“ಕುರಿಯ ಹಿಕ್ಕೆಯೊಳಗೆ ಲಿಂಗ ಕಂಡ ನೆಲದಲ್ಲಿ ಜಾತೀಯತೆಯ ಕಿಚ್ಚೇಕೆ?”- ರಾಯಣ್ಣನ ಜಾತ್ರೆಯ ನೆಪದಲ್ಲಿ ಸಾಮರಸ್ಯದ ಹುಡುಕಾಟ

Date:

ವಿಜಯಪುರದ ಐತಿಹಾಸಿಕ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ಜನಸ್ತೋಮ ಕಿಕ್ಕಿರಿದು ತುಂಬಿದೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕುರುಬ ಕಾಯಕ ಪಂಗಡದ ಬಾಂಧವರು ಆಯೋಜಿಸಿರುವ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜಾತ್ರೆ’ ಕೇವಲ ಒಂದು ಸಮಾವೇಶವಾಗಿ ಉಳಿದಿಲ್ಲ; ಸಮುದಾಯದ ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಜಾಗೃತಿಯ ಮಹಾಸಂಗಮವಾಗಿ ರೂಪುಗೊಂಡಿದೆ. ಬ್ರಿಟಿಷರ ವಿರುದ್ಧ ರಣಕಹಳೆ ಊದಿದ ಕಿತ್ತೂರು ರಾಣಿ ಚೆನ್ನಮ್ಮಳ ಬಲಗೈ ಬಂಟ, ಅಪ್ರತಿಮ ದೇಶಪ್ರೇಮಿ ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ಇಂತಹದೊಂದು ಸಾಂಸ್ಕೃತಿಕ-ಸಾಮಾಜಿಕ ಜಾತ್ರೆ ಜರುಗುತ್ತಿರುವುದು ಹೆಮ್ಮೆಯ ಸಂಗತಿ.

ಆದರೆ, ಈ ಸಭಾಂಗಣದ ಗಡಿಯನ್ನು ಮೀರಿ ಒಣಿ-ಒಣ್ಯಾಗ, ಚಹಾ ಅಂಗಡ್ಯಾಗ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಮತ್ತದೇ ಸವಕಲು ಚರ್ಚೆ ಮುನ್ನೆಲೆಗೆ ಬಂದಿದೆ: “ಲಿಂಗಾಯತ-ಕುರುಬ”, “ಧರ್ಮ-ಜಾತಿ”, “ನಾವು-ನೀವು” ಎಂಬ ಗೋಡೆಗಳ ಜಿಜ್ಞಾಸೆ!

- Advertisement -

ಕಾಯಕ ಮತ್ತು ಶರಣ ಪರಂಪರೆಯ ಬೀಡಾದ ಈ ವಿಜಯಪುರ ಜಿಲ್ಲೆಯ ಮಣ್ಣಿನ ಗುಣವೇನು? ಒಮ್ಮೆ ಇತಿಹಾಸ ಮತ್ತು ಜಾನಪದದ ಕಣ್ಣು ತೆರೆದು ನೋಡಿದರೆ, ಕರ್ನಾಟಕದ ಉತ್ತರ ಭಾಗದ ಈ ನೆಲ ನಮಗೆ ಕಲಿಸಿಕೊಟ್ಟಿರುವ ಸಾಮರಸ್ಯದ ಮತ್ತ ಬಹುತ್ವದ ಪಾಠ ಬ್ಯಾರೆನೆ ಆಯಿತಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಗೊಲಗೇರಿಯ ವಚನ ಮತ್ತು ಮುಗ್ಧ ಭಕ್ತಿಯ ಪರಮ ಸತ್ಯ.

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ‘ಗೊಲಗೇರಿ’ ಗ್ರಾಮದ ಹೆಸರು ಕೇಳದ ಕರ್ನಾಟಕದ ಉತ್ತರ ಭಾಗದ ಮಂದಿಯಿಲ್ಲ. ಅಲ್ಲಿನ ಜಾನಪದ ಹಾಡ, ಡೊಳ್ಳಿನ ಪದ ಹಾಗೂ ತತ್ವಪದಗಳು ಇಡೀ ನಾಡಿನಾದ್ಯಂತ ಪ್ರಸಿದ್ಧ. ಈ ಗೋಲಗೇರಿಯ ನೆಲದಲ್ಲಿ ಪ್ರಚಲಿತವಿರುವ ಗೊಲ್ಲಾಳನ ಜನಪದ ಕಥೆಯಂತೂ ಭಕ್ತಿಯ ಪರಮ ಸತ್ಯವನ್ನು ಸಾರುತ್ತದೆ.

ಪ್ರತಿ ವರ್ಷ ಯುಗಾದಿಯ ಹೊತ್ತಿಗೆ ಶ್ರೀಶೈಲ ಮಲ್ಲಿಕಾರ್ಜುನನ ದರ್ಶನಕ್ಕೆ ನಾಡಿನ ರೈತಾಪಿ, ಕಾಯಕವರ್ಗದ ಹೆಣ್ಣು-ಗಂಡು, ಮಕ್ಕಳು, ವಯಸ್ಸಾದವರೆಲ್ಲ ಕಾಲ್ನಡಿಗೆಯಲ್ಲೇ ಭಕ್ತಿಯಿಂದ ಹೊರಡುವುದು ಇಂದಿಗೂ ನಡೆದುಬಂದಿರುವ ಸಂಪ್ರದಾಯ. ಹೀಗೆ ಊರವರೆಲ್ಲ ಶ್ರೀಶೈಲಕ್ಕೆ ಹೊರಟಾಗ, ದಾರಿಯಲ್ಲಿ ಕುರಿ ಕಾಯುತ್ತಿದ್ದ ಮುಗ್ಧ ಗೊಲ್ಲಾಳ, “ಎಲ್ಲಿಗೆ ಹೊಂಟೀರಪ್ಪ?” ಎಂದು ಕುತೂಹಲದಿಂದ ಕೇಳುತ್ತಾನೆ. “ನಾವು ಶ್ರೀಶೈಲ ಮಲ್ಲಿಕಾರ್ಜುನನ ಬೆಟ್ಟಕ್ಕೆ ಹೊಂಟೀವಿ” ಎಂದಾಗ, ಆ ಮುಗ್ಧ ಹುಡುಗ, “ಬರಾವಾಗ ನನಗೇನಾದರೂ ತರಬೇಕಲ್ಲ… ಯಣ್ಣಾ/ಯಕ್ಕಾ, ನನಗೊಂದು ಲಿಂಗ ತಗೊಂಡು ಬರ್ರಿ ಅಪ್ಪಾ” ಎಂದು ಕೇಳಿಕೊಳ್ಳುತ್ತಾನೆ.

ಯಾತ್ರೆ ಮುಗಿಸಿ ಹಿಂತಿರುಗಿ ಬಂದ ಜನರನ್ನು ಆ ಮುಗ್ಧ ಭಕ್ತಿಯಿಂದ ಎದುರ್ಗೊಂಡು, “ನನ್ನ ಲಿಂಗ ತಂದಿರಾ?” ಎಂದು ಕೇಳಿದಾಗ, ತರಲು ಮರೆತಿದ್ದ ಜನ ತಮಾಷೆಗೋ ಅಥವಾ ಚೇಷ್ಟೆಗೋ ಒಂದು ಕುರಿಯ ಹಿಕ್ಕಿಯನ್ನು ಅವನ ಕೈಗಿಟ್ಟುಬಿಡುತ್ತಾರೆ. ಆದರೆ, ಆ ಮುಗ್ಧ ಗೊಲ್ಲಾಳನಿಗೆ ಅದು ಕೇವಲ ಹಿಕ್ಕೆಯಾಗಿ ಕಾಣಲಿಲ್ಲ; ಅದೇ ಸಾಕ್ಷಾತ್ ಇಷ್ಟಲಿಂಗ, ಶ್ರೀಶೈಲದ ಮಲ್ಲಿಕಾರ್ಜುನನೇ ಎಂದು ನಂಬಿ ಪೂಜಿಸುತ್ತಾನೆ. ಆ ನಿಷ್ಕಲ್ಮಶ ನಂಬಿಕೆಗೆ ಸೋತು ಸಾಕ್ಷಾತ್ ಪರಶಿವನೇ ಒಲಿದು ಪ್ರತ್ಯಕ್ಷನಾಗುತ್ತಾನೆ.

“ಕುರಿಯ ಹಿಕ್ಕಿಯೊಳಗೆ ಲಿಂಗವ ಕಂಡ
ಗೊಲ್ಲಾಳನ ಭಕ್ತಿಗೆ ಒಲಿದವನೇ…”

ಎಂಬ ಜನಪದರ ಹಾಡು ಹುಟ್ಟಿದ್ದು ಹೀಗೆ. ಗೊಲಗೇರೆ ಗೊಲ್ಲಾಳೇಶ್ವರ ಜಾತಿ-ಮತ ಮೀರಿ ನಿಂತಿರುವ ಅಪಾರ ಶಕ್ತಿ. ಲಿಂಗಾಯತರು, ಕುರುಬರು ಸೇರಿದಂತೆ ಸಮಸ್ತ ಸಮಾಜದ ಜನ ಭಕ್ತಿಭಾವದಿಂದ ಆತನ ಗದ್ದುಗೆಗೆ ತಲೆಬಾಗುತ್ತಾರೆ. ಶರಣ ಧರ್ಮವು ಬಾಹ್ಯ ಪವಾಡಗಳಿಗಿಂತ ಅಂತರಂಗದ ನಿಷ್ಕಲ್ಮಶ ಭಕ್ತಿಗೆ ಹೆಚ್ಚು ಮಹತ್ವ ನೀಡುತ್ತದೆ. ಜನಪದರು ಆ ಮುಗ್ಧ ಭಕ್ತಿಯನ್ನೇ ದೈವಿಕ ಶಕ್ತಿಯಾಗಿ ಆರಾಧಿಸಿಕೊಂಡು ಬಂದಿದ್ದಾರೆ.

ವಚನ ಸಾಹಿತ್ಯದಲ್ಲಿ ಗೊಲ್ಲಾಳೇಶ್ವರನ ಅಧಿಕೃತ ದಾಖಲೆ

ವಚನ ಸಾಹಿತ್ಯದ ಸಂಪುಟಗಳಲ್ಲಿ ಶಿವಶರಣ ಗೊಲ್ಲಾಳಯ್ಯನವರ ಅಧಿಕೃತವಾಗಿ ಲಭ್ಯವಿರುವ ಏಕೈಕ ವಚನ ಹೀಗಿದೆ:
ಹಿಕ್ಕೆಯ ಕಂಡೆ, ಲಿಂಗವ ಕಂಡೆ,
ಲಿಂಗದೊಳಗೆ ಜಗವನೆಲ್ಲ ಕಂಡೆ.
ತನ್ನ ತಾನರಿದು ಬೆರೆತ ಬಳಿಕ
ಬೇರೆ ದೈವವೆಂಬುದುಂಟೆ?
ಎನ್ನಂತರಂಗದ ದೇವ ಗೊಲ್ಲಾಳೇಶ್ವರಾ.
(ಆಕರ: ಸಮಗ್ರ ವಚನ ಸಾಹಿತ್ಯ ಸಂಪುಟ – ಶಿವಶರಣರ ವಚನಗಳು)

ಕುರಿಯ ಹಿಕ್ಕಿಯೊಳಗೆ ಇಷ್ಟಲಿಂಗವನ್ನು ಕಂಡ ಮುಗ್ಧತೆ, ಅದೇ ಲಿಂಗದೊಳಗೆ ಇಡೀ ವಿಶ್ವವನ್ನು, ಸಕಲ ಜೀವರಾಶಿಯನ್ನು ಕಾಣುವ ಶರಣರ ವಿಶಾಲ ವಿಶ್ವದೃಷ್ಟಿಯಾಗಿ ಬೆಳಗಿರುವುದನ್ನು ಈ ವಚನ ಎತ್ತಿಹಿಡಿಯುತ್ತದೆ.

ಭಂಡಾರ, ಹರಿಕೆ, ಡೊಳ್ಳು ಮತ್ತು ಕುಸ್ತಿ ಪರಂಪರೆ

ಕುರುಬ ಕಾಯಕ ಪಂಗಡಕ್ಕೆ ತನ್ನದೇ ಆದ ವಿಶಿಷ್ಟ ಹಾಗೂ ಭವ್ಯ ಸಂಸ್ಕೃತಿಯಿದೆ:

  • ಭಂಡಾರ ಮತ್ತು ಡೊಳ್ಳಿನ ನಾದ: ಹಣೆಗೆ ಹಚ್ಚುವ ಹಳದಿ ಭಂಡಾರ ಸಮೃದ್ಧಿ, ತ್ಯಾಗ ಮತ್ತು ಸಾತ್ವಿಕತೆಯ ಸಂಕೇತ. ಕುರಿಯ ಚರ್ಮದಿಂದ ಕಟ್ಟಿದ ಡೊಳ್ಳಿನ ನಾದದಲ್ಲಿ ನಾಂದಿ ಪದ ಹಾಡುವಾಗ, “ಗಲಬಲ ಮಾಡ್ಬೇಡ್ರಿ, ಗದ್ದಲ ಎಬ್ಬಿಸಿ ಹೋಗ್ಬೇಡ್ರಿ… ನಾವು ನೀವು ಕುಳಿತು ಮಾತಾಡೋಣರಿ” ಎಂದು ಜನಪದರು ಎಚ್ಚರಿಸುತ್ತಾರೆ. ಗದ್ದಲವಿಲ್ಲದೆ ಶಾಂತವಾಗಿ ಕೂತು ಮಾತನಾಡುವುದೇ ನಮ್ಮ ಸಂಸ್ಕೃತಿಯ ಜೀವಾಳ.
  • ಕರಿಯ ಕಂಬಳಿಯ ಹರಿಕೆ ಪದ: ಕುರುಬ ಸಂಸ್ಕೃತಿಯಲ್ಲಿ ಹಾರೈಸುವ ‘ಹರಿಕೆ ಪದ’ಗಳಿಗೆ ಅದ್ಭುತ ಶಕ್ತಿಯಿದೆ. ಕರಿಯ ಕಂಬಳಿಯವರದ ಹಾರೈಕೆಯ ನುಡಿಗಳನ್ನು ಕೇಳಿ:

“ಮಾಳಿಗೆ ಮ್ಯಾಗ ಕೂರಿಗೆ ಹೂಡಿ ಮಾಣಿಕ್ಯ ಬಿತ್ತಿ ಬೆಳೆಯಲಿ,
ಅಂಗಳದಾಗ ಕೂರಿಗೆ ಹೂಡಿ ಬಂಗಾರ ಬಿತ್ತಿ ಬೆಳೆಯಲಿ… ಇದು ಕರಿಯ ಕಂಬಳಿದ ವರ ಹರಿಕಿ ಅಪ್ಪಾ!”
ನೆಲ, ಮಾಳಿಗೆ, ಅಂಗಳ ಎಲ್ಲೆಲ್ಲೂ ಸಮೃದ್ಧಿ ಮುತ್ತು-ಮಾಣಿಕ್ಯದಂತೆ ಬೆಳೆಯಲಿ ಎಂದು ಸರ್ವರಿಗೂ ಶುಭ ಕೋರುವ ಎಂಥ ಉದಾತ್ತ ಸಂಸ್ಕೃತಿ ಇದು!

ಇದು ಸಂಗಠಾಣದವರು ನಮ್ಮ ಆಯಿ ತವರಮನಿಗಿ ಹಾರೈಸುವ ಪದ.

ವೈಯಕ್ತಿಕ ಅನುಭವ ಮತ್ತು ಬೆಸೆದ ಕರುಳುಬಳ್ಳಿ

ನನ್ನದೇ ವೈಯಕ್ತಿಕ ಬದುಕಿನ ನಿದರ್ಶನವನ್ನೇ ಇಲ್ಲಿ ಹಂಚಿಕೊಳ್ಳಬಯಸುತ್ತೇನೆ. ಕುರುಬ ಕಾಯಕ ಪರಂಪರೆಯ ಮಹಾತಾಯಿಯಾಗಿ, ಜಗನ್ಮಾತೆಯಾಗಿ ಬೆಳಗಿದ ಸಜ್ಜಲಗುಡ್ಡದ ಶರಣಮ್ಮ ತಾಯಿ ನಮಗೆ ಸಾಕ್ಷಾತ್ ಗುರುಮಾತೆ. ನನ್ನ ತಾಯಿಯ ಗರ್ಭದಲ್ಲಿದ್ದಾಗ, “ಮಗ ಹುಟ್ಟಿದರೆ ಬಸವಲಿಂಗ ಅಂತ ಹೆಸರು ಇಡು” ಎಂದು ಆಶೀರ್ವದಿಸಿದವಳು ಆ ಶರಣಮ್ಮ ತಾಯಿ. ಆ ಕಾರಣದಿಂದಲೇ ನಮ್ಮವ್ವ ನನಗೆ ‘ಬಸವಲಿಂಗಪ್ಪಗೌಡ’ ಎಂದು ಹೆಸರಿಟ್ಟಳು. ಶರಣ ಪರಂಪರೆ ಮತ್ತು ಕುರುಬ ಕಾಯಕ ಪಂಗಡದ ನಡುವಿನ ಆತ್ಮೀಯ ಕರುಳುಬಳ್ಳಿ ಬೆಸೆದುಕೊಂಡಿರುವುದು ಇಂಥ ಜೀವಪರ ನಂಬಿಕೆಗಳ ಮೇಲೆ.

ವಚನದ ಬೆಳಕಿನಲ್ಲಿ ಇಂದಿನ ವಾಸ್ತವ

ಹನ್ನೆರಡನೆಯ ಶತಮಾನದ ಶರಣ ಚಳವಳಿಯ ತಿರುಳೇ “ಕಾಯಕವೇ ಕೈಲಾಸ” ಮತ್ತು “ಜಾತಿಭೇದವಿಲ್ಲದ ಸಮಾನತೆ”.

ಬಸವಣ್ಣನವರು ತಮ್ಮ ವಚನದಲ್ಲಿ ಎಚ್ಚರಿಸಿದ ಮಾತು ಇಂದಿಗೂ ಪ್ರಸ್ತುತ:

“ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆಯ ಸುಡಲರಿಯದು.
ತನ್ನೊಳಗಣ ಕೋಪ ತನ್ನ ಸುಟ್ಟಲ್ಲದೆ
ನೆರೆಮನೆಯವರ ಸುಡಲರಿಯದು…”
(ಆಕರ: ಬಸವಣ್ಣನವರ ವಚನ ಸಂಪುಟ, ವಚನ ಸಂಖ್ಯೆ: ೨೪೭)

ಇಂದು ಸಮಾಜದಲ್ಲಿ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಎದ್ದಿರುವ ಅಹಂಕಾರ ಮತ್ತು ಕಹಿ ಭಾವನೆಗಳು ಆ ವಚನದಲ್ಲಿ ಹೇಳಿದ ಮನೆಯೊಳಗಣ ಕಿಚ್ಚಿನಂತೆ. ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನ ನಡುವಿನ ಬಾಂಧವ್ಯವು ನಾಡು ಮತ್ತು ಸ್ವಾಭಿಮಾನಕ್ಕಾಗಿ ಜೀವವನ್ನೇ ಮುಡಿಪಾಗಿಟ್ಟ ಇತಿಹಾಸ. ಅಂದು ರಾಣಿ ಚೆನ್ನಮ್ಮನಿಗೆ ರಾಯಣ್ಣ ತೋರಿದ ನಿಷ್ಠೆ, ಒಡನಾಟ ಇಡೀ ನಾಡಿನ ಸಮಗ್ರತೆಯ ಪ್ರತೀಕ.

ವಿಜಯಪುರದ ದರ್ಬಾರ್ ಮೈದಾನದಲ್ಲಿ ನಡೆಯುತ್ತಿರುವ ರಾಯಣ್ಣನ ಜಾತ್ರೆ ಸಮುದಾಯದ ಯುವಜನರಿಗೆ ಶಿಕ್ಷಣದ ದಾರಿ ತೋರಲಿ, ಆರ್ಥಿಕ-ಸಾಮಾಜಿಕ ಪ್ರಗತಿಯ ಚಿಂತನೆಗೆ ವೇದಿಕೆಯಾಗಲಿ. ಗಲಬಲ-ಗದ್ದಲವಿಲ್ಲದೆ ಒಟ್ಟಾಗಿ ಕುಳಿತು ಮಾತಾಡುವ ಆ ಡೊಳ್ಳಿನ ಪದದ ಪ್ರಬುದ್ಧತೆ, ಎಲ್ಲರಿಗೂ ಬಂಗಾರ-ಮಾಣಿಕ್ಯ ಬೆಳೆಯಲಿ ಎಂದು ಹಾರೈಸುವ ಕರಿಯ ಕಂಬಳಿಯ ಮನಸ್ಸು ಮತ್ತು ಗೊಲಗೇರಿ ಗೊಲ್ಲಾಳನ ಮುಗ್ಧ ಸಾಮರಸ್ಯ ನಮ್ಮೆಲ್ಲರ ಬದುಕಿನ ಮಾರ್ಗದರ್ಶಿಯಾಗಲಿ.

ಆಕರ ಗ್ರಂಥಗಳು (Citations):

  • ಸಮಗ್ರ ವಚನ ಸಾಹಿತ್ಯ ಸಂಪುಟಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ.
  • ಬಸವಣ್ಣನವರ ಸಮಗ್ರ ವಚನಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
  • ಶರಣ ಚರಿತ್ರೆ ಹಾಗೂ ಜಾನಪದ ಅಧ್ಯಯನ, ಕರ್ನಾಟಕ ಜಾನಪದ ಅಕಾಡೆಮಿ ಪ್ರಕಟಣೆ.
  • ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಐತಿಹಾಸಿಕ ದಾಖಲೆಗಳು, ಇತಿಹಾಸ ಸಂಶೋಧನಾ ಮಂಡಳಿ.

WhatsApp Image 2026 02 02 at 12.22.13 e1770015405615
ಬಸವ ಪಾಟೀಲ್‌
+ posts

ಆರೋಗ್ಯ-ತಂತ್ರಜ್ಞಾನ ಸಲಹೆಗಾರ, ಬರಹಗಾರ. ಲಂಡನ್‌

ಪೋಸ್ಟ್ ಹಂಚಿಕೊಳ್ಳಿ:

ಬಸವ ಪಾಟೀಲ್‌
ಬಸವ ಪಾಟೀಲ್‌
ಆರೋಗ್ಯ-ತಂತ್ರಜ್ಞಾನ ಸಲಹೆಗಾರ, ಬರಹಗಾರ. ಲಂಡನ್‌

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಲೈಂಗಿಕ ಕಿರುಕುಳ ಆರೋಪ; ಪ್ರಾಧ್ಯಾಪಕ ಹುದ್ದೆಯಿಂದ ಕಾಂಗ್ರೆಸ್ ಸಂಸದ ಬಿಮೋಲ್ ವಜಾ

11 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ಹಾಗೂ ಅನುಚಿತ ವರ್ತನೆಯ ಆರೋಪದಡಿ ದೂರು...

ಬೀದರ್‌ | ಕಾನ್ಶಿರಾಂ ಹೋರಾಟ ಬಹುಜನರ ರಾಜಕೀಯ ಜಾಗೃತಿಗೆ ದಾರಿದೀಪ

ಬೀದರ್ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಬಹುಜನ ಸಂಘಟನೆಗಳ...

ವಿಜಯನಗರ | ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ವಿದ್ಯಾರ್ಥಿ-ಯುವಜನ ಸಂಘಟನೆಗಳ ಬೃಹತ್ ಪ್ರತಿಭಟನೆ

ಜನವಿರೋಧಿ ಎಸ್‌ಐಆರ್ (SIR) ರದ್ದುಪಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...