ಧರೆಯ ಗರ್ಭದಿಂದ ಸಂವಿಧಾನದವರೆಗೆ: ಅಸ್ಪೃಶ್ಯತೆಯ ಬೇರು ಸವರಲು ಬಸವ-ಭೀಮ ಮಾರ್ಗ

Date:

 ‘ಜೈ ಭೀಮ್’ ಎಂಬುದು ಕೇವಲ ಒಂದು ಘೋಷಣೆಯಲ್ಲ, ಅದು ನಮ್ಮೊಳಗಿನ ಕ್ರಾಂತಿಯ ಮುನ್ನುಡಿ! ನಮ್ಮೊಳಗೆ ಭುಗಿಲೇಳಬೇಕಾದ ಮಾನಸಿಕ ಸ್ವಾತಂತ್ರ್ಯದ ಅಲೆ. ನೀಲಿ ಬಾನಿನ ಕೆಳಗೆ ನಾವೆಲ್ಲರೂ ಸಮಾನರು ಎಂದು ಸಾರುವ ಧೀಶಕ್ತಿಯ ಬೆಳಕು.

ನಿನ್ನೆ (ಆಗಸ್ಟ್ 29) ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ನಡೆಸಿದ ಪತ್ರಿಕಾಗೋಷ್ಠಿಯನ್ನು ಗಮನಿಸಿದಾಗ ನನ್ನ ಮನಸ್ಸು ತೀವ್ರವಾಗಿ ಕಲಕಿತು. ದೇಶದ ಹಿರಿಯ ಮುತ್ಸದ್ದಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹಲ್ದ್ವಾನಿಗೆ ಭೇಟಿ ನೀಡಿದ ನಂತರ ನಡೆದ “ಶುದ್ಧೀಕರಣ”ದ ಪ್ರಹಸನ ಮತ್ತು ಇಪ್ಪತ್ತು ದಿನ ಕಳೆದರೂ ಎಫ್‌ಐಆರ್ ದಾಖಲಾಗದಿರುವ ವಾಸ್ತವವನ್ನು ಅವರು ಬಿಚ್ಚಿಟ್ಟರು. ದಲಿತರು ಧ್ವನಿ ಎತ್ತಿದಷ್ಟೂ ಅವರ ಮೇಲಿನ ದಾಳಿ ತೀವ್ರವಾಗುತ್ತದೆ ಎಂಬ ಅವರ ಮಾತುಗಳನ್ನು ಕೇಳುತ್ತಿದ್ದಂತೆ, ಒಬ್ಬ ಸಾಮಾಜಿಕ ಸಂವೇದೀಯ ಬರಹಗಾರನಾಗಿ ಮತ್ತು ಬಸವಾದಿ ಶರಣರ ತತ್ವದ ಅನುಯಾಯಿಯಾಗಿ, ಕಳೆದ ಒಂದು ದಶಕದಿಂದ ಭಾರತೀಯ ಸಮಾಜದ ಬಗ್ಗೆ ನಾನು ನಡೆಸಿಕೊಂಡು ಬಂದ ವೈಚಾರಿಕ ಚಿಂತನೆಗಳು ಮತ್ತೆ ಮುನ್ನೆಲೆಗೆ ಬಂದವು.

- Advertisement -

2014ರಲ್ಲಿ ನಾನು ಕೆನಡಾದಲ್ಲಿದ್ದಾಗ ಬರೆದ “ಧರೆಯ ಗರ್ಭದಲ್ಲಿ ಜನಿಸಿದ ವಿಚಾರ” ಕವನ (ಅಂಕಿತನಾಮ: ಮಂಜು”ಶ್ರೀ”ಪಾಟೀಲ್) ನೆನಪಾಗುತ್ತದೆ. ಹೊಲದಲ್ಲಿ ಬಿದ್ದ ಬೀಜ ಮೊಳಕೆಯೊಡೆದು, ತಾಯ ಗರ್ಭದಿಂದ ಜೀವಂತ ಮಾಂಸದ ಮುದ್ದೆಯಾಗಿ ಕಂದಮ್ಮ ಧರೆಗಿಳಿಯುವಾಗ ಯಾವ ಜಾತೀಯ ಕಳಂಕವೂ ಇರುವುದಿಲ್ಲ. ಲೌಕಿಕದ ಗಾಳಿ, ನೀರು, ಬೆಳಕು ತಾಗುವ ಮುನ್ನವೇ ನಾಮಕರಣ, ಧಾರ್ಮೀಕರಣ, ಜಾತೀಕರಣದ ಮುದ್ರೆ ಒತ್ತಿ ಮನುಷ್ಯತ್ವವನ್ನು ಸೀಳುವ ಅಧಿಕಾರವನ್ನು ಈ ಜಾತೀಯುಕ್ತ ಸಮಾಜಕ್ಕೆ ಕೊಟ್ಟವರು ಯಾರು? ಯಾರೋ ಬರೆದಿಟ್ಟ ವಿಚಾರಗಳ ಆಧಾರದ ಮೇಲೆ ಮನುಷ್ಯನನ್ನು ಶಾಸ್ತ್ರೀಕರಣಗೊಳಿಸುವ ವ್ಯವಸ್ಥೆಗೆ ನಾನು ಅಂದೇ ಮೌಲಿಕ ಪ್ರಶ್ನೆ ಹಾಕಿದ್ದೆ. ಹುಟ್ಟಿನಿಂದಲೇ ಅಂಟಿಸುವ ಈ ‘ಜಾತಿ’ ಭಾರತೀಯ ಸಮಾಜವನ್ನು ಕಾಡುತ್ತಿರುವ ಬಹುದೊಡ್ಡ ಮಾನಸಿಕ ರೋಗ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ನಂತರ ಪರದೇಶದಲ್ಲಿ, ಲಂಡನ್‌ನಲ್ಲಿದ್ದಾಗಲೂ ಭಾರತೀಯ ಸಮಾಜದ ಅಸ್ಪೃಶ್ಯತೆಯ ಕರಾಳ ವಾಸ್ತವ ನನ್ನನ್ನು ಕಾಡುತ್ತಲೇ ಇತ್ತು. 2020ರಲ್ಲಿ ಬರೆದ ‘ಭೀಮವ್ವ’ ಕವನದಲ್ಲಿ ಇಡೀ ಅಸ್ಪೃಶ್ಯ ಸಮಾಜದ ನೋವನ್ನು ನಾನು ತಾಯಿ ಸ್ವರೂಪಿಯಾಗಿ ಕಂಡೆ. ಗೌಡರ ಮನೆಯನ್ನು ಸ್ವಚ್ಛವಾಗಿಟ್ಟು, ತಾನು ಹರಿದ ಸೀರೆಯುಟ್ಟು ಬದುಕಿದ ಆಕೆ ಶ್ರದ್ಧೆಯಿಂದ ಕಾಯಕ ಮಾಡಿದರೂ ಗೌಡರು ಹಾಕಿದ್ದು ತಂಗಳ ರೊಟ್ಟಿ. ಊರವರ ಬಚ್ಚಲು ನೀರನ್ನು ಚೆಲ್ಲುವ ಆಕೆಗೆ ಜಳಕ ಮಾಡಲು ನೀರಿಲ್ಲ; ದುಡಿಯುವವಳು ಕಾಯಕಿಯಾದರೆ, ದುಡಿಸಿಕೊಳ್ಳುವವನು ಕರ್ಮ ಸಿದ್ಧಾಂತಿ! ಇಂತಹ ನೂರಾರು ಭೀಮವ್ವಂದಿರಿಗೆ ನಲವತ್ತೇಳರ ಸ್ವಾತಂತ್ರ್ಯದ ನೈಜ ಅರ್ಥ ತಿಳಿಯಲೇ ಇಲ್ಲ. ಆದರೆ ನನ್ನ ವೈಚಾರಿಕ ಅವ್ವಯಾದ ಆಕೆಯ ಮೂಕ ಭಾಷೆಯಲ್ಲೇ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಪಾಠವಿತ್ತು.

ನನ್ನ ಆಲೋಚನೆಗಳು ಮುಂದುವರಿದಂತೆ, ಲಂಡನ್‌ನಲ್ಲಿದ್ದ ದಿನಗಳಲ್ಲೇ ‘ಮಡಿವಾಳ ಮಾಚಿತಂದೆ’ ಅಂಕಿತನಾಮದಲ್ಲಿ ವಚನವೊಂದನ್ನು ಬರೆದು ನೇರವಾಗಿ ಪ್ರಶ್ನಿಸಿದ್ದೆ: “ಅಸ್ಪೃಶ್ಯತೆ ಎಲ್ಲೈತರಿ? ನಾವೆಲ್ಲಾ ಸಮಾನರು!” ನಿಮ್ಮ ಸರ್ಟಿಫಿಕೇಟಿನಲ್ಲಿ ಜಾತಿಯ ಗುರುತುಗಳನ್ನು ಹುಡುಕುವವರಿಗೆ, ಆಹಾರದಲ್ಲಿ ಶ್ರೇಷ್ಠತೆಯನ್ನು ಬಿತ್ತುವವರಿಗೆ ನಾವು ದಿಟ್ಟವಾಗಿ ಉತ್ತರಿಸಬೇಕಿದೆ. ಆಹಾರ ಯಾವುದಾದರೇನು, ಕಾಯಕ ಯಾವುದಾದರೇನು—ಮನಸ್ಸುಗಳೊಳಗಿನ ಜಾತಿಯ ಗಲೀಜು ತೊಳೆದಾಗ ಮಾತ್ರ ನಿಜವಾದ ನೈರ್ಮಲ್ಯ.

ಈ ಲೇಖನ ಓದಿದ್ದೀರಾ?: ಸಂವಿಧಾನದ ಕರಡು ಸಮಿತಿ ರಚನೆಯಾದ ದಿನವಿದು: ಏಳು ಮಂದಿಯ ಪೈಕಿ ಅಂಬೇಡ್ಕರ್ ಅಧ್ಯಕ್ಷರಾದದ್ದು ಹೇಗೆ?

ಕೇವಲ ನೋವನ್ನು ಹೇಳಿಕೊಳ್ಳುವುದರಿಂದ ಬದಲಾವಣೆ ಬರುವುದಿಲ್ಲ; ಅದಕ್ಕೊಂದು ಕ್ರಾಂತಿಕಾರಿ ಮುನ್ನುಡಿ ಬೇಕು. ಅದಕ್ಕಾಗಿಯೇ 2023ರ ಸುಮಾರಿಗೆ ‘ಜೈ ಭೀಮ್’ ಕವನವನ್ನು ಕಟ್ಟಿಕೊಟ್ಟೆ. ‘ಜೈ ಭೀಮ್’ ಎಂಬುದು ಕೇವಲ ಒಂದು ಘೋಷಣೆಯಲ್ಲ, ಅದು ನಮ್ಮೊಳಗಿನ ಕ್ರಾಂತಿಯ ಮುನ್ನುಡಿ! ನಮ್ಮೊಳಗೆ ಭುಗಿಲೇಳಬೇಕಾದ ಮಾನಸಿಕ ಸ್ವಾತಂತ್ರ್ಯದ ಅಲೆ. ನೀಲಿ ಬಾನಿನ ಕೆಳಗೆ ನಾವೆಲ್ಲರೂ ಸಮಾನರು ಎಂದು ಸಾರುವ ಧೀಶಕ್ತಿಯ ಬೆಳಕು.

ಕನ್ನಡದ ನೆಲದಿಂದ ಇಡೀ ಭಾರತಕ್ಕೆ ನನ್ನದೊಂದು ನೇರ ಕರೆ: ಅಸ್ಪೃಶ್ಯತೆ ಎಂಬುದು ಮಾನವಕುಲ ವಿರೋಧಿ ಕೃತ್ಯ, ಜಾತಿ ಎಂಬುದು ಹುಟ್ಟಿನಿಂದ ಬಂದ ಸಾಮಾಜಿಕ ರೋಗ. ಬಸವಣ್ಣನವರ ಕಾಯಕ-ದಾಸೋಹದ ಸಮಾನತೆ ಮತ್ತು ಬಾಬಾಸಾಹೇಬರ ಸಾಂವಿಧಾನಿಕ ಹಕ್ಕುಗಳನ್ನು ಎದೆಯಲ್ಲಿಟ್ಟುಕೊಂಡು ನಾವೆಲ್ಲರೂ ಎದ್ದು ನಿಲ್ಲಬೇಕಿದೆ. ಸಂವಿಧಾನ ನಮಗೆ ನೀಡಿರುವ ಹಕ್ಕುಗಳಿಗಾಗಿ, ಭೀಮವ್ವನಂತಹ ತಾಯಂದಿರ ಸ್ವಾಭಿಮಾನಕ್ಕಾಗಿ, ಶಿಕ್ಷಣ, ಸಂಘಟನೆ ಮತ್ತು ಸಂವಿಧಾನಬದ್ಧ ಹೋರಾಟದ ಮೂಲಕ ಜಾತಿಯ ಕತ್ತಲೆಯನ್ನು ಕಳೆದು ಸಮ ಸಮಾಜ ಕಟ್ಟಲು ಒಟ್ಟಾಗಿ ಮುನ್ನುಗ್ಗೋಣ!

ಪೋಸ್ಟ್ ಹಂಚಿಕೊಳ್ಳಿ:

ಬಸವ ಪಾಟೀಲ್‌
ಬಸವ ಪಾಟೀಲ್‌
ಆರೋಗ್ಯ-ತಂತ್ರಜ್ಞಾನ ಸಲಹೆಗಾರ, ಬರಹಗಾರ. ಲಂಡನ್‌

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ...

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...

ಬಾಗಲಕೋಟೆ | ನಿಲ್ದಾಣಗಳಿದ್ದರೂ ರಸ್ತೆಯಲ್ಲೇ ಬಸ್‌ ನಿಲುಗಡೆ; ಟ್ರಾಫಿಕ್ ಕಿರಿಕಿರಿಗೆ ಪ್ರಯಾಣಿಕರು ಹೈರಾಣ

ಬಾಗಲಕೋಟೆ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಬಸ್‌ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಪ್ರಯಾಣಿಕರು ಬಿಸಿಲು,...

ಸಿಜೆಪಿ ನಾಯಕರ ಬಂಧನಕ್ಕೆ ತೀವ್ರ ಖಂಡನೆ: ತಕ್ಷಣ ರಾಂಕಾ, ಸೌರವ್ ಬಿಡುಗಡೆಗೆ ವಿಪಕ್ಷಗಳ ಆಗ್ರಹ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...