ಬೀದರ್‌ | ನಮ್ಗ ಅನ್ನ ಕೊಡಬೇಡ್ರಿ; ಕುಡಿಯೋಕೆ ನೀರು ಕೊಟ್ಟು ಪುಣ್ಯ ಕಟ್ಟಿಕೊಳ್ಳಿ!

Date:

ಕಳೆದ ಕೆಲ ವರ್ಷಗಳ ಹಿಂದೆ ಜಿಲ್ಲಾ ಪಂಚಾಯತ್‌ಆವರಣದಲ್ಲಿ ನಡೆದ ಸಾಮಾನ್ಯ ಸಭೆಗೆ ಶಾಸಕರೊಬ್ಬರು ತಲೆ ಮೇಲೆ, ಟೊಂಕದ ಮೇಲೊಂದು ಖಾಲಿ ಕೊಡ ಹಿಡಿದು ಬಂದಿದ್ದರು. ತಮ್ಮ ಕ್ಷೇತ್ರದ ಭೀಕರ ʼನೀರಿನ ಬರʼ ವಿರುದ್ಧ ಅವರ ಆಕ್ರೋಶದ ಪ್ರತಿರೋಧ ಅದಾಗಿತ್ತು. ಈಗಲೂ ಆ ಶಾಸಕರ ಕ್ಷೇತ್ರದ ಜನರು ಕುಡಿಯುವ ನೀರು ಸಮರ್ಪಕವಾಗಿ ಸಿಗಲಾರದೆ ಪರದಾಡುವುದು ಎಂದಿನಂತೆ ಮುಂದುವರೆದಿರುವುದು ವಿಪರ್ಯಾಸವೇ ಸರಿ.

- Advertisement -

ಹೌದು, ಔರಾದ್‌ ಹಾಗೂ ಕಮಲನಗರ ತಾಲೂಕಿನ ಹಲವು ಗ್ರಾಮ, ತಾಂಡಾಗಳಲ್ಲಿ ಜನರು ಕುಡಿಯುವ ನೀರಿಗಾಗಿ ಎಷ್ಟು ಪರಿತಪ್ಪಿಸುತ್ತಿದ್ದಾರೆ ಎಂಬುದು ಕಣ್ಣಿಗೆ ರಾಚುತ್ತದೆ. ಅಕ್ಷರಶಃ ಬೆಂಕಿ ಉಗುಳುವ ಸೂರ್ಯನ ತಾಪಕ್ಕೆ ತತ್ತರಿಸುವ ಜನರು ದಿನದ 24 ಗಂಟೆಯೂ ನೀರಿಗಾಗಿ ಖಾಲಿ ಕೊಡ ಹಿಡಿದು ಅಲೆದಾಡುವ ದೃಶ್ಯಗಳು ಇಲ್ಲಿ ಸಾಮಾನ್ಯ ಎನ್ನುವಂತಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಾಗತಿಕ ಪೈಪೋಟಿಗೆ ಕನ್ನಡಿಗರನ್ನು ಸಜ್ಜುಗೊಳಿಸುವ ಬೃಹತ್ ವೇದಿಕೆ ‘ಬೆಂಗಳೂರು...

ರಾಜ್ಯದ ಯುವಜನತೆಯನ್ನು ಭವಿಷ್ಯದ ಜಾಗತಿಕ ಉದ್ಯೋಗ ಮಾರುಕಟ್ಟೆಯ ತೀವ್ರ ಪೈಪೋಟಿ ಮತ್ತು ಸವಾಲುಗಳಿಗೆ ಸುಸಜ್ಜಿತವಾಗಿ ಸಿದ್ಧಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು ಬೃಹತ್ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಮುಂಬರುವ ನವೆಂಬರ್ 3, 4 ಹಾಗೂ...

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19...

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...

ಔರಾದ್‌ ತಾಲೂಕಿನ ವಡಗಾಂವ್‌ (ದೇ) ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಬರುವ ಸೋರಳ್ಳಿ ಗ್ರಾಮದಲ್ಲಿ ಕಳೆದ ಎರಡು ತಿಂಗಳಿಂದ ನೀರಿನ ಸಮಸ್ಯೆ ಉಲ್ಬಣಿಸಿದೆ. ಬೆಳ್ಳಿಗೆ ಸಂಜೆ ನೀವು ಗ್ರಾಮದಲ್ಲಿ ಸುತ್ತಾಡಿದರೆ ಜನರು ಕೊಡ ತೆಗೆದುಕೊಂಡು ಬೈಕ್‌, ಕಾರು, ಆಟೋದಲ್ಲಿ ಅಲೆದಾಡುವ ಜನರ ಪಾಡು ಹೇಳತೀರದು.

ನೀರಿನ ಸಮಸ್ಯೆ ಇರುವ ಬಗ್ಗೆ ಗಮನಕ್ಕೆ ಬಂದ ಬಳಿಕ ಗ್ರಾಮಕ್ಕೆ ತೆರಳಿದೆ, ಗ್ರಾಮಕ್ಕೆ ಭೇಟಿ ನೀಡುವ ಮುನ್ನವೇ ಹೊರವಲಯದಲ್ಲಿ ಜನರು ಬೋರವೆಲ್‌ (ಹ್ಯಾಂಡ್‌ಪಂಪ್) ಹೊಡೆದು ನೀರು ತುಂಬಿಸಿಕೊಳ್ಳುತ್ತಿದ್ದರು. ಇನ್ನು ಕೆಲ ಮಹಿಳೆಯರು ಕೈಯಲ್ಲಿ ಖಾಲಿ ಕೊಡ ಹಿಡಿದು ನೀರಿಗಾಗಿ ಮೆರವಣಿಗೆಯಂತೆ ಹೊರಟಿದರು.

WhatsApp Image 2026 04 27 at 5.32.17 AM
ನೀರಿಗಾಗಿ ಮಹಿಳೆ, ಮಕ್ಕಳ ಅಲೆದಾಟ

“ನಿಮ್ಮೂರಾಗ ನೀರಿನ ಸಮಸ್ಯೆ ಬಹಳ ಇದೇನಾ” ಎಂದು ಕೇಳಿದೆ. “ಅಯ್ಯೊ, ನೀರಿನ ಕತಿ ಯಾಕೆ ಕೇಳ್ತೀರಿ, ಹರ್‌ ಬ್ಯಾಸಕಿದಾಗ ಇದೇ ಬೊಬ್ಬಿ ಅದಾ, ನಮ್ಮೂರಿನ್ಹಾಂಗ್‌ ಬೇರೆ ಯಾವ ಊರಿನಲ್ಲಿಯೂ ನೀರಿನ ತಕ್ಲಿಪ್‌ ಇಲ್ಲ” ಎಂದು ಬೋರ್‌ವೆಲ್ ಹೊಡೆಯುತ್ತ ಕೊಡ ತುಂಬಿಸಿಕೊಳ್ಳುವ ಹಿರಿಯರೊಬ್ಬರು ಆಕ್ರೋಶ ಭರಿತವಾಗಿಯೇ ಉತ್ತರಿಸಿದರು.

“ಈಗ ನೀರು ಎಲ್ಲಿಂದ ತರುತ್ತಿದ್ದೀರಿ” ಎಂದಾಗ, “ಏನ್‌ ಮಾಡ್ಬೇಕು ಸರ್”‌ ಅವರಿವರ ಹೊಲದಲ್ಲಿರುವ ಬಾವಿ, ಬೋರ್‌ವೆಲ್ ಹೋಗ್ತಿವಿ, ಅವ್ರೂ ಕೊಡದಿದ್ರೆ ಬಾಜು ಊರು ವಲ್ಲೆಪುರ, ತಾಂಡಾಕ್ಕೆ ಹೋಗಿ ತರ್ತೀವಿ” ಎಂದು ಗೋಳು ತೋಡಿಕೊಂಡರು.

ಅಲ್ಲಿಂದ ಗ್ರಾಮದ ಕೆಲ ಓಣಿಗಳಿಗೆ ಹೆಜ್ಜೆಯಿಟ್ಟು, ನೀರಿನ ಬವಣೆ ಬಗ್ಗೆ ವಿಚಾರಿಸಿದಾಗ ಅಲ್ಲಿನ ಮಹಿಳೆಯರು, ಮಕ್ಕಳು ಮನೆಯಲ್ಲಿ ಕೆಲಸ ಬಿಟ್ಟು ಒಂದೆಡೆ ಜಮಾಯಿಸಿದರು. ಕೂಗಳತೆ ದೂರದಲ್ಲಿ ಮಾಂಜ್ರಾ ನದಿ ಹರಿಯುತ್ತಿದೆ, ಗ್ರಾಮದ ಕೆಲ ಬಾವಿಗಳು ತುಂಬಿ ತುಳುಕುತ್ತಿದ್ದರೂ ಜನರಿಗೆ ನೀರಿನ ಸಂಕಟ ತಪ್ಪಿಲ್ಲ. ಚುನಾವಣೆ ವೇಳೆ ಬರುವ ಜನಪ್ರತಿನಿಧಿಗಳು ಜನರ ನೋವು ಕೇಳಲು ಇತ್ತ ತಿರುಗಿಯೂ ನೋಡಲ್ಲʼ ಎಂದು ಆಡಳಿತ ವ್ಯವಸ್ಥೆ ವಿರುದ್ಧ ಗಟ್ಟಿ ಧ್ವನಿಯಲ್ಲಿ ಹೇಳತೊಡಗಿದರು.

“ನನಗೆ ವಯಸ್ಸು 70, ಮೈಯಲ್ಲಿ ಶಕ್ತಿ ಇಲ್ಲ, ಕೊಡ ಹಿಡಿದು ಅಲೆದಾಡುವುದು ಆಗಲ್ಲ, ಸರಿಯಾಗಿ ನೀರು ಸಿಗದೇ ಇರುವುದಕ್ಕೆ ಸೊಸೆಯಂದಿರುವ ನನ್ನ ಸೀರೆ ಒಗೆಯಲು ಯೋಚಿಸುತ್ತಿದ್ದಾರೆ. ಮಕ್ಕಳು, ಮೊಮ್ಮಕ್ಕಳು 1-2 ಕಿ.ಮಿ. ಕ್ರಮಿಸಿ ನೀರು ತರುತ್ತಿದ್ದಾರೆ. ಶೌಚಾಲಯಕ್ಕೆ ಹೋಗಬೇಕಾದ್ರೆ, ಮುಖ ತೊಳೆದುಕೊಳ್ಳುವಾಗ ನೀರಿನ ಚಿಂತೆ ಕಾಡುತ್ತಿದೆ. ಇಂತಹ ಹೈರಾಣಿದಾಗ ನಾವು ಇರ್ಬೇಕಾ ಸಾಯ್ಬೇಕಾ? ಎಳ್ಳ ಅಮಾವಾಸ್ಯೆ ನಂತರ ಪ್ರತಿ ವರ್ಷ ನಮ್ಮಲ್ಲಿ ನೀರಿಗಾಗಿ ಬಡಿದಾಡುವುದು ಶುರುವಾಗುತ್ತದೆ. ನಮ್ಗ ತೋಲ್‌ ಅಂದುರ ತೋಲ್ ಅನ್ಯಾಯ‌ ಆಗ್ಯಾದ, ಎಲ್ರಿಗೂ ಕೈ ಜೋಡಿಸಿ ಕೇಳ್ತೀವಿ, ನಮ್ಮುರೀಗಿ ನೀರು ಕೊಡ್ರಿ, ನಿಮ್ಗ ದಯೆ ಬರ್ತುದ” ಅಂತ ವೃದ್ಧ ಮಹಿಳೆ ಕಮಳಾಬಾಯಿ ನೋವಿನಿಂದ ಹೇಳುತ್ತಾ ಎರಡು ಕೈಮುಗಿದರು.

WhatsApp Image 2026 04 27 at 5.33.32 AM
ಗ್ರಾಮದ ಹೊರವಲಯದಲ್ಲಿರುವ ಹ್ಯಾಂಡ್‌ಪಂಪ್‌ ನಿಂದ ಬೈಕ್‌ಗಳ ನೀರು ಒಯ್ಯುತ್ತಿರುವುದು

ನೋಡೋಕೆ ಹೊಸದಾಗಿ ಕಂಡರೂ ಹನಿ ನೀರು ಬಾರದ ಕೊಳವೆಬಾಯಿ ಸುತ್ತಲೂ ನೂರಾರು ಖಾಲಿ ಕೊಡ ಕಂಡವು, ಅಲ್ಲಿನ ಮಹಿಳೆಯರರು, ಮಕ್ಕಳನ್ನು ಮಾತಾಡಿಸೋಣ ಅಂತ ಅಲ್ಲಿಗೆ ಹೊರಟೆ. ಅವರೆಲ್ಲರೂ ಖಾಲಿ ಕೊಡ ಹಿಡಿದು ಡಾ.ಅಂಬೇಡ್ಕರ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಲು ಬರತೊಡಗಿದರು. ಕೆಲವೊತ್ತು ರಸ್ತೆ ಮೇಲೆ ಕುಳಿತು ʼಬೇಕೇ ಬೇಕು ನೀರು ಬೇಕುʼ ಎಂಬ ಘೋಷಣೆ ಕೂಗಿದರು.

ಬಳಿಕ ಮಾತನಾಡಿದ ಅವರು “ನಮ್ಗೆ ನೀರಿನ ಹೈರಾಣ ಭಾಳ ಅದಾ, ರಾತ್ರಿ-ಹಗಲು ಎನ್ನದೆ ಅಕ್ಕಪಕ್ಕದ ಗ್ರಾಮಗಳಿಗೆ ಹೋಗಿ ನೀರು ತರುವುದು, ಗ್ರಾಮದ ತೋಟದ ಜಮೀನುಗಳಿಗೆ ತೆರಳಿ ಮಾಲೀಕರ ಬಳಿ ಕಾಡಿ ಬೇಡಿ ನೀರು ತರುವ ದಯನೀಯ ನಮ್ಮದು. ಈಗ ಆ ಜಮೀನಿನ ಮಾಲೀಕರು ನೀರಿಗೆ ಬರಬೇಡಿ ಎಂದು ಹೇಳುತ್ತಿದ್ದಾರೆ. ನಮ್ಗೆ ಅನ್ನ ಹಾಕಬೇಡ್ರಿ, ನಾವು ನೀರು ಕೇಳ್ತಾ ಇದ್ದೀವಿ ನೀರಿನ ಕೊಡ್ರಿ ಸಾಕು. ಬೆಂಕಿಯಂಥ ಬಿಸಿಲಿನಲ್ಲಿ ಕೊಡ ಹಿಡಿದು ಎಲ್ಲಿಗೆ ಅಲೆದಾಡಬೇಕುʼ ಎಂದು ಪ್ರಶ್ನಿಸಿದರು.

“ನಮ್ಮೂರಾಗ ನೀರಿನ ವನವಾಸ ಭಾಳ ಅದಾ, ಮಕ್ಕಳು, ಮೊಮ್ಮಕ್ಕಳು ನೀರು ತರಲು ಊರೂರು ಅಲೆದಾಡುತ್ತಿದ್ದಾರೆ. ಕಾರು, ಬೈಕ್‌, ಆಟೋದಲ್ಲಿ ದೂರದಿಂದ ನೀರು ತಂದು ಹೈರಾಣಾಗುವ ಗಂಡಸರು, ನೀರಿಗಾಗಿ ಮನೆಯಲ್ಲಿ ಮಹಿಳೆಯರೊಂದಿಗೆ ಜಗಳ ಮಾಡುತ್ತಿದ್ದಾರೆ. ನಾವು ನೀರಿಗಾಗಿ ಗಂಟೆಗಟ್ಟಲೇ ಕಾಯುವುದು, ಬೇರೆಡೆ ನಡೆದು ಹೋಗಿ ನೀರು ತರುವುದರಿಂದ ನಮ್ಮ ತಲೆ ಸುತ್ತುವುದು, ಕೈಕಾಲು ನೋವು ಕಾಣಿಸಿಕೊಂಡು ಆರೋಗ್ಯ ಹದಗೆಡುತ್ತಿದೆ. ಇಷ್ಟಾದರೂ ನಮ್ಮ ನೋವು ಯಾರಿಗೂ ಮುಟ್ಟುತ್ತಿಲ್ಲ. ಏನಾದರೂ ಮಾಡಿ ಮೊದಲು ನೀರಿನ ವ್ಯವಸ್ಥೆ ಮಾಡ್ರೀ” ಎಂದು ಹಿರಿಯರಾದ ಛಾನಾಬಾಯಿ ಅವರು ಅಳಲು ತೋಡಿಕೊಂಡರು.

WhatsApp Image 2026 04 27 at 6.16.53 AM
ಕುಡಿಯುವ ನೀರಿಗಾಗಿ ಬೇರೆ ಗ್ರಾಮಗಳಿಗೆ ತೆರಳುತ್ತಿರುವ ಆಟೋ

ಗ್ರಾಮದಲ್ಲಿ ಸುಮಾರು 300ಕ್ಕೂ ಅಧಿಕ ಮನೆಗಳಿವೆ, ಹೆಚ್ಚುಕಮ್ಮಿ 2 ಸಾವಿರ ಜನಸಂಖ್ಯೆ ಇದೆ. ಆದರೆ, ಯಾವುದೇ ಓಣಿಗೆ ಹೋದ್ರೂ ಜನರು ನೀರಿನ ಬರ ಕುರಿತು ತಮ್ಮ ನೋವು ತೋಡಿಕೊಳ್ಳುತ್ತಾರೆ. ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಗ್ರಾಮದಲ್ಲಿ ಪ್ರತಿ ಮನೆಗೂ ʼಜಲ ಜೀವನ ಮಿಷನ್‌ʼ ಯೋಜನೆ ಅನುಷ್ಠಾನಗೊಂಡರೂ ಖಾಸಗಿ ವ್ಯಕ್ತಿಗಳು ತಮ್ಮ ಜಮೀನಿನಲ್ಲಿರುವ ಬಾವಿಯ ನೀರು ಕೊಡಲು ಒಪ್ಪದೇ ತಕರಾರು ತೆಗೆಯುತ್ತಿದ್ದಾರೆ. ಇದರಿಂದ ಗ್ರಾಮಕ್ಕೆ ನೀರಿನ ಪೂರೈಕೆಯಲ್ಲಿ ಏರುಪೇರಾಗಿ ಸಮಸ್ಯೆ ಉಲ್ಬಣಿಸಿದೆ. ಜನರಿಗೆ ಶುದ್ಧ ಕುಡಿಯುವ ಕೊಡಬೇಕೆಂಬ ಉದ್ದೇಶದಿಂದ ಅಳವಡಿಸಲಾದ ಶುದ್ಧ ಕುಡಿಯುವ ನೀರಿನ ಘಟಕ ತುಕ್ಕು ಹಿಡಿದು ವರ್ಷಗಳೇ ಕಳೆದರೂ ಅಧಿಕಾರಿಗಳು ದುರಸ್ತಿ ಮಾಡುವ ಗೋಜಿಗೆ ಹೋಗಲಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ಇದನ್ನೂ ಓದಿ : ಔರಾದ್‌ ಸೀಮೆಯ ಕನ್ನಡ | ಸುಡು ಬಿಸಲಾಗ ಭಾಳ ಓಡಾಡಬ್ಯಾಡ; ಬೇಮಾರ ಬಿದ್ದೂರ್ ಹೈರಾಣ ಅದಾ!‌

ಗ್ರಾಮದ ಮಾಜಿ ಗ್ರಾಮ ಪಂಚಾಯತ್‌ ಅಧ್ಯಕ್ಷ ಸಂಗಪ್ಪ ಅವರು ʼಈದಿನʼ ಜೊತೆ ಮಾತನಾಡಿ, “ಕಳೆದ 2 ತಿಂಗಳಿಂದ ನಮ್ಮೂರಿನಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಅಧಿಕಾರಿಗಳು ಕಾಟಚಾರಕ್ಕೆ ಭೇಟಿ ನೀಡುತ್ತಿದ್ದಾರೇ ಹೊರತು ನೀರಿನ ಸಮಸ್ಯೆ ಬಗೆಹರಿಸುವ ಗೋಜಿಗೆ ಹೋಗಿಲ್ಲ. ಇರುವ ಬೋರ್‌ವೆಲ್ ಬತ್ತಿ ಹೋಗಿವೆ, ಜಲ ಜೀವನ ಮಿಷನ್‌ ನೀರು ಇದ್ದೂ ಇಲ್ಲದಂತಾಗಿದೆ. ನೀರಿನ ಸಮಸ್ಯೆ ಬಗ್ಗೆ ಹೇಳಿದರೆ ʼನಿಮ್ಮೂರಲ್ಲಿ ಕರೆಂಟ್‌ ಸಮಸ್ಯೆ ಇದೆʼ ಅಧಿಕಾರಿಗಳು ಕುಂಟು ನೆಪಹೇಳಿ ಜಾರಿಕೊಳ್ಳುತ್ತಿದ್ದಾರೆ. ಒಂದೆರಡು ದಿನದಲ್ಲಿ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್‌ ಕಚೇರಿಗೆ ಎದುರು ಧರಣಿ ನಡೆಸುತ್ತೇವೆ” ಎಂದು ಎಚ್ಚರಿಸಿದರು.

ಬೇಸಿಗೆಯಲ್ಲಿ ಜನರಿಗೆ ಸಮರ್ಪಕವಾಗಿ ನೀರು ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯ, ಎಲ್ಲೇ ನೀರಿನ ಸಮಸ್ಯೆ ಕಂಡು ಬಂದರೂ 24 ಗಂಟೆಯೊಳಗೆ ಬಗೆಹರಿಸಬೇಕೆಂದು ಸರ್ಕಾರದ ಸಚಿವರು ನಿರಂತರ ಸಭೆಗಳು ನಡೆಸುತ್ತ ಹೇಳುತ್ತಲೇ ಇದ್ದಾರೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ʼಇದಕ್ಕೂ ನಮಗೂ ಸಂಬಂಧವೇ ಇಲ್ಲʼ ಎಂಬಂತೆ ವರ್ತಿಸಿ ಜನರ ನೋವಿಗೆ ದನಿಯಾಗದೇ ಇರುವುದು ಆಡಳಿತ ವೈಖರಿಯ ನಿರ್ಲಕ್ಷ್ಯ ಅಲ್ಲದೇ ಮತ್ತೇನೂ ಅಲ್ಲ.

ಬಿರುಬಿಸಿಲಿನಲ್ಲಿ ಜೀವಜಲಕ್ಕಾಗಿ ಹಗಲು ರಾತ್ರಿ ಎನ್ದೆದೇ ಅಲೆದಾಡಿ ಹೈರಾಣುಗುತ್ತಿರುವ ಸೋರಹಳ್ಳಿ ಗ್ರಾಮಸ್ಥರ ಸಂಕಟಕ್ಕೆ ಅಧಿಕಾರಿಗಳು ತತ್‌ಕ್ಷಣ ಅಣಿಯಾಗಿ ನೀರಿನ ಬವಣೆ ತಪ್ಪಿಸಬೇಕಾಗಿದೆ.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯಾಂಗದ ವಿರುದ್ಧ ಹೇಳಿಕೆ ಆರೋಪ; ಸಿಜೆಪಿ ನಾಯಕ ಸೌರವ್‌ ದಾಸ್‌ಗೆ ಮದ್ರಾಸ್ ಹೈಕೋರ್ಟ್ ನೋಟಿಸ್

ನ್ಯಾಯಾಂಗದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ CJP ವಕ್ತಾರ...

ಶಿಕಾರಿಪುರ | ಖಾಸಗಿ ಬಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಶಿಕಾರಿಪುರ ಪಟ್ಟಣದ ಗಬ್ಬೂರು ಸಮೀಪ ಗುರುವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ...

ಶಿವಮೊಗ್ಗ | ಸಾಮೂಹಿಕ ನಕಲಿಗೆ ಅವಕಾಶ! KSOU ಪ್ರಾದೇಶಿಕ ನಿರ್ದೇಶಕ ಬಿ.ಎಂ ಸ್ವಾಮಿ ವಿರುದ್ಧ ದೂರು

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (KSOU) ಶಿವಮೊಗ್ಗ ಪ್ರಾದೇಶಿಕ ಕೇಂದ್ರದಲ್ಲಿ ನಡೆದ...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ, ಊರಲ್ಲಿ ಪಡಿತರವೂ ಇಲ್ಲ!

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು...