ಔರಾದ

ಔರಾದ್‌ | ನೀರಿನ ಸಮಸ್ಯಾತ್ಮಕ ಗ್ರಾಮಗಳಿಗೆ ತಾಪಂ ಇಒ ಕಿರಣ ಪಾಟೀಲ್ ಭೇಟಿ

ಔರಾದ್ ತಾಲೂಕಿನ ಜಂಬಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮಹಾರಾಜವಾಡಿ, ವಿಜಯನಗರ ತಾಂಡಾ ಹಾಗೂ ಪೋಮಾ ದೇವಲಾ ತಾಂಡಾಗಳಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ್...

ಔರಾದ್‌ | ಎರಡು ಬೈಕ್‌ಗಳ ಮುಖಾಮುಖಿ ಡಿಕ್ಕಿ : ಸ್ಥಳದಲ್ಲೇ ಓರ್ವ ಸಾವು

ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೀದರ-ಔರಾದ್‌ ರಾಷ್ಟ್ರೀಯ ಹೆದ್ದಾರಿ-161(ಎ)ರಲ್ಲಿ ಔರಾದ್‌ ಪಟ್ಟಣದ ಬಂಧಿಖಾನೆ ಸಮೀಪ ಮಂಗಳವಾರ ಬೆಳಗ್ಗೆ ನಡೆದಿದೆ. ಮೃತರು ಔರಾದ್‌ ತಾಲೂಕಿನ ವಡಗಾಂವ(ದೇ)...

ಬೀದರ್ | ‘ಈದಿನ’ ವರದಿಗೆ ಸ್ಪಂದನೆ : ಸೋರಳ್ಳಿ ಗ್ರಾಮಕ್ಕೆ ಡಿಸಿ ಶಿಲ್ಪಾ ಶರ್ಮಾ ಭೇಟಿ, ಪರಿಶೀಲನೆ

ಕುಡಿಯುವ ನೀರಿನ ಸಮಸ್ಯೆ ತಲೆದೋರಿದ ಔರಾದ್ ತಾಲ್ಲೂಕಿನ ವಡಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋರಳ್ಳಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಶನಿವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ ಒಂದೆರಡು ತಿಂಗಳಿನಿಂದ...

ಚಿಂತಾಕಿ | ರಾಜ್ಯದಲ್ಲೇ ಅತಿ ಹೆಚ್ಚು ಉಷ್ಣಾಂಶ ದಾಖಲು

ಬೀದರ್‌ ಜಿಲ್ಲೆಯ ಚಿಂತಾಕಿಯಲ್ಲಿ 46 ಡಿಗ್ರಿ ತಾಪಮಾನ ದಾಖಲಾಗಿದ್ದು, ರಾಜ್ಯದಲ್ಲಿಯೇ ಅತಿ ಹೆಚ್ಚು ಉಷ್ಣಾಂಶ ವರದಿಯಾದ ಪ್ರದೇಶ ಇದಾಗಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಎಂ ಎಸ್‌ ದಿವಾಕರ...

ಬೀದರ್‌ | ಅಂಬೇಡ್ಕರವರು ಶೋಷಿತರಿಗೆ ದೇವರು ಸಮಾನ : ಶಾಸಕ ಪ್ರಭು ಚವ್ಹಾಣ

ಭವಿಷ್ಯದ ಭಾರತಕ್ಕೆ ಶ್ರೇಷ್ಠ ಸಂವಿಧಾನ ರಚಿಸಿದ ಡಾ.ಬಿ.ಆರ್.‌ಅಂಬೇಡ್ಕರ ಅವರು ನನ್ನಂತಹ ಶೋಷಿತ ಸಮುದಾಯಗಳಿಗೆ ದೇವರು ಸಮಾನ ಆಗಿದ್ದಾರೆ ಎಂದು ಔರಾದ್‌ ಶಾಸಕ ಪ್ರಭು ಚವ್ಹಾಣ ಹೇಳಿದರು. ಔರಾದ್ ತಾಲೂಕಿನ ಬೋರಳ ಗ್ರಾಮದಲ್ಲಿ ಆಯೋಜಿಸಿದ ಬಾಬಾ...

ಬೀದರ್‌ | ನಮ್ಗ ಅನ್ನ ಕೊಡಬೇಡ್ರಿ; ಕುಡಿಯೋಕೆ ನೀರು ಕೊಟ್ಟು ಪುಣ್ಯ ಕಟ್ಟಿಕೊಳ್ಳಿ!

ಕಳೆದ ಕೆಲ ವರ್ಷಗಳ ಹಿಂದೆ ಜಿಲ್ಲಾ ಪಂಚಾಯತ್‌ಆವರಣದಲ್ಲಿ ನಡೆದ ಸಾಮಾನ್ಯ ಸಭೆಗೆ ಶಾಸಕರೊಬ್ಬರು ತಲೆ ಮೇಲೆ, ಟೊಂಕದ ಮೇಲೊಂದು ಖಾಲಿ ಕೊಡ ಹಿಡಿದು ಬಂದಿದ್ದರು. ತಮ್ಮ ಕ್ಷೇತ್ರದ ಭೀಕರ ʼನೀರಿನ ಬರʼ ವಿರುದ್ಧ...

ಬೀದರ್‌ | ಪುಸ್ತಕ ಓದಿನಿಂದ ಮಾನಸಿಕ ನೆಮ್ಮದಿ ಸಾಧ್ಯ : ಧರ್ಮಣ್ಣಾ ಚಿಟ್ಟಾ

ಮೊಬೈಲ್‌ ಮತ್ತು ಸಾಮಾಜಿಕ ಜಾಲತಾಣಗಳ ಭರಾಟೆಯ ಮಧ್ಯೆ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಂಡರೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಎಂದು ಬಸವಕಲ್ಯಾಣದ ಜವಾಹರಲಾಲ್‌ ನೆಹರು ವಿದ್ಯಾಲಯದ ಶಿಕ್ಷಕ ಧರ್ಮಣ್ಣಾ ಚಿಟ್ಟಾ ಹೇಳಿದರು. ಔರಾದ್‌ ಪಟ್ಟಣದ...

ಬೀದರ್‌ | ಜ್ಞಾನ ಭಾರತಿ ಪ್ರೌಢ ಶಾಲೆಗೆ ಶೇ 100ರಷ್ಟು ಫಲಿತಾಂಶ; ದಿವ್ಯಾ ಉತ್ತಮ ಸಾಧನೆ

2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ಫಲಿತಾಂಶ ಗುರುವಾರ ಮಧ್ಯಾಹ್ನ ಪ್ರಕಟವಾಗಿದ್ದು, ಔರಾದ್‌ ತಾಲ್ಲೂಕಿನ ಸಂತಪೂರ ಜ್ಞಾನ ಭಾರತಿ ಗುರುಕುಲ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದು ಕೀರ್ತಿ ತಂದಿದ್ದಾರೆ. ಶಾಲೆಗೆ ಶೇ 100ರಷ್ಟು ಫಲಿತಾಂಶ...

ಔರಾದ್‌ | ಬಸವಣ್ಣ ಒಂದು ಸಮುದಾಯದ ಸೊತ್ತಲ್ಲ, ವಿಶ್ವದ ಆಸ್ತಿ : ಶಿವಾನಂದ ಸ್ವಾಮೀಜಿ

12ನೇ ಶತಮಾನದಲ್ಲಿ ಅನುಭವ ಮಂಟಪ ಮುಖಾಂತರ ಪ್ರಜಾಪ್ರಭುತ್ವದ ಪರಿಕಲ್ಪನೆ ಮೂಡಿಸಿದ ವಿಶ್ವಗುರು ಬಸವಣ್ಣನವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ. ಅವರು ಇಡೀ ವಿಶ್ವದ ಆಸ್ತಿಯಾಗಿದ್ದಾರೆ ಎಂದು ಬೆಳಗಾವಿಯ ಹಂದಿಗುಂದ ಸಿದ್ದೇಶ್ವರ ಮಠದ ಶಿವಾನಂದ...

ಔರಾದ್‌ ಸೀಮೆಯ ಕನ್ನಡ | ಸುಡು ಬಿಸಲಾಗ ಭಾಳ ಓಡಾಡಬ್ಯಾಡ; ಬೇಮಾರ ಬಿದ್ದೂರ್ ಹೈರಾಣ ಅದಾ!‌

ಹೊತ್ರಾಳಿ ಏಳತನಕಾ ಸೂರ್ಯ ಹೊಂಟಾನ, ಬಿಸಲ ರಪರಪ ಬಡಿಲತುದ. ಮದ್ಯಾಣ ಬಾರ ಆಯ್ತು ಅಂದುರ ಮುಗಿತು, ಮನ್ಯಾಗ ಇದ್ದುರ ಬಿ ಭೆಂಕ್ಯಾಗ ಕುಂತಿನ್ಹಾಗ ಅನಸ್ಲಾತುದ. ಅದಕ್ಕೆ ಈ ಬ್ಯಾಸಕಿ ಮುಗ್ಯಾತನಕ ಎತ್ತಬಿ ಬಿಸಲಾಗ...

ಔರಾದ್‌ | ಗುಳೆ ತಪ್ಪಿಸಲು ಮನರೇಗಾ ಕಾಮಗಾರಿಗೆ ಒತ್ತು : ಶಿವಕುಮಾರ ಘಾಟೆ

ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶದ ಜನರು ಉದ್ಯೋಗ ಅರಸಿ ಹೊರ ರಾಜ್ಯಗಳಿಗೆ ಗುಳೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ ಗ್ರಾಮ ಮಟ್ಟದಲ್ಲೇ ಮನರೇಗಾ ಯೋಜನೆಯಡಿ ಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ತಾಲೂಕು ಪಂಚಾಯತ್ ಸಹಾಯಕ...

ಔರಾದ್‌ | ಸೇವಾಭಾವ, ಶಿಸ್ತು ಬೆಳೆಸುವ ಎನ್‌ಎಸ್‌ಎಸ್ ಶಿಬಿರ : ಪ್ರೇಮಾ ಹೂಗಾರ

ಎನ್‌ಎಸ್‌ಎಸ್ ಶಿಬಿರವು ಸೇವಾ ಮನೋಭಾವ ಬೆಳೆಸುತ್ತದೆ. ವಿದ್ಯಾರ್ಥಿಗಳು ಬದುಕಿನಲ್ಲಿ ಶಿಸ್ತು, ಧೈರ್ಯ, ತಾಳ್ಮೆ ಹಾಗೂ ಸನ್ನಡತೆ ಮೈಗೂಡಿಸಿಕೊಳ್ಳಬೇಕುʼ ಎಂದು ಅಮರೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಪ್ರೇಮಾ ಹೂಗಾರ ಹೇಳಿದರು. ಅಮರೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ...

ಈ ಹೊತ್ತಿನ ಪ್ರಮುಖ ಸುದ್ದಿ