ಈ ದಿನ ಸಂಪಾದಕೀಯ | ಕೋಟಿ ಕೋಟಿ ಅಲೆಮಾರಿಗಳನ್ನು ನಿಕೃಷ್ಟವಾಗಿ ನಡೆಸಿಕೊಳ್ಳುವುದು ದೇಶ ಎನಿಸಿಕೊಳ್ಳಲಾರದು

Date:

ಬೇಲಿಯೇ ಎದ್ದು ಹೊಲವನ್ನು ಮೇಯ್ದರೆ, ಗಿಡ ತನ್ನ ಹಣ್ಣುಗಳನ್ನು ತಾನೇ ತಿಂದು ಹಾಕಿದರೆ, ತಾಯಿಯೇ ಮಗುವಿಗೆ ವಿಷವೂಡಿಸಿದರೆ, ಹರನೇ ಕೊಂದರೆ ಪರ ಕಾಯ್ವನೇ ಎಂಬ ಸೋಮೇಶ್ವರ ಶತಕದಂತಾಗಿದೆ ಅಲೆಮಾರಿ- ಅರೆ ಅಲೆಮಾರಿ ಜನಾಂಗಗಳ ಸ್ಥಿತಿ. ಆಕಾಶದ ಚುಕ್ಕಿ ಚಂದ್ರಮರನ್ನು ಕಿತ್ತು ತಂದು ತಮ್ಮ ಕೈಗಿಡಬೇಕೆಂಬ ಅಸಾಧ್ಯ ಬೇಡಿಕೆಯನ್ನೇನೂ ಅವರು ಇಟ್ಟಿಲ್ಲ.

- Advertisement -

ಸ್ವತಂತ್ರ ಭಾರತದಲ್ಲಿ ಅಸ್ಪೃಶ್ಯತೆ ಆಚರಿಸುತ್ತಲೇ ಅಸ್ಪೃಶ್ಯರನ್ನು ಜನಗಣತಿಯ ಒಳಕ್ಕೆ ಬಿಟ್ಟುಕೊಳ್ಳಲಾಗಿದೆ. ಆ ಮಟ್ಟಿಗೆ ತಪ್ಪನ್ನು ತಿದ್ದಿಕೊಳ್ಳಲಾಗಿದೆ. ಆದರೆ ಸ್ವತಂತ್ರ ಭಾರತದ ಮೊಟ್ಟ ಮೊದಲ ಪೂರ್ಣಪ್ರಮಾಣದ ಜಾತಿ ಗಣತಿಯಿಂದ ಅಲೆಮಾರಿಗಳು ಮತ್ತು ಅರೆ ಅಲೆಮಾರಿ ಜನಾಂಗಗಳನ್ನು ಈಗಲೂ ಹೊರಗಿಡಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸುಪ್ರೀಂ ಆದೇಶವಿದ್ದರೂ ರಂಗೋಲಿ ಕೆಳಗೆ ತೂರುವ ಪೊಲೀಸರು: ಬಂಧಿತರ...

ಬಂಧಿಸಿದ 24 ಗಂಟೆಗಳ ಒಳಗಾಗಿ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದು ಸಂವಿಧಾನ ಬದ್ಧ ಹಕ್ಕು. ವಿಳಂಬವಾದರೆ ಬಿಡುಗಡೆ ಕಡ್ಡಾಯವೆಂದು ಸುಪ್ರೀಂ ಕೋರ್ಟ್ ಆದೇಶವಿದೆ. ಆದರೆ ಗಡಿಯಾರ ಟಿಕ್ ಟಿಕ್ ಅನ್ನುತ್ತಿದ್ದರೂ, ದಾಖಲೆಗಳಲ್ಲಿ ಸಮಯವನ್ನು...

ಕೊಪ್ಪಳ | 3 ವರ್ಷದಲ್ಲಿ 35,302 ಜಾನುವಾರುಗಳ ಸಾವು;...

ರೋಗಬಾಧೆ, ಅಪಘಾತ ಹಾಗೂ ವಿವಿಧ ಆಕಸ್ಮಿಕ ಕಾರಣಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಜಾನುವಾರುಗಳ ಸಾವಿನ ಪ್ರಕರಣಗಳು ಹೆಚ್ಚುತ್ತಿದ್ದು, ಜಾನುವಾರು ಕಳೆದುಕೊಂಡ ರೈತರು ಒಂದೆಡೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೆ, ಮತ್ತೊಂದೆಡೆ ಸರ್ಕಾರದ ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಕೊಪ್ಪಳ...

ಕೊಪ್ಪಳ | 8 ತಿಂಗಳಿನಿಂದ ಕಿಟ್‌ ವಿತರಣೆಯಿಲ್ಲ, ಮಲಗಲು...

ಕೊಪ್ಪಳ ನಗರದ ಡಾ.ಬಿ ಆರ್‌ ಅಂಬೇಡ್ಕರ್ ಸರಕಾರಿ ಮೆಟ್ರಿಕ್‌ ನಂತರದ ಬಾಲಕರ ವೃತ್ತಿಪರ ವಸತಿ (ಪರಿಶಿಷ್ಟ ಜಾತಿ) ನಿಲಯದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ಸುಮಾರು...

ಈ ಜನಾಂಗಗಳನ್ನು ಜನಗಣತಿಯ ವ್ಯಾಪ್ತಿಗೆ ಸೇರಿಸಬೇಕೆಂಬ ಜನಾಂಗಗಳ ಕೊಟ್ಟ ಕೊನೆಯ ಪ್ರಯತ್ನವೂ ಫಲ ನೀಡಿಲ್ಲ. ಈ ದೇಶದ ಕಟ್ಟಕಡೆಯ ಪ್ರಜೆಯ ಅಂತಿಮ ಅಹವಾಲಿಗೆ ಹೃದಯ ತೆರೆಯಬೇಕಾದ ಸುಪ್ರೀಮ್ ಕೋರ್ಟೇ ಸೂಕ್ಷ್ಮತೆ ತೋರದೆ ಕದ ಮುಚ್ಚಿದ್ದು ಅತ್ಯಂತ ನಿರಾಶಾಜನಕ. ಸರ್ಕಾರಗಳು ಸಮಾಜ, ನ್ಯಾಯಾಲಯಗಳು ಒಂದು ರೀತಿಯಲ್ಲಿ ಬ್ರಿಟಿಷರ ವಸಾಹತುಶಾಹಿ ಕ್ರೌರ್ಯವನ್ನೇ ಮುಂದುವರೆಸಿವೆ.  

ಅಲೆಮಾರಿಗಳು ಅರೆ ಅಲೆಮಾರಿ ಸಮುದಾಯಗಳು ಸಮಾಜದ ಹೊರಗಣ್ಣಿಗೂ ಕಾಣುತ್ತಿಲ್ಲ, ಒಳಗಣ್ಣಿಗೂ ವೇದ್ಯವಾಗುತ್ತಿಲ್ಲ. ಕಂಡೂ ಕಾಣದಂತೆ ಅವರನ್ನು ಅದೃಶ್ಯಗೊಳಿಸುವಲ್ಲಿ ವ್ಯವಸ್ಥೆಯೊಳಗೆ ಅಡಗಿರುವ ಅಂತರ್ಗತ ಪಿತೂರಿ ಗುಪ್ತಗಾಮಿನಿಯಾಗಿ ಪ್ರವಹಿಸಿದೆ. ಕ್ರೂರವಾಗಿ ನಡೆದುಕೊಳ್ಳುವವರಿಗೆ ತಾವು ಕ್ರೂರವಾಗಿ ನಡೆದುಕೊಳ್ಳುತ್ತಿದ್ದೇವೆ ಎಂಬ ಅರಿವೂ ಮೂಡದಿರುವುದು ಅತೀವ ವಿಡಂಬನೆಯ ದುರಂತ. ಏಳು ದಶಗಳ ನಂತರ ದಲಿತರು ಯಾರು, ಗಿರಿಜನರು ಆದಿವಾಸಿಗಳು ಯಾರು ಎಂಬ ಒಂದು ಅಸ್ಪಷ್ಟ ಅಂದಾಜು ಸಾಮಾಜಿಕ ಮುಖ್ಯವಾಹಿನಿಗೆ ಆಗಿದೆ. ಆದರೆ ಇದ್ದೂ ಇಲ್ಲದಂತೆ ಬದುಕಿರುವ ಅಲೆಮಾರಿಗಳು, ಅರೆ ಅಲೆಮಾರಿಗಳನ್ನು ಅಕ್ಷರಶಃ ಅದೃಶ್ಯಗೊಳಿಸಲಾಗಿದೆ.

ಮಹಾಶ್ವೇತಾದೇವಿ ಅವರು ಅಲೆಮಾರಿಗಳ ತಬ್ಬಲಿತನದ ಕುರಿತು ಬರೆದ ಒಂದು ಲೇಖನಕ್ಕೆ- ದ್ವೇಷ, ಅವಹೇಳನಕ್ಕೆ ತುತ್ತಾಗಿಸಿ ಕೊಚ್ಚಿ ಹಾಕಲಾಗಿರುವ ಸಮುದಾಯಗಳು ಎಂಬ ಶೀರ್ಷಿಕೆ ನೀಡಿದ್ದಾರೆ. ಬಡವರು, ದಲಿತರು, ಆದಿವಾಸಿಗಳು, ಎಲ್ ಜಿ ಬಿ ಟಿ ಕ್ಯೂ ಎ ಪ್ಲಸ್ ಸಮುದಾಯಗಳು ಎದುರಿಸುವ ಎಲ್ಲ ನಿರ್ಲಕ್ಷ್ಯ, ಭೇದಭಾವ ತಬ್ಬಲಿತನದ ಒಟ್ಟು ಮಾಡಿದ ಬವಣೆಯನ್ನು ಎದುರಿಸುವವರು ಯಾರಾದರೂ ಇದ್ದರೆ ಅವರು ಅಲೆಮಾರಿಗಳು ಮತ್ತು ಅರೆ ಅಲೆಮಾರಿ ಜನಾಂಗಗಳು ಎಂದು ರಾಜಕೀಯ-ಸಮಾಜಶಾಸ್ತ್ರಜ್ಞ ಪ್ರೊ.ಯೋಗೇಂದ್ರ ಯಾದವ್ ಅವರ ಬಣ್ಣನೆ ಅತ್ಯಂತ ಸೂಕ್ತ ಎನಿಸೀತು. ಅವರ ಬದುಕುಗಳು, ಕಲೆಗಳು, ಅರಿವಿನ ವಿವೇಕದ ಲೋಕಗಳು, ಅವರ ಸಂಸ್ಕೃತಿಗಳನ್ನು ಆಧುನಿಕತೆಯ ಹೆಸರಿನಲ್ಲಿ ಅಳಿಸಿ ಹಾಕಲಾಗಿದೆ. ಅವರು ಆಡುವ ಭಾಷೆಗಳಿಗೆ ಅನ್ ಷೆಡ್ಯೂಲ್ಡ್ ಲ್ಯಾಂಗ್ವೇಜಸ್ ಎಂಬ ಹಣೆಪಟ್ಟಿ ಹಚ್ಚಿ ಮೂಲೆಗೆ ತಳ್ಳಲಾಗಿದೆ. 1871ರ ಕ್ರಿಮಿನಲ್ ಟ್ರೈಬ್ಸ್ ಕಾಯಿದೆಯು ಇವರನ್ನು ಅತ್ಯಂತ ಹೇಯವಾಗಿ ನಡೆಸಿಕೊಂಡಿದೆ. ಪೊಲೀಸ್ ಠಾಣೆಗಳು ಅಪರಾಧಿಗಳೆಂದು ನಡೆಸಿಕೊಂಡಿವೆ. ಸದರಿ ಕಾಯಿದೆಯು ವಿಮೋಚನೆಯೇ ಇಲ್ಲದ ಶಾಪದಂತೆ ಈ ಜನರನ್ನು ಸುತ್ತಿ ಬಿಗಿದು ಉಸಿರು ಕಟ್ಟಿಸಿತ್ತು. ಈ ಶಾಪದಿಂದ ದೈಹಿಕ ವಿಮುಕ್ತಿ ದೊರೆತರೂ ಮಾನಸಿಕ ದಾಸ್ಯದಿಂದ ಈ ಸಮಾಜ ಅವರನ್ನು ಬಿಡುಗಡೆ ಮಾಡಿಯೇ ಇಲ್ಲ. ಈ ಜನಾಂಗಗಳ ಒಟ್ಟು ಸಂಖ್ಯೆ ಸಣ್ಣದೇನಲ್ಲ, ಎಂಟರಿಂದ ಹದಿನಾಲ್ಕು ಕೋಟಿ!

ಹಾಲಿ ಜನಗಣತಿಯಲ್ಲಿ ಜಾತಿ ಜನಗಣತಿಯೂ ಸೇರಿದೆ ಎಂದು ಮೋದಿ ಸರ್ಕಾರ ಘೋಷಿಸಿದೆ. ದಲಿತ ಜಾತಿಗಳು ಮತ್ತು ಆದಿವಾಸಿ ಪಂಗಡಗಳಿಗೆ ಪ್ರತ್ಯೇಕ ಕಾಲಂ ಇರುವಂತೆ ಜನಗಣತಿ ಫಾರಂನಲ್ಲಿ ತಮಗೂ ಪ್ರತ್ಯೇಕ ಕಾಲಂ ನೀಡಬೇಕೆಂಬುದು ಅಲೆಮಾರಿಗಳ ಬೇಡಿಕೆ. ಈ ಬೇಡಿಕೆಯನ್ನು ಸರ್ಕಾರವೂ ಮಾನ್ಯ ಮಾಡಿಲ್ಲ. ಸುಪ್ರೀಮ್ ಕೋರ್ಟ್ ಕೂಡ ತಳ್ಳಿ ಹಾಕಿತು. ಸರ್ಕಾರದ ಕದ ಬಡಿಯಿರಿ ಎಂದು ಸಾಗಹಾಕಿತು. ಅಲೆಮಾರಿಗಳ ಈ ಬೇಡಿಕೆ ಆಕಾಶದ ಚುಕ್ಕಿ ಚಂದ್ರಮರನ್ನು ಕಿತ್ತು ತಂದು ತಮ್ಮ ಕೈಗಿಡಬೇಕೆಂಬುದೇನೂ ಅಲ್ಲ. ಕೇಂದ್ರ ಸರ್ಕಾರ ಸ್ವಾತಂತ್ರ್ಯಾನಂತರ ನೇಮಿಸಿದ್ದ ರೆಂಕೆ ಆಯೋಗದ 2008ರ ವರದಿಯ ಪ್ರಕಾರ ಈ ಜನಾಂಗಗಳ ಜನಸಂಖ್ಯೆ ಸುಮಾರು 10.74 ಕೋಟಿ. ಇತ್ತೀಚಿನ 2027ರ ಇದಾತೆ ಆಯೋಗವು ವರ್ಗೀಕರಣ ಆಗದಿರುವ 269 ಅಲೆಮಾರಿ- ಅರೆ ಅಲೆಮಾರಿ ಜನಾಂಗಗಳನ್ನು ಗುರುತಿಸಿದೆ. ಅಷ್ಟೇ ಅಲ್ಲದೆ ಎಸ್.ಸಿ., ಎಸ್ಟಿ, ಹಾಗೂ ಒಬಿಸಿಗಳ ಪಟ್ಟಿಯಲ್ಲಿ ಬೆರೆತು ಹೋಗಿರುವ 1,200 ಸಮುದಾಯಗಳನ್ನೂ ಗುರುತಿಸಿದೆ. ಅಲೆಮಾರಿ ಮತ್ತು ಅರೆ ಅಲೆಮಾರಿಗಳನ್ನು ಮುಂದಿನ ಜನಗಣತಿಯಲ್ಲಿ ವರ್ಗೀಕರಿಸಿ ಎಣಿಕೆ ಮಾಡಬೇಕೆಂದು ಇದಾತೆ ಆಯೋಗ ಶಿಫಾರಸು ಮಾಡಿತ್ತು.

ಕೇಂದ್ರ ಸಾಮಾಜಿಕ ನ್ಯಾಯ ಮಂತ್ರಾಲಯವು ನಡೆಸಿದ ಮೂರು ದಿನಗಳ ಚಿಂತನ ಶಿಬಿರವೊಂದು ಇದೇ ಭಾನುವಾರ ಅಂತ್ಯಗೊಂಡಿತು. ಇತರೆ ಹಲವು ವಿಷಯಗಳ ಜೊತೆಗೆ ಅಲೆಮಾರಿಗಳು ಮತ್ತು ಅರೆ ಅಲೆಮಾರಿಗಳ ಎಣಿಕೆಯನ್ನು ಹಾಲಿ ಜನಗಣತಿಯಲ್ಲಿ ಸೇರಿಸುವ ಬೇಡಿಕೆಯನ್ನೂ ಚರ್ಚಿಸಲಾಯಿತು. ಕೇಂದ್ರ ಸರ್ಕಾರದ ಅಲೆಮಾರಿ ಕಲ್ಯಾಣ ಮಂಡಳಿಯ ಪ್ರಕಾರ ಅಲೆಮಾರಿಗಳ ಎಣಿಕೆಗೆ ಪ್ರತ್ಯೇಕ ಕಾಲಂ ಒದಗಿಸುವ ಕುರಿತು ಈ ಶಿಬಿರದಲ್ಲೂ ಸ್ಪಷ್ಟತೆ ಕಂಡು ಬಂದಿಲ್ಲ.

ಇತ್ತ ಕರ್ನಾಟಕ ರಾಜ್ಯ ಸರ್ಕಾರ ಕೂಡ ಅಲೆಮಾರಿಗಳಿಗೆ ಅನ್ಯಾಯ ಮುಂದುವರೆಸಿದೆ. ಒಳಮೀಸಲಾತಿ ಕುರಿತು ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗದ ವರದಿಯು ಅಲೆಮಾರಿಗಳಿಗೆ ಪ್ರತ್ಯೇಕವಾಗಿ ಶೇ.1ರಷ್ಟು ಒಳಮೀಸಲಾತಿ ಒದಗಿಸುವಂತೆ ಶಿಫಾರಸು ಮಾಡಿತ್ತು. ಆಯೋಗವನ್ನು ರಚಿಸಿದ್ದ ಸರ್ಕಾರ ಈ ಶಿಫಾರಸನ್ನು ಅಂಗೀಕರಿಸಲಿಲ್ಲ. ಬಲಿಷ್ಠ ಜಾತಿಗಳನ್ನು ತೃಪ್ತಿಪಡಿಸುವ ಅನ್ಯಾಯದ ನಿರ್ಧಾರವನ್ನು ಪ್ರಕಟಿಸಿತ್ತು. ಗರಿಷ್ಠ ಮೀಸಲಾತಿಯನ್ನು ನ್ಯಾಯಾಲಯದ ತೀರ್ಪಿನ ಪ್ರಕಾರ ಶೇ.50ಕ್ಕೆ ಸೀಮಿತಗೊಳಿಸಿ ತನ್ನ ನಿರ್ಧಾರವನ್ನು ರಾಜ್ಯ ಸರ್ಕಾರ ಮೊನ್ನೆ ಮರುವಿಮರ್ಶಿಸಿತು. ಒಳಮೀಸಲಾತಿಯ ಪ್ರಮಾಣ ಕುರಿತ ಈ ತೀರ್ಮಾನದಲ್ಲಿ ಕೂಡ ಅಲೆಮಾರಿಗಳಿಗೆ ಶೇ.1ರ ಪ್ರತ್ಯೇಕ ಮೀಸಲು ನೀಡದೆ ವಂಚಿಸಿದೆ.

ಬೇಲಿಯೇ ಎದ್ದು ಹೊಲವನ್ನು ಮೇಯ್ದರೆ, ಗಿಡ ತನ್ನ ಹಣ್ಣುಗಳನ್ನು ತಾನೇ ತಿಂದು ಹಾಕಿದರೆ, ತಾಯಿಯೇ ಮಗುವಿಗೆ ವಿಷವೂಡಿಸಿದರೆ, ಹರನೇ ಕೊಂದರೆ ಪರ ಕಾಯ್ವನೇ ಎಂಬ ಸೋಮೇಶ್ವರ ಶತಕದಂತಾಗಿದೆ ಅಲೆಮಾರಿ- ಅರೆ ಅಲೆಮಾರಿ ಜನಾಂಗಗಳ ಸ್ಥಿತಿ.

ಅಭಿವೃದ್ಧಿಯ ಫಲ ಉಂಡವರು, ಈಗ ಉಣ್ಣಲು ಶುರು ಮಾಡಿರುವವರು ಹಂಚಿಕೊಂಡು ಉಣ್ಣುವ ಭಾವ ತೋರದೆ ಇದ್ದರೆ ತಬ್ಬಲಿ ಜನಾಂಗಗಳು ತಬ್ಬಲಿಯಾಗಿಯೇ ಉಳಿಯುತ್ತವೆ. ಅವರ ಬದುಕಿನಲ್ಲಿ ಸ್ವಾತಂತ್ರ್ಯದ ಸೂರ್ಯ ಹುಟ್ಟುವುದೇ ಇಲ್ಲ. ಸಮಸಮಾಜದ ಘೋಷಣೆಗಳು ಕಾಗದದಲ್ಲೇ ಉಳಿದು ಹೋಗುತ್ತವೆ.

ವೋಟು ಬ್ಯಾಂಕುಗಳಾಗದೆ ಹೋದ ಜನಾಂಗಗಳ ತಬ್ಬಲಿತನದ ದುರಂತ ಕತೆಯಿದು. ಬದಲಾಗುವುದು ಎಂದಿಗೆ?

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಬಡವರನ್ನು ಸುಟ್ಟ ಬೆಲೆಯೇರಿಕೆ ಬಿಸಿ ಸರ್ಕಾರಗಳನ್ನೂ ಸುಟ್ಟೀತು

ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ನೀಡಿ, ಟಿಕೆಟ್‌ ದರ ಹೆಚ್ಚಿಸುವುದು ಪುರುಷರ...

ಮುಂಬರುವ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತದ ಮೂಲಕ ಆಕ್ರೋಶ ಹೊರಹಾಕಿ: ಕಾಂಗ್ರೆಸ್ ಕರೆ

ದೇಶದಲ್ಲಿ ನಿರಂತರವಾಗಿ ಬೆಲೆ ಏರಿಕೆಯಾಗುತ್ತಿದೆ, ಇದರಿಂದ ಸಾಲದ ಸುಳಿಯಲ್ಲಿ ಸಿಲುಕಿ ಸಾಮಾನ್ಯ...

ಮೋದಿ ಸರ್ಕಾರದಿಂದ ‘ಮತ ಕಳ್ಳತನ’ದ ನಂತರ ‘ಹಕ್ಕುಗಳ ಕಳ್ಳತನ’ ಶುರು: ರಾಹುಲ್ ಗಾಂಧಿ ಆಕ್ರೋಶ

ಕೇಂದ್ರ ಪಂಚಾಯತ್ ರಾಜ್ ಸಚಿವಾಲಯದ ಕಲ್ಯಾಣ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಲು ಆಧಾರ್...

ಕೊಪ್ಪಳ | 3 ವರ್ಷದಲ್ಲಿ 35,302 ಜಾನುವಾರುಗಳ ಸಾವು; ರೂ.264.61 ಲಕ್ಷ ಪರಿಹಾರ ಬಾಕಿ!

ರೋಗಬಾಧೆ, ಅಪಘಾತ ಹಾಗೂ ವಿವಿಧ ಆಕಸ್ಮಿಕ ಕಾರಣಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಜಾನುವಾರುಗಳ...