ಈ ದಿನ ಸಂಪಾದಕೀಯ | ಮಾತು ತಪ್ಪಿದ ಸರ್ಕಾರ; ಕಾಂಗ್ರೆಸ್‌ಗೆ ಬಿಸಿತುಪ್ಪವಾದ ಮುಸ್ಲಿಂ ಸಮುದಾಯದ ಪ್ರತಿಭಟನೆ

Date:

ಮುಸ್ಲಿಂ ಸಮುದಾಯ ಕಾಂಗ್ರೆಸ್‌ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಮುಂದಾಗಿರುವುದು ತಪ್ಪಲ್ಲ. ಸಮುದಾಯದ ಸಂವಿಧಾನಬದ್ಧ ಹಕ್ಕುಗಳ ರಕ್ಷಣೆಯ ಹೊಣೆ ಸರ್ಕಾರಗಳದ್ದು. ಅದರಲ್ಲೂ ಹಲವು ದಶಕಗಳಿಂದ ಅವರು ಬೆಂಬಲಿಸಿಕೊಂಡು ಬಂದ ಕಾಂಗ್ರೆಸ್‌ ಪಕ್ಷದಿಂದ ಈ ಕುರಿತು ಬದ್ಧತೆ ನಿರೀಕ್ಷಿಸುವುದು ಸ್ವಾಭಾವಿಕ. ಇನ್ನೆರಡು ವರ್ಷಗಳಲ್ಲಿ ಕರ್ನಾಟಕ ಮತ್ತೆ ಚುನಾವಣೆ ಎದುರಿಸಲಿದೆ. ಮುಖ್ಯವಾಹಿನಿಯ ಪಕ್ಷಕ್ಕೆ ಮತ ನೀಡುತ್ತಿರುವ ಮುಸಲ್ಮಾನ ಸಮುದಾಯವನ್ನು ಕೈಯಾರೆ ಕೋಮುವಾದಿ ರಾಜಕೀಯ ಸಂಘಟನೆಗಳತ್ತ ದೂಡುವುದು ಬಿಜೆಪಿಯ ಧ್ರುವೀಕರಣ ಹುನ್ನಾರಕ್ಕೆ ಹಾದಿಯನ್ನು ಸಲೀಸು ಮಾಡಿಕೊಡುತ್ತದೆ

- Advertisement -

ರಾಜ್ಯ ಕಾಂಗ್ರೆಸ್ ಸರ್ಕಾರ ಮುಸ್ಲಿಮರ ಆಶೋತ್ತರಗಳನ್ನು ಈಡೇರಿಸಿಲ್ಲ ಮತ್ತು ನೀಡಿದ ಭರವಸೆಗಳನ್ನು ಪೂರೈಸಿಲ್ಲ ಎಂಬ ಕಾರಣ ನೀಡಿ ‘ಕರ್ನಾಟಕ ರಾಜ್ಯ ಮುಸ್ಲಿಂ ಸಂಘಟನೆಗಳ ಒಕ್ಕೂಟ’ವು ನಾಳೆ ಮೇ 16ರಂದು ಬೆಂಗಳೂರಿನ ಪುರಭವನದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಿದೆ. ಕಾಂಗ್ರೆಸ್ ಸರ್ಕಾರದ ಮೂರು ವರ್ಷಗಳ ಕಾರ್ಯವೈಖರಿ ಮತ್ತು ಮುಸ್ಲಿಂ ಸಮುದಾಯದ ರಾಜಕೀಯ ಪ್ರಾತಿನಿಧ್ಯದ ತಾರತಮ್ಯದ ಬಗ್ಗೆ ಈ ಸಮಾವೇಶದಲ್ಲಿ ಚರ್ಚಿಸಿ, ಸರ್ಕಾರಕ್ಕೆ ಎಚ್ಚರಿಕೆ ನೀಡುವುದು ಇದರ ಉದ್ದೇಶ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ ಕೋಟ್ಯಂತರ ಭಾರತೀಯರಿಗೆ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ; ಬದಲಾಗಿ ಅದ್ಭುತ ಕಾವ್ಯದಂತಿರುವ ಒಂದು ಸುವರ್ಣ ಶಕೆ. ನವೆಂಬರ್ 5,...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ಒಂದು ಕಡೆ ಮುಸ್ಲಿಂ ಸಮುದಾಯದ ಪರ ಮಾತನಾಡಿದರೆ, ಮುಸ್ಲಿಂ ವಿರೋಧಿಗಳ ವಿರುದ್ಧ ಕಾಂಗ್ರೆಸ್‌ ಸರ್ಕಾರ ಕ್ರಮ ಜರುಗಿಸಿದರೆ, ಬಜೆಟ್‌ನಲ್ಲಿ ನ್ಯಾಯಯುತ ಪಾಲು ನೀಡಿದರೆ ಬಿಜೆಪಿ ಮತ್ತು ಸಂಘಪರಿವಾರದಿಂದ ಕಾಂಗ್ರೆಸ್‌ ಪಕ್ಷ ಹಿಂದೂ ವಿರೋಧಿ, ಮುಸ್ಲಿಮರ ಪರ, ಸಾಬರ ಪಕ್ಷ‌, ಮುಸ್ಲಿಂ ತುಷ್ಠೀಕರಣ, ಮುಸ್ಲಿಂ ಓಲೈಕೆ ರಾಜಕಾರಣ ಎಂಬ ಟೀಕೆ ಎದುರಿಸಬೇಕು.  ಮತ್ತೊಂದು ಕಡೆ ಮುಸ್ಲಿಮರಿಂದಲೂ “ನಮ್ಮನ್ನು ವೋಟ್‌ಬ್ಯಾಂಕ್‌ ಆಗಿ ಕಾಂಗ್ರೆಸ್‌ ಬಳಸಿಕೊಳ್ಳುತ್ತಿದೆ” ಎಂಬ ಟೀಕೆಯನ್ನು ಆ ಸಮುದಾಯದಿಂದ ಎದುರಿಸಬೇಕಿದೆ. ಇದು ಕಾಂಗ್ರೆಸ್‌ ಪಕ್ಷವೇ ಮಾಡಿಕೊಂಡ ಸ್ವಯಂಕೃತ ಅಪರಾಧ.

ಕರ್ನಾಟಕದಲ್ಲಿ ಕಾಂಗ್ರೆಸ್‌ ಬಿಟ್ಟರೆ ಜೆಡಿಎಸ್‌ ಮುಸ್ಲಿಮರ ಪರ ಇತ್ತು. ಮುಸ್ಲಿಮರು ಜೆಡಿಎಸ್‌ಗೆ ಮತ ಹಾಕುತ್ತ ಬಂದಿದ್ದರು. ಆದರೆ, ಎರಡು ವರ್ಷಗಳ ಹಿಂದೆ ಜೆಡಿಎಸ್‌ ಕೇಸರಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡ ನಂತರ ಮುಸ್ಲಿಂ ಮತಗಳನ್ನು ಕಳೆದುಕೊಂಡಿದೆ. ಮತ್ತು ಅದರ ಲಾಭ ನೇರವಾಗಿ ಕಾಂಗ್ರೆಸ್‌ಗೆ ಆಗಿದೆ. ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಸರ್ಕಾರದ ಕೋಮುವಾದಿ ನಿಲುವುಗಳು ಮುಸ್ಲಿಂ ಸಮುದಾಯವನ್ನು ಹೈರಾಣಾಗಿಸಿದ್ದು ಮಾತ್ರವಲ್ಲ, ಮುಂದಿನ ಚುನಾವಣೆಯಲ್ಲಿ ಹೇಗಾದರೂ ಮಾಡಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಬೇಕು ಎಂಬ ಸ್ವಯಂ ಶಪಥ ಮಾಡಿಕೊಂಡು ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ಗೆ ಬೆಂಬಲಿಸಿತ್ತು ಎಂಬುದು ವಾಸ್ತವ. ಹಾಗೆ ಕಾಂಗ್ರೆಸ್‌ ಗೆಲುವಿಗೆ ಒಂದಿಡೀ ಸಮುದಾಯ ಮತ ಹಾಕಿದ ನಂತರ ಹಿಂದಿನ ಸರ್ಕಾರದ ಅವಧಿಯಲ್ಲಿ ಮಾಡಿದ್ದ ಮುಸ್ಲಿಂ ವಿರೋಧಿ ನೀತಿಗಳನ್ನು ಸರಿಪಡಿಸಿತೇ? ಮುಸ್ಲಿಂ ಸಮುದಾಯ ಬಯಸಿದ್ದಾದರೂ ಏನು?

ಅಧಿಕಾರಕ್ಕೇರುತ್ತಿದ್ದಂತೆ ಹಿಂದಿನ ಸರ್ಕಾರದ ಕರಾಳ ನೀತಿಗಳನ್ನು ಮರೆತುಬಿಟ್ಟಿದ್ದರು ಕಾಂಗ್ರೆಸಿಗರು. ಸ್ವತಃ ಸರ್ಕಾರದಲ್ಲಿ ಸ್ಪೀಕರ್/ಸಚಿವರಾಗಿರುವ ಮುಸ್ಲಿಂ ಮುಖಂಡರು ಕೂಡ ಮರೆತರು.

ಬೇರೇನೂ ಬೇಡ, 2023 ಮೇನಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂತು. ಜೂನ್‌ನಲ್ಲಿ ಶಾಲಾ ಕಾಲೇಜುಗಳು ಆರಂಭವಾಗಿತ್ತು. ಆಗ ಕನಿಷ್ಠ ಹಿಜಾಬ್‌ ನಿಷೇಧ ವಾಪಸ್‌ ಪಡೆಯುವ ಮೂಲಕ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಶಿಕ್ಷಣದ ಭಾಗ್ಯ ನೀಡಬೇಕಿತ್ತು. ವರದಿಗಳ ಪ್ರಕಾರ ಸರ್ಕಾರ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ಗೆ ನಿಷೇಧ ಹೇರಿದ ನಂತರ ಅರ್ಧದಷ್ಟು ಮುಸ್ಲಿಂ ವಿದ್ಯಾರ್ಥಿನಿಯರು ಶಿಕ್ಷಣವನ್ನು ಮೊಟಕುಗೊಳಿಸಿದ್ದಾರೆ. ಆದರೆ, ಈ ಮೂರು ವರ್ಷ ಸುಮ್ಮನಿದ್ದ ಸರ್ಕಾರ ಈಗ  ಮುಸ್ಲಿಂ ಸಮುದಾಯದ ಸಮಾವೇಶಕ್ಕೆ ನಾಲ್ಕು ದಿನ ಇರುವಾಗ ಹಿಜಾಬ್‌ ನಿಷೇಧವನ್ನು ವಾಪಸ್‌ ಪಡೆಯುವ ನಿಲುವು ತೆಗೆದುಕೊಂಡಿದೆ. ಈಗಲೂ ಹಿಜಾಬ್‌ ನಿಷೇಧ ಪ್ರಕರಣ ಸುಪ್ರೀಂ ನಲ್ಲಿದೆ. ಇದೇ ನಿಲುವನ್ನು ಮೂರು ವರ್ಷದ ಹಿಂದೆಯೇ ಯಾಕೆ ತೆಗೆದುಕೊಂಡಿಲ್ಲ ಎಂಬುದಕ್ಕೆ ಕಾಂಗ್ರೆಸ್‌ ನಾಯಕರಲ್ಲಿ ಉತ್ತರವಿದೆಯೇ?

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರವೂ ಕೋಮುವಾದಿ ಶಕ್ತಿಗಳ ಪುಂಡಾಟ, ದ್ವೇಷ ಭಾಷಣ ಮುಂದುವರಿದಿದೆ. ಮಂಗಳೂರಿನಲ್ಲಿ ಮೂರು ಹೆಣ ಬಿದ್ದ ನಂತರ ಬಿಗಿ ಕ್ರಮಗಳನ್ನು ಕೈಗೊಳ್ಳಲಾಯ್ತು. ಆದರೆ, ಕೋಮುವಾದಿ ಶಕ್ತಿಗಳ ವಿರುದ್ಧದ ಪ್ರಕರಣಗಳಿಗೆ ಕೋರ್ಟ್‌ ತಡೆ ಕೊಟ್ಟಾಗ ಅದನ್ನು ತೆರವುಗೊಳಿಸಲು ಅಥವಾ, ಜಾಮೀನು ರದ್ದುಪಡಿಸಲು ಸರ್ಕಾರ ಯಾವುದೇ ಪ್ರಯತ್ನ ಮಾಡಿಲ್ಲ. ಚಕ್ರವರ್ತಿ ಸೂಲಿಬೆಲೆ, ಪುನೀತ್‌ ಕೆರೆಹಳ್ಳಿಯಂಥವರು ಮುಸ್ಲಿಂ ಸಮುದಾಯವನ್ನು ಹೀನಾಯವಾಗಿ ನಿಂದಿಸುತ್ತಲೇ ಇದ್ದಾರೆ. ಅವರ ಪ್ರಕರಣಗಳಿಗೆ ಸ್ಟೇ ಸಿಗುತ್ತಿದೆ. ಜಾಮೀನು ಪಡೆದು ಮತ್ತದೇ ಕೃತ್ಯದಲ್ಲಿ ಭಾಗಿಯಾಗುತ್ತಿದ್ದಾರೆ., ಎಫ್‌ಐಆರ್‌ ಗಷ್ಟೇ ಪೊಲೀಸರು ಸೀಮಿತರಾಗಿದ್ದಾರೆ. ಚಾರ್ಜ್‌ಶೀಟ್‌ ಹಾಕುವುದನ್ನೇ ಮರೆತಿದ್ದಾರೆ. ಸರ್ಕಾರದಲ್ಲಿ ಮೂರ್ನಾಲ್ಕು ಮಂದಿ ಮುಸ್ಲಿಂ ಸಚಿವರು ಇದ್ದಾಗಲೂ ಯಾಕೆ ಹೀಗೆ ಎಂಬುದಕ್ಕೆ ಅವರೇ ಉತ್ತರಿಸಬೇಕಿದೆ.

ಬೊಮ್ಮಾಯಿ ಸರ್ಕಾರ ಮುಸ್ಲಿಮರ (2ಬಿ) ಮೀಸಲಾತಿಯನ್ನೇ ಕಿತ್ತು ಲಿಂಗಾಯತರಿಗೂ, ಒಕ್ಕಲಿಗರಿಗೂ ಹಂಚಿತ್ತು.  ಗೋಹತ್ಯಾ ನಿಷೇಧ ಕಾಯ್ದೆ ಅಲ್ಪಸಂಖ್ಯಾತರ ಆಹಾರ/ ವ್ಯಾಪಾರದ ಹಕ್ಕಿನ ಮೇಲೆ ನೇರ ಪ್ರಹಾರ. ಇದರಿಂದ ರೈತರಿಗೂ ತೊಂದರೆ. ಮತಾಂತರ ನಿಷೇಧ ಕಾಯಿದೆಯೂ ಹಾಗೆಯೇ ಉಳಿದಿದೆ. ಅಲ್ಪಸಂಖ್ಯಾತರ ಕ್ಷೇಮಾಭಿವೃದ್ಧಿಗೆ 10 ಸಾವಿರ ಕೋಟಿ ರುಪಾಯಿ ಹಂಚಿಕೆ, 2ಬಿ ಅಡಿ ಶೇ.4ರಷ್ಟು ಮೀಸಲಾತಿ ಸೌಲಭ್ಯವನ್ನು ಮರಳಿ ನೀಡುವ ಹಾಗೂ ದ್ವೇಷವನ್ನು ಹರಡುವ ಕೋಮುವಾದಿ ಸಂಘಟನೆಗಳನ್ನು ಹತ್ತಿಕ್ಕುವ ಭರವಸೆಗಳನ್ನು ಕಾಂಗ್ರೆಸ್ ನೀಡಿತ್ತು. ಆದರೆ ಅಧಿಕಾರ ಹಿಡಿದ ನಂತರ ಈ ಸಂಗತಿಗಳನ್ನು ಮೂಲೆಗೆ ತಳ್ಳಿತು. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ವರ್ಷಗಳಾದರೂ ಮುಸಲ್ಮಾನರ ಕ್ಷೇಮಾಭಿವೃದ್ಧಿಗೆ ಮಾಡುವ ಹಂಚಿಕೆ 4,762 ಕೋಟಿ ರುಪಾಯಿಯಲ್ಲೇ ಉಳಿದಿದೆ ಎಂಬುದು ಕರ್ನಾಟಕ ರಾಜ್ಯ ಮುಸ್ಲಿಮ್ ಒಕ್ಕೂಟದ ಅಸಮಾಧಾನ ಸಕಾರಣವಾಗಿದೆ.

ಸಚ್ಚರ್ ಸಮಿತಿ, ಕುಂಡು ಸಮಿತಿ ಹಾಗೂ ಕೆ.ರೆಹಮಾನ್ ಖಾನ್ ಸಮಿತಿ ಮುಸಲ್ಮಾನರ ಸಾಮಾಜಿಕ-ಆರ್ಥಿಕ ಹಿಂದುಳಿದಿರುವಿಕೆಯ ಮೇಲೆ ಬೆಳಕು ಚೆಲ್ಲಿವೆ. ಈ ಹಿನ್ನೆಲೆಯಲ್ಲೇ 10 ಸಾವಿರ ಕೋಟಿ ರುಪಾಯಿ ಹಂಚಿಕೆಯ ಭರವಸೆ ನೀಡಲಾಗಿತ್ತು.

ದಾವಣಗೆರೆ ಉಪಚುನಾವಣೆಯ ಸಮಯದಲ್ಲಿ ಟಿಕೆಟ್‌ ಹಂಚಿಕೆಯ ವಿಚಾರದಲ್ಲಿ ಮುಸ್ಲಿಮರು ತಮ್ಮ ಆಕ್ರೋಶ ಹೊರ ಹಾಕುವ ಸಂದರ್ಭ ಸೃಷ್ಟಿಯಾಗಿತ್ತು. ಮೀಸಲು ಕ್ಷೇತ್ರವಲ್ಲದಿದ್ದರೂ ಅತಿಹೆಚ್ಚು ಮುಸ್ಲಿಂ ಮತದಾರರಿರುವ ಕ್ಷೇತ್ರದಲ್ಲಿ ಟಿಕೆಟ್‌ ನಿರೀಕ್ಷೆ ಮಾಡಿದ್ದು ಅವರ ತಪ್ಪಲ್ಲ. ದಾವಣಗೆರೆ ಚುನಾವಣೆ ಮುಗಿದ ನಂತರ ಕಾಂಗ್ರೆಸ್‌ನಲ್ಲಿ ನಡೆದ ಬೆಳವಣಿಗೆ ಪ್ರಮುಖ ನಾಯಕರ ವಿರುದ್ಧ ಶಿಸ್ತುಕ್ರಮ ಇವೆಲ್ಲವೂ ಕರ್ನಾಟಕದ ಮುಸ್ಲಿಮರನ್ನು ಕೆರಳಿಸಿದೆ.  ಈ ಬಾರಿ ಅವರು ದಿಟ್ಟ ನಿರ್ಧಾರ ಕೈಗೊಳ್ಳುವ ತೀರ್ಮಾನಕ್ಕೆ ಬಂದಿದ್ದಾರೆ. 

2011ರ ಜನಗಣತಿಯ ಪ್ರಕಾರ ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ಶೇ. 12.92ರಷ್ಟು ಮುಸ್ಲಿಮರಿದ್ದಾರೆ. ಮುಸ್ಲಿಮರ ಪ್ರಮಾಣ ಶೇ.13-14ರಷ್ಟು ಇರಬಹುದೆಂದು ಅಂದಾಜಿಸಲಾಗಿದೆ. 224 ವಿಧಾನಸಭಾ ಕ್ಷೇತ್ರಗಳಲ್ಲಿ ಶೇ. 12.92 ಜನಸಂಖ್ಯೆಗೆ ಅನುಗುಣವಾಗಿ ಕನಿಷ್ಠ 29 ಮಂದಿ ಮುಸ್ಲಿಂ ಶಾಸಕರು ಇರಬೇಕಿತ್ತು. ಇರುವುದು ಕೇವಲ 9. ಇದು ಆ ಸಮುದಾಯವನ್ನು ಒಟ್ಟಾರೆ ಕಡೆಗಣಿಸಿರುವುದರ ಸೂಚನೆ.

ಈಗ ಕಾಂಗ್ರೆಸ್‌ ಸರ್ಕಾರಕ್ಕೆ ಮುಸ್ಲಿಂ ಸಮುದಾಯ ಎಚ್ಚರಿಕೆ ನೀಡಲು ಮುಂದಾಗಿರುವುದು ತಪ್ಪಲ್ಲ. ಸಮುದಾಯದ ಸಂವಿಧಾನಬದ್ಧ ಹಕ್ಕುಗಳ ರಕ್ಷಣೆಯ ಹೊಣೆ ಸರ್ಕಾರಗಳದ್ದು. ಅದರಲ್ಲೂ ಹಲವು ದಶಕಗಳಿಂದ ಅವರು ಬೆಂಬಲಿಸಿಕೊಂಡು ಬಂದ ಕಾಂಗ್ರೆಸ್‌ ಪಕ್ಷದಿಂದ ಈ ಕುರಿತು ಬದ್ಧತೆ ನಿರೀಕ್ಷಿಸಿದರೆ ತಪ್ಪಲ್ಲ. ಇನ್ನೆರಡು ವರ್ಷಗಳಲ್ಲಿ ಕರ್ನಾಟಕ ಮತ್ತೆ ಚುನಾವಣೆ ಎದುರಿಸಲಿದೆ. ಮುಖ್ಯವಾಹಿನಿಯ ಪಕ್ಷಕ್ಕೆ ಮತ ನೀಡುತ್ತಿರುವ ಮುಸಲ್ಮಾನ ಸಮುದಾಯವನ್ನು ಕೈಯಾರೆ ಕೋಮುವಾದಿ ರಾಜಕೀಯ ಸಂಘಟನೆಗಳತ್ತ ದೂಡುವುದು ಸಲ್ಲದು. ಮುಸಲ್ಮಾನ ಸಮುದಾಯದ ಮತಗಳು ಕೋಮುವಾದಿ ರಾಜಕೀಯ ಸಂಘಟನೆಗಳೆಡೆ ಧ್ರುವೀಕರಣವಾದರೆ ಬಿಜೆಪಿಯ ರೊಟ್ಟಿ ಜಾರಿ ತುಪ್ಪಕ್ಕೆ ಬೀಳುವುದು ನಿಶ್ಚಿತ. ಹಿಂದೂ ಧ್ರುವೀಕರಣವನ್ನೇ ಮಹಾನ್ ಕಾರ್ಯಸೂಚಿಯನ್ನಾಗಿ ಮಾಡಿಕೊಂಡು ಬಕಪಕ್ಷಿಯಂತೆ ಕಾಯುತ್ತಲಿರುವ ಬಿಜೆಪಿಗೆ ಹಾದಿ ಸಲೀಸು ಮಾಡಿಕೊಡುವುದು ಕಾಂಗ್ರೆಸ್ಸಿನ ಆತ್ಮಹತ್ಯಾ ಕೃತ್ಯ. ಈಗಲೇ ಎಚ್ಚೆತ್ತುಕೊಳ್ಲದಿದ್ದರೆ ಕೈ ಕೈ ಹಿಸುಕಿಕೊಳ್ಳುವ ದುಸ್ಥಿತಿ ಕಾಂಗ್ರೆಸ್ಸಿಗೆ ಬಂದೀತು.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಇಂದಿನ ಪೀಳಿಗೆಗೆ ಭಗತ್ ಸಿಂಗ್‌ ಕುರಿತು ನೈಜ ಅಧ್ಯಯನ ಅವಶ್ಯ: ಬಾಲು ರಾಠೋಡ್

ಪ್ರಸ್ತುತ ಯುವಜನತೆ ಎದುರಿಸುತ್ತಿರುವ ನಿರುದ್ಯೋಗ, ಭ್ರಷ್ಟಾಚಾರ, ಮೂಲಭೂತವಾದ ಸೇರಿದಂತೆ ಇತರ ಗಂಭೀರ...

ಶಿರಸಿ | 2013ರ ಮಹದಾಯಿ ಪ್ರಕರಣ: ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇರ್ ಬಂಧನ

ಕರ್ನಾಟಕ ರೈತ ಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಅವರನ್ನು...

UPI ಮೇಲೆ MDR ಶುಲ್ಕ: ಸರ್ಕಾರದ ‘ಸಮರ್ಥನೆ’ಯ ಮರೆಯಲ್ಲಿ ದೈತ್ಯ ಕಂಪನಿಗಳಿಗೆ ಮಣೆ

​'ಡಿಜಿಟಲ್ ಇಂಡಿಯಾ'ದ ಯಶಸ್ಸಿನ ಬಗ್ಗೆ ಸದಾ ಬೆನ್ನು ತಟ್ಟಿಕೊಳ್ಳುವ ಬಿಜೆಪಿ ಸರ್ಕಾರ,...

ದೆಹಲಿ ಅಪ್ರಾಪ್ತೆ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ: ‘ನಿರ್ಭಯಾ ಪ್ರಕರಣವನ್ನು ನೆನಪಿಸುವ ಭೀಕರತೆ’ ಎಂದ ಸುಪ್ರೀಂ ಕೋರ್ಟ್

ದೆಹಲಿ-ಎನ್‌ಸಿಆರ್ ವ್ಯಾಪ್ತಿಯಲ್ಲಿ ಚಲಿಸುವ ಬಸ್‌ನಲ್ಲಿ ನಡೆದ ಅಪ್ರಾಪ್ತ ಬಾಲಕಿ ಮೇಲಿನ ಭೀಕರ...