೇ ಮತದಾರರ ಪಟ್ಟಿಯಿಂದ ಅಳಿಸಿಹಾಕುವ ಹುನ್ನಾರ ನಡೆಯುತ್ತಿದೆ. ಇದು 131 ವರ್ಷಗಳ ಹಿಂದೆ ಗಾಂಧೀಜಿ ಎದುರಿಸಿದ ಅನ್ಯಾಯದ ಮುಂದುವರಿದ ಭಾಗದಂತಿದೆ.

​ಕೋಮುವಾದದ ಅಸ್ತ್ರವನ್ನು ಬಳಸಿ ಮತದಾರರನ್ನು ವಿಭಜಿಸುವ ಬ್ರಿಟಿಷರ ತಂತ್ರವೂ ಇಂದು ಮರುಜೀವ ಪಡೆದುಕೊಂಡಂತಿದೆ. 1894ರಲ್ಲಿ ಬ್ರಿಟಿಷರು ಹಿಂದೂಗಳ ಮನಸ್ಸಿನಲ್ಲಿ ಮುಸ್ಲಿಂ ಮತದಾರರ ಬಗ್ಗೆ ಭಯ ಹುಟ್ಟಿಸಿ ಮತಾಧಿಕಾರವನ್ನು ಕಸಿದುಕೊಳ್ಳಲು ಯತ್ನಿಸಿದ್ದರು. ಇಂದಿನ ‘ಎಸ್.ಐ.ಆರ್’ ಪ್ರಕ್ರಿಯೆಯಲ್ಲೂ ಇದೇ ಮಾದರಿಯನ್ನು ಅನುಸರಿಸಲಾಗುತ್ತಿದ್ದು, ನಿರ್ದಿಷ್ಟ ಸಮುದಾಯಗಳ ಹೆಸರುಗಳನ್ನು ವ್ಯವಸ್ಥಿತವಾಗಿ ಮತದಾರರ ಪಟ್ಟಿಯಿಂದ ಅಳಿಸಿಹಾಕಲಾಗುತ್ತಿದೆ. ಇದು ಗಾಂಧೀಜಿ ಪ್ರತಿಪಾದಿಸಿದ ಜಾತ್ಯತೀತ ಮತ್ತು ಸಾರ್ವತ್ರಿಕ ಮತದಾನ ಪದ್ಧತಿಯ ಆಶಯಗಳಿಗೆ ಕೊಡಲಿಪೆಟ್ಟು ನೀಡಿದೆ.

​ಗಾಂಧೀಜಿಯವರ 1924ರ ಮತ್ತೊಂದು ಐತಿಹಾಸಿಕ ಪ್ರಸಂಗವು ಇಂದಿನ ದುರಂತ ಪರಿಸ್ಥಿತಿಗೆ ಮತ್ತು ಎಸ್.ಐ.ಆರ್ ಪ್ರಕ್ರಿಯೆಗೆ ನೇರ ನಿದರ್ಶನವಾಗಿದೆ. ಜುಲೈ 1924ರಲ್ಲಿ ಜಮಾಲುದ್ದೀನ್ ಮುಖ್ಮೂರ್ ಎಂಬ ವ್ಯಕ್ತಿ ಗಾಂಧೀಜಿಯವರಿಗೆ ಪತ್ರವೊಂದನ್ನು ಬರೆದಿದ್ದರು. ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ನಿರ್ದಿಷ್ಟ ಸೆಕ್ಷನ್ ಅಡಿಯಲ್ಲಿ ಆರು ತಿಂಗಳ ಶಿಕ್ಷೆಗೆ ಗುರಿಯಾಗಿದ್ದ ಕಾರಣ ನೀಡಿ, ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮುನ್ನ ಮುಖ್ಮೂರ್ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಿಹಾಕಲಾಗಿತ್ತು.

Mahatma Gandhi 5

​ಈ ಕಡಿತದ ವಿರುದ್ಧ ಮುಖ್ಮೂರ್ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಅಧಿಕಾರಿಗಳು ಒಂದು ತಿಂಗಳ ಕಾಲ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಈ ನಡುವೆ ಚುನಾವಣೆ ಘೋಷಣೆಯಾಗಿ, ಮತದಾನದ ದಿನಾಂಕವೂ ನಿಗದಿಯಾಯಿತು. ತಮ್ಮ ಮೇಲ್ಮನವಿ ಇತ್ಯರ್ಥವಾಗುವವರೆಗೆ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ನಿರ್ಧಾರವನ್ನು ತಡೆಹಿಡಿಯಬೇಕು ಎಂದು ಅವರು ಮತ್ತೆ ಮನವಿ ಮಾಡಿದರು. ಅಧಿಕಾರಿಗಳು ಆತನ ಮನವಿಗೆ ಸ್ಪಂದಿಸದೆ, ಆತನಿಗೆ ಮತದಾನದ ಹಕ್ಕನ್ನು ನಿರಾಕರಿಸಿ ಚುನಾವಣೆ ನಡೆಸಿ ಮುಗಿಸಿದರು.

​ಚುನಾವಣೆ ಮುಗಿದ ಸುಮಾರು ಎಂಟು ತಿಂಗಳ ಬಳಿಕ, ಮುಖ್ಮೂರ್‌ಗೆ ಅಧಿಕಾರಿಗಳಿಂದ ಒಂದು ಪತ್ರ ಬಂತು. ಆತನ ಮೇಲ್ಮನವಿಯನ್ನು ಪುರಸ್ಕರಿಸಲಾಗಿದೆ ಮತ್ತು ಆತನ ಹೆಸರನ್ನು ಮತದಾರರ ಪಟ್ಟಿಗೆ ಮರು ಸೇರ್ಪಡೆ ಮಾಡಲಾಗಿದೆ ಎಂಬುದು ಆ ಪತ್ರದ ಸಾರಾಂಶವಾಗಿತ್ತು. ವಿಪರ್ಯಾಸವೆಂದರೆ, ಮತದಾನ ನಡೆದ ದಿನವೇ (ನವೆಂಬರ್ 26, 1923) ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಆದರೆ, ಆತನಿಗೆ ಮತದಾನದ ಹಕ್ಕನ್ನು ಚಲಾಯಿಸಲು ಅವಕಾಶ ನೀಡದಂತೆ ಉದ್ದೇಶಪೂರ್ವಕವಾಗಿ ತಡವಾಗಿ ಮಾಹಿತಿ ನೀಡಲಾಗಿತ್ತು.

​ಈ ಘಟನೆಯ ಬಗ್ಗೆ 1924ರ ಜುಲೈ 17ರ ‘ಯಂಗ್ ಇಂಡಿಯಾ’ ಪತ್ರಿಕೆಯಲ್ಲಿ ಬರೆದ ಗಾಂಧೀಜಿಯವರು ಆಡಳಿತ ವ್ಯವಸ್ಥೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. “ಇದು ಒಬ್ಬ ವ್ಯಕ್ತಿಯನ್ನು ಗಲ್ಲಿಗೇರಿಸಿದ ಬಳಿಕ ಕ್ಷಮಾದಾನ ನೀಡಿದಂತೆ” (This is like sending a reprieve after hanging) ಎಂದು ಮಾರ್ಮಿಕವಾಗಿ ಟೀಕಿಸಿದ್ದರು. ಒಬ್ಬ ವ್ಯಕ್ತಿಯ ಮೇಲ್ಮನವಿಯನ್ನು ಇತ್ಯರ್ಥಪಡಿಸದೆ ಆತನಿಗೆ ಮತದಾನದ ಹಕ್ಕನ್ನು ನಿರಾಕರಿಸುವುದು ಅಕ್ಷಮ್ಯ ಅಪರಾಧ. ಪ್ರತಿಯೊಂದು ಮತವೂ ದೇಶದ ಭವಿಷ್ಯವನ್ನು ನಿರ್ಧರಿಸುವ ಶಕ್ತಿ ಹೊಂದಿದೆ ಮತ್ತು ನಿರ್ಣಾಯಕ ಸಂದರ್ಭಗಳಲ್ಲಿ ಒಂದು ಮತವೂ ದೊಡ್ಡ ಬದಲಾವಣೆ ತರಬಲ್ಲದು ಎಂದು ಗಾಂಧೀಜಿ ಪ್ರತಿಪಾದಿಸಿದ್ದರು. ಆ ಘಟನೆಯು ಅಸಹಕಾರ ಚಳುವಳಿಗೆ ಮತ್ತೊಂದು ಕಾರಣವನ್ನು ಒದಗಿಸಿತು ಎಂದು ಅವರು ಬರೆದಿದ್ದರು.

​ಇದೇ ಇತಿಹಾಸ ಇಂದು ಪಶ್ಚಿಮ ಬಂಗಾಳದಲ್ಲಿ 2026ರ ‘ಎಸ್.ಐ.ಆರ್’ ಪ್ರಕ್ರಿಯೆಯ ಮೂಲಕ ಮರುಕಳಿಸಿದೆ. ಅಲ್ಲಿ ಬರೋಬ್ಬರಿ 93 ಲಕ್ಷ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಈ ಪೈಕಿ 28 ಲಕ್ಷ ಜನರು ತಮ್ಮ ಹೆಸರು ಕೈಬಿಟ್ಟಿದ್ದನ್ನು ವಿರೋಧಿಸಿ ಮೇಲ್ಮನವಿ ಸಲ್ಲಿಸಿದ್ದರು. 1924ರಲ್ಲಿ ಜಮಾಲುದ್ದೀನ್ ಮುಖ್ಮೂರ್ ಎದುರಿಸಿದ ಪರಿಸ್ಥಿತಿಯೇ ಈ 28 ಲಕ್ಷ ಜನರಿಗೂ ಎದುರಾಯಿತು.

mahatma gandhi

​ಚುನಾವಣಾ ಆಯೋಗವು ಈ 28 ಲಕ್ಷ ಜನರ ಮೇಲ್ಮನವಿಗಳನ್ನು ವಿಚಾರಣೆ ನಡೆಸುವ ಮುನ್ನವೇ, ಅವರನ್ನು ಅಯೋಗ್ಯರೆಂದು ಸಾಬೀತುಪಡಿಸದಿದ್ದರೂ, ಮತಾಧಿಕಾರ ನಿರಾಕರಿಸಿ ವಿಧಾನಸಭಾ ಚುನಾವಣೆಗಳನ್ನು ನಡೆಸಿ ಮುಗಿಸಿತು. ಚುನಾವಣೆ ಮುಗಿದ ಬಳಿಕ, ಮೇಲ್ಮನವಿ ಸಲ್ಲಿಸಿದ್ದವರಲ್ಲಿ ಶೇ. 93ರಷ್ಟು ಜನರು ಮತದಾನಕ್ಕೆ ಅರ್ಹರು ಎಂದು ತೀರ್ಮಾನಿಸಿ ಅವರ ಹೆಸರುಗಳನ್ನು ಮರು ಸೇರ್ಪಡೆ ಮಾಡಲಾಯಿತು. ಗಾಂಧೀಜಿ ಅಂದು ಹೇಳಿದಂತೆ ಇದು ‘ಲಕ್ಷಾಂತರ ಜನರನ್ನು ಗಲ್ಲಿಗೇರಿಸಿದ ಬಳಿಕ ನೀಡಿದ ಕ್ಷಮಾದಾನ’ದಂತಿದೆ. ಅಂದಿನ ವಸಾಹತುಶಾಹಿ ಆಡಳಿತಕ್ಕೂ, ಇಂದಿನ ನಮ್ಮ ಆಡಳಿತ ವ್ಯವಸ್ಥೆಗೂ ಯಾವುದೇ ವ್ಯತ್ಯಾಸವಿಲ್ಲದಂತಾಗಿದೆ.

​ಈ ಸಂಪೂರ್ಣ ಪ್ರಜಾಪ್ರಭುತ್ವ ವಿರೋಧಿ ಪ್ರಕ್ರಿಯೆಗೆ ಇಂದಿನ ಚುನಾವಣಾ ಆಯೋಗ ಮತ್ತು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ಸರ್ವಾಧಿಕಾರಿ ಧೋರಣೆಯೇ ಕಾರಣ ಎನ್ನಲಾಗುತ್ತಿದೆ. ಇತರ ಇಬ್ಬರು ಆಯುಕ್ತರನ್ನು ಕತ್ತಲಲ್ಲಿಟ್ಟು, ನಿಯಮಗಳನ್ನು ಗಾಳಿಗೆ ತೂರಿ, ಕೇವಲ ಸಾಫ್ಟ್‌ವೇರ್ ಮೂಲಕ ಕೇಂದ್ರೀಕೃತವಾಗಿ ಮತದಾರರ ಕಡಿತ ಮಾಡಲಾಗಿದೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸೂಚನೆ ಮೇರೆಗೆ ಈ ಪ್ರಕ್ರಿಯೆಗಳು ನಡೆಯುತ್ತಿದ್ದು, ಇದರಿಂದಾಗಿ ಕೋಟ್ಯಂತರ ಜನರು ಕೇವಲ ಮತದಾನದ ಹಕ್ಕನ್ನಷ್ಟೇ ಕಳೆದುಕೊಂಡಿಲ್ಲ, ಬದಲಾಗಿ ತಮ್ಮ ಪಡಿತರ ಚೀಟಿ, ವ್ಯಾಪಾರ, ಉದ್ಯೋಗ ಮತ್ತು ಘನತೆಯ ಬದುಕನ್ನೇ ಕಳೆದುಕೊಳ್ಳುವಂತಾಗಿದೆ.

​1950ರಲ್ಲಿ ಭಾರತದ ಸಂವಿಧಾನ ಜಾರಿಗೆ ಬರುವ ಮೂಲಕ ಎಲ್ಲರಿಗೂ ಮತಾಧಿಕಾರ ಸಿಕ್ಕಿತು. ಆದರೆ, ಅದಕ್ಕೂ ಹಲವು ದಶಕಗಳ ಮುಂಚೆಯೇ (1920 ಹಾಗೂ 1930ರ ದಶಕಗಳಲ್ಲಿ) ಗಾಂಧೀಜಿಯವರು ಜಾತಿ, ಧರ್ಮ, ಆಸ್ತಿ, ಶಿಕ್ಷಣದ ಭೇದವಿಲ್ಲದೆ ಪ್ರತಿಯೊಬ್ಬರಿಗೂ ‘ಸಾರ್ವತ್ರಿಕ ವಯಸ್ಕ ಮತದಾನ’ದ ಹಕ್ಕು ನೀಡಬೇಕೆಂದು ಪಟ್ಟು ಹಿಡಿದಿದ್ದರು. ಈ ಬಾರಿಯ ಗಾಂಧೀ ಜಯಂತಿಯಂದು ನಾವು ಕೇವಲ ಕೈಯಲ್ಲಿ ಕೋಲು ಹಿಡಿದ ಗಾಂಧಿಯನ್ನು ನೆನಪಿಸಿಕೊಳ್ಳುವುದಲ್ಲ; ಮತದಾರರ ಪಟ್ಟಿಯಲ್ಲಿ ಪ್ರತಿಯೊಬ್ಬ ನಾಗರಿಕನ ಹೆಸರನ್ನು ಸೇರಿಸುವುದು ಆತನ ಜನ್ಮಸಿದ್ಧ ಹಕ್ಕು ಎಂದು ಸಾರಿದ ಆ ಯುವ ವಕೀಲನನ್ನು ಸ್ಮರಿಸಬೇಕಿದೆ. ‘ಎಸ್.ಐ.ಆರ್’ ನಂತಹ ಅಸಂವಿಧಾನಿಕ ಪ್ರಕ್ರಿಯೆಗಳ ವಿರುದ್ಧ ಗಾಂಧೀಜಿ ತೋರಿದ ಅಸಹಕಾರ ಮತ್ತು ಸಾಮೂಹಿಕ ಸತ್ಯಾಗ್ರಹದ ಮಾರ್ಗವನ್ನು ಅನುಸರಿಸಿ, ಪ್ರತಿ ಪ್ರಜೆಯ ಮತಾಧಿಕಾರವನ್ನು ರಕ್ಷಿಸುವುದೇ ನಾವು ಗಾಂಧೀಜಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘Instagram ಹೆಣ್ಮಕ್ಕಳಿಗೆ ಮಾತ್ರ’; ಎಲಾನ್ ಮಸ್ಕ್ ಹೀಗ್ಯಾಕಂದ್ರು?

ಟೆಕ್ ಜೈಂಟ್ ಎಲಾನ್ ಮಸ್ಕ್ ಮತ್ತೊಮ್ಮೆ ತಮ್ಮ ವಿವಾದಾತ್ಮಕ ಹೇಳಿಕೆಗಳ...

ಜಂತರ್‌ ಮಂತರ್‌ನಲ್ಲಿ 500ಕ್ಕೂ ಅಧಿಕ ಮಂದಿ ಅರೆಸ್ಟ್: ‘ಗ್ಯಾನೇಶ್ ಕುಮಾರ್ ಬಂಧನವಾಗಲಿ’ ಎಂದ ನಾಯಕರು

ಎಸ್‌ಐಆರ್ ಮೊದಲಾದ ಪ್ರಕ್ರಿಯೆ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ...

ವಿಜಯಪುರ | ರೂ. 2,500 ಸಬ್ಸಿಡಿಗೆ ವಿರೋಧ: ಸರ್ಕಾರಕ್ಕೆ ದೇಣಿಗೆ ಸಂಗ್ರಹಿಸಿ ಕೊಟ್ಟ ರೈತರು!

ಭೀಕರ ಬರದಿಂದ ನಲುಗಿರುವ ರೈತರಿಗೆ ರಾಜ್ಯ ಸರ್ಕಾರ ಘೋಷಿಸಿರುವ ₹2,500 ಇನ್‌ಪುಟ್...

ವಾಹ್‌ EC! 13 ಕೋಟಿ ಜನರನ್ನ ಹೊರದಬ್ಬಿ, ಈಗ ಮರುನೋಂದಣಿಯ ಕಸರತ್ತು

ರಾಷ್ಟ್ರವ್ಯಾಪಿ 'ವಿಶೇಷ ತೀವ್ರ ಪರಿಷ್ಕರಣೆ' (SIR) ಎನ್ನುವ ಭೀಕರ ಆಪರೇಷನ್ ನಡೆಸಿ,...