ದೇಶ

23 ವರ್ಷಗಳ ಹಿಂದಿನ ಎನ್‌ಸಿಪಿ ನಾಯಕನ ಕೊಲೆ ಪ್ರಕರಣ: ಮಾಜಿ ಸಿಎಂ ಪುತ್ರನಿಗೆ ಜೀವಾವಧಿ ಶಿಕ್ಷೆ

ಸುಮಾರು 23 ವರ್ಷಗಳ ಹಿಂದಿನ ಎನ್‌ಸಿಪಿ ನಾಯಕ ರಾಮಾವತಾರ್ ಜಗ್ಗಿ ಹತ್ಯೆ ಪ್ರಕರಣದಲ್ಲಿ ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರ ಪುತ್ರ ಅಮಿತ್ ಜೋಗಿಗೆ ಛತ್ತೀಸ್‌ಗಢ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ....

ಕೋಲ್ಕತ್ತದ ಮೇಲೆ ಪಾಕ್‌ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದರೂ ಮೋದಿ ತುಟಿ ಬಿಚ್ಚುತ್ತಿಲ್ಲ : ಮಮತಾ ಆಕ್ರೋಶ

ಕೋಲ್ಕತ್ತ ಮೇಲೆ ಪಾಕಿಸ್ತಾನ ದಾಳಿ ನಡೆಸುತ್ತೇವೆ ಎಂದು ಬೆದರಿಕೆ ಹಾಕಿದ ಮೇಲೂ  ಪ್ರಧಾನಿ ನರೇಂದ್ರ ಮೋದಿ ಈ ಸಂಬಂಧಿಸಿದಂತೆ ತುಟಿ ಬಿಚ್ಚುತ್ತಿಲ್ಲ  ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಕ್ರೋಶ ಹೊರ...

ತಮಿಳುನಾಡು | ತಂದೆ-ಮಗನ ಕಸ್ಟಡಿ ಕೊಲೆ ಪ್ರಕರಣ: 9 ಪೊಲೀಸರಿಗೆ ಗಲ್ಲು ಶಿಕ್ಷೆ

ಆರು ವರ್ಷಗಳ ಹಿಂದೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದ ತೂತುಕುಡಿ ಜಿಲ್ಲೆಯ ವ್ಯಾಪಾರಿ ಪಿ ಜಯರಾಜ್ ಮತ್ತು ಅವರ ಮಗ ಜೆ ಬೆನಿಕ್ಸ್ ಕಸ್ಟಡಿ ಸಾವು ಪ್ರಕರಣದಲ್ಲಿ ತಮಿಳುನಾಡಿನ ಮಧುರೈ ಜಿಲ್ಲೆಯ ನ್ಯಾಯಾಲಯವು ಸೋಮವಾರ...

ಮೋದಿಯನ್ನು ಹತ್ತಿರದಿಂದ ಬಲ್ಲವರಿಂದ ವಿಮಾನ ಪ್ರಯಾಣದಿಂದ ದೂರವಿರುವಂತೆ ಎಚ್ಚರಿಕೆ : ಮಧು ಕಿಶ್ವರ್

ಗುಜರಾತ್ ದಿನಗಳಿಂದ ಮೋದಿಯವರನ್ನು ಹತ್ತಿರದಿಂದ ಕಂಡು ತಿಳಿದಿದ್ದ ಕೆಲವರು ತಮಗೆ ವಿಮಾನ ಪ್ರಯಾಣದಿಂದ ದೂರವಿರುವಂತೆ ಎಚ್ಚರಿಕೆ ನೀಡಿದ್ದಾರೆ ಎಂದು ಹಿಂದುತ್ವವಾದಿ ಲೇಖಕಿ ಮಧು ಕಿಶ್ವರ್ ಅವರು ಹೇಳಿದ್ದಾರೆ.ತಮ್ಮ ಅಧಿಕೃತ ಮೈಕ್ರೋಬ್ಲಾಗಿಂಗ್‌ ಖಾತೆ ಎಕ್ಸ್...

ಕೇರಳ ಚುನಾವಣೆ | 2021ರ ಭರವಸೆಗಳಲ್ಲಿ 97% ಈಡೇರಿಕೆ: ಎಲ್‌ಡಿಎಫ್ ಪ್ರಗತಿ ವರದಿ ಬಿಡುಗಡೆ

ಕೇರಳ ವಿಧಾನಸಭೆ ಚುನಾವಣೆಯ ಪ್ರಚಾರವು ಅಂತಿಮ ಹಂತಕ್ಕೆ ತಲುಪುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಮತದಾನ ನಡೆಯಲಿದೆ. ಇದಕ್ಕೂ ಮುನ್ನ ಆಡಳಿತಾರೂಢ ಎಲ್‌ಡಿಎಫ್ ಸೋಮವಾರ ತನ್ನ ಪ್ರಗತಿ ವರದಿಯನ್ನು ಬಿಡುಗಡೆ ಮಾಡಿದೆ. 2021ರಲ್ಲಿ ನೀಡಿದ...

ಕೇರಳ ಚುನಾವಣೆ | ಪ್ರಧಾನಿ ಮೋದಿ, ವಿಜಯನ್ ‘ದುರಹಂಕಾರಿಗಳು’ ಎಂದ ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು 'ದುರಹಂಕಾರಿಗಳು' ಎಂದು ಕಾಂಗ್ರೆಸ್ ನಾಯಕ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ. "ಇವರಿಬ್ಬರೂ ಜನರೊಂದಿಗೆ ಕೆಲಸ ಮಾಡುವ...

ದೆಹಲಿ ವಿಧಾನಸಭೆಯ ಬ್ಯಾರಿಕೇಡ್ ಮುರಿದು ನುಗ್ಗಿದ ಕಾರು; ಸ್ಪೀಕರ್ ಕಚೇರಿ ಬಳಿ ಹೂಗುಚ್ಛ ಇಟ್ಟು ಪರಾರಿಯಾದ ಮುಸುಕುಧಾರಿ

ದೆಹಲಿ ವಿಧಾನಸಭೆ ಆವರಣದಲ್ಲಿ ಸೋಮವಾರ ಮಧ್ಯಾಹ್ನ ಭಾರಿ ಭದ್ರತಾ ಲೋಪವೊಂದು ನಡೆದಿದ್ದು, ಮುಸುಕುಧಾರಿಯೊಬ್ಬ ಚಲಾಯಿಸುತ್ತಿದ್ದ ಕಾರು ಬ್ಯಾರಿಕೇಡ್‌ಗಳನ್ನು ಮುರಿದುಕೊಂಡು ಅತಿ ಭದ್ರತಾ ವಲಯದೊಳಗೆ ನುಗ್ಗಿದೆ. ಸ್ಪೀಕರ್ ಕಚೇರಿ ಬಳಿ ಹೂಗುಚ್ಛವೊಂದನ್ನು ಇರಿಸಿ, ಕ್ಷಣಾರ್ಧದಲ್ಲಿ...

14 ದಿನಗಳಲ್ಲಿ ಎವರೆಸ್ಟ್ ಬೇಸ್ ಕ್ಯಾಂಪ್‌ಗೆ ಸೈಕಲ್‌ನಲ್ಲಿ ತಲುಪಿದ ಮೊದಲ ಭಾರತೀಯ ಮಹಿಳೆ ದಿವ್ಯಾ ಸಿಂಗ್

ಉತ್ತರ ಪ್ರದೇಶದ ಗೋರಖ್‌ಪುರದ 28 ವರ್ಷದ ಶಿಕ್ಷಕಿ ದಿವ್ಯಾ ಸಿಂಗ್, ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ (ಇಬಿಸಿ) ಅನ್ನು ಸೈಕಲ್‌ನಲ್ಲಿ ತಲುಪಿದ ಮೊದಲ ಭಾರತೀಯ ಮಹಿಳೆ ಮತ್ತು ಜಾಗತಿಕವಾಗಿ ಎರಡನೇ ಮಹಿಳೆ ಎಂಬ...

ಬಂಗಾಳ ಚುನಾವಣೆ | ಪರಸ್ಪರ ದ್ವೇಷ ಭಾಷಣದ ಆರೋಪ: ಚುನಾವಣಾ ಆಯೋಗಕ್ಕೆ ಟಿಎಂಸಿ, ಬಿಜೆಪಿ ದೂರು

ಪಶ್ಚಿಮ ಬಂಗಾಳ ಚುನಾವಣೆಗೂ ಮುನ್ನ ಪ್ರಚಾರ ತೀವ್ರಗೊಳ್ಳುತ್ತಿದೆ. ಈ ನಡುವೆ ದ್ವೇಷ ಭಾಷಣ, ಬೆದರಿಕೆ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪವನ್ನು ಟಿಎಂಸಿ ಮತ್ತು ಬಿಜೆಪಿ ಪರಸ್ಪರ ಹೊರೆಸಿದೆ. ಈ ಸಂಬಂಧ ಚುನಾವಣಾ...

ʼಕೊಟ್ಟ ಹೆಣ್ಣೂ ಕುಲದವಳೇʼ | ವಿಚ್ಛೇದಿತ ಮಗಳನ್ನು ಅದ್ದೂರಿಯಾಗಿ ಬರಮಾಡಿಕೊಂಡ ನಿವೃತ್ತ ಜಡ್ಜ್!

ʼಕೊಟ್ಟ ಹೆಣ್ಣು ಕುಲಕ್ಕೆ ಹೊರಗೆʼ ಎನ್ನುವ ಅಲಿಖಿತ ನಿಯಮಕ್ಕೆ ಮೀರತ್‌ನ ಜ್ಞಾನೇಂದ್ರ ಶರ್ಮಾ ತಿಲಾಂಜಲಿ ಇಟ್ಟಿದ್ದಾರೆ. ಸಮಾಜಕ್ಕೆ ಹೆದರಿ ಮಗಳ ಕಣ್ಣೀರನ್ನು ನಿರ್ಲಕ್ಷಿಸುವ ಪೋಷಕರಿರುವ ಈ ಕಾಲದಲ್ಲಿ, ಮಗಳ ಸ್ವಾತಂತ್ರ್ಯವನ್ನು ಹಬ್ಬದಂತೆ ಆಚರಿಸುವ...

ಅರುಣಾಚಲ ಸಿಎಂ ಕುಟುಂಬಕ್ಕೆ 1,270 ಕೋಟಿ ರೂ. ಸರ್ಕಾರಿ ಗುತ್ತಿಗೆ: ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ

ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರ ಕುಟುಂಬ ಸದಸ್ಯರು ಮತ್ತು ಸಂಬಂಧಿಕರ ಒಡೆತನದ ಕಂಪನಿಗಳಿಗೆ ಸುಮಾರು 1,270 ಕೋಟಿ ರೂ. ಮೌಲ್ಯದ ಸರ್ಕಾರಿ ಕಾಮಗಾರಿಗಳ ಗುತ್ತಿಗೆಯನ್ನು ಅಕ್ರಮವಾಗಿ ಹಂಚಿಕೆ ಮಾಡಿರುವ ಗಂಭೀರ...

ತಮಿಳುನಾಡು ಚುನಾವಣೆ : ಬ್ರಾಹ್ಮಣರಿಗೆ ಟಿಕೆಟ್‌ ನೀಡದೆ ‘ವಂಚಿಸಿದ’ ಎಐಎಡಿಎಂಕೆ, ಬಿಜೆಪಿ  

ದ್ರಾವಿಡ ಚಳವಳಿಯ ಸುದೀರ್ಘ ಇತಿಹಾಸ ಕಂಡಿರುವ ತಮಿಳುನಾಡಿನಲ್ಲಿ ಇದೇ ಮೊಟ್ಟಮೊದಲ ಬಾರಿಗೆ ಎಐಎಡಿಎಂಕೆ ವಿಧಾನಸಭಾ ಚುನಾವಣೆಯಲ್ಲಿ ಬ್ರಾಹ್ಮಣ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೆ ಸ್ಪರ್ಧೆಗೆ ಸಜ್ಜಾಗಿದೆ. ಎಐಎಡಿಎಂಕೆ ರಾಜಕೀಯದ 35 ವರ್ಷಗಳ ಇತಿಹಾಸದಲ್ಲೇ ಇಂತಹದ್ದೊಂದು...

ಈ ಹೊತ್ತಿನ ಪ್ರಮುಖ ಸುದ್ದಿ