ಈ ದಿನ ಫ್ಲ್ಯಾಶ್‌‌‌

ವಿಷ ಸೇವಿಸಿ ತಂದೆ-ಮಗಳ ಸಾವು, ತಾಯಿ-ಮಗನ ಸ್ಥಿತಿ ಗಂಭೀರ!

ಹಣಕಾಸಿನ ವಿಚಾರದ ಕೌಟುಂಬಿಕ ಕಲಹವೊಂದು ಇಡೀ ಕುಟುಂಬವನ್ನೇ ಬಲಿ ತೆಗೆದುಕೊಂಡಿರುವ ದಾರುಣ ಘಟನೆ ಪಂಜಾಬ್‌ನ ಪಟಿಯಾಲಾ ಜಿಲ್ಲೆಯ ಆಫೀಸರ್ಸ್ ಕಾಲೋನಿಯಲ್ಲಿ ನಡೆದಿದೆ. ಬ್ಯಾಂಕ್ ಉದ್ಯೋಗಿಯೊಬ್ಬರು ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಿಷ...

ಟ್ಯೂಷನ್ ತಪ್ಪಿಸಲು ಕೊಲೆ: 16 ವರ್ಷದ ಬಾಲಕನನ್ನು ವಯಸ್ಕನೆಂದು ಪರಿಗಣಿಸಿ ವಿಚಾರಣೆ ನಡೆಸಲು ಹೈಕೋರ್ಟ್ ಆದೇಶ

ಟ್ಯೂಷನ್‌ಗೆ ಹೋಗುವುದನ್ನು ತಪ್ಪಿಸಲು ತನ್ನ ಟ್ಯೂಷನ್ ಶಿಕ್ಷಕಿಯ ಅತ್ತೆಯನ್ನು ಕೊಲೆ ಮಾಡಿದ ಆರೋಪ ಹೊತ್ತಿರುವ 16 ವರ್ಷದ ಬಾಲಕನನ್ನು ವಯಸ್ಕನೆಂದು ಪರಿಗಣಿಸಿ ವಿಚಾರಣೆ ನಡೆಸುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶಿಸಿದೆ. ಈ...

ರಾಹುಲ್‌ ಗಾಂಧಿಯನ್ನು ಅಂಡೆಪಿರ್ಕಿ ಎಂದಿದ್ದ ರಾಘವೇಂದ್ರ ಭಟ್‌ ಈಗ ಸಿಎಂ ಮಾಧ್ಯಮ ಕಾರ್ಯದರ್ಶಿ; 2021ರ ಪೋಸ್ಟ್‌ ವೈರಲ್!

ರಾಜ್ಯ ಸರ್ಕಾರವು ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಮೂವರು ಮಾಧ್ಯಮ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧಿಸೂಚನೆಯಂತೆ, ಪಿ. ತ್ಯಾಗರಾಜ್‌ (ಮಾಧ್ಯಮ ಕಾರ್ಯದರ್ಶಿ-1), ಆರ್‌ ಜಯಪ್ರಕಾಶ್‌ (2ನೇ...

ಅಂಧಭಕ್ತರ ನೆಚ್ಚಿನ ಗ್ಯಾಂಗ್‌ಸ್ಟರ್ ಬಿಷ್ಣೋಯಿ; ಅಮೆರಿಕದ ಹಸ್ತಾಂತರ ಆಣತಿಯ ಹಿಂದಿನ ಮರ್ಮವೇನು?

ಸಣ್ಣಪುಟ್ಟ ಘರ್ಷಣೆಗಳಲ್ಲಿ ತೊಡಗಿದ್ದ ಲಾರೆನ್ಸ್ ಬಿಷ್ಣೋಯಿ ನಂತರ ಹಿಂಸಾಚಾರದ ಹಾದಿಯಲ್ಲೇ ಮುಂದೆ ಸಾಗಿದವನು. 2025ರಿಂದಲೂ ದೇಶದ ವಿವಿಧ ಜೈಲುಗಳಲ್ಲಿ (ಪ್ರಸ್ತುತ ಗುಜರಾತ್‌ನ ಸಬರಮತಿ ಜೈಲು) ಇರುವ ಬಿಷ್ಣೋಯಿ, ಜೈಲಿನ ಒಳಗಿದ್ದೇ ತನ್ನ ಸಾಮ್ರಾಜ್ಯವನ್ನು...

ʼಅಪ್ಪ-ಅಮ್ಮ ಕ್ಷಮಿಸಿ, ಈ ಅವಮಾನ ಸಹಿಸಲಾರೆʼ: ಶಿಕ್ಷಕಿ ಬೈದರೆಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

ತರಗತಿಯಲ್ಲಿ ಶಿಕ್ಷಕಿ ಬೈದರೆಂದು, ಅವಮಾನ ಸಹಿಸಲಾರದೆ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಆನೇಕಲ್ ತಾಲೂಕಿನ ಮರಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಎಂಟನೇ ತರಗತಿಯ ವಿದ್ಯಾರ್ಥಿನಿ ಮಧುಶ್ರೀ ಮೃತ ವಿದ್ಯಾರ್ಥಿನಿ. ತರಗತಿಯಲ್ಲಿ ಶಿಕ್ಷಕಿ...

ಬೆಂಗಳೂರಿನಲ್ಲಿ ಚಿರತೆ ಪ್ರತ್ಯಕ್ಷ: ಆತಂಕದಲ್ಲಿ ಸ್ಥಳೀಯ ಜನತೆ

ರಾಜಧಾನಿಯ ಹೊರವಲಯದಲ್ಲಿರುವ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಭಾರತ್‌ ನಗರ ಪ್ರದೇಶದ ಬಿಇಎಲ್‌ ಬಡಾವಣೆಯಲ್ಲಿ ದಿಢೀರನೆ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಸ್ಥಳೀಯ ನಿವಾಸಿಗಳ ನಿದ್ದೆಗೆಡಿಸಿದೆ. ವನ್ಯಜೀವಿಯ ಆಗಮನದಿಂದಾಗಿ ಇಡೀ ಬಡಾವಣೆಯ ಜನತೆಯಲ್ಲಿ ತೀವ್ರ ಆತಂಕ...

ಮರಡೋನಾ ಕಾಲದಿಂದ ಮೆಸ್ಸಿ ಆಟದವರೆಗೆ: ಫಿಫಾ ವಿಶ್ವಕಪ್ ರೆಫರಿ ವಿವಾದಗಳ ಹೆಜ್ಜೆಗುರುತು

ಫುಟ್ಬಾಲ್ ಮೈದಾನದಲ್ಲಿ ಅಂಪೈರ್ ಅಥವಾ ರೆಫರಿಗಳ ಪಾತ್ರ ಅತ್ಯಂತ ಕಠಿಣವಾದದ್ದು ಹಾಗೂ ಟೀಕೆಗಳಿಗೆ ಸುಲಭವಾಗಿ ಗುರಿಯಾಗುವಂತಹುದ್ದು. 1930ರ ಮೊದಲ ವಿಶ್ವಕಪ್ ನಿಂದ ಹಿಡಿದು ಇಂದಿನ 2026ರ ಅರ್ಜೆಂಟೀನಾ-ಈಜಿಪ್ಟ್ ಪಂದ್ಯದವರೆಗೂ ತೀರ್ಪುಗಾರರ ಘೋರ...

2050ರ ವೇಳೆಗೆ ಜಾಗತಿಕ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ 3.5 ಕೋಟಿಗೆ ಏರಿಕೆ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ತುರ್ತಾಗಿ ಕೈಗೊಳ್ಳದಿದ್ದರೆ, 2050ರ ವೇಳೆಗೆ ವಿಶ್ವಾದ್ಯಂತ ವಾರ್ಷಿಕ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ 3.5 ಕೋಟಿಗೆ ತಲುಪುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತೀವ್ರ...

ತಮಿಳುನಾಡು | ಪ್ರೇಮ ವಿವಾಹ ಬೇಡವೆಂದು ಮಗಳ ಕಾಲು ಹಿಡಿದ ಪೋಷಕರು

ಪ್ರೀತಿಸಿದ ಯುವಕನನ್ನು ವಿವಾಹವಾದ ಮಗಳನ್ನು ಮನೆಗೆ ಮರಳಿ ಕರೆತರುವ ಆಕೆಯ ಪೋಷಕರು ಪ್ರಯತ್ನಿಸಿದ್ದು, ಆಕೆಯ ಕಾಲು ಹಿಡಿದು ಭಾವನಾತ್ಮಕವಾಗಿ ಕೇಳಿಕೊಂಡ ಘಟನೆ ತಮಿಳುನಾಡಿನ ತಿರುಪ್ಪತ್ತೂರು ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ...

ಕೂಡಲಸಂಗಮ | ಜು. 11ರಂದು ಬಸವ ಧರ್ಮ ಪೀಠದಿಂದ ಧಾರ್ಮಿಕ ಮಹಾ ಸಮಾರಂಭ

ಬಸವ ಧರ್ಮ ಪೀಠದಿಂದ ಜುಲೈ 11 ರಂದು ರಾಷ್ಟ್ರೀಯ ಬಸವ ದಳದ ಮಹಾ ಅಧಿವೇಶನ, 12 ರಂದು ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿಯವರ ಲಿಂಗೈಕ್ಯ ಸಂಸ್ಮರಣೆ ಸಮಾರಂಭ ಹಮ್ಮಿಕೊಂಡಿದೆ ಎಂದು ಕೂಡಲಸಂಗಮ ಬಸವ...

‘ಫೋರ್ಜರಿ’ ಕೇಸ್ ಹೊತ್ತಿರುವ ಅಧಿಕಾರಿ ರಾಮಮಂದಿರ ಹಗರಣದ SIT ಮುಖ್ಯಸ್ಥ; ನಿಷ್ಪಕ್ಷಪಾತ ತನಿಖೆ ಸಾಧ್ಯವೇ?

ಅಯೋಧ್ಯೆ ರಾಮಮಂದಿರದ ಕೋಟ್ಯಂತರ ರೂಪಾಯಿ ದೇಣಿಗೆ ಕಳ್ಳತನ ಪ್ರಕರಣದ ತನಿಖೆ ಸದ್ಯ ನಡೆಯುತ್ತಿದೆ. ಈಗಾಗಲೇ RSS ತಿಮಿಂಗಲಗಳನ್ನು ಪ್ರಕರಣದಿಂದ ರಕ್ಷಿಸಲಾಗುತ್ತಿದೆ ಎಂಬ ಚರ್ಚೆಯೂ ನಡೆಯುತ್ತಿದೆ. ಇವೆಲ್ಲವುದರ ನಡುವೆ ಈ ದೇಣಿಗೆ ಲೂಟಿ ಪ್ರಕರಣದ...

ರಾಜ್ಯದ 4 ಉತ್ಪನ್ನಗಳಿಗೆ ನಬಾರ್ಡ್ ಬೆಂಬಲ: ತಿಪಟೂರು ತೆಂಗಿಗೆ ಜಿಐ ಟ್ಯಾಗ್‌

ಕರ್ನಾಟಕದ ಸಾಂಪ್ರದಾಯಿಕ ಕೃಷಿ ಉತ್ಪನ್ನಗಳು ಮತ್ತು ಕರಕುಶಲ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವ ಮಹತ್ವದ ಪ್ರಯತ್ನಕ್ಕೆ ಹೊಸ ಉತ್ತೇಜನ ಸಿಕ್ಕಿದೆ. ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ರಾಜ್ಯದ ನಾಲ್ಕು ವಿಶಿಷ್ಟ...

ಈ ಹೊತ್ತಿನ ಪ್ರಮುಖ ಸುದ್ದಿ