ಅಮೆರಿಕ-ಇರಾನ್ ಉದ್ವಿಗ್ನತೆಯ ನಡುವೆಯೂ ಹಾರ್ಮುಜ್ ದಾಟಿದ ಮೊದಲ LNG ಹಡಗು

Date:

ಪಶ್ಚಿಮ ಏಷ್ಯಾದಲ್ಲಿ ಅಮೆರಿಕ-ಇರಾನ್ ನಡುವೆ ಸಂಘರ್ಷ ಆರಂಭವಾದ ಎರಡು ತಿಂಗಳ ನಂತರ, ಮೊದಲ ಬಾರಿಗೆ ದ್ರವೀಕೃತ ನೈಸರ್ಗಿಕ ಅನಿಲ (LNG) ಹೊತ್ತ ಹಡಗೊಂದು ಪರ್ಷಿಯನ್ ಕೊಲ್ಲಿಯನ್ನು ತೊರೆದು ಹಾರ್ಮುಜ್ ಜಲಸಂಧಿಯ ಮೂಲಕ ಹೊರಬಂದಿದೆ. ಇದು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಮೂಡಿದ್ದ ಪೂರೈಕೆಯ ಆತಂಕವನ್ನು ಕೊಂಚ ಮಟ್ಟಿಗೆ ಶಮನ ಮಾಡಿದೆ. ಈ ಹಡಗು ಚೀನಾದತ್ತ ಹೊರಟಿದೆ.

- Advertisement -

‘ಮುಬಾರಜ್’ (Mubaraz) ಹೆಸರಿನ ಹಡಗು, ಮಾರ್ಚ್ ತಿಂಗಳ ಆರಂಭದಲ್ಲಿ ಸಂಯುಕ್ತ ಅರಬ್ ಸಂಸ್ಥಾನದ ಅಬುಧಾಬಿ ನ್ಯಾಷನಲ್ ಆಯಿಲ್ ಕಂ. (Adnoc) ಗೆ ಸೇರಿದ ದಾಸ್ ಐಲ್ಯಾಂಡ್ ಘಟಕದಿಂದ ಅನಿಲವನ್ನು ತುಂಬಿಕೊಂಡಿತ್ತು. ಹಡಗಿನ ಚಲನೆ ಕುರಿತು ಟ್ರ್ಯಾಕಿಂಗ್ ಡೇಟಾಗಳಿಂದ ಮಾಹಿತಿ ಲಭ್ಯವಾಗಿದ್ದು, ಪ್ರಸ್ತುತ ಇದು ಭಾರತದ ದಕ್ಷಿಣ ಭಾಗದ ತುದಿಯಲ್ಲಿ ಚಲಿಸುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಮಾರ್ಚ್ 31ರ ಸುಮಾರಿಗೆ ಸಿಗ್ನಲ್ ನೀಡುವುದನ್ನು ನಿಲ್ಲಿಸಿದ್ದ ಈ ಹಡಗು, ಏಪ್ರಿಲ್ 27ರಂದು ಭಾರತದ ಪಶ್ಚಿಮ ಭಾಗದಲ್ಲಿ ಮತ್ತೆ ಕಾಣಿಸಿಕೊಂಡಿದೆ. ಡೇಟಾಗಳ ಪ್ರಕಾರ, ಮುಬಾರಜ್ ಹಡಗು ಚೀನಾದ ಒಂದು ಟರ್ಮಿನಲ್ ಕಡೆಗೆ ಚಲಿಸುತ್ತಿದ್ದು, ಮೇ 15ರ ಸುಮಾರಿಗೆ ಅಲ್ಲಿ ತಲುಪುವ ನಿರೀಕ್ಷೆ ಇದೆ.

ಕಳೆದ ಎರಡು ತಿಂಗಳುಗಳಿಂದ ಇರಾನ್ ಮತ್ತು ಅಮೆರಿಕ ನಡುವೆ ನಡೆದಿರುವ ಪರಸ್ಪರ ದಿಗ್ಬಂಧನಗಳಿಂದಾಗಿ, ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸುವ ಹಡಗುಗಳ ಸಂಖ್ಯೆ ಬಹುತೇಕ ಶೂನ್ಯಕ್ಕೆ ಕುಸಿದಿತ್ತು. ಜಗತ್ತಿನ ಒಟ್ಟು ಎಲ್‌ಎನ್‌ಜಿ ಪೂರೈಕೆಯಲ್ಲಿ ಐದನೇ ಒಂದು ಭಾಗದಷ್ಟು ಪಾಲನ್ನು ಹೊಂದಿರುವ ಈ ಜಲಸಂಧಿ ಬಂದ್ ಆಗಿದ್ದರಿಂದ, ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಆತಂಕ ಸೃಷ್ಟಿಯಾಗಿ ಅನಿಲದ ಬೆಲೆ ತೀವ್ರವಾಗಿ ಏರಿಕೆಯಾಗಿತ್ತು. ಈಗ ಮುಬಾರಜ್ ಹಡಗು ಹೊರಬಂದಿರುವುದು, ಈ ವಲಯದಿಂದ ಎಲ್‌ಎನ್‌ಜಿ ರಫ್ತು ಹೆಚ್ಚಾಗುವ ಆಶಯವನ್ನು ಚಿಗುರಿಸಿದೆ.

ಇದನ್ನು ಓದಿದ್ದೀರಾ? ಓಮನ್‌ ಬಳಿ 12 ಭಾರತೀಯರಿದ್ದ ಹಡಗಿನ ಮೇಲೆ ಇರಾನ್ ದಾಳಿ; ಎಲ್ಲಾ ಸಿಬ್ಬಂದಿ ಸುರಕ್ಷಿತ

ಆದಾಗ್ಯೂ, ಕೊಲ್ಲಿ ಭಾಗದಲ್ಲಿರುವ ಇತರ ಹಡಗುಗಳು ಇನ್ನು ಅಲ್ಲಿಯೇ ನಿಂತಿರುವ ಲಕ್ಷಣಗಳಿವೆ. ಯುದ್ಧಕ್ಕೂ ಮುನ್ನ, ಪ್ರತಿದಿನ ಸುಮಾರು ಮೂರು ಎಲ್‌ಎನ್‌ಜಿ ತುಂಬಿದ ಹಡಗುಗಳು ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸುತ್ತಿದ್ದವು.

ಏಪ್ರಿಲ್ ಆರಂಭದಲ್ಲಿ ಒಂದು ಖಾಲಿ ಎಲ್‌ಎನ್‌ಜಿ ಹಡಗು ಹಾರ್ಮುಜ್ ಜಲಸಂಧಿ ದಾಟಿದ್ದು ಡೇಟಾ ಮೂಲಕ ತಿಳಿದುಬಂದಿತ್ತು. ಆದರೆ, ಇದುವರೆಗೆ ಇಂಧನ ತುಂಬಿದ ಯಾವುದೇ ಹಡಗು ಸಂಚರಿಸಿದ ಬಗ್ಗೆ ಖಚಿತ ಮಾಹಿತಿ ಇರಲಿಲ್ಲ. ಕತಾರ್‌ನ ಎಲ್‌ಎನ್‌ಜಿ ತುಂಬಿದ ಹಲವು ಹಡಗುಗಳು ಜಲಸಂಧಿಯ ಸಮೀಪಕ್ಕೆ ಬಂದರೂ, ಅಮೆರಿಕ ಹಾಗೂ ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದ ವಾಪಸ್‌ ತೆರಳಿದ್ದವು.

ಈಗ ಮುಬಾರಜ್ ಹಡಗು ಯಶಸ್ವಿಯಾಗಿ ಚಲನೆ ಮಾಡಿರುವ ಕುರಿತು ಪ್ರತಿಕ್ರಿಯಿಸಿರುವ ಅಡ್ನಾಕ್ ಸಂಸ್ಥೆ, ತನ್ನ ಹಡಗಿನ ಚಲನೆ, ನೆಲೆಸಿರುವ ಸ್ಥಳ ಹಾಗೂ ಮಾರ್ಗದ ಬಗ್ಗೆ ಯಾವುದೇ ಮಾಹಿತಿ ನೀಡಲು ನಿರಾಕರಿಸಿದೆ. ಹಾರ್ಮುಜ್ ದಾಟುವಾಗ ಹಡಗುಗಳು ಶತ್ರುಗಳ ಕಣ್ಗಾವಲಿಗೆ ಒಳಗಾಗದಂತೆ ಟ್ರಾನ್ಸ್‌ಪಾಂಡರ್‌ಗಳನ್ನು ಆಫ್ ಮಾಡುವುದು ಅಥವಾ ಸಿಗ್ನಲ್ ಜಾಮ್ ಮಾಡುವುದು ಸಾಮಾನ್ಯ ತಂತ್ರವಾಗಿದೆ.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುಪಿ ಎಂಎಲ್‌ಸಿ ಚುನಾವಣೆ: ಪ್ರಧಾನಿ ಮೋದಿ ಕ್ಷೇತ್ರ ವಾರಾಣಸಿಯಲ್ಲಿ ಎಸ್‌ಪಿಗೆ ಭರ್ಜರಿ ಜಯ

ಉತ್ತರ ಪ್ರದೇಶ ವಿಧಾನ ಪರಿಷತ್ (ಎಂಎಲ್‌ಸಿ) ಚುನಾವಣೆಯಲ್ಲಿ ಅಖಿಲೇಶ್ ಯಾದವ್ ನೇತೃತ್ವದ...

ಅಗ್ರಿಗೋಲ್ಡ್ ಹೂಡಿಕೆದಾರರಿಗೆ ಹೊಸ ಭರವಸೆ! ಬಾಂಡ್‌ಗಳ ಪರಿಶೀಲನೆಗೆ 9 ಕೇಂದ್ರಗಳ ಸ್ಥಾಪನೆ

ದಶಕದ ಹಿಂದೆ ದಕ್ಷಿಣ ಭಾರತದ ಲಕ್ಷಾಂತರ ಹೂಡಿಕೆದಾರರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದ ಬಹುಕೋಟಿ...

ಇಸ್ರೇಲ್ ಚುನಾವಣೆ- ಅರಬ್ ಪಕ್ಷಗಳೇ ಈಗ ಕಿಂಗ್ ಮೇಕರ್

ಇಸ್ರೇಲ್‌ನಲ್ಲಿ ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಗಳು ದೇಶವನ್ನು ಅತಂತ್ರ ಸ್ಥಿತಿಗೆ ನೂಕಿವೆ....