ಬಾಗಲಕೋಟೆ | ಕಬ್ಬು ತೂಕ ಮೋಸಕ್ಕೆ ಬ್ರೇಕ್; ಜಿಲ್ಲೆಯ 9 ಸಕ್ಕರೆ ಕಾರ್ಖಾನೆಗಳ ತಪಾಸಣೆ

Date:

ಕಬ್ಬು ಅರೆಯುವ ಹಂಗಾಮು ಆರಂಭವಾಗಿರುವ ಬೆನ್ನಲ್ಲೇ ಕಬ್ಬು ಬೆಳೆಗಾರರಿಗೆ ತೂಕದಲ್ಲಿ ಅನ್ಯಾಯವಾಗದಂತೆ ತಡೆಯಲು ಕಾನೂನು ಮಾಪನಶಾಸ್ತ್ರ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಬಾಗಲಕೋಟೆ ಜಿಲ್ಲೆಯೂ ಸೇರಿದಂತೆ ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳ ವ್ಯಾಪ್ತಿಯಲ್ಲಿರುವ ಸಕ್ಕರೆ ಕಾರ್ಖಾನೆಗಳ ವೇಬ್ರಿಡ್ಜ್‌ಗಳು ಹಾಗೂ ತೂಕ ಅಳತೆ ಸಾಧನಗಳ ವಿಶೇಷ ತಪಾಸಣೆಗೆ ಇಲಾಖೆ ತಂಡಗಳನ್ನು ರಚಿಸಿದೆ.

- Advertisement -

ಕಬ್ಬು ಖರೀದಿ ಸಂದರ್ಭದಲ್ಲಿ ರೈತರು ತರುವ ಕಬ್ಬಿನ ತೂಕದಲ್ಲಿ ಯಾವುದೇ ವ್ಯತ್ಯಾಸವಾಗದಂತೆ ನೋಡಿಕೊಳ್ಳುವುದು ಈ ವಿಶೇಷ ತಪಾಸಣೆಯ ಪ್ರಮುಖ ಉದ್ದೇಶವಾಗಿದೆ. ಅಕ್ಟೋಬರ್ 23ರಿಂದ ಆರಂಭವಾಗಿರುವ ತಪಾಸಣಾ ಕಾರ್ಯವು ಪ್ರಸಕ್ತ ಕಬ್ಬು ಅರೆಯುವ ಹಂಗಾಮು ಮುಕ್ತಾಯವಾಗುವವರೆಗೂ ಮುಂದುವರಿಯಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನುಡಿನಮನ | ಕೆವಿಎನ್: ಕನ್ನಡದ ಘನವಿವೇಕ

ಪ್ರಭುತ್ವದ ಭಾಷೆಗಳಾದ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳು ವರ್ತಿಸುವ ಭಿನ್ನ ಬಗೆಗಳನ್ನು ಕೆವಿಎನ್ ಅವರು ವರ್ಗನೆಲೆಯ ಹಿನ್ನೆಲೆಯಲ್ಲಿ ನೋಡುತ್ತ ನೀಡುವ ಒಳನೋಟಗಳು ಭಾಷೆ ಮತ್ತು ಸಮಾಜದ ಸಂಬಂಧವನ್ನು ಅರ್ಥ ಮಾಡಿಕೊಳ್ಳಲು ಬೆಳಕಿಂಡಿಯಾಗಿವೆ. 'ಬದಲಾದ...

ಬೌಲರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದ ‘ಗ್ಲೆನ್ ಮ್ಯಾಕ್ಸ್‌ವೆಲ್’ ಅಂತಾರಾಷ್ಟ್ರೀಯ...

"ಆಸ್ಟ್ರೇಲಿಯಾ ತಂಡದ ಬ್ಯಾಗಿ ಗ್ರೀನ್ ಮತ್ತು ಹಳದಿ ಜೆರ್ಸಿ ತೊಟ್ಟು ಕಣಕ್ಕಿಳಿಯುವುದು ನನ್ನ ಬದುಕಿನ ಅತ್ಯುನ್ನತ ಹೆಮ್ಮೆ. ನನ್ನ ದೇಶಕ್ಕಾಗಿ ಮೈದಾನದಲ್ಲಿ ನನ್ನ ಸರ್ವಸ್ವವನ್ನೂ ಧಾರೆಯೆರೆದಿದ್ದೇನೆ. ನನ್ನ ಬ್ಯಾಟಿಂಗ್‌ ಶೈಲಿ ಮತ್ತು ಹೊಡೆತಗಳು...

ಅಕ್ಕಿ ಬೆಲೆ ಏರಿಕೆಯ ಹಿಂದಿನ ಆಟ ಯಾರದ್ದು?: ಕಾರ್ಪೋರೇಟ್...

ಅಕ್ಕಿ ಬೆಲೆ ಏರಿಕೆಯನ್ನು ಕೇವಲ ಭತ್ತದ ಉತ್ಪಾದನೆ ಕುಸಿತದ ಪರಿಣಾಮ ಎಂದು ವ್ಯಾಖ್ಯಾನಿಸುವುದು ಸರಿಯಲ್ಲ. ಏಕೆಂದರೆ ಮಾರುಕಟ್ಟೆಯಲ್ಲಿ ಈಗ ಮಾರಾಟವಾಗುತ್ತಿರುವ ಅಕ್ಕಿ ಬಹುತೇಕ ಹಿಂದಿನ ಬೆಳೆ ವರ್ಷಗಳಲ್ಲಿ ಉತ್ಪಾದನೆಯಾಗಿ ಸಂಗ್ರಹಿಸಲ್ಪಟ್ಟಿರುವ ಅಕ್ಕಿ. ಪ್ರಸಕ್ತ...

ಕಾನೂನು ಮಾಪನಶಾಸ್ತ್ರ ನಿಯಂತ್ರಕ ಸಿ.ಎನ್. ಮಂಜುನಾಥ ಕೆ.ಎ.ಎಸ್. ಅವರು ಅಕ್ಟೋಬರ್ 22ರಂದು ಹೊರಡಿಸಿರುವ ಆದೇಶದಂತೆ ಕಾನೂನು ಮಾಪನಶಾಸ್ತ್ರ ಕಾಯ್ದೆ-2009ರ ಕಲಂ 14(3)ರ ಅಡಿಯಲ್ಲಿ ಅಧಿಕಾರಿಗಳಿಗೆ ತಪಾಸಣೆಯ ಅಧಿಕಾರ ನೀಡಲಾಗಿದೆ. ಸಹಾಯಕ ನಿಯಂತ್ರಕರು ಹಾಗೂ ತನಿಖಾ ದಳಗಳನ್ನೊಳಗೊಂಡ ವಿಶೇಷ ತಂಡಗಳು ಸಕ್ಕರೆ ಕಾರ್ಖಾನೆಗಳ ವೇಬ್ರಿಡ್ಜ್‌ಗಳನ್ನು ಪರಿಶೀಲಿಸಲಿವೆ.

ತಪಾಸಣೆ ವೇಳೆ ವೇಬ್ರಿಡ್ಜ್‌ಗಳ ನಿಖರತೆ, ತೂಕ ಅಳತೆ ಸಾಧನಗಳ ಕಾರ್ಯನಿರ್ವಹಣೆ ಹಾಗೂ ಸರ್ಕಾರ ನಿಗದಿಪಡಿಸಿರುವ ಮಾದರಿ ಕಾರ್ಯಸೂಚಿ ಮತ್ತು ನಿಯಮಾವಳಿಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ.

ವೇಬ್ರಿಡ್ಜ್‌ಗಳಲ್ಲಿ ಲೋಪ, ತೂಕದಲ್ಲಿ ವ್ಯತ್ಯಾಸ ಅಥವಾ ಕಾನೂನು ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಿಸಿದ ಸಕ್ಕರೆ ಕಾರ್ಖಾನೆಗಳ ಮಾಲೀಕರ ವಿರುದ್ಧ ನಿಯಮಾನುಸಾರ ಮೊಕದ್ದಮೆ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ತಪಾಸಣೆ ಸಂದರ್ಭದಲ್ಲಿ ದಾಖಲಾದ ಪ್ರಕರಣಗಳ ಮುಂದಿನ ಕಾನೂನು ಕ್ರಮಕ್ಕಾಗಿ ಸಂಬಂಧಿಸಿದ ಕ್ಷೇತ್ರದ ಸಹಾಯಕ ನಿಯಂತ್ರಕರಿಗೆ ವಿವರಗಳನ್ನು ಹಸ್ತಾಂತರಿಸುವಂತೆ ಆದೇಶಿಸಲಾಗಿದೆ.

ತಪಾಸಣಾ ತಂಡಗಳು ತಮ್ಮ ದೈನಂದಿನ ಕರ್ತವ್ಯಗಳ ಜತೆಗೆ ಸಕ್ಕರೆ ಕಾರ್ಖಾನೆಗಳ ವೇಬ್ರಿಡ್ಜ್‌ಗಳ ಪರಿಶೀಲನೆಯನ್ನೂ ನಡೆಸಬೇಕು. ಕ್ಷೇತ್ರವ್ಯಾಪ್ತಿಯ ಉಪ ನಿಯಂತ್ರಕರು ತಪಾಸಣಾ ಕಾರ್ಯಗಳ ಮೇಲುಸ್ತುವಾರಿ ವಹಿಸಿ, ಕೈಗೊಂಡ ಕ್ರಮಗಳ ಸಮಗ್ರ ವರದಿಯನ್ನು ಕೇಂದ್ರ ಕಚೇರಿಗೆ ಸಲ್ಲಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.

ರೈತರ ಹಿತಾಸಕ್ತಿಗೆ ಮಹತ್ವ

ಕಬ್ಬು ಬೆಳೆದು ಕಾರ್ಖಾನೆಗಳಿಗೆ ಪೂರೈಸುವ ರೈತರಿಗೆ ಅದರ ತೂಕವೇ ಪ್ರಮುಖ ಆಧಾರವಾಗಿದೆ. ವೇಬ್ರಿಡ್ಜ್‌ಗಳಲ್ಲಿನ ಸಣ್ಣ ವ್ಯತ್ಯಾಸವೂ ರೈತರ ಆದಾಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯ ವಿಶೇಷ ತಪಾಸಣೆ ರೈತರ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಮಹತ್ವ ಪಡೆದಿದೆ. ಆದರೆ ತಪಾಸಣೆ ಕೇವಲ ಕಾಗದದ ಮೇಲಿನ ಕ್ರಮವಾಗದೆ, ಹಂಗಾಮಿನುದ್ದಕ್ಕೂ ನಿರಂತರವಾಗಿ ನಡೆಯುವುದರ ಜತೆಗೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.

ಜಿಲ್ಲೆಯ 9 ಸಕ್ಕರೆ ಕಾರ್ಖಾನೆಗಳ ತಪಾಸಣೆ

ಬಾಗಲಕೋಟೆ ಜಿಲ್ಲೆಯ ಜೆಮ್ ಶುಗರ್ಸ್ ಲಿಮಿಟೆಡ್ (ಕುಂದರಗಿ), ಗೋದಾವರಿ ಶುಗರ್ಸ್ ಲಿಮಿಟೆಡ್ (ಸಮೀರವಾಡಿ), ಇಂಡಿಯನ್ ಕೇನ್‌ಪವರ್ ಲಿಮಿಟೆಡ್ (ಉತ್ತೂರು), ಜಮಖಂಡಿ ಶುಗರ್ಸ್ ಲಿಮಿಟೆಡ್ (ಹಿರೇಪಡಸಲಗಿ), ಮೇಲ್‌ಟ್ರೊ ಶುಗರ್ಸ್ ಲಿಮಿಟೆಡ್ (ಶಿರೂರು), ಎಂ.ಆರ್.ಎನ್. ಕೇನ್ ಪವರ್ (ಕಲ್ಲಾಪುರ), ನಿರಾಣಿ ಶುಗರ್ಸ್ ಲಿಮಿಟೆಡ್ (ಮುಧೋಳ), ಪ್ರಭುಲಿಂಗೇಶ್ವರ ಶುಗರ್ಸ್ ಲಿಮಿಟೆಡ್ (ಸಿದ್ದಾಪುರ) ಹಾಗೂ ಶ್ರೀ ಕೇದಾರನಾಥ ಶುಗರ್ಸ್ ಅಂಡ್ ಆಗ್ರೋ ಪ್ರಾಡಕ್ಟ್ಸ್ ಲಿಮಿಟೆಡ್ (ಕೆರಕಾಲಮಟ್ಟಿ) ಸೇರಿದಂತೆ ಜಿಲ್ಲೆಯ ಒಟ್ಟು ಒಂಬತ್ತು ಸಕ್ಕರೆ ಕಾರ್ಖಾನೆಗಳ ವೇಬ್ರಿಡ್ಜ್‌ಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ‘ಮತ ಉಳಿಸಿ, ದೇಶ ಉಳಿಸಿ’ ಅಭಿಯಾನ; ಎಸ್‌ಐಆರ್ ರದ್ದತಿಗೆ ‘ಇಂಡಿಯಾ’ ಮೈತ್ರಿಕೂಟ ಆಗ್ರಹ

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ವಿರೋಧಿಸಿ ಹಾಗೂ...

ನುಡಿನಮನ | ಕೆವಿಎನ್: ಕನ್ನಡದ ಘನವಿವೇಕ

ಪ್ರಭುತ್ವದ ಭಾಷೆಗಳಾದ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳು ವರ್ತಿಸುವ ಭಿನ್ನ ಬಗೆಗಳನ್ನು...

ದಕ್ಷಿಣ ಕನ್ನಡ | ಜಿಲ್ಲಾ ಬ್ಯಾರಿ ಮಹಿಳಾ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ರಚನೆ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ನವೆಂಬರ್ 18ರಂದು ಮಂಗಳೂರಿನ ಪುರಭವನದಲ್ಲಿ ದ.ಕ...

ಬೌಲರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದ ‘ಗ್ಲೆನ್ ಮ್ಯಾಕ್ಸ್‌ವೆಲ್’ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ

"ಆಸ್ಟ್ರೇಲಿಯಾ ತಂಡದ ಬ್ಯಾಗಿ ಗ್ರೀನ್ ಮತ್ತು ಹಳದಿ ಜೆರ್ಸಿ ತೊಟ್ಟು ಕಣಕ್ಕಿಳಿಯುವುದು...