ಕೆ ಆರ್‌ ಪೇಟೆ ಸೀಮೆಯ ಕನ್ನಡ | ಸಿಟೀಲಿ ಕಾರ್ಮಿಕ್ರಂಗೆ ಅಳ್ಳೀಲೂ ಕೂಲಿಕಾರ್‍ರ ಸ್ರಮ ಈರ್ತರೆ

Date:

ಯಾರೋ ಒಬ್ಬ ಜಾಸ್ತಿ ಜಮೀನಿರೋದು, ಬೆಳೆ ಬೆಳ್ದಿರೋನು ಮನೆತಕ್ ಬಂದು, “ನಾಳೆ ನಮ್ ಒಲ್ದಲಿ ಕೆಲ್ಸ ಅದೆ. ಇಸ್ಟ್ ಜನ ಬಂದ್ಬುಡಿ,” ಅಂತ ಏಳ್ಬುಟ್ಟು ಓಯ್ತಾನೆ. ಕೂಲಿ ಮಾಡೊ ಒಂದಷ್ಟ್ ಜನ ವತ್ತಾರೆನೆ ಎದ್ದು, ಜಮೀನ್ ಕೆಲ್ಸುಕ್ಕೆ ಓಯ್ದಾರೆ. ಅವ್ರಲ್ಲಿ 50-60 ವಯ್ಸು ದಾಟಿರೋರು ಇರ್ತಾರೆ

ದೇಸ್ದಲ್ಲಿ ಕಾರ್ಮಿಕ್ರು ಸಂಕೆ ಜಾಸ್ತಿ. ಎಲ್ರು ಗೇಯ್ಮೆ ಮಾಡೇ ಬದುಕ್ಬೇಕು. ದೇಸುದ್ ಬೋಸಂಕ್ಯಾತ್ರು ಅವತ್ ದುಡ್ದು ಅವತ್ ತಿನ್ಬೇಕು ಅನ್ನೊ ಪರಿಸ್ಥಿತಿಲಿ ಬದುಕ್ತೌರೆ. ಸಿಟಿಗಳಲ್ಲಿ ಕಾರ್ಮಿಕ್ರು ಸ್ರಮ, ಸಕ್ತಿನೆಲ್ಲ ಬಂಡ್ವಾಳಿಗ್ರು ರಕ್ತ ಸಮೇತ ಈರ್ಕಳಂಗೆ ದುಡುಸ್ಕತರೆ. ಕೆಲ್ಸುದ್ ವರೆ ಜಾಸ್ತಿ, ಕೂಲಿ ಕಮ್ಮಿ – ಇದು ಇವತ್ತಿನ ವ್ಯವಸ್ತೆಲಿರೊ ಪರಿಸ್ಥಿತಿ.

ಅಂದಂಗೆ, ನಮ್ ದೇಸ ಹೆಚ್ಚಾಗಿ ಯುವಜನ್ರೇ ತುಂಬಿರೋ ದೇಸ. ಆದ್ರೆ, ಅವ್ರಲ್ಲಿ ಎಚ್ನೋರು ಕೆಲ್ಸ ಇಲ್ದೆ ಇರೊ ನಿರುದ್ಯೋಗಿಗಳು. ಎತ್ತೋರು ಸಾಲ-ಸೂಲ ಮಾಡಿ ಇಸ್ಕೂಲು, ಕಾಲೇಜ್ಕೆ ಪೀಜ್ ಕಟ್ಟಿ ಇಂಜಿನಿಯರ್ರು, ಎಂಎ, ಎಮ್ಮೆಸ್ಸಿ, ಎಂಕಾಮು ಅದೂ-ಇದೂ ಅಂತ ಓದುಸ್ತಾರೆ. ಓದಿ ಒಳ್ಳೆ ಮಾರುಕ್ಸ್‌ ತಕಂಡು ಪಾಸಾದ್ರುವೆ, ಐಕ್ಳುಗೆ ಕೆಲ್ಸ ಸಿಗಕಿಲ್ಲ. ಓದಿದ್ ತಕ್ನಾಗಿ ಕೆಲ್ಸ ಸಿಗ್ತಿಲ್ಲ. ಬೇರೆ ಏನಾದ್ರು ಮಾಡನ ಅಂದ್ರೆ ಮನ್ಸು ಒಪ್ಪಿಕ್ಕಿಲ್ಲ. ಮನ್ಸು ಒಪ್ಪುದ್ರು, ಬೇರೆ ಕೆಲ್ಸವೂ ಸಿಗಕಿಲ್ಲ. ಎಲ್ಲೋದ್ರು ಕೆಲ್ಸ ಇಲ್ಲ–ಕೆಲ್ಸ ಇಲ್ಲ ಅನ್ನೋ ಮಾತ್ಗಳು ಯುವ್ಜನ್ರುನ ಮನ್ಸಿಕ್ವಾಗಿ ಸಾಯಿಸ್ತಾವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅಂಗೂ ಇಂಗೂ ಮಾಡಿ ಯಾವ್ದೊ ಗಾರ್ಮೆಂಟೋ, ಫ್ಯಾಟ್ರಿಲೋ ಕೆಲ್ಸ ತಕಂಡ್ರೆ, ಅಲ್ಲಿ ಮಾಲಿಕ್ರು ಸ್ರಮನೆಲ್ಲ ಈರಿ ಇಪ್ಪೆಕಾಯಿ ಮಾಡ್ತಾರೆ. ಕಾರ್ಮಿಕ್ರೆಲ್ಲ ಸಂಘ ಕಟ್ಕಂಡು ಓರಾಟ ಮಾಡಿ, ಒಂದಷ್ಟು ಅಕ್ಕು ಪಡ್ಕಂಡು ಕೆಲ್ಸ ಮಾಡ್ತಾ ಜೀನ್ವ ಸಾಗುಸ್ತಾರೆ.

ಈ ನುಡಿಗಟ್ಟು ಕೇಳಿದ್ದೀರಾ?: ಮಾಲೂರು ಸೀಮೆಯ ಕನ್ನಡ | ರಾಜುಗನ ಬಂಗರ, ಕರಪ್ಪು ಚಾಟಿ

ಇನ್ನೊಂದ್ ಕಡೆ ಅಸಂಗಟಿತ ಕಾರ್ಮಿಕ್ರು ಅವ್ರೆ. ಅವ್ರ್ನ ಕ್ಯಾರೆ ಅನ್ನೋರೆ ಇಲ್ಲ. ಅವ್ರು ಕಸ್ಟ ಪಟ್ಟು, ಮೈ ದಂಡ್ಸಿ ದುಡ್ದು ಬದುಕ್ತೌರೆ. ಆದ್ರೆ, ಇದುವರ್ಗು ಯಾರ್ ಕಣ್ಗು ಅವ್ರ ಕಾರ್ಮಿಕ್ರ ಅಂತ್ಲೆ ಕಾಣುಸ್ತಳ್ತದೆ, ದುಡುದ್ ಬದುಕ್ತಿರೋರು ಅಳ್ಳಿಲಿ ಕೂಲಿ ಮಾಡ್ಕೊಂಡ್ ಬದುಕ್ತಿರೋರು. ಅಳ್ಳಿಲಿ ಮನ್ರೇಗಾ ಯೋಜ್ನೆ ಕೆಳ್ಗೆ ದುಡಿಯೋರ್ನ ‘ಮನ್ರೇಗಾ’ ಕಾರ್ಮಿಕ್ರು ಅಂತಾರೆ. ಆದ್ರೆ, ಮನ್ರೇಗಾಗೂ ಹೆಸ್ರು ಕೊಡ್ದೆ, ಇನ್ನೊಬ್ರು ಒಲ-ಗದ್ದೆಲಿ ದುಡಿತಿರೊರು ಅವ್ರೆ. ಅವ್ರು ಕೂಲಿ ಕಾರ್ಮಿಕ್ರೆ. ಅವ್ರ್ಗೆ ಸಂಗ ಇಲ್ಲ ಏನೂ ಇಲ್ಲ.

ಯಾರೋ ಒಬ್ಬ ಜಾಸ್ತಿ ಜಮೀನಿರೋದು, ಬೆಳೆ ಬೆಳ್ದಿರೋನು ಮನೆತಕ್ ಬಂದು, “ನಾಳೆ ನಮ್ ಒಲ್ದಲಿ ಕೆಲ್ಸ ಅದೆ. ಇಸ್ಟ್ ಜನ ಬಂದ್ಬುಡಿ,” ಅಂತ ಏಳ್ಬುಟ್ಟು ಓಯ್ತಾನೆ. ಕೂಲಿ ಮಾಡೊ ಒಂದಷ್ಟ್ ಜನ ವತ್ತಾರೆನೆ ಎದ್ದು, ಜಮೀನ್ ಕೆಲ್ಸುಕ್ಕೆ ಓಯ್ದಾರೆ. ಅವ್ರಲ್ಲಿ 50-60 ವಯ್ಸು ದಾಟಿರೋರು ಇರ್ತಾರೆ. ಅವ್ರೂ ತಮ್ ಜೀವ್ನ ಸಾಗ್ಸಕೆ ಅಂತ ದುಡ್ದು ತಿನ್ಬೇಕಾದ್ ಪರಿಸ್ಥಿತಿ ಎದ್ರುಸ್ತಿರ್ತಾರೆ. ಅಂಗಾಗಿ, ದುಡಿಲೇಬೇಕದ್ ಅನಿವಾರ್ಯತೆ ಅವ್ರು.

ಅವ್ರೆಲ್ಲ ಒಲ-ಗದ್ದೆಗೆ ಓಯ್ತಿದಂಗೆ ರೊಬೊಟ್‌ಗಳಂಗೆ ಕೆಲ್ಸ ಮಾಡ್ಬೇಕು. ಉದಾರ್ಣೆಗೆ, ಬತ್ತ ಗದ್ದೆ ನಾಟಿ ಮಾಡಕೆ ಓದೋರು. ಗದ್ದೆಗೆ ಇಳಿತಿದ್ದಂಗೆ ಕೆಲ್ಸ ಸುರು ಮಾಡ್ಬೇಕು. ಬತ್ತುದ್ ಗದ್ದೆ ಅಂದ್ರೆ, ಕೆಸ್ರು ಗದ್ದೆ ಅಂತ್ಲೇ ಅರ್ತ. ಗದ್ದೆಲಿ ಕಾಲ್ ಆಕುದ್ರೆ, ಮೊಣ್ಕಾಲ್ವರ್ಗು ಕಾಲು ಗದ್ದೆಲಿ ಊತೋಯ್ತದೆ.

ಈ ನುಡಿಗಟ್ಟು ಕೇಳಿದ್ದೀರಾ?: ಹೊನ್ನಾಳಿ ಸೀಮೆಯ ಕನ್ನಡ | ನನ್ ಬಾಯ್ಮಾತ್ ಯಾರ್ಕೆಳ್ತಾರಾ…

ಅಂತ ಗದ್ದೆಲಿ, ಇಂದೆ-ಮುಂದೆ ನೋಡ್ದೆ ಪಟ-ಪಟ ಅಂತ ಅಜ್ಜೆ ಆಕ್ತಾ, ನಾಟಿ ಮಾಡ್ತಾ ಓಗ್ಬೇಕು. ಕೆಸ್ರಲ್ಲಿ ಕಾಲ್ ಎತ್ತಿ-ಆಗಿ ಮಾಡೋದ್ರಲ್ಲಿ, ಕಾಲು-ಸೊಂಟ ಎಲ್ಲ ಬಿದ್ದೋಯ್ತವೆ. ಆದ್ರೂ, ಅವ್ರು ಒಂದ್ ನಿಮ್ಸ ತಲೆ ಎತ್ತಿ ನಿತ್ಕೊಂಡ್ ಸುದ್ರಾಯಿಸ್ಕಳಕು ಆಗಲ್ಲ. ಯಾರಾದ್ರೂ ವಸಿ ದಣಿವಾರುಸ್ಕಳನ ಅಂತ ನಿತ್ಕಂಡ್ರೆ, ಇಂದೆಯಿಂದ ಮಾಲೀಕ, ಬೇಗ ಬರ್‍ರಮ್ಮ-ಬರ್‍ರಯ್ಯ ಅಂತ ಕೂಕತಾರೆ. ‘ಮಾಡ್ರನ್ ಟೈಮ್ಸ್’ ಸಿನ್ಮಾದಲ್ಲಿ ಚಾರ್ಲಿ ಚಾಪ್ಲಿನ್ ತೋರ್ಸಿರೊ ಅಂಗೆ ಈ ಕೂಲಿ ಮಾಡೊ ಜನ ಕೆಲ್ಸ ಮಾಡ್ತರೆ.

ಅವ್ರ್ಗೆಲ್ಲ ಕಾಪಿ-ಟೀ ಅಂತೆಲ್ಲ ಬಿಡ್ವು ಇರಕಿಲ್ಲ. ಬೆಳ್ಗೆ ಬಂದ್ ಕೆಲ್ಸ ಸುರು ಮಾಡುದ್ರೆ, ಇನ್ನು ಮದ್ಯಾನ ಊಟುದ್ ಟೇಮ್‌ಗೆ ಬಿಡ್ವು ಸಿಗದು. ಒಂದರ್ದ ಗಂಟೆ ಊಟ ಮಾಡಿ, ಸುದ್ರಾಯ್ಸ್ಕಂಡು, ಮತ್ತೆ ಕೆಲ್ಸ ಸುರು ಮಾಡ್ಬೇಕು. ಸುರುವಾದ್ರೆ ಮುಗೀತು, ಇನ್ನೋ ಸಂಜೆವರ್ಗು ಕೆಲ್ಸ ಮಾಡ್ತಾ ಓಡ್ಬೇಕು. ಯಾರಾನಾ ಒಲುದು ಮಾಲಿಕ ಸ್ವಲ್ಪ ಉದಾರವಾದಿ ಆಗಿದ್ರೆ, ಸಂಜೆ  ನಾಗಂಟೆ ಟೇಮ್ಗೆ ಒಂದ್ ಟೀ ಕೊಡ್ಬೋದು. ಅಗ ಒಂದ್ ಐದ್ ನಿಮ್ಸ ಪ್ರೀ ಸಿಗ್ತದೆ.

ಇಂಗೆ ಅಳ್ಳಿಲಿ ಕೂಲಿ ಮಾಡೋ ಜನ ಅತ್ ಗಂಟೆಗೆ ಕೆಲ್ಸ ಸುರು ಆದ್ರೆ, ಸಂಜೆ ಆರು-ಆರುವರೆ ಗಂಟೆವರ್ಗು ರೊಬೊ ತರ ಕೆಲ್ಸ ಮಾಡ್ತರೆ. ಅವ್ರ್ಗೆ ಯಾವ್ ಅಕ್ಕು, ಸೌಲಬ್ಯಗಳು ಇಲ್ಲ, ಏನೂ ಇಲ್ಲ. ಮಾಲಿಕ ಕೊಡೊ ಊಟ್ವೆ ಅಕ್ಕು–ಅವ್ರು ಕೊಡೊ ಟೀನೇ ಸೌಲಬ್ಯ.

ಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. ಮಾಲೀಕ ಅಲ್ಲ…..ಒಡೆಯ ಕನ್ನಡ ಮಾತು/ಪದ

    ಸೆಲೆ: ಇಂಗ್ಲೀಶ್ ಕನ್ನಡ ಪದನೆರಕೆ( ಶಂಕರಬಟ್)

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಂಜನಗೂಡು ಸೀಮೆಯ ಕನ್ನಡ | ‘ನಮ್ಮೆಣ್ಣು ಬಾರಿ ಒಳ್ಳೆದು ಕಣ, ಆಸ್ತಿ ಬ್ಯಾಡಾಂತ ಸೈನ್ ಆಕೊಡ್ತದ!’

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಕಲಬುರಗಿ ಸೀಮೆಯ ಕನ್ನಡ | ನಂಗಂತೂ ಅತ್ತಿ ಹೇಳದೂ ಖರೆ ಅನಸ್ತದ, ಸೊಸಿ ಹೇಳದೂ ಖರೆನೇ ಅನಸ್ತದ!

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಬೀದರ್ ಸೀಮೆಯ ಕನ್ನಡ | ವಯಸ್ಸೀಗಿ ಬಂದ್ ಮ್ಯಾಲ ಎಲ್ಲರಿಗಿ ಲವ್ ಆಯ್ತದ್; ಆಗಿಲ್ಲಾಂದ್ರ…?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...