ಈ ದಿನ ಸಂಪಾದಕೀಯ | ಬೆಳಕಿನ ಹಬ್ಬ ತರದಿರಲಿ ಹಲವರ ಬದುಕಿಗೆ ಕತ್ತಲೆ

Date:

ಅರಿವು ಹಾಗೂ ಅದರ ಸಂಕೇತವಾದ ಬೆಳಕಿನ ವಿಸ್ತರಣೆ ಆಗಬೇಕಿದ್ದ ದೀಪಾವಳಿಯು ಪ್ರತಿಷ್ಠೆಗೆ ಕಾರಣವಾಗಿ ಮದ್ದು ಸುಡುವುದು ಮುಂದುವರೆದು ಜನ ಅದರಲ್ಲೂ ವಿಶೇಷವಾಗಿ ಮಕ್ಕಳು ಕಣ್ಣು ಕಳೆದುಕೊಂಡು ಶಾಶ್ವತ ಅಂಧತ್ವ ಮತ್ತು ಕತ್ತಲೆಯಡೆಗೆ ಮುಖ ಮಾಡುವಂತಾಗಿದೆ. ಇದು ಒಳ್ಳೆಯ ಬೆಳವಣಿಗೆಯೇನಲ್ಲ.

ಬೆಳಕಿನ ಹಬ್ಬ ದೀಪಾವಳಿ. ಹೊರಗಿನ ಕತ್ತಲಿನ ಜೊತೆಗೆ ಒಳಗಿನ ಕತ್ತಲನ್ನೂ ದೂರ ಆಗಿಸುವ ಆಶಯದ ಹಬ್ಬ. ಸಹಜವಾಗಿಯೇ ಅದರ ಆಚರಣೆಗಳೂ ಈ ಆಶಯಕ್ಕೆ ಪೂರಕವಾಗಿಯೇ ಇವೆ. ಜ್ಯೋತಿಯ ಬಲದಿಂದ ತಮಂಧದ ಕೇಡು ಎಂದ ಮನಸ್ಸುಗಳೇ ಜ್ಞಾನದ ಬಲದಿಂದ ಅಜ್ಞಾನದ ಕೇಡ ಬಯಸಿದ್ದವು. ಕತ್ತಲು ಮತ್ತು ಬೆಳಕುಗಳೆರಡನ್ನು ಕಾಣಲು -ಅನುಭವಿಸಲು ಕಣ್ಣುಗಳು ಬೇಕು. ಭೌತಿಕ ಕಣ್ಣುಗಳ ಮೂಲಕ ನೋಡಿದರೆ, ನೋಡಿದಾಗ ಮಾತ್ರ ಬಣ್ಣಗಳ ಮತ್ತು ಬೆಳಕಿನ ಲೋಕ ಗೋಚರವಾಗುತ್ತದೆ. ಅರಿವಿಗೆ ಬರುತ್ತದೆ. ಇಂತಹ ಬೆಳಕನ್ನು ಕಾಣಿಸುವ ಕಣ್ಣುಗಳೇ ಬೆಳಕಿನ ಹಬ್ಬದ ದಿನಗಳಲ್ಲಿ ಕಳೆದು ಹೋಗುವುದೇ ವೈಪರೀತ್ಯ. ವಿಚಿತ್ರ ಮತ್ತು ವಿಷಾದದ ಸಂಗತಿ.

- Advertisement -

ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಅಂದರೆ 2026ರ ದೀಪಾವಳಿಯಲ್ಲಿ ಬೆಂಗಳೂರಿನ ವಿವಿಧ ಕಣ್ಣಿನ ಆಸ್ಪತ್ರೆಗೆ ಬಂದ ಪ್ರಕರಣಗಳ ಸಂಖ್ಯೆ 117. ರಾಜ್ಯ ಸರ್ಕಾರ ನಡೆಸುವ ಮಿಂಟೋ ಆಸ್ಪತ್ರೆಯಲ್ಲಿ ಈ ಸಲ ದಾಖಲಾದವರ ಸಂಖ್ಯೆ 20ಕ್ಕೂ ಹೆಚ್ಚು. ಬೆಂಗಳೂರಿನ ರಾಜಾಜಿನಗರ ಪ್ರದೇಶದಲ್ಲಿ ಈ ಕಣ್ಣಿನ ಆಸ್ಪತ್ರೆಗೆ ಬಂದವರ ಸಂಖ್ಯೆ 40ಕ್ಕೂ ಹೆಚ್ಚು. ಹೀಗೆ ಕಣ್ಣಿನ ಆಸ್ಪತ್ರೆಗೆ ಬರುವುದು ಮತ್ತು ವರದಿಯಾಗುವುದು ಗಂಭೀರ ಪ್ರಕರಣಗಳು ಮಾತ್ರ. ಸಣ್ಣಪುಟ್ಟ ಅವಘಡಗಳು ಮತ್ತು ಸುಟ್ಟಗಾಯದ ಪ್ರಕರಣಗಳು ಲೆಕ್ಕಕ್ಕೇ ಇಲ್ಲ. ಹೀಗೆ ದಾಖಲಾದವರ ಪೈಕಿ ಶೇ. 80ರಷ್ಟು ಪ್ರಕರಣಗಳು ದೃಷ್ಟಿ ಕಳೆದುಕೊಳ್ಳುವ ಮಟ್ಟಿಗೆ ಇರುತ್ತವೆ ಎಂಬುದು ಸಮಸ್ಯೆಯ ಗಂಭೀರತೆಯನ್ನು ಸೂಚಿಸುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಎಲ್ಲವನ್ನೂ ಕಣ್ಣುಮುಚ್ಚಿ ಪಾಲಿಸುವ ವಿಭೀಷಣನೆ ಈ ಸಮಾಜಕ್ಕೆ ಸೂಕ್ತ,...

ರಾಮಾಯಣವನ್ನು ಗೌರವಿಸುವ ನಾವು ರಾವಣನ ದೃಷ್ಟಿಕೋನದಿಂದಲೂ ಕಥೆಯನ್ನು ಓದಬೇಕು. ಈ ಕಾಲಕ್ಕೆ ರಿಟೆಲ್ಲಿಂಗ್ಸ್, ಕೌಂಟರ್ ನರೇಟಿವ್ಸ್ ಹಾಗೂ ಹ್ಯೂಮನೈಸಿಂಗ್ ಸ್ಟೋರಿಸ್ ಅಗತ್ಯತೆ ಬಹಳವಾಗಿದೆ. ಶಿವ ನಮ್ಮ ಅಚ್ಚುಮೆಚ್ಚಿನ ದೇವನಾಗಿದ್ದ. ಅವನನ್ನ ನಾವು ಅತಿಯಾಗಿ ಪ್ರೀತಿಸುತಿದ್ದೆವು....

ರಾಷ್ಟ್ರೀಯ ಶಿಕ್ಷಣ ದಿನ | ಶಿಕ್ಷಣ ಕ್ರಾಂತಿಯ ಹರಿಕಾರ-ಮೌಲಾನ...

ಮೌಲಾನಾ ಅಬುಲ್ ಕಲಾಂ ಆಜಾದ್ ಇದು ಅಪರೂಪದ ರಾಷ್ಟ್ರೀಯ ವ್ಯಕ್ತಿತ್ವ. ಅವರ ಹೆಸರು ಆಜಾದ್. ಅವರ ಕನಸು ಸ್ವತಂತ್ರ ಭಾರತ. ಅವರ ಹೋರಾಟ ರಾಷ್ಟ್ರೀಯ ಏಕತೆ. ಅವರ ನಂಬಿಕೆ ಶಿಕ್ಷಣ. ಅವರ ವೈಚಾರಿಕ...

ಕಿವೀಸ್ ಕೋಟೆಯಲ್ಲಿ ಇತಿಹಾಸ ಬರೆಯುವತ್ತ ಶುಭಮನ್ ಗಿಲ್ ಪಡೆ:...

ನವೆಂಬರ್ 13 ಮತ್ತು 15ರಂದು ನಡೆಯಲಿರುವ ಕಿವೀಸ್ ವಿರುದ್ಧದ ನಾಲ್ಕು ಹಾಗೂ ಐದನೇ ಏಕದಿನ ಪಂದ್ಯಗಳಲ್ಲಿ ನಾಯಕ ಶುಭಮನ್ ಗಿಲ್ ಅವರ ನಾಯಕತ್ವದ ಕೌಶಲ ಮತ್ತೊಮ್ಮೆ ಒರೆಗಲ್ಲಿಗೆ ಹಚ್ಚಲ್ಪಡಲಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ...

ಪಟಾಕಿಯಿಂದ ಕಣ್ಣಿನ ಸಮಸ್ಯೆಗೆ ಒಳಗಾಗುವವರು ಕೇವಲ ಸಿಡಿಸುವವರು ಮಾತ್ರವಲ್ಲ. ಹಾದಿಹೋಕರು, ದೂರದಲ್ಲಿ ನಿಂತು ನೋಡುವವರೂ ಬಲಿಯಾಗಿರುತ್ತಾರೆ. ಕಣ್ಣು ಕಳೆದುಕೊಳ್ಳುವವರ ಪೈಕಿ ಶೇ. 75ರಷ್ಟು ಜನ ಮುಂದೆ ಬಾಳಿ ಬದುಕಬೇಕಾದ ಮಕ್ಕಳು. ಸತತ ಆರು ತಿಂಗಳ ಚಿಕಿತ್ಸೆಯ ನಂತರ ಅಂಧತ್ವದ ಪ್ರಮಾಣ ಗೊತ್ತಾಗುತ್ತದೆ. ಈ ಪ್ರಕರಣಗಳನ್ನು ಅಪಘಾತ- ಆಕಸ್ಮಿಕಗಳ ಪಟ್ಟಿಗೆ ಸೇರಿಸಿ ಸುಮ್ಮನಾಗಬೇಕಿಲ್ಲ. ನಾಗರಿಕ ಸಮಾಜ ಇದರ ಹೊಣೆ ಹೊರಬೇಕು.

Advertisements

ಇದನ್ನು ಓದಿದ್ದೀರಾ?: ಪೆಟ್ರೋಲ್‌ಗೆ ಮಿತಿಮೀರಿದ ಎಥೆನಾಲ್‌ ಮಿಶ್ರಣ; ಬಿಜೆಪಿ ನಾಯಕರ ಸುಳ್ಳಿನ ಕಥನ

ಕಳೆದ ಮೂರು ದಶಕಗಳ ಅವಧಿಯಲ್ಲಿ ವರ್ಷಕ್ಕೆ ಸರಾಸರಿ ನೂರು ಪ್ರಕರಣಗಳಂತೆ ಲೆಕ್ಕಕ್ಕೆ ತೆಗೆದುಕೊಂಡರೆ ಬೆಳಕಿನ ಹಬ್ಬದ ಅಂಗವಾಗಿ ಮದ್ದು ಸುಡುವುದರಿಂದ ಕಣ್ಣಿಗೆ ಗಾಯ ಮಾಡಿಕೊಂಡವರ ಸಂಖ್ಯೆ ಮೂರು ಸಾವಿರ ದಾಟಿದರೆ ಕಣ್ಣು ಕಳೆದುಕೊಂಡವರ ಸಂಖ್ಯೆಯು ಎರಡು ಸಾವಿರ ದಾಟುತ್ತದೆ. ಇದು ಕೇವಲ ಬೆಂಗಳೂರು ನಗರದ ಅಂಕಿ ಅಂಶಗಳು. ನಗರದ ಹೊರಗೆ ಕರ್ನಾಟಕದಾದ್ಯಂತ ನಡೆಯುವ ಪಟಾಕಿ ದುರಂತಗಳ ಬಗ್ಗೆ‌ ಯಾವುದೇ ಅಂಕಿ ಅಂಶಗಳನ್ನು ದಾಖಲಿಸುವ ವ್ಯವಸ್ಥೆಯೇ ಇಲ್ಲ. ದಾಖಲೆಗಳೇ ಇಲ್ಲದಿರುವುದು ಅದರ ಬಗೆಗಿನ ಅಸಡ್ಡೆ- ಅವಜ್ಞೆ ಮುಂದುವರೆಯಲು ಕಾರಣವಾಗಿದೆ. ಇದು ನಿಲ್ಲಬೇಕು. ದೀಪಾವಳಿಯ ಹೊತ್ತಿನಲ್ಲಿ ಒಬ್ಬರು ಕೂಡ ಕಣ್ಣು ಕಳೆದುಕೊಳ್ಳದಂತಹ ಸ್ಥಿತಿ ರೂಪಿಸುವ ಹೊಣೆಗಾರಿಕೆ ಸಮಾಜ – ಸಮುದಾಯದ ಮೇಲಿದೆ.

ಈ ಶತಮಾನದ ಆರಂಭದ ಮೊದಲ ಒಂದೂವರೆ ದಶಕದಲ್ಲಿ ಪಟಾಕಿ ಸುಡುವ ಪ್ರಮಾಣ ಕಡಿಮೆಯಾಗತೊಡಗಿತ್ತು. ಅದಕ್ಕೆ ಪರಿಸರದ ಮೇಲೆ ಪಟಾಕಿಗಳು ಉಂಟು ಮಾಡುವ ಪರಿಣಾಮದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ನಡೆದ ವೈಚಾರಿಕ + ಪ್ರಗತಿಪರ ಆಲೋಚನೆಗಳ ಜೊತೆಯಲ್ಲಿಯೇ ಸುಪ್ರೀಂಕೋರ್ಟಿನ ‘ಹಸಿರು ಪಟಾಕಿ’ ನಿರ್ದೇಶನ ಹಾಗೂ ಶಾಲೆ-ಕಾಲೇಜುಗಳಲ್ಲಿ ನಡೆಸಲಾದ ಅರಿವು ಮೂಡಿಸುವ ಅಭಿಯಾನಗಳು ಕೂಡ ಗಣನೀಯ ಕೊಡುಗೆ ನೀಡಿದ್ದವು. ಸಹಜವಾಗಿಯೇ ಪಟಾಕಿ ಸುಡುವುದರ ಪ್ರಮಾಣ ಕಡಿಮೆಯಾದ ಪ್ರಮಾಣದಲ್ಲಿಯೇ ಕಣ್ಣು‌ಕಳೆದುಕೊಳ್ಳುವವರ ಸಂಖ್ಯೆಯೂ ಇಳಿಮುಖವಾಗಿತ್ತು.

ಆದರೆ, ಕಳೆದ ಒಂದು ದಶಕದ ಅವಧಿಯಲ್ಲಿ ಮುಂಚೂಣಿಗೆ ಬಂದ ‘ನಮ್ಮ ಸಂಸ್ಕೃತಿ, ನಮ್ಮ ಹೆಮ್ಮೆ’ ರೀತಿಯ ಧೋರಣೆಯು ಪಟಾಕಿಗಳ ಜೊತೆಗೆ ಅವುಗಳಿಂದ ಉಂಟಾಗುವ ಅವಘಡವೂ ಪರಂಪರೆಯ ಭಾಗ ಆಗತೊಡಗಿದೆ. ಈ ಸಾಮಾಜಿಕ ಹಿಂಚಲನೆಗೆ ‘ಪಟಾಕಿ ಸಿಡಿಸುವುದರಿಂದ ದುಷ್ಟಶಕ್ತಿಗಳು ನಾಶವಾಗುತ್ತವೆ’ ಎಂಬ ಸಮರ್ಥನೆ + ಮೂಢನಂಬಿಕೆಗಳೂ ಕಾರಣ. ಅರಿವು ಹಾಗೂ ಅದರ ಸಂಕೇತವಾದ ಬೆಳಕಿನ ವಿಸ್ತರಣೆ ಆಗಬೇಕಿದ್ದ ದೀಪಾವಳಿಯು ಪ್ರತಿಷ್ಠೆಗೆ ಕಾರಣವಾಗಿ ಮದ್ದು ಸುಡುವುದು ಮುಂದುವರೆದು ಜನ ಅದರಲ್ಲೂ ವಿಶೇಷವಾಗಿ ಮಕ್ಕಳು ಕಣ್ಣು ಕಳೆದುಕೊಂಡು ಶಾಶ್ವತ ಅಂಧತ್ವ ಮತ್ತು ಕತ್ತಲೆಯಡೆಗೆ ಮುಖ ಮಾಡುವಂತಾಗಿದೆ. ಇದು ಒಳ್ಳೆಯ ಬೆಳವಣಿಗೆಯೇನಲ್ಲ. ಬೆಳಕಿನ ಹಬ್ಬವೇ ಹಲವರ ಬದುಕಿನ ಕತ್ತಲೆ ಹರಡಲು ಕಾರಣವಾಗಿರುವುದು ಒಳ್ಳೆಯ ಲಕ್ಷಣವಲ್ಲ. ಇನ್ನು ಮುಂದಾದರೂ ಎಚ್ಚೆತ್ತುಕೊಳ್ಳಬೇಕು. ಬೆಳಕು ಮತ್ತು ಅದರ ಅನುಭವ ಉಂಟು ಮಾಡುವ ಕಣ್ಣುಗಳು ಕಳೆದು ಹೋಗದಂತೆ ನೋಡಿಕೊಳ್ಳುವುದು ಕೇವಲ‌ ನೈತಿಕ ಹೊಣೆಗಾರಿಕೆ ಮಾತ್ರವಲ್ಲ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಗರ ಪ್ರದೇಶಗಳಲ್ಲಿ 6 ತ್ರೈಮಾಸಿಕಗಳ ಗರಿಷ್ಠ ಮಟ್ಟಕ್ಕೆ ಏರಿದ ಯುವ ನಿರುದ್ಯೋಗ ದರ

ದೇಶದ ನಗರ ಪ್ರದೇಶಗಳಲ್ಲಿ ಉದ್ಯೋಗದ ಕೊರತೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಯುವ...

ದೆಹಲಿಯಲ್ಲಿ ಮೇರೆ ಮೀರಿದ ವಾಯು ಮಾಲಿನ್ಯ-ತತ್ಕಾಲಕ್ಕೆ ನಗರ ತೊರೆವಂತೆ ವೈದ್ಯರ ಸಲಹೆ

ದೆಹಲಿಯಲ್ಲಿ ಉಸಿರುಗಟ್ಟಿಸುವ ವಾತಾವರಣ: ಪ್ರಾಣವಾಯುವಿಗಾಗಿ ಪರದಾಟ, ನಗರವನ್ನು ತಾತ್ಕಾಲಿಕವಾಗಿ ತೊರೆಯುವಂತೆ ವೈದ್ಯರ...

ತಮಿಳುನಾಡಿನಲ್ಲಿ 74 ಲಕ್ಷ ಮತದಾರರ ಹೆಸರು ದಿಢೀರ್ ನಾಪತ್ತೆ: ನ.26ರಂದು ಚೆನ್ನೈನಲ್ಲಿ ಬೃಹತ್ ರ‍್ಯಾಲಿ

ತಮಿಳುನಾಡಿನ ಮತದಾರರ ಪಟ್ಟಿಯಿಂದ 74.07 ಲಕ್ಷ ಮತದಾರರ ಹೆಸರನ್ನು ಕೈಬಿಡಲಾಗಿದೆ ಎಂದು...

ರಾಷ್ಟ್ರೀಯ ಶಿಕ್ಷಣ ದಿನ | ಶಿಕ್ಷಣ ಕ್ರಾಂತಿಯ ಹರಿಕಾರ-ಮೌಲಾನ ಅಬುಲ್ ಕಲಾಂ ಅಜಾದ್

ಮೌಲಾನಾ ಅಬುಲ್ ಕಲಾಂ ಆಜಾದ್ ಇದು ಅಪರೂಪದ ರಾಷ್ಟ್ರೀಯ ವ್ಯಕ್ತಿತ್ವ. ಅವರ...