ಸರ್ಕಾರದ ಮಾನ್ಯತೆ ಪಡೆದ ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ಭಾಲ್ಕಿ ತಾಲೂಕು ಘಟಕದ 2026-31ನೇ ಸಾಲಿನ ಅಧ್ಯಕ್ಷರಾಗಿ ಉತ್ತಮ ಶಿಂಧೆ ಅವರು ಎರಡನೇ ಬಾರಿಗೆ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.
ಸಂಘದ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಅಧಿಸೂಚನೆ ಪ್ರಕಟಿಸಲಾಗಿತ್ತು. ಅದರಂತೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಉತ್ತಮ ಶಿಂದೆ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಶಿಕ್ಷಕರ ಸಮಸ್ಯೆಗಳು ಹಾಗೂ ಹಕ್ಕುಗಳ ಕುರಿತು ಅವರು ತೋರುತ್ತಿರುವ ಕಾಳಜಿ ಮತ್ತು ಶಿಕ್ಷಕರಲ್ಲಿರುವ ವಿಶ್ವಾಸ ಹಾಗೂ ಅಭಿಮಾನದಿಂದಾಗಿ ಎರಡನೇ ಅವಧಿಗೂ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ತಾಲೂಕು ಘಟಕಕ್ಕೆ 12 ನಿರ್ದೇಶಕರ ಆಯ್ಕೆ ನಡೆದಿದ್ದು, ಬಳಿಕ ವಿವಿಧ ಪದಾಧಿಕಾರಿಗಳನ್ನು ನೇಮಿಸಲಾಗಿದೆ. ಪ್ರಧಾನ ಕಾರ್ಯದರ್ಶಿಯಾಗಿ ಬಾಳಪ್ಪ ಹಾಗೂ ಖಜಾಂಚಿಯಾಗಿ ಸಂಗಮೇಶ ಆಯ್ಕೆಯಾಗಿದರು.
ನಿರ್ದೇಶಕರಾಗಿ ಉಮಾಲತಾ ರೆಡ್ಡಿ, ರವಿಚಂದ್ರ ಮೈನಾಳೆ, ರುಕ್ಮವ್ವ ನಾಟೆಕಾರ್, ಡಾ.ಮೇರಿ ಬಿವಲಾ, ಸಂತೋಷ ಬಾಬುರಾವ, ಜೆಟ್ಟೆಪ್ಪ ವಾಲಿಕಾರ, ಬಸವನಗೌಡ, ನವಾಜ್ ಅಲಿ ಹಾಗೂ ಗೋವಿಂದ ಭಂಡಾರೆ ನೇಮಕಗೊಂಡಿದ್ದಾರೆ.
ಇದನ್ನೂ ಓದಿ : ಭಾಲ್ಕಿ | ಗಾಂಧೀಜಿ ಅಹಿಂಸಾ ತತ್ವ ಬದುಕಿನಲ್ಲಿ ಅನುಸರಿಸಿ : ಮಲ್ಲಿಕಾರ್ಜುನ ಹಲ್ಮಂಡಗೆ
ನೂತನ ಪದಾಧಿಕಾರಿಗಳು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆಗೆ ಶಿಕ್ಷಕರ ಹಿತಾಸಕ್ತಿ ಕಾಪಾಡಲು ಹಾಗೂ ಸಂಘವನ್ನು ಮತ್ತಷ್ಟು ಬಲಪಡಿಸಲು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದ್ದಾರೆ.




