ಈ ದಿನ ಸಂಪಾದಕೀಯ | ಕೇವಲ ಕೈ ಬೀಸಿಕೊಂಡು ಹೋಗಲು, ಗೆಲ್ಲಿಸಲು ಅಷ್ಟೇ ಅಲ್ಲ…

Date:

ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲು ಕನಿಷ್ಠವೆಂದರೂ 50 ಕೋಟಿ ಖರ್ಚು ಮಾಡುತ್ತಿದ್ದಾರೆ. ಇಂತಹವರನ್ನು ಗೆಲ್ಲಿಸಿಕೊಳ್ಳಲು ಮೋದಿಯವರು ಹಗಲುರಾತ್ರಿ ಶ್ರಮ ಸುರಿಯುತ್ತಿದ್ದಾರೆ. ರೋಡ್ ಶೋಗಳ ಮೇಲೆ ರೋಡ್ ಶೋಗಳನ್ನು ಮಾಡುತ್ತಿದ್ದಾರೆ. ಪ್ರಶ್ನಿಸಿದರೆ, ಫಕೀರ, ಚೌಕಿದಾರ್, ಸೇವಕ್ ಎನ್ನುತ್ತಾರೆ.

ಮೇ 6, 7ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ‘ನಮ್ಮ ಬೆಂಗಳೂರು, ನಮ್ಮ ಹೆಮ್ಮೆ’ ಬೃಹತ್ ರೋಡ್ ಶೋ ನಡೆಯಲಿದೆ. ಮೊದಲು ನಿಗದಿಯಾದಂತೆ ಮೋದಿಯವರ ರೋಡ್ ಶೋ ಶನಿವಾರಕ್ಕಷ್ಟೇ ಸೀಮಿತವಾಗಿತ್ತು. ಆದರೆ ಭಾನುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ರೋಡ್ ಶೋ ಇರುವುದರಿಂದ, ನಗರದ ನಾಗರಿಕರು ಮೋದಿಯವರನ್ನು ಮರೆಯಬಾರದೆಂದು, ಭಾನುವಾರವೂ ನಗರದ ನಾಗರಿಕರತ್ತ ಕೈ ಬೀಸಲು ಮುಂದಾಗಿದ್ದಾರೆ.

- Advertisement -

`ಒಂದೇ ದಿನ ರೋಡ್ ಶೋ ನಡೆಸಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬ ಉದ್ದೇಶದಿಂದ ಎರಡು ದಿನ ರೋಡ್ ಶೋ ನಡೆಸಲಾಗುತ್ತಿದೆ. ಸಾರ್ವಜನಿಕರ ಭಾವನೆಗಳಿಗೆ ಗೌರವ ಕೊಟ್ಟು ಪ್ರಧಾನಿಯವರು ಎರಡು ದಿನ ರೋಡ್ ಶೋ ನಡೆಸುತ್ತಿದ್ದಾರೆ’ ಎಂದು ಶೋಭಾ ಕರಂದ್ಲಾಜೆ ಇದನ್ನು ವ್ಯಾಖ್ಯಾನಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

ಇತ್ತೀಚೆಗಷ್ಟೇ, ಏ. 29ರಂದು ನಗರದ ಮಾಗಡಿ ರಸ್ತೆಯಲ್ಲಿ 6 ಕಿ.ಮೀವರೆಗೆ ಪ್ರಧಾನಿ ಮೋದಿಯವರು ರೋಡ್‌ ಶೋ ಮೂಲಕ ಮತಯಾಚನೆ ಮಾಡಿದ್ದರು. ಕೇವಲ 45 ನಿಮಿಷಗಳ ಈ ರೋಡ್ ಶೋಗೆ ಸುಮಾರು 3 ಸಾವಿರಕ್ಕೂ ಅಧಿಕ ಸ್ಥಳೀಯ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ರಸ್ತೆಯ ಉದ್ದಗಲಕ್ಕೂ ಖಾಕಿಧಾರಿಗಳ ಜಗತ್ತು ನಿರ್ಮಾಣವಾಗಿತ್ತು. 5 ಗಂಟೆ ಕಾಲ ಸುತ್ತಮುತ್ತಲ ಪ್ರದೇಶಗಳ ಸಂಚಾರವನ್ನು ಸ್ತಬ್ಧಗೊಳಿಸಲಾಗಿತ್ತು. ವ್ಯಾಪಾರ ವಹಿವಾಟಿಗೆ ನಿರ್ಬಂಧ ಹೇರಲಾಗಿತ್ತು.

ಈ ನಮ್ಮ ಪ್ರಧಾನಿಗಳ 45 ನಿಮಿಷಗಳ ರೋಡ್ ಶೋಗೆ ಖರ್ಚಾಗಿದ್ದು ಕೇವಲ 3 ಕೋಟಿ. ಅದೂ ಕೂಡ ಭದ್ರತೆಗಾಗಿ. ಚುನಾವಣಾ ಪ್ರಚಾರಕ್ಕಾಗಿ ಖರ್ಚಾಗಿದ್ದು ಲೆಕ್ಕವಿಲ್ಲ. ಈ ರೋಡ್ ಶೋಗೆ ಚುನಾವಣಾ ಆಯೋಗದಿಂದ ಅನುಮತಿಯನ್ನೂ ಪಡೆದಿರಲಿಲ್ಲ. ಪ್ರಚಾರ ಕಾರ್ಯಕ್ರಮಗಳನ್ನು ಕೈಗೊಳ್ಳಲು ಬಿಬಿಎಂಪಿ ನಿಗದಿಪಡಿಸಿದ ಶುಲ್ಕವನ್ನೂ ಬಿಜೆಪಿ ಪಾವತಿಸಿಲ್ಲ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದರೂ, ಚುನಾವಣಾ ಆಯೋಗಕ್ಕೆ ಪ್ರಧಾನಿಗಳನ್ನು ಪ್ರಶ್ನಿಸುವ ಧೈರ್ಯ ಬರುವುದು ಸಾಧ್ಯವೇ ಇಲ್ಲ.

ಇನ್ನು ಜೀವ ಬೆದರಿಕೆ ಇರುವ ಕಾರಣದಿಂದ ಪ್ರಧಾನಿ ಅವರಿಗೆ ಜೆಡ್‌+ ಭದ್ರತೆ ಕಲ್ಪಿಸಲಾಗಿದೆ. ಇದು ದೇಶದ ಅತ್ಯಂತ ಬಲಿಷ್ಠ ಭದ್ರತಾ ಕವಚ. ಪ್ರಧಾನಿ ಅವರ ಒಂದು ದಿನದ ಭದ್ರತೆಗಾಗಿ 1.17 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತದೆ. 2020-21ರ ಬಜೆಟ್‌ನಲ್ಲಿ ಎಸ್‌ಪಿಜಿಗೆ 592.55 ಕೋಟಿ ರೂ. ಮೀಸಲಿಡಲಾಗಿತ್ತು. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ ಒಟ್ಟು 100 ಯೋಧರು ಬೆಂಗಾವಲು ಕಾರುಗಳಲ್ಲಿರುತ್ತಾರೆ. ಪ್ರಧಾನಿಗಳ ರೋಡ್‌ ಶೋಗೆ ಅತ್ಯಾಧುನಿಕ ವ್ಯವಸ್ಥೆಯುಳ್ಳ ಸ್ಪೆಷಲ್‌ ಬುಲೆಟ್‌ ಪ್ರೂಫ್‌ ಟಾಟಾ 709 ವಾಹನವನ್ನು ಬಳಸಲಾಗುತ್ತದೆ. ಆ ವಾಹನವನ್ನು ದೆಹಲಿಯಲ್ಲೇ ಸಿದ್ಧಪಡಿಸಲಾಗಿದ್ದು, ಬೆಂಗಳೂರಿಗೆ ಏರ್‌ ಲಿಫ್ಟ್‌ ಮೂಲಕ ತರಿಸಿಕೊಳ್ಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ಮೇ 6 ರಂದು ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಪರ ರೋಡ್ ಶೋ ಮಾಡಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ರದ್ದುಗೊಳಿಸಲಾಯಿತು. ಕಾರಣ, ಬಿಜೆಪಿ ಅಭ್ಯರ್ಥಿ ವಿರುದ್ಧ ಹಲವಾರು ಪ್ರಕರಣಗಳಿದ್ದು, ಕಳ್ಳತನದ ಆರೋಪವೊಂದು ಸಾಬೀತಾಗಿತ್ತು. ಕಳ್ಳನ ಪರ ಪ್ರಧಾನಿಗಳು ಮತಯಾಚಿಸಲಾಗುವುದೇ ಎಂದು ರೋಡ್ ಶೋ ರದ್ದುಗೊಳಿಸಲಾಯಿತು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಉಪ್ಪಿಗಿಲ್ಲದ ಸೊಪ್ಪಿಗಿಲ್ಲದ ಮೋದಿಯವರ ಮನದ ಮಾತು

ಮಣಿಕಂಠ ಅಂಗನವಾಡಿ ಮಕ್ಕಳ ಹಾಲಿನ ಪುಡಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿ ಶಿಕ್ಷೆಗೆ ಗುರಿಯಾಗಿದ್ದ. ಆತನನ್ನು ಅಭ್ಯರ್ಥಿ ಎಂದು ಘೋಷಿಸುವಾಗ ಇಲ್ಲದಿದ್ದ ಎಚ್ಚರ, ನೈತಿಕತೆ; ಆತನ ಪರ ಮತಯಾಚನೆ ಮಾಡುವಾಗ ಜಾಗೃತವಾಗಿದ್ದು, ಅದಕ್ಕೆ ಪ್ರಧಾನಿಗಳ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದು- ಬಿಜೆಪಿಗರ ಸೋಗಲಾಡಿತನವನ್ನು ಬಟಾಬಯಲುಗೊಳಿಸಿದೆ.

ಮಣಿಕಂಠ ರಾಠೋಡ್ ರೌಡಿ ಎನ್ನುವುದು ಯಾರಿಗೂ ಗೊತ್ತಿಲ್ಲವೇ? ಹಾಗೆಯೇ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲು ಕನಿಷ್ಠವೆಂದರೂ 50 ಕೋಟಿ ಖರ್ಚು ಮಾಡುತ್ತಿರುವುದು, ಯಾರ ಗಮನಕ್ಕೂ ಬಂದಿಲ್ಲವೇ? ಒಬ್ಬೊಬ್ಬ ಅಭ್ಯರ್ಥಿ 50 ಕೋಟಿ ಖರ್ಚು ಮಾಡುತ್ತಾನೆಂದರೆ, 224 ಅಭ್ಯರ್ಥಿಗಳು ಮಾಡುತ್ತಿರುವ ಒಟ್ಟು ಮೊತ್ತವೆಷ್ಟು? ಇದು ಅವರು ಬೆವರು ಸುರಿಸಿ ದುಡಿದ ಹಣವೇ?

ಇಂತಹವರನ್ನು ಗೆಲ್ಲಿಸಿಕೊಳ್ಳಲು ಮೋದಿಯವರು ಹಗಲುರಾತ್ರಿ ಶ್ರಮ ಸುರಿಯುತ್ತಿದ್ದಾರೆ. ರೋಡ್ ಶೋಗಳ ಮೇಲೆ ರೋಡ್ ಶೋಗಳನ್ನು ಮಾಡುತ್ತಿದ್ದಾರೆ. ನಿದ್ರಾಹಾರಗಳನ್ನು ತ್ಯಜಿಸಿದ್ದಾರೆ. ಸಮಯದ ಪರಿವೆಯೇ ಇಲ್ಲದಂತೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಪ್ರಶ್ನಿಸಿದರೆ, ಫಕೀರ, ಚೌಕಿದಾರ್, ಸೇವಕ್ ಎನ್ನುತ್ತಾರೆ.

ಇದು ಕೇವಲ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಅಷ್ಟೇ ಅಲ್ಲ… ಇದರ ಹಿಂದೆ ಲೆಕ್ಕವಿಲ್ಲದಷ್ಟು ಲೆಕ್ಕಾಚಾರಗಳಿವೆ. ನಾಡಿನ ಜನತೆ ಅರಿತು ಆಯ್ಕೆ ಮಾಡಿಕೊಳ್ಳಬೇಕಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಪ್ರಬುದ್ಧತೆಯತ್ತ ರಾಹುಲ್, ಪಥಭ್ರಾಂತದತ್ತ ಮೋದಿ

ದೇಶದ ಇತ್ತೀಚಿನ ರಾಜಕೀಯ ಬೆಳವಣಿಗೆಗಳು, ಕಳೆಗಟ್ಟುತ್ತಿರುವ ಜೆನ್-ಝಿ ಹೋರಾಟ, ಕೇಂದ್ರ ಸರ್ಕಾರದ...

ಈ ದಿನ ಸಂಪಾದಕೀಯ | ಪ್ರಧಾನಿಗೂ ಸಿಗದ ʼಬಾರಾಖೂನ್ ಮಾಫಿʼ ಗ್ಯಾನೇಶ್ ಕುಮಾರ್‌ಗೆ ಯಾಕೆ? ಕೊಡಿಸಿದವರು ಯಾರು?

ಚುನಾವಣೆಯ ಕಾವಲುಗಾರನಿಗೆ ಕಾನೂನಿನ ಕವಚ ಕುಂಡಲಗಳನ್ನು ನೀಡಿ, ಕಾನೂನಿನ ಕೈಗಳು ಮುಟ್ಟದಂತೆ,...

ಈ ದಿನ ಸಂಪಾದಕೀಯ | ಎದ್ದು ನಿಂತ ಯುವಜನತೆ, ಹೊಸ ಬೆಳವಣಿಗೆಯತ್ತ ಭಾರತ

ಪ್ರಜಾಪ್ರಭುತ್ವವೆಂದರೆ ಕೇವಲ ಚುನಾವಣೆ, ಸರ್ಕಾರ ರಚನೆ, ಆಡಳಿತ ನಡೆಸುವುದಷ್ಟೇ ಅಲ್ಲ, ದನಿ...

ಈ ದಿನ ಸಂಪಾದಕೀಯ | ಗ್ಯಾನೇಶ್ ರಕ್ಷಣೆಗಾಗಿ ಯುವತಿಯರನ್ನು ಪೀಡಿಸುವ ಕೀಚಕರಾಗುತ್ತಿದ್ದಾರೆಯೇ ದೆಹಲಿ ಪೊಲೀಸರು?

ರಕ್ಷಕರೇ ಭಕ್ಷಕರಾಗುವ ಅದೇ ಹಳೆಯ ನಿರಾಶಾಜನಕ ಕತೆಯಿದು. ದೆಹಲಿ ಪ್ರತಿಭಟನೆಯಲ್ಲಿ ಪೊಲೀಸರ...