ತಿನಿಸು ಮಳಿಗೆಗಳು ಮತ್ತು ಬೀದಿ ಬದಿ ಆಹಾರಗಳ ಶುದ್ಧತೆಯನ್ನು, FDA ರೈಡ್ ಕೈಗೊಂಡು ಪರಿಶೀಲಿಸಿದ ನಂತರ ಬೆಂಗಳೂರಿನ ಪೇಯಿಂಗ್ ಗೆಸ್ಟ್ (ಪಿಜಿ) ಅಡುಗೆ ಮನೆಗಳನ್ನು ಪರಿಶೀಲಿಸುವುದಾಗಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ (FDA) ಆಯುಕ್ತ ಶ್ರೀನಿವಾಸ್ ಕೆ. ಹೇಳಿದ್ದಾರೆ.
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತ ಶ್ರೀನಿವಾಸ್ ಕೆ., ಬೆಂಗಳೂರಿನಾದ್ಯಂತ ತಿನಿಸುಗಳಲ್ಲಿ ಆಹಾರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇಲಾಖೆಯ ಯೋಜನೆಗಳ ಕುರಿತು ಜಿಲ್ಲಾ ಆರೋಗ್ಯ ಅಧಿಕಾರಿ ಅಮೂಲ್ಯ ಶಿವಶಂಕರ್ ಅವರೊಂದಿಗಿನ ಸಂವಾದದಲ್ಲಿ ಮಾತನಾಡಿದರು.
“ತಿನಿಸು ಮಳಿಗೆಗಳು ಮತ್ತು ಬೀದಿ ಬದಿ ಆಹಾರಗಳ ನಂತರ ನಮ್ಮ ಮುಂದಿನ ಹಂತವಾಗಿ, ಪಿಜಿ ಅಡುಗೆ ಮನೆಗಳ ಪರಿಶೀಲನೆ ಮಾಡಲಿದ್ದೇವೆ” ಎಂದು ಆಯುಕ್ತರು ತಿಳಿಸಿದ್ದಾರೆ.
ಇತ್ತೀಚಿಗೆ ರಾಜಧಾನಿಯ ಥ್ರೀ ಸ್ಟಾರ್, ಫೈವ್ ಸ್ಟಾರ್ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಂದ ಹಿಡಿದು ಇಂದಿರಾ ಕ್ಯಾಂಟೀನ್ ಅಡುಗೆ ಮನೆಗಳವರೆಗೆ ಆಹಾರ ಸುರಕ್ಷತಾ ಕ್ರಮಗಳನ್ನು ತೀವ್ರ ಪರಿಶೀಲನೆಗೆ ಒಳಪಡಿಸಿರುವ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ, ಹಲವು ಆಹಾರ ಪೂರೈಕಾ ಘಟಕಗಳ ಅಶಿಸ್ತಿನ ವಿರುದ್ಧ ಗಂಭೀರ ಕ್ರಮ ಕೈಗೊಂಡಿದೆ.




