ಮಾಲೂರು ಸೀಮೆಯ ಕನ್ನಡ | ಮುಂತಾಯಕ್ಕನ ಸೊಸೆಯ ತಾನದ ಪ್ರಸಂಗ

Date:

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)

ಶಿನ್ಶ್ಯಾಮನು ಬರ್ತಾ ದಾರಿಯಲ್ಲಿ ಸಂಪಂಗಿ ದುಕಾನಾಕ ಜಾಂಗ್ರಿ ಪೊಟ್ಟಣ ಕಟ್ಟಿಸಿ ನಿಕ್ಕರ್ ಜೇಬಿನಾಗ ಇಟ್ಟು ಲುಂಗಿನ ಕೆಳಕ್ಕೆ ಬಿಟ್ಟುಕೊಂಡ. ಮಕದ ಮೇಲೆ ನಗ ಮೂಡ್ತು. ಮನ್ತಾಕ ಬಂದು ನೋಡ್ತಾನೆ ಅಲಮೇಲು ಹೊರಗೆ ಕುಂತವಳೆ...!

ಮಿನಸಂದ್ರದ ಮುಂತಾಯಕ್ಕನುಕ ಮೂರು-ಮೂರು ಮಕ್ಕಳಾದ್ರೂ ಕೊನ್ಕ್ಯಾ ಪಾಣ ಉಳಿಸಿಕೊಂಡಿದ್ದು ಶಿನ್ಶ್ಯಾಮನು ಮಾತ್ರ. ಅವನು ಅಪ್ಪ ಸತ್ತ ಮ್ಯಾಲೆ ಹುಟ್ಟಿದ್ದು ಅಂತಾರೆ ಊರಾಗ. ಇದ ಕೇಳಿದಾಗ ಮುಂತಾಯಕ್ಕನ ಮಕದಾಗ ನೆರಪು ಭಗ್ ಅಂತದೆ. ಅಂದವರ ಗಾಚಾರ ಸರೀಗಾ ಬಿಡಿಸೊಳು ಹಾಗೆಲ್ಲಾ.

ಶಿನ್ಶ್ಯಾಮನು ಅಲ್ಲಿಇಲ್ಲಿ ಪೆರಕಿ ತಿಂದು ಸಮ ಮೀಸೆ ಬೆಳೆದ ಗಂಡಾಳು ಆದನು. ಊರಾಗ ಕೂಲಿ ನಾಲಿಕಾ ರವಷ್ಟೂ ಕೊರೆ ಇರಲಿಲ್ಲ. ಅವನು ಕೂಲಿನ ಅವ್ವನುಕುಟ್ಟೆ ಕೊಟ್ಟು ತನ್ ಕರ್ಚ್ಕ ಎಷ್ಟ್ ಬೇಕೋ ಅಷ್ಟ ಕಿತ್ಕಿತಾನೂ ಕೇಳಿ ಇಸ್ಕಕೊಳ್ಳೊಣು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇಂಗೆ ದಿನಗಳು ಸರ್ ಸರಾ-ಸರ್ ಸರಾ ಅಂತ  ಹೋಗ್ತಾ ಇದ್ವು. ಇಂತಾ ಒಂದು ದಿನದಾಗ ಮುಂತಾಯಕ್ಕನುಕ ಮಗನುಕ ಮದುವೆ ಮಾಡಬೇಕು ಅಂತ ಆಸೆ ಮೊಳಿತು. ಅಪ್ಪನು ಇಲ್ಲದ ಮಗ ಈ ಶಿನ್ಶ್ಯಾಮನು ಅಂತ ಊರಾಗ ಟಾಕಿತ್ತು. ಆದರೂ ಮುಂತಾಯಕ್ಕನುಕ ದುಡ್ಡು-ಕಾಸು ಜೋರಾಗಿ ಮಡಗಿದ್ದರಿಂದ ಎದಿವಿರುವ ಮಗನ ಕಲ್ಯಾಣುಕ ಶಿರಿಕಿಗಳು ಕೊರೆ ಬೀಳಲಿಲ್ಲ.

ಹಿಂಗಾಗಿ, ಮುಂತಾಯಕ್ಕನುಕ ಸೊಸಿಯಾಗಿ, ಶಿನ್ಶ್ಯಾಮನುಕ ಹೆಂಡ್ರಾಗಿ ಬಂದವಳೆ ಅರಸನಹಳ್ಳಿಯ ಅಲಮೇಲು. ಅವಳು ಸಣ್ಣಕ, ಕೆಂಪುಕ ಇದ್ದುದು ಮುಂತಾಯಕ್ಕನುಕ ಮೊದಲು ಕೋಡು ಹುಟ್ಟಿಸಿತ್ತು. ಆದ್ರೆ, ಆಮ್ಯಾಕಾಮ್ಯಾಕ ತನ್ತಾವ ಇಲ್ಲದ್ದು ಇವಳತಾವ ಅದೆ ಅಂತ ಅವಳುಕ ಭಗ್ ಅಂತು. ಸೊಸಿ ಕುಂತರೆ-ನಿಂತರೆ, ಆಡಿದ್ರೆ- ಆಡದಿದ್ದರೆ, ಬಂದ್ರೆ-ಹೋದ್ರೆ ಇಲ್ಲೆಲ್ಲಾ ಮಿಸ್ಟೇಕು ಫತ್ತಾ ಮಾಡಿ, ಅವಳುಕ ಅರಸನಹಳ್ಳಿ ಅಪ್ಪ ಕಲಿಸದ ವಾಣಿನಾ ಸರಿಯಾಗಿ ಕಲಿಸಿದ್ಲು.

ಮದುವೆ ಆಗಿ ಮೊದಲ ಮಾಸ. ಗೂದೆ ಕಾಯಿ ಕೀಳುವ ಕೂಲಿ ಕೆಲಸಕ್ಕ ಶಿನ್ಶ್ಯಾಮನು ಹೋಗಿದ್ದ. ಅದೇನು ಪಿಲೇಕಿ ಬಂತೋ ಏನೋ ಗೂದೆ ಕಾಯಿ ಅವತ್ತು ಕೀಳೋದು ತಪ್ಪೋಯ್ತು. ಶಿನ್ಶ್ಯಾಮನು ಬರ್ತಾ ದಾರಿಯಲ್ಲಿ ಸಂಪಂಗಿ ದುಕಾನಾಕ ಜಾಂಗ್ರಿ ಪೊಟ್ಟಣ ಕಟ್ಟಿಸಿ ನಿಕ್ಕರ್ ಜೇಬಿನಾಗ ಇಟ್ಟು ಲುಂಗಿನ ಕೆಳಕ್ಕೆ ಬಿಟ್ಟುಕೊಂಡ. ಮಕದ ಮೇಲೆ ನಗ ಮೂಡ್ತು.

ಮನ್ತಾಕ ಬಂದು ನೋಡ್ತಾನೆ ಹೊರಗೆ ಅಲಮೇಲು ಕುಂತವಳೆ. “ಇದ್ಯಾಕಮ್ಮಿ ಇಲ್ಲಿ ವರಗಿದ್ದಿಯಾ?” ಅಂತ ಕೇಳಲಾಗಿ, ಅವಳು, “ತಾನದ ಟೈಮು ಮಾಮೋ…” ಅಂದಳು. “ಸರಿ, ಏನಾದ್ರೂ ಕೊಟ್ಲ ಅವ್ವ?” ಅಂದುದುಕ, “ಏನೂ ಇಲ್ಲ. ತಾನ ಆಗೋಗಂಟ ನೀರೂ ಮುಟ್ಟಬೇಡ ಅಂದವಳೇ…” ಅಂದಳು. ಶಿನ್ಶ್ಯಾಮನ ಎದೆ ಧಸಕ್ ಅಂತು. ಟೈಮು ನೋಡಿದ್ರ ಆಗಲೇ ಮಟ ಮಟ ಮಧ್ಯಾನು ಆಗದ, ನೀರೂ ಸೋಕಿಸಿಲ್ಲ ಅಂದ್ರ… ಅವ್ವನ ಮ್ಯಾಲೆ ಅವನುಕ ರೋಷ ಉಕ್ತು. ಸೀದಾ ಒಳಕ್ಕೆ ಹೋಗಿ, “ಅವ್ವೋ… ಇದ್ಯಾನ ಮಾಡಿದೆ ನೀನು?” ಅಂದ. “ಕೇಳಿಸಿಕಂಡೆ ಕಂದಾ… ನೀನು ಆ ಸುಪನಾತಿ ತಾವ ಉಯ್ಯಾಲೆ ಆಡ್ತಾ ಇದ್ದುದ. ಮೂರು ದಿನ ತಾನ ಆಗದೆ ಮನೆ ಒಳಕ್ಕೆ ಬರೋದಿರಲಿ, ನೀರಿನ ಗ್ಲಾಸೂ ಸೋಕಿಸ್ಕೊಬಾರ್ದು, ಇದು ಪಬ್ತಿ,” ಅಂದು ಸಿರಕ್ಕನೆ ರೇಗಿ, “ಹೆಂಗಸರ ವೇವಾರ ನಿಂಗ್ ಯಾಕಪ್ಪ?” ಅಂತ ಅವನ ಬಾಯಿ ಮುಚ್ಚಿಸಿದಳು. 

ಆಚೆಗೆ ಬಂದ ಶಿನ್ಶ್ಯಾಮನ ಮಕ ಸಪ್ಪೆ ಬಿದ್ದಿತ್ತು. ಲುಂಗಿ ನಿಕ್ಕರಾಗ ಜಾಂಗ್ರಿ ಅದ. ಈಗ ಅದ ಹೆಂಡ್ರುಕ ಕೊಡಬೇಕೋ ಬ್ಯಾಡವೋ ತಿಳಿದೇ ಒದ್ದಾಡ್ದ.

ಸಂಜೆ ತಾನ ಆದಮ್ಯಾಲೆ, ಅಲಮೇಲು ಅನ್ನ-ಸಾರು ಉಣ್ಣುವಾಗ ಅತ್ತೆಮ್ಮ ಕೇಳಿದ್ಲು, “ಅಲಮೇಲು… ತಾನ ಲೇಟಾಯ್ತು ಅಂತ ಬೇಜಾರ್ ಆಯ್ತಾ? ಸುಸ್ತಾಯ್ತೇನೆ?” 

“ಇಲ್ಲಿನ ಪಬ್ತಿ ಇಂಗೇ. ಬೇಜಾರ್ ಯಾಕೆ?”

ಅತ್ತೆ ನಕ್ಕಳು.

“ನನ್ ಗಂಡ ಇಂತ ಟಯಾನಾಗ ಕದ್ದುಮುಚ್ಚಿ ಏನಾದ್ರೂ ತಂದುಕೊಡೋನು. ನಮ್ ಅತ್ತೆ ಕಾಗೆ ತರ. ಇಂತದ್ದ ನೋಡಿದ್ರೆ  ಕಾ…ಕಾ… ಅಂತ ಅರುಚೋಳು. ಇವನು ಮಾತ್ರ ಬಲಂತ್ರ ಮಾಡಿ ಏನಾದ್ರೂ ತಂದುಕೊಡೋನು…”

ಅಲಮೇಲು, “ನಿಮ್ ಮಗ ಜಾಂಗ್ರಿ ತಂದಿತ್ತು…” ಮೆಲ್ಲ ಉಲಿದಳು – ಗುಮ್ಮನಗುಸಕದಂಗೆ.

“ತಿಂದ್ಯಾ?”

ಅಲಮೇಲು ಪಲುಕಿದ್ದರೆ ಆಣೆ.

“ನೋಡ್ದೆ ಬಿಡೆ!”

ಈಗ ಅಲಮೇಲು ಮಕದಾಗ ನಗ ಮೂಡ್ತು.

“ಹಿಂದ ಕಾಲದವರು ತಮಗೆ ತಿಳಿದಂತೆ ಪಬ್ತಿಗಳ ಮಾಡ್ತಾರೆ. ನಾವುಗಳು ಅದರ ಮಧ್ಯಾಗ ಬಾಳ್ವೆ ಮಾಡಬೇಕು ಅಂದ್ರ ಇಂತ ದಾರಿಗಳು ಕಂಡುಕೋಬೇಕು,” ಅತ್ತೆ ಸೋಸಿಕಾ ಹೇಳಿದ್ಲೋ ಅಥವಾ ತನಗೇ ಹೇಳಿಕೊಂಡ್ಲೋ, ಅಲಮೇಲುಕ ತಿಳಿಲಿಲ್ಲ.

ರಾತ್ರಿ ಬಂದ ಮಗರಾಯನುಕ ಅವ್ವನು ತಗಲಿಕೊಂಡ್ಲು. “ತಾನ ಆಗದೆ ನೀರಿನ ಗ್ಲಾಸೂ ಸೋಕಿಸಬಾರ್ದು ಅಂತ ನಮ್ ಕಡೆ ಪಬ್ತಿಗಳು ಅವೆ. ನೀ ನೋಡಿದ್ರೆ ಲುಂಗಿನಾಗ ಜಾಂಗ್ರಿ ತಂದು ಅವಲುಕ ಕೊಟ್ಟಂತೆ. ಇದ ಸರಿನಾ? ಪಬ್ತಿಗಳು ಉಳಿತಾವ ಹಿಂಗೇ ಆದರೆ?” 

ಮಗ ತಲೆ ಕೆರ್ಕಂಡು ಹೆಂಡ್ರು ತೊಟ್ಟು ನೋಡಿದ.

ಅವಳ ಮಕದಗ ನಗ. ಮಗ ಈಗ ಅವ್ವನ ತೊಟ್ಟು ನೋಡಿದ. ಅವಳ ಮಕದಾಗೂ ಈಗ ನಗ ಅಲೆ-ಅಲೆಯಾಗಿ ಹರೀತಿತ್ತು.

ಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ಪೋಸ್ಟ್ ಹಂಚಿಕೊಳ್ಳಿ:

ಆನಂದ್ ಗೋಪಾಲ್
ಆನಂದ್ ಗೋಪಾಲ್
ಕತೆ, ಕವಿತೆ ಅಂತ ಆಗಾಗ ಕಳೆದುಹೋಗುವ ಆನಂದ್, ಕನ್ನಡ ಮೇಷ್ಟ್ರು. ಏಸೂರು ತಿರುಗಿದರೂ ತನ್ನೂರ ಭಾಷೆಯನ್ನು ಗಟ್ಟಿ ತಬ್ಬಿ ಹಿಡಿದ ಮನುಷ್ಯ. ಕೋಲಾರ ಜಿಲ್ಲೆಯ ಮಾಲೂರು ಪ್ರಾಂತ್ಯದ ದೇಸಿ ನುಡಿಗಟ್ಟಿನ ಸೊಗಡು ತಿಳಿಯಬೇಕು ಅಂದರೆ, ಆನಂದ್‌ ಮಾತಿಗೆ ಕಿವಿಯಾಗಬೇಕು.

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಂಜನಗೂಡು ಸೀಮೆಯ ಕನ್ನಡ | ‘ನಮ್ಮೆಣ್ಣು ಬಾರಿ ಒಳ್ಳೆದು ಕಣ, ಆಸ್ತಿ ಬ್ಯಾಡಾಂತ ಸೈನ್ ಆಕೊಡ್ತದ!’

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಕಲಬುರಗಿ ಸೀಮೆಯ ಕನ್ನಡ | ನಂಗಂತೂ ಅತ್ತಿ ಹೇಳದೂ ಖರೆ ಅನಸ್ತದ, ಸೊಸಿ ಹೇಳದೂ ಖರೆನೇ ಅನಸ್ತದ!

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಬೀದರ್ ಸೀಮೆಯ ಕನ್ನಡ | ವಯಸ್ಸೀಗಿ ಬಂದ್ ಮ್ಯಾಲ ಎಲ್ಲರಿಗಿ ಲವ್ ಆಯ್ತದ್; ಆಗಿಲ್ಲಾಂದ್ರ…?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...