ಅಮೆರಿಕದ ಗುಪ್ತಚರರಿಗೇ ಸುಳಿವು ನೀಡದೆ ಉಪಗ್ರಹ ಹೊಡೆದುರುಳಿಸಿದ್ದ ಭಾರತದ ಕ್ಷಿಪಣಿ

Date:

ದಶಕಗಳ ಬಳಿಕ, 2019ರಲ್ಲಿ ‘ಮಿಷನ್ ಶಕ್ತಿ’ ಕಾರ್ಯಾಚರಣೆಯ ಮೂಲಕ ಉಪಗ್ರಹ ನಿಗ್ರಹ ಕ್ಷಿಪಣಿ (ASAT) ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿ ಜಗತ್ತನ್ನೇ ದಂಗುಬಡಿಸಿತ್ತು. ಈ ದಿಢೀರ್ ಕಾರ್ಯಾಚರಣೆಯು ಅಮೆರಿಕದ ಗುಪ್ತಚರ ಇಲಾಖೆಯನ್ನು ಹೇಗೆ ಕಂಗಾಲಾಗಿಸಿತ್ತು ಮತ್ತು ಅಲ್ಲಿ ಎಂತಹ ಆತಂಕ ಸೃಷ್ಟಿಸಿತ್ತು ಎಂಬುದನ್ನು ಅಮೆರಿಕದ ಮಾಜಿ ಗುಪ್ತಚರ ಅಧಿಕಾರಿಯೊಬ್ಬರು ಇದೀಗ ಬಹಿರಂಗಪಡಿಸಿದ್ದಾರೆ.

- Advertisement -

​ಅಮೆರಿಕದ ವಾಯುಪಡೆಯ ಮಾಜಿ ಗುಪ್ತಚರ ಅಧಿಕಾರಿ ಡೇವಿಡ್ ಗ್ರಷ್ ಅವರು ಪಾಡ್‌ಕಾಸ್ಟರ್ ಜೋ ರೋಗನ್ ಅವರೊಂದಿಗಿನ ಸಂದರ್ಶನದಲ್ಲಿ ಈ ಆಸಕ್ತಿದಾಯಕ ವಿಚಾರವನ್ನು ಹಂಚಿಕೊಂಡಿದ್ದಾರೆ. 2019ರ ಮಾರ್ಚ್ 27ರಂದು ಭಾರತವು ಅನಿರೀಕ್ಷಿತವಾಗಿ ನಡೆಸಿದ ಎ-ಸ್ಯಾಟ್ (ASAT) ಕ್ಷಿಪಣಿ ಪರೀಕ್ಷೆಯ ಸಂದರ್ಭವನ್ನು ಅವರು ನೆನಪಿಸಿಕೊಂಡಿದ್ದಾರೆ. ಆ ಸಮಯದಲ್ಲಿ ಗ್ರಷ್ ಅವರು ಅಮೆರಿಕದ ನ್ಯಾಷನಲ್ ರೆಕಾನೈಸನ್ಸ್ ಆಫೀಸ್ (NRO) ಕಾರ್ಯಾಚರಣಾ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದರು. “ಅದೊಂದು ನಂಬಲಸಾಧ್ಯವಾದ ಘಟನೆ… 2019ರಲ್ಲಿ ಭಾರತವು ಅನಿರೀಕ್ಷಿತವಾಗಿ ಕ್ಷಿಪಣಿಯೊಂದನ್ನು ಉಡಾವಣೆ ಮಾಡಿ ತನ್ನದೇ ಉಪಗ್ರಹವೊಂದನ್ನು ಹೊಡೆದುರುಳಿಸಿತು. ಈ ಬಗ್ಗೆ ಅವರು ನಮಗೆ ಯಾವುದೇ ಸುಳಿವು ನೀಡಿರಲಿಲ್ಲ” ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮಹಿಳೆ ಮಾಡುತ್ತಿರುವ ಬಿಟ್ಟಿ ಚಾಕರಿಗಳೇನೇನು? ಇದನ್ನೇಕೆ ಅರಿಯಲು ಮುಂದಾಗಿದೆ...

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸರ್ಕಾರದ ಗುರಿಗೆ ಒಂದು ದೊಡ್ಡ ಅಡ್ಡಿ ಎದುರಾಗಿದೆ. ಅದೇನೆಂದರೆ; ಸಾಕಷ್ಟು ಸಂಖ್ಯೆಯ ಮಹಿಳೆಯರನ್ನು ಉದ್ಯೋಗ ಕ್ಷೇತ್ರಕ್ಕೆ ತರುವುದು. ವಿಶ್ವಬ್ಯಾಂಕ್ ಪ್ರಕಾರ, 2047ರ ವೇಳೆಗೆ...

ಭದ್ರತೆಯ ಹೆಸರಿನಲ್ಲಿ ಮಾಂಸದಂಗಡಿಗಳಿಗೆ ಬೀಗ: ಸರ್ಕಾರದ ಈ ನಿರ್ಧಾರದ...

ಈ ಬೆಳವಣಿಗೆ ಕಾಂಗ್ರೆಸ್ ಸರ್ಕಾರದ ಆಡಳಿತಾತ್ಮಕ ಹೊಣೆಗಾರಿಕೆಯನ್ನೂ ಮುನ್ನೆಲೆಗೆ ತಂದಿದೆ. ಪ್ರಧಾನಿಯ ಭೇಟಿಯ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್‌ಗಳ ಆಗಮನ ಮತ್ತು ನಿರ್ಗಮನದ ಭದ್ರತೆಯನ್ನು ನಿರ್ಬಂಧಕ್ಕೆ ಕಾರಣವೆಂದು ಸಮರ್ಥಿಸಲಾಗುತ್ತಿದ್ದರೆ, ಅದಕ್ಕೂ ಸಮಗ್ರ ವಿವರಣೆ ಬೇಕಾಗುತ್ತದೆ. ಪ್ರಧಾನಿ...

ನಿಜಕ್ಕೂ ಭಾರತದ ಬಡತನ 16%ಗೆ ಇಳಿದಿದೆಯೇ? ವಾಸ್ತವ ಹೇಳುವುದೇನು?

ವಿಶ್ವಬ್ಯಾಂಕ್ ವರದಿ ಪ್ರಕಾರ, ಭಾರತದಲ್ಲಿ ಬಡತನ 16.1%ಗೆ ಮತ್ತು ತೀವ್ರ ಬಡತನ 2.6%ಗೆ ಇಳಿದಿದೆ. ಇದೇ ಅಂಕಿಅಂಶವನ್ನು ಬಳಸಿಕೊಂಡು ತಮ್ಮ ಸಾಧನೆ ಎಂಬಂತೆ ಕೇಂದ್ರ ಸರ್ಕಾರ ಸಂಭ್ರಮಿಸುತ್ತಿದೆ. ಆದರೆ, ದೇಶದ ಸುಮಾರು 80...

​ಒಡಿಶಾ ಕರಾವಳಿಯಲ್ಲಿ ಕ್ಷಿಪಣಿ ಪರೀಕ್ಷೆ ನಡೆಸುವ ಬಗ್ಗೆ ಭಾರತವು ನೊಟಾಮ್ (NOTAM – ನೋಟಿಸ್ ಟು ಏರ್‌ಮೆನ್) ಹೊರಡಿಸಿತ್ತು. ಅಂದರೆ, ಭಾರತವು ಕ್ಷಿಪಣಿಯೊಂದನ್ನು ಪರೀಕ್ಷಿಸಲಿದೆ ಎಂಬುದು ಅಮೆರಿಕಕ್ಕೆ ತಿಳಿದಿತ್ತು. ಆದರೆ, ಅದು ಅತ್ಯಂತ ಗೌಪ್ಯವಾಗಿರಿಸಲಾಗಿದ್ದ ಉಪಗ್ರಹ ನಿಗ್ರಹ ಕ್ಷಿಪಣಿ (ASAT) ಪರೀಕ್ಷೆಯಾಗಿರಬಹುದು ಎಂದು ಅಮೆರಿಕ ಕಿಂಚಿತ್ತೂ ಊಹಿಸಿರಲಿಲ್ಲ.

​ಈ ಕಾರ್ಯಾಚರಣೆಯಲ್ಲಿ ಭಾರತವು ತನ್ನದೇ ಆದ ನಿಷ್ಕ್ರಿಯಗೊಂಡ ‘ಮೈಕ್ರೋಸ್ಯಾಟ್-ಆರ್’ ಉಪಗ್ರಹವನ್ನು ಗುರಿಯಾಗಿಸಿ ಹೊಡೆದುರುಳಿಸಿತ್ತು. ಇದರೊಂದಿಗೆ ಅಮೆರಿಕ, ರಷ್ಯಾ ಮತ್ತು ಚೀನಾದ ನಂತರ ಬಾಹ್ಯಾಕಾಶದಲ್ಲಿ ಉಪಗ್ರಹಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿತು. ಈ ದಿಢೀರ್ ಬೆಳವಣಿಗೆಯಿಂದ ಅಮೆರಿಕದ ಗುಪ್ತಚರ ಸಮುದಾಯ ಅಕ್ಷರಶಃ ತಲ್ಲಣಗೊಂಡಿತ್ತು. ಎನ್‌ಆರ್‌ಒ (NRO) ಕಚೇರಿಯಲ್ಲಂತೂ ತೀವ್ರ ಆತಂಕ ಸೃಷ್ಟಿಯಾಗಿತ್ತು. ಏಕೆಂದರೆ, ಅಮೆರಿಕದ ಬೇಹುಗಾರಿಕಾ ಉಪಗ್ರಹಗಳನ್ನು ನಿರ್ಮಿಸುವ ಮತ್ತು ನಿರ್ವಹಿಸುವ ಜವಾಬ್ದಾರಿ ಎನ್‌ಆರ್‌ಒ ಮೇಲಿತ್ತು. ಉಪಗ್ರಹ ಧ್ವಂಸದಿಂದ ಬಾಹ್ಯಾಕಾಶದಲ್ಲಿ ಸೃಷ್ಟಿಯಾದ ತ್ಯಾಜ್ಯವು (Space Debris) ತಮ್ಮ ಬೇಹುಗಾರಿಕಾ ಉಪಗ್ರಹಗಳಿಗೆ ಡಿಕ್ಕಿ ಹೊಡೆಯಬಹುದೇ ಎಂಬ ಭೀತಿ ಅವರನ್ನು ಕಾಡಲಾರಂಭಿಸಿತು.

​ಆ ದಿನದ ಕಚೇರಿಯ ಗೊಂದಲಮಯ ವಾತಾವರಣವನ್ನು ವಿವರಿಸಿದ ಗ್ರಷ್, “ನನ್ನ ಕಚೇರಿಯಲ್ಲಿ ಹಲವು ಫೋನ್‌ಗಳಿದ್ದವು. ನಾನು ತಕ್ಷಣ ರಾಯಭಾರ ಕಚೇರಿಗೆ ಕರೆ ಮಾಡಿ, ‘ಏನಾಗುತ್ತಿದೆ ಅಲ್ಲಿ?’ ಎಂದು ಗಾಬರಿಯಿಂದ ಕೇಳಿದ್ದೆ. ತಕ್ಷಣವೇ ಕಕ್ಷೀಯ ವಿಶ್ಲೇಷಕರ (Orbital analysts) ಬಳಿ ಧಾವಿಸಿ, ಬಾಹ್ಯಾಕಾಶ ತ್ಯಾಜ್ಯದ ಬಗ್ಗೆ ಲೆಕ್ಕಾಚಾರ ಹಾಕುವಂತೆ ಮತ್ತು ನಮ್ಮ ಉಪಗ್ರಹಗಳ ಮಾರ್ಗವನ್ನು ಬದಲಿಸುವ ಅಗತ್ಯವಿದೆಯೇ ಎಂದು ಪರಿಶೀಲಿಸುವಂತೆ ಸೂಚಿಸಿದೆ. ಬಳಿಕ ಉಸಿರು ಬಿಗಿಹಿಡಿದುಕೊಂಡು ಓಡಿಹೋಗಿ ನಿರ್ದೇಶಕರಿಗೆ ಈ ವಿಚಾರವನ್ನು ವಿವರಿಸಿದೆ” ಎಂದು ಅಂದಿನ ಕಳವಳವನ್ನು ಬಿಚ್ಚಿಟ್ಟಿದ್ದಾರೆ.

​ಆದರೆ, ಅಮೆರಿಕದ ಈ ಆತಂಕವನ್ನು ಅಂದೇ ಭಾರತ ತಳ್ಳಿಹಾಕಿತ್ತು. ಈ ಪರೀಕ್ಷೆಯನ್ನು ಭೂಮಿಯ ಕೆಳ ಕಕ್ಷೆಯಲ್ಲಿ (Low-Earth orbit) ನಡೆಸಲಾಗಿದ್ದು, ಇದರಿಂದ ಸೃಷ್ಟಿಯಾದ ತ್ಯಾಜ್ಯವು ಕೆಲವೇ ವಾರಗಳಲ್ಲಿ ನಶಿಸಿಹೋಗಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿತ್ತು. ಜೊತೆಗೆ, ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರ ಪೈಪೋಟಿ ನಡೆಸುವ ಯಾವುದೇ ಉದ್ದೇಶ ಭಾರತಕ್ಕಿಲ್ಲ ಎಂಬುದನ್ನೂ ವಿದೇಶಾಂಗ ಸಚಿವಾಲಯ ಸ್ಪಷ್ಟವಾಗಿ ಹೇಳಿತ್ತು.

​ಕುತೂಹಲಕಾರಿ ಸಂಗತಿಯೆಂದರೆ, ಭಾರತದ ಪರೀಕ್ಷೆಯ ಬಗ್ಗೆ ತಮಗೆ ಮೊದಲೇ ತಿಳಿದಿತ್ತು ಎಂದು 2019ರಲ್ಲಿ ಅಮೆರಿಕದ ರಕ್ಷಣಾ ಇಲಾಖೆ ಹೇಳಿಕೊಂಡಿತ್ತು. ಡಿಯಾಗೋ ಗಾರ್ಸಿಯಾ ನೆಲೆಯಿಂದ ವಿಮಾನವೊಂದನ್ನು ಕಳುಹಿಸಿ ಭಾರತದ ಮೇಲೆ ಬೇಹುಗಾರಿಕೆ ನಡೆಸಲಾಗಿತ್ತು ಎಂಬ ವರದಿಗಳನ್ನು ಅಂದು ಅಮೆರಿಕದ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಡೇವಿಡ್ ಡಬ್ಲ್ಯೂ ಈಸ್ಟ್‌ಬರ್ನ್ ನಿರಾಕರಿಸಿದ್ದರು. ಆದರೆ, ಮಾಜಿ ಅಧಿಕಾರಿ ಡೇವಿಡ್ ಗ್ರಷ್ ಅವರ ಇಂದಿನ ಈ ಹೇಳಿಕೆಗಳು, ಆ ದಿನ ಭಾರತದ ಕಾರ್ಯಾಚರಣೆಯ ಬಗ್ಗೆ ಅಮೆರಿಕಕ್ಕೆ ಕಿಂಚಿತ್ತೂ ಸುಳಿವು ಇರಲಿಲ್ಲ ಎಂಬುದನ್ನು ಸ್ಪಷ್ಟವಾಗಿ ಸಾಬೀತುಪಡಿಸಿವೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಾನು ಜೀವಂತವಾಗಿ ಮರಳದೇ ಇರಬಹುದು: ಜೈಲಿನಿಂದಲೇ ಪಾಕ್ ಸುಪ್ರೀಂ ನ್ಯಾಯಮೂರ್ತಿಗಳಿಗೆ ಇಮ್ರಾನ್ ಖಾನ್ ಪತ್ರ!

ಪಾಕಿಸ್ತಾನದ ರಾವಲ್ಪಿಂಡಿಯ ಅಡಿಯಾಲ ಜೈಲಿನಲ್ಲಿ ಬಂಧಿಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್...

ಯಮುನಾ ಮಾಲಿನ್ಯ| ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಚಾಟಿ; ಪ್ರತಿ ಗಡಿಯಲ್ಲಿ ನೀರಿನ ಗುಣಮಟ್ಟ ಪರೀಕ್ಷೆಗೆ ಆದೇಶ!

ಯಮುನಾ ನದಿಯ ಶುದ್ಧೀಕರಣಕ್ಕಾಗಿ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಿದರೂ ನದಿಯ...

ವಿಜಯಪುರ | ಕೈಗಾರಿಕಾ ಕ್ರಾಂತಿಗೆ ಮುನ್ನುಡಿ: 12,000 ಉದ್ಯೋಗ ಸೃಷ್ಟಿಯ ಗುರಿ

ಕೈಗಾರಿಕೆಗಳನ್ನು ಬೆಂಗಳೂರು ಸುತ್ತಮುತ್ತ ಮಾತ್ರ ಸೀಮಿತಗೊಳಿಸದೆ ಉತ್ತರ ಕರ್ನಾಟಕದ ಜಿಲ್ಲೆಗಳಿಗೂ ವಿಸ್ತರಿಸುವ...

ವಿಜಯಪುರ | ಆಲಮಟ್ಟಿ ನೀರು ತೆಲಂಗಾಣಕ್ಕೆ ಹರಿಸಿದ್ದರ ಲೆಕ್ಕ ಕೊಡಿ: ರೈತ ಸಂಘ ಆಗ್ರಹ

ವಿಜಯಪುರ–ಬಾಗಲಕೋಟ ಜಿಲ್ಲೆಗಳ ರೈತರಿಗೆ ಸಮರ್ಪಕ ನೀರು ಒದಗಿಸದೆ, ಆಲಮಟ್ಟಿ ಜಲಾಶಯದಿಂದ ನಾರಾಯಣಪುರದ...