ಭಾಲ್ಕಿ | ದಾಸೋಹ ಅಹಂಕಾರವಿಲ್ಲದ ಸಮರ್ಪಣಾ ಭಾವದ ಪ್ರತೀಕ: ಬಸವಲಿಂಗ ಪಟ್ಟದ್ದೇವರು

Date:

ದಾಸೋಹ ಎಂಬುದು ಶರಣ ಸಂಸ್ಕೃತಿ ಹಾಗೂ ಭಾರತೀಯ ಆಧ್ಯಾತ್ಮಿಕ ಪರಂಪರೆಯ ಅತ್ಯಂತ ಪವಿತ್ರ ಪರಿಕಲ್ಪನೆಯಾಗಿದ್ದು, ಅಹಂಕಾರವಿಲ್ಲದ ಸೇವೆ ಮತ್ತು ಸಮರ್ಪಣಾ ಭಾವದ ಪ್ರತೀಕವಾಗಿದೆ ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ನಾಡೋಜ ಬಸವಲಿಂಗ ಪಟ್ಟದ್ದೇವರು ಹೇಳಿದರು.

- Advertisement -

ಭಾಲ್ಕಿ ತಾಲೂಕಿನ ಖಟಕ್ ಚಿಂಚೋಳಿ ಗ್ರಾಮದ ನೀಲಮ್ಮ ವೀರಬಸಪ್ಪ ಕಲ್ಯಾಣ ಮಂಟಪದಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ, ಶಾಲಾ ವಾರ್ಷಿಕೋತ್ಸವ ಹಾಗೂ ದಿವಂಗತ ವಿ.ಕೆ. ಪಾಟೀಲರ ಜನ್ಮದಿನಾಚರಣೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನುಡಿನಮನ | ಕೆವಿಎನ್: ಕನ್ನಡದ ಘನವಿವೇಕ

ಕೆವಿಎನ್ ಅವರು ಮಂಡಿಸುತ್ತಿರುವ ಮಾರುಕಟ್ಟೆ ಶಕ್ತಿಗಳ ಭಾಷೆಯೊಂದಿಗಿನ ಅನುಕೂಲಸಿಂಧು ಚಲನಶೀಲ ಸಂಬಂಧಗಳ ಕುರಿತ ಗ್ರಹಿಕೆಗಳು, 'ಸಾಮ್ರಾಜ್ಯಶಾಹಿಗಳು ಮತ್ತು ದೇಶೀಯ ಆಳುವ ವರ್ಗಗಳು ಭಾಷೆಯನ್ನು ರಾಜಕಾರಣದ ಅಸ್ತ್ರವನ್ನಾಗಿ ಬಳಸುತ್ತಿವೆ' ಎನ್ನುವ ಕನ್ನಡ ವಿಚಾರ ಸಾಹಿತ್ಯದಲ್ಲಿನ...

ಅಕ್ಕಿ ಬೆಲೆ ಏರಿಕೆಯ ಹಿಂದಿನ ಆಟ ಯಾರದ್ದು?: ಕಾರ್ಪೋರೇಟ್...

ಅಕ್ಕಿ ಬೆಲೆ ಏರಿಕೆಯನ್ನು ಕೇವಲ ಭತ್ತದ ಉತ್ಪಾದನೆ ಕುಸಿತದ ಪರಿಣಾಮ ಎಂದು ವ್ಯಾಖ್ಯಾನಿಸುವುದು ಸರಿಯಲ್ಲ. ಏಕೆಂದರೆ ಮಾರುಕಟ್ಟೆಯಲ್ಲಿ ಈಗ ಮಾರಾಟವಾಗುತ್ತಿರುವ ಅಕ್ಕಿ ಬಹುತೇಕ ಹಿಂದಿನ ಬೆಳೆ ವರ್ಷಗಳಲ್ಲಿ ಉತ್ಪಾದನೆಯಾಗಿ ಸಂಗ್ರಹಿಸಲ್ಪಟ್ಟಿರುವ ಅಕ್ಕಿ. ಪ್ರಸಕ್ತ...

ಬಡವರ ನಿವೇಶನಗಳ ಮೇಲೆ ಕೆಎಐಡಿಬಿ ಕರಿ ನೆರಳು: ಸೂರು...

ಮಂಗಳೂರಿನ ಪ್ರವಾಸೋದ್ಯಮಕ್ಕೆ ಹೊಸ ಮೆರುಗನ್ನು ನೀಡಿರುವುದೇ ತಣ್ಣೀರುಬಾವಿ ಸಮುದ್ರ ತೀರ. ಈ ಸಮುದ್ರ ತೀರ ಇತ್ತೀಚಿನ ದಿನಗಳಲ್ಲಿ ತನ್ನ ಸೌಂದರ್ಯದಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ವಿಭಿನ್ನ ಶೈಲಿಯ ಮನರಂಜನೆಗೆ ಹೆಸರುವಾಸಿಯಾಗಿರುವ ತಣ್ಣೀರುಬಾವಿ ಬೀಚ್...

ದಾಸೋಹ ಎಂದರೆ ಕೇವಲ ಅನ್ನದಾನ ಅಥವಾ ವಸ್ತುಗಳನ್ನು ಉಚಿತವಾಗಿ ನೀಡುವುದಲ್ಲ. ತನ್ನಲ್ಲಿರುವ ಭಕ್ತಿ, ಸೇವೆ ಹಾಗೂ ಅಹಂಕಾರವಿಲ್ಲದ ಸಮರ್ಪಣಾ ಮನೋಭಾವವನ್ನು ಇತರರ ಒಳಿತಿಗಾಗಿ ಅರ್ಪಿಸುವುದಾಗಿದೆ. ಇಂತಹ ಉದಾತ್ತ ಭಾವನೆಯಿಂದ ಲಿಂಗೈಕ್ಯ ವಿ.ಕೆ. ಪಾಟೀಲರು ಗ್ರಾಮೀಣ ಹಾಗೂ ಬಡಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಲ್ಲಿಸಿದ ಸೇವೆಯನ್ನು ಮರೆಯಲು ಸಾಧ್ಯವಿಲ್ಲ. ಅವರ ಹೆಸರಿನಲ್ಲಿ ಸಂಸ್ಥೆಯಡಿ ನಡೆಯುತ್ತಿರುವ ಶಾಲೆ ಕಳೆದ 18 ವರ್ಷಗಳಿಂದ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿರುವ ಸೇವೆ ಅನುಪಮವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಸಾಗರ ಖಂಡ್ರೆ ಮಾತನಾಡಿ, “ಶಿಕ್ಷಣವು ಪ್ರತಿಯೊಬ್ಬ ಮನುಷ್ಯನ ಜೀವನದ ಅತ್ಯಂತ ಅಮೂಲ್ಯ ಆಸ್ತಿಯಾಗಿದೆ. ಶಿಕ್ಷಣ ಕೇವಲ ಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ ವ್ಯಕ್ತಿತ್ವ ರೂಪಿಸುವ ಹಾಗೂ ಬದುಕಿಗೆ ಸರಿಯಾದ ದಾರಿ ತೋರಿಸುವ ಶಕ್ತಿಯಾಗಿದೆ. ಗ್ರಾಮೀಣ ಭಾಗದ ಬಡಮಕ್ಕಳಿಗೆ ಪೂಜ್ಯರು ಈ ಶಾಲೆಯ ಮೂಲಕ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ದೊಡ್ಡ ಸೇವೆಯಾಗಿದೆ”ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸುಭಾಷ ಶಿಕ್ಷಣಕರ ಹಾಗೂ ಸಂತೋಷ ಮಾಕಾ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ನೀಲಮ್ಮ ವಿ.ಕೆ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಸೋಮನಾಥಪ್ಪ ಅಷ್ಟೂರೆ ಬಸವಗುರುವಿನ ಪೂಜೆ ನೆರವೇರಿಸಿದರು.

WhatsApp Image 2026 10 10 at 7.46.08 PM 35

ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ ಮಾತನಾಡಿ, “ದಿವಂಗತ ವಿ.ಕೆ. ಪಾಟೀಲರು ದೈಹಿಕವಾಗಿ ನಮ್ಮಿಂದ ದೂರವಾಗಿದ್ದರೂ ಅವರ ದಾಸೋಹ ಸೇವೆಯಿಂದಾಗಿ ನೆನಪು ಸದಾ ನಮ್ಮೊಂದಿಗಿದೆ. ಅವರ ಧರ್ಮಪತ್ನಿಯ ಸಹಕಾರದಿಂದ ಅವರ ಸೇವಾ ಪರಂಪರೆ ಮುಂದುವರಿದಿದ್ದು, ಈ ಭಾಗದಲ್ಲಿ ಶಾಲೆಯು ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ” ಎಂದು ಹೇಳಿದರು.

ಸಂಸ್ಥೆಯ ಆಡಳಿತಾಧಿಕಾರಿ ಮೋಹನ ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ವೇತಾ ಹೌಂಸಿ ವರದಿ ವಾಚಿಸಿದರು. ಮಲ್ಲಿಕಾರ್ಜುನ ಪಾಟೀಲ ಸ್ವಾಗತಿಸಿದರು. ಶಿವಶಂಕರ ಹಾಗೂ ವೈಷ್ಣವಿ ನಿರೂಪಿಸಿದರು. ಗುರುರಾಜ ವಿ. ಹೌಂಸಿ ವಂದಿಸಿದರು.

WhatsApp Image 2026 10 10 at 6.59.42 PM 18

ಕಾರ್ಯಕ್ರಮದಲ್ಲಿ ಸಂತೋಷ ಮಾಕಾ, ನಾಗಭೂಷಣ ಮಾಮಡಿ, ಸಿದ್ಧೇಶ್ವರ ಕರಡೆ, ವೀರೇಂದ್ರ ಪಾಟೀಲ, ಜಗದೀಶ, ವೈಜಿನಾಥ ರಾಗಾ, ಅಶೋಕ ರಾಗಾ, ಸೂರ್ಯಕಾಂತ ಗಾಯತೊಡೆ, ರಾಜಕುಮಾರ ಪಾಟೀಲ, ಅಲ್ತಾಫ್, ಚಂದ್ರಶೇಖರ ಪಾಟೀಲ, ಸರಸ್ವತಿ ಪಾಟೀಲ, ಚನ್ನಬಸಪ್ಪ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ : ಬೀದರ್‌ | ಪ್ರಥಮ ದಲಿತ ಬಂಡಾಯ ಸಮ್ಮೇಳನ ಸರ್ವಾಧ್ಯಕ್ಷರಿಗೆ ಆಹ್ವಾನ

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಟ್ರಂಪ್ ದ್ವೇಷ ರಾಜಕಾರಣಕ್ಕೆ ಮತದಾರರ ಪೆಟ್ಟು: ಇಲ್ಹಾನ್ ಓಮರ್‌ಗೆ 5ನೇ ಜಯ, ಶಾಸನಸಭೆಗಳಿಗೆ 9 ಸೋಮಾಲಿ-ಅಮೆರಿಕನ್ನರು

ಡೊನಾಲ್ಡ್ ಟ್ರಂಪ್ ಅವರ ನಿರಂತರ ವಾಗ್ದಾಳಿ ಹಾಗೂ ಜನಾಂಗೀಯ ನಿಂದನೆಗಳಿಗೆ ಅಮೆರಿಕದ...

ಬಡವರ ನಿವೇಶನಗಳ ಮೇಲೆ ಕೆಎಐಡಿಬಿ ಕರಿ ನೆರಳು: ಸೂರು ಕಳೆದುಕೊಳ್ಳುವ ಭೀತಿಯಲ್ಲಿ ಬಡ ಕುಟುಂಬಗಳು!

ಮಂಗಳೂರಿನ ಪ್ರವಾಸೋದ್ಯಮಕ್ಕೆ ಹೊಸ ಮೆರುಗನ್ನು ನೀಡಿರುವುದೇ ತಣ್ಣೀರುಬಾವಿ ಸಮುದ್ರ ತೀರ. ಈ...

ದೆಹಲಿ ನಿರ್ಬಂಧದ ಬೆನ್ನಲ್ಲೇ ಕೇರಳಕ್ಕೆ ಕಾಲಿಟ್ಟ ಪ್ರತಿಭಟನೆ: ನಾಳೆ ಕೊಚ್ಚಿಯಲ್ಲಿ ಸಿಜೆಪಿಯಿಂದ ‘ಎಸ್‌ಐಆರ್‌’ ವಿರೋಧಿ ಧರಣಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ವಿರೋಧಿಸಿ ಕಾಕ್ರೋಚ್...

ಜೆಎಸ್‌ಎಸ್‌ಸಿ ಪರೀಕ್ಷೆ ರದ್ದು ನಿರ್ಧಾರ ವಜಾಗೊಳಿಸಿದ ಜಾರ್ಖಂಡ್ ಹೈಕೋರ್ಟ್

ಜಾರ್ಖಂಡ್ ಸಿಬ್ಬಂದಿ ಆಯ್ಕೆ ಆಯೋಗವು (JSSC-CGL) ನಡೆಸಿದ್ದ 'ಸಂಯೋಜಿತ ನಾಗರಿಕ ಸೇವಾ...