ಧರ್ಮಸ್ಥಳದ ಸಾವಿನ ಪ್ರಮಾಣದಲ್ಲಿ ವ್ಯತ್ಯಾಸ; ನಿಜ ಪತ್ತೆಗೆ ಎಸ್‌ಐಟಿಗೆ ಸರ್ಕಾರದಿಂದ ಪೂರಕ ಬಲ ಅಗತ್ಯ: ಮಹಿಳಾ ಆಯೋಗದ ಅಧ್ಯಕ್ಷೆ

Date:

ಧರ್ಮಸ್ಥಳ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಸಾವುಗಳು ಮತ್ತು ಪಂಚಾಯಿತಿಯಲ್ಲಿ ದಾಖಲಾಗಿರುವ ಸಾವುಗಳ ಪ್ರಮಾಣದಲ್ಲಿ ವ್ಯತ್ಯಾಸವಿದೆ ಎಂದು ತನಿಖಾ ವರದಿ ಹೇಳುತ್ತದೆ. ಈ ವ್ಯತ್ಯಾಸ ಹೇಗೆ ಬಂದಿದೆ? ನಿಜಾಂಶವೇನು? ಎಂಬುದನ್ನು ಪತ್ತೆ ಹಚ್ಚಲು ಎಸ್‌ಐಟಿ ತಂಡಕ್ಕೆ ಸರ್ಕಾರದಿಂದ ಪೂರಕ ಬಲ ಅಗತ್ಯವಾಗಿದೆ. ಈ ಸಂಬಂಧ ಮಹಿಳಾ ಆಯೋಗವು ಸರ್ಕಾರಕ್ಕೆ ಪತ್ರ ಬರೆದಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಹೇಳಿದರು.

- Advertisement -

ಕರ್ನಾಟಕದ ‘ನಾವೆದ್ದು ನಿಲ್ಲದಿದ್ದರೆ’ ಸಂಘಟನೆಯು ಆರಂಭಿಸಿರುವ ‘ಕೊಂದವರು ಯಾರು? Who Killed Women in Dharmasthala?’ ಎಂಬ ರಾಜ್ಯವ್ಯಾಪಿ ಅಭಿಯಾನದ ಭಾಗವಾಗಿ, ಅಕ್ಟೋಬರ್ 2ರಂದು ಬೆಂಗಳೂರಿನ ಶಿವಾಜಿನಗರದ ಕಾಮರಾಜ್ ರಸ್ತೆಯಲ್ಲಿರುವ ‘ಸಭಾ’ ಸಭಾಂಗಣದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ನಡೆದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಮೊಳಗಿಸಿದ್ದ ಮತ ಹಕ್ಕಿನ ಕೂಗಿಗೆ...

ಮತದಾನ ಕೇವಲ ಹಕ್ಕಲ್ಲ, ಅದು ಪ್ರಜೆಯೊಬ್ಬನ ಘನತೆ ಹಾಗೂ ಅಸ್ತಿತ್ವದ ಸಂಕೇತ. 131 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಇದೇ ಮತಾಧಿಕಾರಕ್ಕಾಗಿ ಗಾಂಧೀಜಿ ಬ್ರಿಟಿಷರ ವಿರುದ್ಧ ಸಿಡಿದೆದ್ದಿದ್ದರು. ಆದರೆ, ಇಂದು ಸ್ವತಂತ್ರ ಭಾರತದಲ್ಲಿ...

ಈ ವಿಚಾರ ಸಂಕಿರಣದ ಮೂರನೇ ಗೋಷ್ಠಿ ‘ಪ್ರತಿರೋಧ ಬೆಳೆಸುವುದು: ಹೊಣೆಗಾರಿಕೆಗೆ ಹಕ್ಕೊತ್ತಾಯ ಮತ್ತು ನ್ಯಾಯಕ್ಕಾಗಿ ಹೋರಾಟ’ ವಿಷಯದಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದ ನಾಗಲಕ್ಷ್ಮಿ ಚೌಧರಿ ಅವರು, “ಪ್ರತಿ ಮಹಿಳೆಯನ್ನು ಮಾತನಾಡಿದರೂ ನಿಮಗೆ ನೊಂದ, ಸತ್ಯವಾದಂತಹ ಕಥೆ ಸಿಗುತ್ತದೆ. ಅಷ್ಟೊಂದು ನೋವು ಈ ಸಮಾಜದಲ್ಲಿದೆ. ಹಲವು ಘಟನೆಗಳಲ್ಲಿ ಪ್ರಕರಣ ದಾಖಲಾಗುವುದೇ ತಡವಾಗುತ್ತಿದೆ. ತಲೆ ಒಡೆದ ಪ್ರಕರಣವೊಂದರಲ್ಲಿ ಏಳು ದಿನವಾದರೂ ದೂರು ದಾಖಲಿಸಿಲ್ಲ. ಈ ತಾಯಿ ನನ್ನ ಕಾಲಿಗೆ ಬಿದ್ದು ಬೇಡಿಕೊಂಡರು. ಆದರೆ ಪೊಲೀಸಿನವರು ಪ್ರಕರಣ ದಾಖಲಿಸಿದೆ ಸುಮ್ಮನೆ ಏನು ಮಾಡುತ್ತಿದ್ದಾರೆ” ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ನಮ್ಮ ಕಾಲಿನ ಮುಳ್ಳನ್ನು ನಾವೇ ತೆಗೆಯಬೇಕು, ಪಿತೃಪ್ರಧಾನತೆಯ ಭೀತಿ ಮೀರಿ, ಲಕ್ಷ್ಮಣ ರೇಖೆ ದಾಟಿ: ಆರ್ ಸುನಂದಮ್ಮ

ಹಾಗೆಯೇ ಈ ಸಂದರ್ಭದಲ್ಲೇ, “ಮಹಿಳಾ ಹೋರಾಟಗಾರರಾದ ನಿಮ್ಮೆಲ್ಲರ ನಿಸ್ವಾರ್ಥ ಹೋರಾಟ, ಅಳಿಸಲಾಗದ ಆ ಧನಿ ಇನ್ನು ಎಷ್ಟೋ ಜನರಿಗೆ ಹೋರಾಟ ಮಾಡಲು ನೈತಿಕ ಹಕ್ಕನ್ನು ಕೊಟ್ಟಿದೆ. ಅದನ್ನು ನಾವೆಂದೂ ಮರೆಯಬಾರದು. ನಾವು ಹಿಂದೆ ಸರಿಯಬಾರದು. ನಾನು ಮಹಿಳಾ ಆಯೋಗದ ಅಧ್ಯಕ್ಷೆಯಾದರೂ ಇಲ್ಲಿರುವ ಮಹಿಳಾ ಹೋರಾಟಗಾರರಷ್ಟು ಅನುಭವ ನನಗಿಲ್ಲ. ನೀವು ಎಂದಿಗೂ ಸೋಲೊಪ್ಪಿಕೊಳ್ಳಬಾರದು. ಹೋರಾಟ ಕಡೆಯವರೆಗೂ ಇರಬೇಕು” ಎಂದು ಹೇಳಿದರು.

“ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಎಲ್ಲರ ಮೊಬೈಲ್‌ನಲ್ಲೂ ವೀಡಿಯೋಗಳಿದ್ದವು ಆದರೆ ಯಾರೂ ಮಾತನಾಡಲಿಲ್ಲ. ಅಂದು ಮಹಿಳಾ ಆಯೋಗವೇ ಮೊದಲು ಪತ್ರ ಬರೆದಿದ್ದು. ಪ್ರಜ್ವಲ್ ದೇಶದಿಂದ ಹೊರಹೋಗುವ ಮುನ್ನವೇ ಬಂಧಿಸಬಹುದಿತ್ತು. ಆದರೆ ಕೊಂಚ ತಡವಾದರೂ ಬಂಧನದ ನಿರ್ಧಾರ ಕೈಗೊಳ್ಳಲಾಯಿತು” ಎಂದು ನೆನೆಪಿಸಿಕೊಂಡರು.

“ಇಂದು ಗಾಂಧಿ ಜಯಂತಿ. ನಿಜವಾದ ಶಕ್ತಿಯನ್ನು ನೀವು ಅಳೆಯಬೇಕೆಂದರೆ ನೀವು ನೈತಿಕ ಶಕ್ತಿಯನ್ನು ಅಳೆಯಬೇಕು. ಪುರುಷರಿಗಿಂತ ಮೇಲಲ್ಲ, ಅಳೆಯಲೇ ಆಗದ ಅಷ್ಟು ದೊಡ್ಡ ನೈತಿಕ ಶಕ್ತಿ ಮಹಿಳೆಯರದ್ದು ಎಂಬುದು ಗಾಂಧೀಜಿ ಅವರ ಮಾತು” ಎಂದರು.

“ಇಂದು ಮಹಿಳಾ ಸಚಿವರೇ ಇಲ್ಲದೆ ರಾಜ್ಯದ ಇತಿಹಾಸದಲ್ಲಿ ವಿಧಾನಸಭೆಯಲ್ಲಿ ಕಲಾಪ ನಡೆಯುತ್ತಿದೆ. ಮತ ಹಾಕಲು ನಾವು ಬೇಕು. ಆದರೆ ಅಧಿಕಾರಕ್ಕೆ ಮಾತ್ರ ನಾವು ಬೇಡ. ಅದಕ್ಕೆ ಗಾಂಧೀಜಿ ಅವರು ನೈತಿಕತೆಯ ಬಲದ ಪ್ರಸ್ತಾಪ ಮಾಡುತ್ತಾರೆ. ಹೆಣ್ಣುಮಗಳಿಗೆ ಒಂದು ಟಿಕೆಟ್ ಕೊಡುವಾಗಲೂ ದುಡ್ಡು ಎಷ್ಟಿದೆ, ಜನ ಎಷ್ಟು ಇಟ್ಟಿದ್ದೀಯಾ- ಅಂದರೆ ತೋಳುಬಲ, ಹಣಬಲ ಕೇಳುತ್ತಾರೆ. ನೈತಿಕ ಬಲ ಯಾರಿಗೂ ಬೇಡ. ನೈತಿಕತೆ ಅವರಿಗೆ ಬೇಕಾಗಿಲ್ಲ. ನೈತಿಕತೆ ಎಂದರೆ ಸತ್ಯ, ಪ್ರಾಮಾಣಿಕತೆ, ಹೋರಾಟ, ಆತ್ಮಸ್ಥೈರ್ಯ, ಮನೋಬಲ- ಇವೆಲ್ಲವೂ ಹೆಣ್ಣುಮಗಳಿಗೆ ಹೆಚ್ಚಾಗಿರುತ್ತದೆ” ಎಂದು ತಿಳಿಸಿದರು.

“ಇಂದು ಜೆನ್‌-ಝೀ ಮಕ್ಕಳು ಸಕ್ರಿಯರಾಗಿದ್ದಾರೆ. ಎಲ್ಲ ನಮ್ಮ ಮಕ್ಕಳು, ಅವರಿಂದ ನಮಗೆ ಹೆಮ್ಮೆಯಾಗುತ್ತಿದೆ. ಆ ಮಕ್ಕಳು ಬದಲಾವಣೆಗೆ ಹೆಜ್ಜೆ ಇಟ್ಟಿದ್ದಾರೆ. ಅವರಿಗೆ ನಾವು ಶಕ್ತಿ ತುಂಬೋಣ, ಅವರ ಜತೆಯಲ್ಲಿ ನಡೆಯೋಣ, ಹೋರಾಟ ಕೊನೆಯವರೆಗೂ ಇರಲಿ” ಎಂದು ಹೇಳಿದರು.

ಧರ್ಮಸ್ಥಳಕ್ಕೆ ಸಂಬಂಧಿಸಿದ ಕೊಂದವರು ಯಾರು ಪುಸ್ತಕದಲ್ಲಿ ‘ಕರ್ನಾಟಕದ ಬೇರೆ ಯಾವುದೇ ಊರಿನಲ್ಲಿ ಹೆಣ್ಣುಮಕ್ಕಳ ಅಸಹಜ ಸಾವುಗಳು ನಡೆದರೂ ಅದರ ತನಿಖೆ ನಡೆದು ಒಂದೇ ಕೊಲೆ ಇಲ್ಲವೆ ಅದು ಆತ್ಮಹತ್ಯೆ ಎಂದು ತಿಳಿಯುತ್ತದೆ. ಧರ್ಮಸ್ಥಳದಲ್ಲಿ ಮಾತ್ರ ಯಾಕೆ ಇವೆಲ್ಲ ಪ್ರತ್ಯೇಕ ಪ್ರಕರಣವಾಗಿ ಮುಗಿದುಹೋಗುತ್ತದೆ? ಇದು ಪತ್ತೆಯಾಗದ ಪ್ರಕರಣಗಳೋ ಅಥವಾ ಪತ್ತೆ ಮಾಡದ ಪ್ರಕರಣಗಳೋ?’ ಎಂಬುದನ್ನು ಈ ಸಂದರ್ಭದಲ್ಲೇ ಓದಿದರು.

“ಇದಕ್ಕೂ ನಾವು ಎಸ್‌ಐಟಿ ರಚನೆಗೆ ಪತ್ರ ಬರೆದೆವು. ಎಸ್‌ಐಟಿ ರಚನೆಯಾಯಿತು, ಎಸ್‌ಐಟಿ ವರದಿ ಪಡೆಯಲು ಸಮನ್ ಮಾಡಬೇಕಾಯಿತು. ಆ ವರದಿಯಲ್ಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಸಾವುಗಳು ಮತ್ತು ಪಂಚಾಯಿತಿಯಲ್ಲಿ ದಾಖಲಾಗಿರುವ ಸಾವುಗಳ ಪ್ರಮಾಣದಲ್ಲಿ ವ್ಯತ್ಯಾಸವಿದೆ ಎಂದು ತನಿಖಾ ವರದಿ ಹೇಳುತ್ತದೆ. ಈ ವ್ಯತ್ಯಾಸ ಯಾಕೆ ಆಗಿದೆ? ಅಷ್ಟೊಂದು ಜನರು ಎಲ್ಲಿ ಹೋದರು? ಬಂಗ್ಲೆಗುಡ್ಡೆ ಸ್ಮಶಾನವೇನಲ್ಲ. ಹಾಗಿದ್ದಾಗ ಅಲ್ಲಿ ಅಷ್ಟೊಂದು ಅಸ್ಥಿಪಂಜರಗಳು ಹೇಗೆ ಸಿಕ್ಕವು? ವರದಿಗಳಲ್ಲಿ ವ್ಯತ್ಯಾಸವಿರುವಾಗ ಇದರ ನಿಜಾಂಶ ಪತ್ತೆಹಚ್ಚಲು ಖಂಡಿತವಾಗಿಯೂ ಎಸ್‌ಐಟಿ ತಂಡಕ್ಕೆ ಸರ್ಕಾರ ಪೂರಕವಾದ ಶಕ್ತಿ ತುಂಬಬೇಕು ಎಂದು ಪತ್ರ ಬರೆದಿರುವುದಾಗಿ ತಿಳಿಸಿದರು. ಹಾಗೆಯೇ ಮಹಿಳೆಯರ ಹೋರಾಟದೊಂದಿಗೆ ಆಯೋಗ ಸದಾ ಇರುತ್ತದೆ” ಎಂದು ಭರವಸೆ ನೀಡಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘Instagram ಹೆಣ್ಮಕ್ಕಳಿಗೆ ಮಾತ್ರ’; ಎಲಾನ್ ಮಸ್ಕ್ ಹೀಗ್ಯಾಕಂದ್ರು?

ಟೆಕ್ ಜೈಂಟ್ ಎಲಾನ್ ಮಸ್ಕ್ ಮತ್ತೊಮ್ಮೆ ತಮ್ಮ ವಿವಾದಾತ್ಮಕ ಹೇಳಿಕೆಗಳ...

ಜಂತರ್‌ ಮಂತರ್‌ನಲ್ಲಿ 500ಕ್ಕೂ ಅಧಿಕ ಮಂದಿ ಅರೆಸ್ಟ್: ‘ಗ್ಯಾನೇಶ್ ಕುಮಾರ್ ಬಂಧನವಾಗಲಿ’ ಎಂದ ನಾಯಕರು

ಎಸ್‌ಐಆರ್ ಮೊದಲಾದ ಪ್ರಕ್ರಿಯೆ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ...

ವಿಜಯಪುರ | ರೂ. 2,500 ಸಬ್ಸಿಡಿಗೆ ವಿರೋಧ: ಸರ್ಕಾರಕ್ಕೆ ದೇಣಿಗೆ ಸಂಗ್ರಹಿಸಿ ಕೊಟ್ಟ ರೈತರು!

ಭೀಕರ ಬರದಿಂದ ನಲುಗಿರುವ ರೈತರಿಗೆ ರಾಜ್ಯ ಸರ್ಕಾರ ಘೋಷಿಸಿರುವ ₹2,500 ಇನ್‌ಪುಟ್...

ವಾಹ್‌ EC! 13 ಕೋಟಿ ಜನರನ್ನ ಹೊರದಬ್ಬಿ, ಈಗ ಮರುನೋಂದಣಿಯ ಕಸರತ್ತು

ರಾಷ್ಟ್ರವ್ಯಾಪಿ 'ವಿಶೇಷ ತೀವ್ರ ಪರಿಷ್ಕರಣೆ' (SIR) ಎನ್ನುವ ಭೀಕರ ಆಪರೇಷನ್ ನಡೆಸಿ,...