ಈ ದಿನ ಸಂಪಾದಕೀಯ | ಮೋಶಾ ವಚನಭಂಗ ಕಾಕ್ರೋಚ್ ಕಿಚ್ಚು ಹೊತ್ತಿಸೀತು ಎಚ್ಚರ!

Date:

ದೇಶದಲ್ಲಿ ನೆಲೆಸಿರುವ ಸರ್ವಾಧಿಕಾರಿ ಧೋರಣೆಯ ಭಯದ ಪರದೆಯನ್ನು ಹರಿದಿರುವುದು ಕಾಕ್ರೋಚ್ ಜನತಾ ಪಾರ್ಟಿಯ ಅಡಿಯಲ್ಲಿ ನಡೆದ ಆಂದೋಲನದ ಬಹುದೊಡ್ಡ ಆರಂಭಿಕ ಸಾಧನೆ. ಇಂತಹುದೇ ಆದ ಎರಡನೆಯ ಸಾಧನೆಯೆಂದರೆ ಸರ್ವಾಧಿಕಾರಿ ನೇತೃತ್ವದ ತುತ್ತು ತುದಿಯಲ್ಲಿರುವ ವ್ಯಕ್ತಿಗಳ ಸುತ್ತ ಕಟ್ಟಲಾಗಿದ್ದ ‘ಮಾಂತ್ರಿಕ ನಿಗೂಢತೆ’ಯ ಗುಳ್ಳೆಯನ್ನು ಒಡೆದಿರುವುದು.

- Advertisement -

ಯುವಜನರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ ಇದೇ ಸೆಪ್ಟೆಂಬರ್ 5 ರಂದು ನವದೆಹಲಿಯಲ್ಲಿ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಲಿದೆ. ಮೋದಿ-ಶಾ ಸರ್ಕಾರದ ವಚನ ಭಂಗದ ವಿರುದ್ಧ ಯುವಜನರ ಆಕ್ರೋಶಕ್ಕೆ ಮಾತು ನೀಡಲಿರುವ ಪ್ರತಿಭಟನೆಯಿದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಈ ಸಲ ಇಂಡಿಯಾ ಗೇಟ್‌ನಿಂದ ದೆಹಲಿ ಪೊಲೀಸ್ ಪ್ರಧಾನ ಕಚೇರಿಯವರೆಗೆ ಈ ಬೃಹತ್ ರ‍್ಯಾಲಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ದಮನ ದೌರ್ಜನ್ಯ ಅಟ್ಟಹಾಸ ನಿರ್ಲಕ್ಷ್ಯ ಧೋರಣೆಗೆ ಯುವ ಸಮುದಾಯ ನೀಡುತ್ತಿರುವ ನೇರ ಎಚ್ಚರಿಕೆ ಈ ಪ್ರತಿಭಟನೆ. ಕಳೆದ ಜುಲೈನಲ್ಲಿ ವಿಶೇಷವಾಗಿ ದೆಹಲಿಯಲ್ಲಿ ಭುಗಿಲೆದ್ದಿದ್ದ ಶಾಂತಿಯುತ ಯುವಜನ ಆಂದೋಲನದ ಎದುರು ಮೂರು ವಾರಗಳ ನಂತರ ಮಂಡಿಯೂರಿತ್ತು ಮೋದಿ ಸರ್ಕಾರ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಲೇಬೇಕಾಗಿ ಬಂದಿತ್ತು. ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾದ ನೀಟ್ (NEET-UG) ಪರೀಕ್ಷೆ ಅಕ್ರಮಗಳ ಹಿನ್ನೆಲೆಯಲ್ಲಿ ಪ್ರಧಾನ್ ಕಡೆಗೂ ಕೆಳಗಿಳಿದಿದ್ದರು.

ಜುಲೈ 25 ರ ಸಂಧಾನ ಸಭೆಯಲ್ಲಿ, ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯುವುದಾಗಿ ಸರ್ಕಾರ ಭರವಸೆ ನೀಡಿತ್ತು ತರುವಾಯ ಒಂದು ತಿಂಗಳು ಉರುಳಿದರೂ ಸರ್ಕಾರ ಯಾವುದೇ ಗಂಭೀರ ಕ್ರಮ ಕೈಗೊಂಡಿಲ್ಲ. ಬದಲಿಗೆ 2,700ಕ್ಕೂ ಹೆಚ್ಚು ಎಫ್‌ಐಆರ್‌ಗಳನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂಬ ನಿಲುವು ತಳೆದಿರುವುದು ಯುವಜನರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. ಸರ್ಕಾರದ ಈ ಧೋರಣೆಯನ್ನು ‘ವಿಶ್ವಾಸಘಾತ’ ಎಂದು ಸಿಜೆಪಿ ಕರೆದಿರುವುದು ಸರಿಯಿದೆ.

ನೀಟ್ ಪರೀಕ್ಷೆಯ ವ್ಯವಸ್ಥಿತ ಭ್ರಷ್ಟಾಚಾರಕ್ಕೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಗರಿಷ್ಠ ಆರ್ಥಿಕ ನೆರವು ಮತ್ತು ತಕ್ಷಣ ಪರಿಹಾರ ಒದಗಿಸಲಬೇಕಿತ್ತು. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ? ಯಾವ ಸಾಕ್ಷ್ಯ ಪುರಾವೆಗಳಿಗಾಗಿ ಕಾದು ಕುಳಿತಿದ್ದಾರೆ ಮೋದಿ ಮತ್ತು ಅಮಿತ್ ಶಾ? ತನ್ನ ತಪ್ಪುಗಳು ವೈಫಲ್ಯಗಳನ್ನು ಮುಚ್ಚಿ ಹಾಕಲು ವಿದ್ಯಾರ್ಥಿಗಳನ್ನು ಬಲಿಪಶುಗಳನ್ನಾಗಿಸುವುದು ದುಷ್ಟತನ. ಕೇವಲ ಹಣಕಾಸಿನ ನೆರವಿಗಾಗಿ ಅಲ್ಲದೆ, ಸರ್ಕಾರದ ತಪ್ಪು ನಡೆಗಳಿಂದ ನೊಂದ ಜೀವಗಳಿಗೆ ಸಿಗಬೇಕಾದ ಕನಿಷ್ಠ ನ್ಯಾಯವಿದು.

ಜುಲೈ 20 ರಂದು ಶಾಂತಿಯುತ ಪ್ರತಿಭಟನೆ ನಡೆಸಿದ್ದ ಯುವಜನರ ಮೇಲೆ ಪೊಲೀಸರು ನಡೆಸಿದ ಬಲಪ್ರಯೋಗ ಮತ್ತು ಬರ್ಬರ ಬೆತ್ತಪ್ರಹಾರ ಎಸಗಿ ದೌರ್ಜನ್ಯ ನಡೆಸಿದ ಅಧಿಕಾರಿಗಳನ್ನು ತಕ್ಷಣ ಅಮಾನತುಗೊಳಿಸಬೇಕು. ಯುವಜನರ ಮೇಲೆ ಹೂಡಿರುವ ಕೇಸುಗಳನ್ನು ಬೇಷರತ್ತಾಗಿ ವಾಪಸು ಪಡೆಯಬೇಕು. ದೇಶದ ನಾನಾ ರಾಜ್ಯಗಳಲ್ಲಿ ವಿದ್ಯಾರ್ಥಿ ಮುಂದಾಳುಗಳು ಮತ್ತು ಯುವಜನರ ಮೇಲೆ ದಾಖಲು ಮಾಡಿಕೊಂಡಿರುವ ಎಲ್ಲ ರಾಜಕೀಯ ಪ್ರೇರಿತ, ಸುಳ್ಳು ಎಫ್‌ಐಆರ್‌ಗಳನ್ನು ತಕ್ಷಣವೇ ರದ್ದುಗೊಳಿಸುವುದಾಗಿ ನೀಡಿದ್ದ ವಾಗ್ದಾನವನ್ನು ಮೋದಿ- ಶಾ ಸರ್ಕಾರ ಈಡೇರಿಸಿಲ್ಲ.ಶಾಂತಿಯುತ ಪ್ರತಿಭಟನೆಯು ಪ್ರಜೆಗಳ ಸಾಂವಿಧಾನಿಕ ಹಕ್ಕು. ಕಾಕ್ರೋಚ್ ಜನತಾ ಪಾರ್ಟಿ ಯುವ ಸಮುದಾಯವನ್ನು ಒಗ್ಗೂಡಿಸಿ ಶಾಂತಿಯುತವಾಗಿ ವ್ಯವಸ್ಥಿತ ಹೋರಾಟ ನಡೆಸಿರುವುದು ಪ್ರಶಂಸನೀಯ

ಜುಲೈ 20 ರಂದು ಜಂತರ್ ಮಂತರ್‌ನಿಂದ ಶುರುವಾದ ನಡೆದ ‘ಚಲೋ ಸಂಸದ್’ ಪ್ರತಿಭಟನೆಯಲ್ಲಿ ಪೊಲೀಸರ ದೌರ್ಜನ್ಯ ಬಲಪ್ರಯೋಗ ಮತ್ತು ಬರ್ಬರ ಬೆತ್ತಪ್ರಹಾರ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಉನ್ನತಾಧಿಕಾರ ತನಿಖಾ ಸಮಿತಿಯನ್ನು ರಚಿಸಿದೆ. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್. ಸುಭಾಷ್ ರೆಡ್ಡಿ ಅವರು ಈ ಸಮಿತಿಯ ಮುಖ್ಯಸ್ಥರಾಗಿರುತ್ತಾರೆ. ಜುಲೈ 20 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳಾ ಪ್ರತಿಭಟನಾಕಾರರ ಮೇಲೆ ನಡೆದ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯದ ದೂರುಗಳನ್ನು ಮೊದಲ ಆದ್ಯತೆಯ ಮೇರೆಗೆ ತನಿಖೆ ನಡೆಸುವಂತೆ ಸುಪ್ರೀಮ್ ಕೋರ್ಟು ಸಮಿತಿಗೆ ಸೂಚಿಸಿದೆ. ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಬಳಸಿದ ಪೆಲೆಟ್ ಗನ್‌ಗಳು, ಪೆಟ್ಟಿನ ಜೊತೆಗೆ ಶಾಕ್ ನೀಡುವ ಎಲೆಕ್ಟ್ರಿಕ್ ಬೆತ್ತಗಳು, ಅಶ್ರುವಾಯು ಮತ್ತು ಅತಿರೇಕದ ಲಾಠಿಚಾರ್ಜ್‌ ಕುರಿತು ಸಮಿತಿಯು ಸ್ವತಂತ್ರ ತನಿಖೆ ನಡೆಸಬೇಕಿದೆ. ದೆಹಲಿ ಪೊಲೀಸರು ಪ್ರತಿಭಟನೆಯನ್ನು ನಿಯಂತ್ರಿಸಲು 3,600 ಕ್ಕೂ ಹೆಚ್ಚು ಬ್ಯಾರಿಕೇಡ್‌ಗಳನ್ನು ಮತ್ತು 4,600 ಕ್ಕೂ ಹೆಚ್ಚು ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದನ್ನು ಕೋರ್ಟ್ ಗಮನಿಸಿದೆ. ಪೊಲೀಸ್ ಅತಿರೇಕಗಳ ಜೊತೆಗೆ, ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಮತ್ತು ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪಗಳನ್ನೂ ಸಮಿತಿಯು ಪರಿಶೀಲಿಸಲಿದೆ.

ದೇಶದ ಜೆನ್-ಝೀಗಳು 2029ರ ಲೋಕಸಭಾ ಚುನಾವಣೆಗಳ ಹೊತ್ತಿಗೆ 38 ಕೋಟಿ ಮತದಾರರಾಗಲಿದ್ದಾರೆ. ಅರ್ಥಾತ್ ದೇಶದ ಒಟ್ಟು ಮತದಾರರ ಪೈಕಿ ನಾಲ್ಕನೆಯ ಒಂದರಷ್ಟು! ತೂತು ಬಿದ್ದಿರುವ ಶಿಕ್ಷಣ ವ್ಯವಸ್ಥೆ ಮತ್ತು ತಾಂಡವ ಆಡಿರುವ ನಿರುದ್ಯೋಗ ಸಮಸ್ಯೆಗಳು ಈ ಯುವಜನರನ್ನು ಒಟ್ಟಿಗೆ ಬೆಸೆಯಲಿವೆ. ಈ ಬೆಸುಗೆಗೆ ಹಳ್ಳಿ-ಪಟ್ಟಣ-ನಗರಗಳ ಭೇದಭಾವ ಇಲ್ಲ ಎಂಬುದನ್ನು ಜಂತರ್ ಮಂತರ್ ಚಳವಳಿ ಈಗಾಗಲೆ ತೋರಿಸಿಕೊಟ್ಟಿದೆ. ಜಂತರ್ ಮಂತರ್ ಪ್ರತಿಭಟನೆಯಲ್ಲಿದ್ದವರು ಕೇವಲ ವಿದ್ಯಾರ್ಥಿಗಳಲ್ಲ, 25-35ರ ವಯೋಮಾನದ ನಿರುದ್ಯೋಗಿಗಳೂ ಸೇರಿದ್ದರು ಎಂಬುದು ಗಮನಾರ್ಹ.

ರಾಜಸ್ಥಾನದ ಅಲ್ವರ್ ಜಿಲ್ಲೆಯ ಥಾಂಗಾಜಿಯ ಒಂದು ಪ್ರಾತಿನಿಧಿಕ ಉದಾಹರಣೆಯನ್ನು ನೋಡೋಣ. ಸರ್ಕಾರಿ ಶಾಲೆಯ 180 ವಿದ್ಯಾರ್ಥಿಗಳಿಗೆ ಕಲಿಸುವವರು ಕೇವಲ ಮೂವರು ಶಿಕ್ಷಕರು. ಮೂರೇ ಕೊಠಡಿಗಳು. ಸೋರುವ ಛಾವಣಿ, ಶೌಚಾಲಯವಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಆರರಿಂದ ಏಳುವ ವರ್ಷ ವಯಸ್ಸಿನ ಮಕ್ಕಳೂ ಈ ಶೋಚನೀಯ ಪರಿಸ್ಥಿತಿಯ ವಿರುದ್ಧದ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಶಿಕ್ಷಕರನ್ನು ಕೊಡಿ, ಇಲ್ಲವೇ ಟ್ರ್ಯಾನ್ಸ್ ಫರ್ ಸರ್ಟಿಫಿಕೇಟ್ (ಟಿ.ಸಿ.) ನೀಡಿ ಎನ್ನುತ್ತಿದ್ದಾರೆ.

ಕಾಕ್ರೋಚ್ ಜನತಾ ಪಾರ್ಟಿ ಶಿಕ್ಷಣ ಸುಧಾರಣೆಯ ಅಭಿಯಾನವನ್ನು ಕೈಗೆತ್ತಿಕೊಂಡಿದೆ. ಜಂತರ್ ಮಂತರ್ ಚಳವಳಿಯ ಮುಂದುವರೆದ ಭಾಗವಾಗಿ ‘ಸರ್ಕಾರಿ ಶಾಲೆಗಳನ್ನು ಸುಧಾರಿಸಿ’ ಆಂದೋಲನ ನಡೆಸಿದೆ. ದನದ ದೊಡ್ಡಿಗಳಾಗಿ ಮಾರ್ಪಟ್ಟಿರುವ ಸಾವಿರಾರು ಸರ್ಕಾರಿ ಶಾಲೆಗಳ ದುಸ್ಥಿತಿಯ ಮೇಲೆ ಬೆಳಕು ಚೆಲ್ಲಿದೆ. ಅಲ್ಲಿ ಓದುತ್ತಿರುವ ಎಳೆಯ ಮಕ್ಕಳ ದುಗುಡ ದುಮ್ಮಾನವನ್ನು ದೇಶದ ಮುಂದಿಟ್ಟಿದೆ. ಶಾಲಾ ಶಿಕ್ಷಣದಲ್ಲಿನ ಅಜಗಜಾಂತರ ವ್ಯತ್ಯಾಸವನ್ನು ಬೆತ್ತಲಾಗಿಸಿದೆ. ಸಮಾನ ಶಿಕ್ಷಣವಿಲ್ಲದೆ ಮೀಸಲಾತಿಯನ್ನು ರದ್ದು ಮಾಡಬೇಕೆಂಬ ಡಾಂಭಿಕ ಒತ್ತಾಯ ಎಷ್ಟು ಅನ್ಯಾಯದ್ದು ಎಂಬುದನ್ನು ಬಿಡಿಸಿ ತೋರಿಸಿದೆ. ಸಾರ್ವಜನಿಕ ಶಿಕ್ಷಣ ನೀತಿಯನ್ನು ಮರು ರೂಪಿಸುವ ಗುರುತರ ಜವಾಬ್ದಾರಿ ಕಾಕ್ರೋಚ್ ಜನತಾ ಪಾರ್ಟಿ ಮತ್ತು ಅದರ ಸುತ್ತಮುತ್ತಲ ವಲಯದ ಮೇಲಿದೆ.

ವೆಬ್ ಜಗತ್ತಿನಲ್ಲಿ ಹುಟ್ಟಿರುವ ಕಾಕ್ರೋಚ್ ಜನತಾ ಪಾರ್ಟಿ ನಿಜ ಜಗತ್ತಿನಲ್ಲಿ ವ್ಯಾಪಿಸತೊಡಗಿರುವ ವಾಸ್ತವವನ್ನು ಮೋದಿ ಸರ್ಕಾರ ಅರಿಯಬೇಕು. 1974ರಲ್ಲಿ ಜಯಪ್ರಕಾಶ ನಾರಾಯಣ ಅವರ ನೇತೃತ್ವದಲ್ಲಿ ಶುರುವಾದ ಯುವಜನ- ವಿದ್ಯಾರ್ಥಿ ಚಳವಳಿ 1977ರಲ್ಲಿ ಇಂದಿರಾಗಾಂಧೀ ಅವರ ಸರ್ಕಾರವನ್ನು ಕೆಡವಿದ್ದು ಸುಳ್ಳೇನೂ ಅಲ್ಲ.

ದೇಶದಲ್ಲಿ ನೆಲೆಸಿರುವ ಸರ್ವಾಧಿಕಾರಿ ಧೋರಣೆಯ ಭಯದ ಪರದೆಯನ್ನು ಹರಿದಿರುವುದು ಕಾಕ್ರೋಚ್ ಜನತಾ ಪಾರ್ಟಿಯ ಅಡಿಯಲ್ಲಿ ನಡೆದ ಆಂದೋಲನದ ಬಹುದೊಡ್ಡ ಆರಂಭಿಕ ಸಾಧನೆ. ಇಂತಹುದೇ ಆದ ಎರಡನೆಯ ಸಾಧನೆಯೆಂದರೆ ಸರ್ವಾಧಿಕಾರಿ ನೇತೃತ್ವದ ತುತ್ತು ತುದಿಯಲ್ಲಿರುವ ವ್ಯಕ್ತಿಗಳ ಸುತ್ತ ಕಟ್ಟಲಾಗಿದ್ದ ‘ಮಾಂತ್ರಿಕ ನಿಗೂಢತೆ’ಯ ಗುಳ್ಳೆಯನ್ನು ಒಡೆದಿರುವುದು.

ಸೆಪ್ಟೆಂಬರ್ 5ರಂದು ನಡೆಯುವ ಪ್ರತಿಭಟನಾ ಮೆರವಣಿಗೆಯು ಕೇವಲ ದೆಹಲಿಗೆ ಸೀಮಿತವಾದ ಹೋರಾಟ ಆಗಿರುವುದಿಲ್ಲ. . ಕೇಂದ್ರ ಸರ್ಕಾರ ಇನ್ನಾದರೂ ದುರಹಂಕಾರ ತೊರೆದು, ಯುವ ನಾಯಕರೊಂದಿಗೆ ಮುಕ್ತ ಮಾತುಕತೆ ನಡೆಸಿ ಅವರಿಗೆ ತಾನೇ ನೀಡಿರುವ ಭರವಸೆಗಳನ್ನು ತಡವಿಲ್ಲದೆ ಈಡೇರಿಸಬೇಕು. ಈ ಯುವ ಆಕ್ರೋಶದ ಕಿಡಿ ದೇಶವ್ಯಾಪಿ ಹೊತ್ತಿಕೊಂಡರೆ ಅದರ ಸಾಧಕ ಬಾಧಕಗಳು ತೀವ್ರ ರೂಪ ತಳೆದಾವು. ಅದರ ದೋಷವನ್ನು ಮೋದಿ ಸರ್ಕಾರವೇ ಹೊರಬೇಕಾದೀತು.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಕಾನ್ಶಿರಾಂ ಹೋರಾಟ ಬಹುಜನರ ರಾಜಕೀಯ ಜಾಗೃತಿಗೆ ದಾರಿದೀಪ

ಬೀದರ್ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಬಹುಜನ ಸಂಘಟನೆಗಳ...

ವಿಜಯನಗರ | ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ವಿದ್ಯಾರ್ಥಿ-ಯುವಜನ ಸಂಘಟನೆಗಳ ಬೃಹತ್ ಪ್ರತಿಭಟನೆ

ಜನವಿರೋಧಿ ಎಸ್‌ಐಆರ್ (SIR) ರದ್ದುಪಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...

ಈ ದಿನ ಸಂಪಾದಕೀಯ | ರಾಜಧಾನಿ ದೆಹಲಿಗೆ ದಿಗ್ಬಂಧನ- ಸಹಸ್ರಾರು ಯುವಜನರ ಬಂಧನ, ಇದೇನು ತುರ್ತುಪರಿಸ್ಥಿತಿಯೇ?

ದೇಶದ ರಾಜಧಾನಿಗೇ ದಿಗ್ಬಂಧನ ಹಾಕಲಾಗಿದೆ. ಇದೇನು ತುರ್ತುಪರಿಸ್ಥಿತಿಯೇ? ಯುದ್ಧದ ಭೀತಿಯೇ? ಏನೂ...

ಉಪಚುನಾವಣೆ ಫಲಿತಾಂಶ: ತಮಿಳುನಾಡಿನಲ್ಲಿ ಟಿವಿಕೆ, ಬಂಗಾಳದಲ್ಲಿ ಬಿಜೆಪಿಗೆ ಜಯ

ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೆಜಿನಗರ ವಿಧಾನಸಭಾ ಉಪಚುನಾವಣೆಗಳಲ್ಲಿ ಬಿಜೆಪಿ ಗೆಲುವು...