ಅಂಧಭಕ್ತರ ನೆಚ್ಚಿನ ಗ್ಯಾಂಗ್‌ಸ್ಟರ್ ಬಿಷ್ಣೋಯಿ; ಅಮೆರಿಕದ ಹಸ್ತಾಂತರ ಆಣತಿಯ ಹಿಂದಿನ ಮರ್ಮವೇನು?

Date:

ಸಣ್ಣಪುಟ್ಟ ಘರ್ಷಣೆಗಳಲ್ಲಿ ತೊಡಗಿದ್ದ ಲಾರೆನ್ಸ್ ಬಿಷ್ಣೋಯಿ ನಂತರ ಹಿಂಸಾಚಾರದ ಹಾದಿಯಲ್ಲೇ ಮುಂದೆ ಸಾಗಿದವನು. 2025ರಿಂದಲೂ ದೇಶದ ವಿವಿಧ ಜೈಲುಗಳಲ್ಲಿ (ಪ್ರಸ್ತುತ ಗುಜರಾತ್‌ನ ಸಬರಮತಿ ಜೈಲು) ಇರುವ ಬಿಷ್ಣೋಯಿ, ಜೈಲಿನ ಒಳಗಿದ್ದೇ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದ್ದು ಒಂದು ಆತಂಕಕಾರಿ ವಿದ್ಯಮಾನ. ಆದರೆ ಅಂಧಭಕ್ತರ ಪಾಲಿಗೆ ಈ ಕೊಲೆ ಅಪರಾಧಿ, ಗ್ಯಾಂಗ್‌ಸ್ಟರ್ ಬಿಷ್ಣೋಯಿ ದೇಶಪ್ರೇಮಿ.

ಭಾರತದ ಜೈಲೊಂದರ ಕೋಣೆಯಲ್ಲಿ ಕುಳಿತುಕೊಂಡೇ ಜಾಗತಿಕ ಮಟ್ಟದ ಅಪರಾಧ ಸಾಮ್ರಾಜ್ಯವನ್ನು ನಿಯಂತ್ರಿಸುವ ಶಕ್ತಿ ತನಗಿದೆ ಎಂದು ಆಗಾಗೇ ಸಾಬೀತುಪಡಿಸುತ್ತಿರುವ ಲಾರೆನ್ಸ್ ಬಿಷ್ಣೋಯಿ ಅಂಧಭಕ್ತರ ಅಚ್ಚುಮೆಚ್ಚಿನ ಗ್ಯಾಂಗ್‌ಸ್ಟರ್! ಭಾರತದ ಗಡಿಯೊಳಗೆ ಕೇವಲ ಗ್ಯಾಂಗ್‌ಸ್ಟರ್ ಆಗಿ ಗುರುತಿಸಿಕೊಂಡಿದ್ದ ಈತ, ಈಗ ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಗಳ ರಾಡಾರ್‌ಗೆ ಸಿಲುಕಿರುವಾತ. ಜಾಗತಿಕ ಮಟ್ಟದ ಚರ್ಚಾವಿಷಯ.

- Advertisement -

ಇತ್ತೀಚೆಗೆ ಅಮೆರಿಕದ ನ್ಯಾಯಾಂಗ ಇಲಾಖೆಯು (DOJ) ಬಿಷ್ಣೋಯಿ ವಿರುದ್ಧ ಗಂಭೀರ ಹೊಣೆಗಾರಿಕೆಯನ್ನು ಹೊರಿಸಿ, ಆತನನ್ನು ತನ್ನ ವಶಕ್ಕೆ ಒಪ್ಪಿಸುವಂತೆ ಭಾರತಕ್ಕೆ ಕೋರಲು ಸಿದ್ಧತೆ ನಡೆಸಿದೆ. ಇದು ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ. ಅಷ್ಟಕ್ಕೂ ಲಾರೆನ್ಸ್ ಬಿಷ್ಣೋಯಿ ಎಂಬ ಗ್ಯಾಂಗ್‌ಸ್ಟರ್‌ ಅನ್ನು ‘ಅಂಧಭಕ್ತರು’ ಕೊಂಡಾಡುವುದೇಕೆ? ಅಮೆರಿಕ ಆತನನ್ನು ಹಸ್ತಾಂತರಿಸುವಂತೆ ಭಾರತದ ಮೇಲೆ ಒತ್ತಡ ಹೇರುತ್ತಿರುವುದೇಕೆ?- ಹೀಗೆ ಹಲವು ಪ್ರಶ್ನೆಗಳು ಸದ್ಯ ಚರ್ಚೆಗೆ ಗ್ರಾಸವಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

ಇದನ್ನೂ ಓದಿ: ಪಂಜಾಬಿ ಗಾಯಕನಿಗೆ 10 ಕೋಟಿ ರೂ. ನೀಡುವಂತೆ ಬಿಷ್ಣೋಯ್ ಗ್ಯಾಂಗ್ ನಿಂದ ಬೆದರಿಕೆ

ವಿದ್ಯಾರ್ಥಿ ನಾಯಕನಿಂದ ಜಾಗತಿಕ ಡಾನ್‌ವರೆಗೆ

1993ರಲ್ಲಿ ಪಂಜಾಬ್‌ನ ಫಜಿಲ್ಕಾ ಜಿಲ್ಲೆಯ ಸಮೃದ್ಧ ರೈತಾಪಿ ಕುಟುಂಬದಲ್ಲಿ ಜನಿಸಿದಾತ ಲಾರೆನ್ಸ್ ಬಿಷ್ಣೋಯಿ. ಹುಟ್ಟಿನಿಂದಲೇ ಅಪರಾಧ ಲೋಕದ ಹಿನ್ನೆಲೆ ಹೊಂದಿದ್ದ ವ್ಯಕ್ತಿಯೇನಲ್ಲ. ಆತನ ತಂದೆ ಹರಿಯಾಣ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೆಬಲ್ ಆಗಿದ್ದರು. ಚಂಡೀಗಢದ ಡಿಎವಿ ಕಾಲೇಜು ಮತ್ತು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಕಾನೂನು ವ್ಯಾಸಂಗ ಮಾಡುವಾಗ ಬಿಷ್ಣೋಯಿ ರಾಜಕೀಯಕ್ಕೆ ಪ್ರವೇಶಿಸಿದ. ‘ಸ್ಟೂಡೆಂಟ್ಸ್ ಆರ್ಗನೈಸೇಷನ್ ಆಫ್ ಪಂಜಾಬ್ ಯೂನಿವರ್ಸಿಟಿ’ (SOPU) ಅಧ್ಯಕ್ಷನಾಗಿದ್ದ. ಈ ವೇಳೆ ಸಣ್ಣಪುಟ್ಟ ಘರ್ಷಣೆಗಳಲ್ಲಿ ತೊಡಗಿದ್ದ ಬಿಷ್ಣೋಯಿ ನಂತರ ಹಿಂಸಾಚಾರದ ಹಾದಿಯಲ್ಲೇ ಮುಂದೆ ಸಾಗಿದವನು. 2025ರಿಂದಲೂ ದೇಶದ ವಿವಿಧ ಕಠಿಣ ಜೈಲುಗಳಲ್ಲಿ (ಪ್ರಸ್ತುತ ಗುಜರಾತ್‌ನ ಸಬರಮತಿ ಜೈಲು) ಇರುವ ಬಿಷ್ಣೋಯಿ, ಜೈಲಿನ ಒಳಗಿದ್ದೇ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದ್ದು ಒಂದು ಆತಂಕಕಾರಿ ವಿದ್ಯಮಾನ.

ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಸಾರ್ವಜನಿಕವಾಗಿ ಶೂಟ್ ಮಾಡಿ ಕೊಂದಾಗ ಬಿಷ್ಣೋಯಿ ಹೆಸರು ದೇಶಾದ್ಯಂತ ಸದ್ದು ಮಾಡಿತ್ತು. ಈ ಕೊಲೆಯ ಹೊಣೆಯನ್ನು ಕೆನಡಾದಲ್ಲಿದ್ದ ಆತನ ಬಲಗೈ ಬಂಟ ಗೋಲ್ಡಿ ಬ್ರಾರ್ ಹೊತ್ತುಕೊಂಡಿದ್ದ. ಕಾಂಗ್ರೆಸ್ ಮುಖಂಡರೂ ಆಗಿದ್ದ ಸಿಧು ಅವರನ್ನು 2022ರ ಮೇ 29ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಕಬಡ್ಡಿ ಪಂದ್ಯಾವಳಿಗಳ ಆಯೋಜನೆ ಮತ್ತು ಆಟಗಾರರ ವಿಚಾರದಲ್ಲಿ ಮೂಸೆವಾಲಾ ಹಾಗೂ ಗ್ಯಾಂಗ್‌ಸ್ಟರ್‌ಗಳ ನಡುವೆ ವಿವಾದವಿತ್ತು. ಈ ವಿಚಾರಕ್ಕೆ ಕೊಲೆ ಮಾಡಲಾಗಿತ್ತು.

ಅದಾದ ಬಳಿಕ ಮುಂಬೈನ ಹಿರಿಯ ರಾಜಕಾರಣಿ ಬಾಬಾ ಸಿದ್ದಿಕಿ ಅವರ ಹತ್ಯೆಯ ಹಿಂದೆಯೂ ಈ ಗ್ಯಾಂಗ್‌ನ ಕೈವಾಡವಿರುವುದು ತನಿಖೆಯಿಂದ ಬಹಿರಂಗವಾಗಿದೆ. 2024ರ ಅಕ್ಟೋಬರ್ 12ರಂದು ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿಯ ಬರ್ಬರ ಹತ್ಯೆ ನಡೆದಿದೆ. ನಟ ಸಲ್ಮಾನ್ ಖಾನ್ ಅವರೊಂದಿಗಿನ ನಿಕಟ ಸಂಬಂಧ ಹೊಂದಿದ್ದ ಕಾರಣಕ್ಕೆ ಈ ಹತ್ಯೆ ಮಾಡಲಾಗಿತ್ತು.

baba siddique
ಮುಂಬೈನ ಹಿರಿಯ ರಾಜಕಾರಣಿ ಬಾಬಾ ಸಿದ್ದಿಕಿ

ಕೃಷ್ಣಮೃಗ ಬೇಟೆ ಪ್ರಕರಣದ ಕಾರಣಕ್ಕೆ ಬಿಷ್ಣೋಯ್ ಗ್ಯಾಂಗ್ ಸಲ್ಮಾನ್ ಖಾನ್ ಅವರನ್ನು ಟಾರ್ಗೆಟ್ ಮಾಡಿಕೊಂಡಿತ್ತು. ಬಾಬಾ ಸಿದ್ದಿಕಿ ಸಲ್ಮಾನ್ ಖಾನ್‌ಗೆ ರಕ್ಷಣೆ ನೀಡುತ್ತಿದ್ದಾರೆ ಎಂಬುದು ಬಿಷ್ಣೋಯಿ ಗ್ಯಾಂಗ್ ಆರೋಪ. ಬಿಷ್ಣೋಯಿ ಸಮುದಾಯವು ಕೃಷ್ಣಮೃಗವನ್ನು ಪವಿತ್ರವೆಂದು ಪೂಜಿಸುತ್ತದೆ. ಕೃಷ್ಣಮೃಗವನ್ನು ಬೇಟೆಯಾಡಿದ ಸಲ್ಮಾನ್‌ನನ್ನು ಬಿಡಲ್ಲ ಎಂಬ ಬೆದರಿಕೆಯನ್ನು ಆಗಾಗೇ ಹಾಕುತ್ತಾ ತನ್ನನ್ನು ಸಮುದಾಯದ ರಕ್ಷಕನಂತೆ ಬಿಂಬಿಸಿಕೊಂಡಿರುವವನು ಬಿಷ್ಣೋಯಿ.

ಅಷ್ಟು ಮಾತ್ರವಲ್ಲದೆ ತನಗಿರುವ “ನಕಲಿ ಹೀರೋಯಿಸಂ” ಇಮೇಜ್ ಬಳಸಿ ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದ ಬಡ, ದಾರಿ ತಪ್ಪಿದ ಯುವಕರನ್ನು ಸೆರೆಹಿಡಿಯುವ ಕಾರ್ಯವನ್ನು ಬಿಷ್ಣೋಯಿ ಮಾಡುತ್ತಿದ್ದಾನೆ. ಈ ಯುವಕರನ್ನು ಕೆನಡಾ ಅಥವಾ ಅಮೆರಿಕಕ್ಕೆ ಕಳುಹಿಸುವ ಆಮಿಷ ಒಡ್ಡಿ ಅಥವಾ ಹಣದ ಆಸೆ ತೋರಿಸಿ ದೇಶದೊಳಗೆ ಕೊಲೆ, ಸುಲಿಗೆ ಮಾಡಲು ದಾಳವಾಗಿ ಬಳಸಿಕೊಳ್ಳುತ್ತಿದ್ದಾನೆ. ದೆಹಲಿ ಮತ್ತು ಮುಂಬೈನ ಉದ್ಯಮಿಗಳು, ಬಾಲಿವುಡ್ ನಟರು ಹಾಗೂ ಪಂಜಾಬಿ ಗಾಯಕರನ್ನು ಹೆದರಿಸಿ ಕೋಟ್ಯಂತರ ರೂಪಾಯಿ ಸುಲಿಗೆ ಮಾಡುವುದೇ ಈ ಗ್ಯಾಂಗ್‌ನ ಮುಖ್ಯ ಉದ್ದೇಶ.

ಅಂಧಭಕ್ತರ ಪಾಲಿಗೆ ದೇಶಪ್ರೇಮಿ ಎನಿಸಿಕೊಂಡ ಗ್ಯಾಂಗ್‌ಸ್ಟರ್ ಬಿಷ್ಣೋಯಿ!

ಇಷ್ಟೆಲ್ಲ ಇದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಅಂಧಭಕ್ತರ ಪಾಲಿಗೆ ಈ ಕೊಲೆ ಅಪರಾಧಿ, ಗ್ಯಾಂಗ್‌ಸ್ಟರ್ ಬಿಷ್ಣೋಯಿ ದೇಶಪ್ರೇಮಿ. ದೇಶಪ್ರೇಮ ಅಥವಾ ಧರ್ಮ ಎಂಬ ಅಸ್ತ್ರವನ್ನು ಮುಂದಿಟ್ಟು ಯುವಕರನ್ನು ಆಕರ್ಷಿಸುವ ಯತ್ನ ಮಾಡುತ್ತಲೇ ಇದ್ದಾನೆ. ಇದು ಆತನ “ಮಾರ್ಕೆಟಿಂಗ್ ಟೂಲ್” ಅಷ್ಟೆ ಎಂಬುದು ಸ್ಪಷ್ಟ.

ಬಿಷ್ಣೋಯಿ ತಾನು ಜೈಲಿನಲ್ಲಿದ್ದರೂ ಮಾಧ್ಯಮಗಳಿಗೆ ಸಂದರ್ಶನ ನೀಡಿ ಮತ್ತು ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳ ಮೂಲಕ ತಾನೊಬ್ಬ “ದೇಶಪ್ರೇಮಿ”, “ರಾಷ್ಟ್ರವಾದಿ” ಮತ್ತು ತೀವ್ರ ಧಾರ್ಮಿಕ ನಂಬಿಕೆಯುಳ್ಳ ವ್ಯಕ್ತಿ ಎಂಬ ಚಿತ್ರಣವನ್ನು ಯುವಕರಲ್ಲಿ ಬಿತ್ತಿದ್ದಾನೆ, ಅವರನ್ನು ಅಂಧಭಕ್ತರನ್ನಾಗಿಸಿದ್ದಾನೆ. ಭಾರತ ವಿರೋಧಿ ಶಕ್ತಿಗಳು ಮತ್ತು ಖಲಿಸ್ತಾನಿ ಪ್ರತ್ಯೇಕತಾವಾದಿಗಳನ್ನು ತಾನು ಗುರಿ ಮಾಡುತ್ತಿದ್ದೇನೆ ಎಂದು ಬಿಂಬಿಸಿಕೊಳ್ಳುವ ಮೂಲಕ ಬಿಷ್ಣೋಯಿ ಸಾಮಾಜಿಕ ಜಾಲತಾಣಗಳಲ್ಲಿ ತನಗೊಂದು ನಕಲಿ ಹೀರೋಯಿಸಂ ಸೃಷ್ಟಿಸಿಕೊಂಡಿದ್ದಾನೆ. ಆದರೆ, ಆತನ ಅಸಲಿ ಮುಖ ಜಾಗತಿಕ ಮಟ್ಟದ ಮಾದಕ ದ್ರವ್ಯ ಜಾಲ ಮತ್ತು ಸುಲಿಗೆ.

ಅಮೆರಿಕ ಯಾಕೆ ಭಾರತಕ್ಕೆ ಹಸ್ತಾಂತರದ ಆಣತಿಯಿತ್ತಿದೆ?

ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಕಠಿಣವಾದ RICO (Racketeer Influenced and Corrupt Organizations) ಕಾಯ್ದೆಯಡಿ ಮತ್ತು ಜಾಗತಿಕ ಡ್ರಗ್ಸ್ ದಂಧೆಯ ಆರೋಪದ ಮೇಲೆ ಅಮೆರಿಕದ ಫೆಡರಲ್ ಗ್ರ್ಯಾಂಡ್ ಜ್ಯೂರಿ ಲಾರೆನ್ಸ್ ಬಿಷ್ಣೋಯಿ ಮತ್ತು ಆತನ ಜಾಗತಿಕ ನೆಟ್‌ವರ್ಕ್ ವಿರುದ್ಧ ದೋಷಾರೋಪ ಪಟ್ಟಿಯನ್ನು ದಾಖಲಿಸಿದೆ. ಸದ್ಯ ಅಮೆರಿಕವು ಆತನನ್ನು ಭಾರತದಿಂದ ಹಸ್ತಾಂತರಿಸುವಂತೆ ಕೇಳುತ್ತಿದೆ. ಅದಕ್ಕೆ ಹಲವು ಕಾರಣಗಳಿವೆ.

ಅಮೆರಿಕದ ತನಿಖಾ ಸಂಸ್ಥೆಗಳ ಪ್ರಕಾರ, ಬಿಷ್ಣೋಯಿ ಜೈಲಿನೊಳಗೆ ಕಳ್ಳಸಾಗಣೆಯ ಮೂಲಕ ತಂದಿದ್ದ ಮೊಬೈಲ್ ಫೋನ್‌ಗಳು ಮತ್ತು ಎನ್‌ಕ್ರಿಪ್ಟ್ ಮಾಡಿದ ಇಂಟರ್ನೆಟ್ ಕರೆಗಳ (VoIP) ಮೂಲಕ ಅಮೆರಿಕ, ಕೆನಡಾ ಮತ್ತು ಯುರೋಪ್‌ನಲ್ಲಿರುವ ಭಾರತೀಯ ಮೂಲದ ಉದ್ಯಮಿಗಳನ್ನು ಹೆದರಿಸಿ ಕೋಟ್ಯಂತರ ರೂಪಾಯಿ ಸುಲಿಗೆ ಮಾಡುತ್ತಿದ್ದ. ಲಾಸ್ ಏಂಜಲೀಸ್‌ನ ಉದ್ಯಮಿಯೊಬ್ಬರಿಂದ ಸುಮಾರು $5 ಮಿಲಿಯನ್ (ಅಂದಾಜು 42 ಕೋಟಿ ರೂ.) ಸುಲಿಗೆ ಮಾಡಲು ಯತ್ನಿಸಿದ್ದು ಮತ್ತು ನಿರಂತರ ಶೂಟಿಂಗ್ ನಡೆಸಿ ಅಮೆರಿಕದ ನೆಲದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದು ಅಮೆರಿಕದ ಕೆಂಗಣ್ಣಿಗೆ ಕಾರಣವಾಗಿದೆ.

ಇನ್ನು ಬಿಷ್ಣೋಯಿ ಗ್ಯಾಂಗ್ ಕೇವಲ ಸುಲಿಗೆಗಷ್ಟೇ ಸೀಮಿತವಾಗಿಲ್ಲ. ಈ ಗ್ಯಾಂಗ್ ಮೆಕ್ಸಿಕೋ ಮತ್ತು ಅಮೆರಿಕದ ಗಡಿಯ ಮೂಲಕ ಕೆನಡಾಕ್ಕೆ ನೂರಾರು ಕೆಜಿ ತೂಕದ ಕೊಕೇನ್ ಮತ್ತು ಮೆಥಾಂಫೆಟಮೈನ್‌ನಂತಹ ಭೀಕರ, ಅಪಾಯಕಾರಿ ಡ್ರಗ್ಸ್ ಸಾಗಿಸುವ ಜಾಗತಿಕ ದಂಧೆ ನಡೆಸುತ್ತಿದೆ. ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಇತ್ತೀಚೆಗೆ ನಡೆದ “ಆಪರೇಷನ್ ಹಾರ್ಡ್ ಬಾಲ್” ಜಂಟಿ ಕಾರ್ಯಾಚರಣೆಯಲ್ಲಿ ಬಿಷ್ಣೋಯಿ ನೆಟ್‌ವರ್ಕ್‌ಗೆ ಸೇರಿದ ಸಾವಿರಾರು ಕೆಜಿ ಕೊಕೇನ್ ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಮೆರಿಕದ ಯುವ ಪೀಳಿಗೆಯನ್ನು ಬಲಿಪಡೆಯುತ್ತಿರುವ ಈ ಡ್ರಗ್ ಜಾಲದ ಕಿಂಗ್‌ಪಿನ್ ಬಿಷ್ಣೋಯಿ ಆಗಿರುವುದರಿಂದ ಅಮೆರಿಕ ಆತನನ್ನು ಬಿಡಲು ಸಿದ್ಧವಿಲ್ಲ.

ಇನ್ನೊಂದೆಡೆ ಅಮೆರಿಕದ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ದೋಷಾರೋಪ ಪಟ್ಟಿಯಲ್ಲಿ ಅತ್ಯಂತ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಕೆನಡಾದಲ್ಲಿ ನಡೆದ ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಭಾರತದ ಜೈಲಿನಲ್ಲಿದ್ದ ಲಾರೆನ್ಸ್ ಬಿಷ್ಣೋಯಿ ಮತ್ತು ಕೆನಡಾದಲ್ಲಿದ್ದ ಆತನ ಬಂಟ ಗೋಲ್ಡಿ ಬ್ರಾರ್ ನೇರ ಆದೇಶ ನೀಡಿದ್ದರು ಎಂದು ಅಮೆರಿಕದ ತನಿಖೆ ಬಹಿರಂಗಪಡಿಸಿದೆ. ಈ ಕೊಲೆಯ ಮೂಲಕ ಅಂತಾರಾಷ್ಟ್ರೀಯ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಸಿದ್ದ ಗ್ಯಾಂಗ್‌ನ ಮುಖ್ಯಸ್ಥನನ್ನು ತನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲು ಅಮೆರಿಕ ನಿರ್ಧರಿಸಿದೆ. ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಸಂಚಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪಾತ್ರವಿದೆ ಎಂದು ಕೆನಡಾ ಸರ್ಕಾರ ಆರೋಪಿಸಿತ್ತು ಎಂಬುದೂ ಇಲ್ಲಿ ಗಮನಾರ್ಹ!

ಹೀಗೆ ಅಮೆರಿಕದ ಕಾನೂನಿನ ಪ್ರಕಾರ, ಬಿಷ್ಣೋಯಿ ಜೈಲಿನಲ್ಲಿದ್ದುಕೊಂಡೇ ಜಾಗತಿಕ ಸುರಕ್ಷತೆಗೆ ಧಕ್ಕೆ ತರುತ್ತಿರುವುದರಿಂದ ಆತನನ್ನು ಭಾರತೀಯ ಜೈಲಿನಿಂದ ಅಮೆರಿಕದ ಕಠಿಣ ಜೈಲಿಗೆ ಸ್ಥಳಾಂತರಿಸುವುದೊಂದೇ ಈ ಕ್ರಿಮಿನಲ್ ಜಾಲವನ್ನು ಧ್ವಂಸಗೊಳಿಸಲು ಇರುವ ಏಕೈಕ ಮಾರ್ಗ ಎಂದು ಅಂತಾರಾಷ್ಟ್ರೀಯ ತಜ್ಞರ ಅಭಿಪ್ರಾಯ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ ಗ್ರಾಮಸ್ಥರು

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು...

ವಿಜಯಪುರ | ಕೆ-ಸೆಟ್ ಪರೀಕ್ಷೆ ಪಾರದರ್ಶಕತೆಗೆ ಕಟ್ಟುನಿಟ್ಟಿನ ಕ್ರಮ: ಡಾ. ಔದ್ರಾಮ

ಅ. 11ರಂದು ನಡೆಯಲಿರುವ ಕೆ-ಸೆಟ್ ಪರೀಕ್ಷೆಯನ್ನು ಪಾರದರ್ಶಕ ಹಾಗೂ ಅಚ್ಚುಕಟ್ಟಾಗಿ ನಡೆಸಲು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು ಸಾಧ್ಯವಲ್ಲವೇ?

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ...

ಕ್ಯಾನ್ಸರ್ ರೋಗಿಗಳಿಗೆ ಗುಡ್‌ನ್ಯೂಸ್‌; ದುಬಾರಿ ಔಷಧಗಳ ಬೆಲೆ ಶೇ.70ರವರೆಗೆ ಇಳಿಕೆ?

ದೇಶದಲ್ಲಿ ದುಬಾರಿಯಾಗಿರುವ ಕೆಲವು ಕ್ಯಾನ್ಸರ್ ಔಷಧಗಳ ಬೆಲೆ ಶೀಘ್ರದಲ್ಲೇ ಭಾರಿ ಪ್ರಮಾಣದಲ್ಲಿ...