ಗ್ರಾಮಾಂತರ ಸಾರಿಗೆ ಬಸ್ಸಿನ ಚಕ್ರ(ಟೈರ್) ಸ್ಪೋಟಗೊಂಡು ಆಕ್ಸೆಲ್ ತುಂಡಾಗಿ ಚಾಲಕನ ನಿಯಂತ್ರಣ ತಪ್ಪಿ, ಪಲ್ಟಿಯಾಗಿದ್ದು ಕಾಲೇಜು ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ್ದು, ಬಸ್ಸಿನಲ್ಲಿದ್ದ ಹಲವರು ಗಾಯಗೊಂಡ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕೋಟೆಹಾಳ್-ಮರಬನಹಳ್ಳಿ ಮದ್ಯೆ ನಡೆದಿದೆ.

ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಗ್ರಾಮಾಂತರ ಸಾರಿಗೆಯ ಬಸ್ ಒಂದು ಪ್ರತಿ ದಿನ ದಾವಣಗೆರೆಯಿಂದ ಚನ್ನಗಿರಿ ತಾಲೂಕಿನ ಬಸವ ಪಟ್ಟಣ ಮಾರ್ಗವಾಗಿ ಹೊನ್ನಾಳಿಗೆ ಸಂಚರಿಸುತ್ತಿದ್ದು. ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಬಸವಾಪಟ್ಟಣಕ್ಕೆ ಹೋಗುವ ವೇಳೆ ಟೈರ್ ಸ್ಪೋಟಗೊಂಡು ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ಕೋಟೆಹಾಳ್ ಮರಬನಹಳ್ಳಿ ಗ್ರಾಮಗಳ ಮಧ್ಯೆ ಉರುಳಿ ಬಿದ್ದು ಅಪಘಾತಕ್ಕೀಡಾಗಿದ್ದು ಒಬ್ಬರು ಸಾವಿನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಮೃತಪಟ್ಟವರನ್ನು ಕುಂದೂರು ಗ್ರಾಮದ ವಿದ್ಯಾರ್ಥಿ ದರ್ಶನ್ ಎಂದು ಗುರುತಿಸಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಬಸ್ ಪಲ್ಟಿಯಾದ ರಭಸಕ್ಕೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆಗೆ ಬಸ್ಸಿನ ಟೈರ್ ಸ್ಪೋಟಗೊಂಡು ಹಾಗೂ ಆಕ್ಸೆಲ್ ತುಂಡಾಗಿರುವುದೇ ಕಾರಣ ಎನ್ನಲಾಗಿದ್ದು, ರಸ್ತೆಗಳಲ್ಲಿ ತಗ್ಗು ಗುಂಡಿಗಳಿದ್ದು ಅಪಘಾತ ಸಂಭವಿಸಿರಬಹುದು ಎಂದು ಸ್ಥಳೀಯರು ಅಂದಾಜಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮಕ್ಕಳಿಗೆ ಉಚಿತ ಆಧಾರ್ ಬಯೋಮೆಟ್ರಿಕ್ ಅಪ್‌ಡೇಟ್
ಘಟನೆ ನಡೆದ ತಕ್ಷಣವೇ ಹತ್ತಿರವೇ ಇದ್ದ ಗ್ರಾಮಸ್ತರು, ಸ್ಥಳೀಯರು ದೌಡಾಯಿಸಿ ಗಾಯಗೊಂಡವರನ್ನು ರಕ್ಷಿಸಿದ್ದು ಸ್ಥಳಕ್ಕೆ ಬಸವಪಟ್ಟಣ ಪೊಲೀಸ್ ಠಾಣೆಯ ಪೊಲೀಸರು ಆಗಮಿಸಿ ಪರಿಹಾರ ಕಾರ್ಯ ಕೈಗೊಂಡಿದ್ದು ಗಾಯಗೊಂಡವರನ್ನು ದಾವಣಗೆರೆ ಹಾಗೂ ಚನ್ನಗಿರಿ ಆಸ್ಪತ್ರೆಗೆ ಕಳಿಸಿಕೊಡಲಾಗಿದೆ. ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





