ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಪಿಎಂ ಶ್ರೀ ಜವಾಹರ ನವೋದಯ ವಿದ್ಯಾಲಯ 2026- 27ನೇ ಸಾಲಿನ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲ ನಾಗರಾಜನ್ ತಿಳಿಸಿದ್ದಾರೆ.
ಬೀದರ ಜಿಲ್ಲೆಯ ನಿವಾಸಿಯಾಗಿದ್ದು, ಬೀದರ್ ಜಿಲ್ಲೆಯಲ್ಲಿಯೇ ಐದನೇ ತರಗತಿ ಓದುತ್ತಿರುವವರು ಹಾಗೂ 2015ರ ಮೇ 01 ರಿಂದ 2017ರ ಜುಲೈ 31ರ ಮದ್ಯದಲ್ಲಿ ಜನಿಸಿದವರಾಗಿರಬೇಕು. 3, 4 ಮತ್ತು 5ನೇ ತರಗತಿಯ ಪೂರ್ಣ ಶೈಕ್ಷಣಿಕ ವರ್ಷ ಅಧ್ಯಯನ ಮಾಡಿರಬೇಕು. ಅರ್ಜಿಗಳು ಆನ್‌ಲೈನ್‌ನಲ್ಲಿ ಈಗಾಗಲೇ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2026ರ ಜುಲೈ 31ರ ಒಳಗೆ ಅರ್ಜಿಸಲ್ಲಿಸಬೇಕು. ಪ್ರವೇಶ ಪರೀಕ್ಷೆಯು 2026ರ ನವೆಂಬರ್ 28 ರಂದು ನಡೆಸಲು ನಿರ್ಧರಿಸಲಾಗಿದೆ. ಬೀದರ ಜಿಲ್ಲೆಯ ನಿವಾಸಿಗಳಾಗಿರುವ 5ನೇ ತರಗತಿ ವಿದ್ಯಾರ್ಥಿಗಳು ಇದರ ಲಾಭವನ್ನು ಪಡೆದುಕೊಂಡು, ಆನ್ ಲೈನ್ ಮೂಲಕ ಅರ್ಜಿಸಲ್ಲಿಸಬೇಕು.
ಇದನ್ನೂ ಓದಿ : ಬೀದರ್ | ಮಳೆ ಕೊರತೆ : ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ರೈತರು, ಬರಪೀಡಿತ ಜಿಲ್ಲೆ ಘೋಷಿಸಲು ಸಿಎಂಗೆ ಮನವಿ
ಅರ್ಜಿಯು ವೆಬ್ ಸೈಟ್ navodaya.gov.in ನಲ್ಲಿ ಕ್ಲಿಕ್ ಮಾಡಿದರೆ ಪೋರ್ಟಲ್ ಓಪನ್ ಆಗುತ್ತದೆ, ಕೇಳಿರುವ ಮಾಹಿತಿಯನ್ನು ಸರಿಯಾಗಿ ತುಂಬಿ ಅರ್ಜಿಸಲ್ಲಿಸಬೇಕು ಎಂದು ತಿಳಿಸಿದ್ದಾರೆ.




