ಶಿವಮೊಗ್ಗ | ಪ್ಲೇಯರ್ ಆಗಿದ್ದೆ, ಈಗ ಆಂಪೈರ್-ಜಡ್ಜ್ ಆಗಿದ್ದೇನೆ: ಸಭಾಪತಿ ಸಲೀಂ ಅಹಮದ್

Date:

ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತ ವೇದಿಕೆ (SDMF) ವತಿಯಿಂದ ನಗರದ ಇಲ್ಯಾಸ್ ನಗರದ ಫಾರೂಕಿಯಾ ಶಾದಿ ಮಹಲ್ ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮದ್ ಅವರನ್ನು ಸನ್ಮಾನಿಸಲಾಯಿತು.

- Advertisement -

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಬಲ್ಕೀಸ್ ಬಾನು ಮಾತನಾಡಿ, “ವಿಧಾನ ಪರಿಷತ್ ಸಭಾಪತಿ ಸ್ಥಾನ ಅತ್ಯಂತ ಗೌರವದ, ಉನ್ನತ ಸ್ಥಾನ. ಜವಾಬ್ದಾರಿ ನಿಭಾಯಿಸುವಲ್ಲಿ ಸಾಹೇಬರು ಕಟ್ಟುನಿಟ್ಟು. 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಉರ್ದು ಶಿಕ್ಷಕರೇ ಇರಲಿಲ್ಲ. ಕೂಡಲೇ ಸಲೀಂ ಅಹಮದ್ ಅವರ ಗಮನಕ್ಕೆ ತಂದೆ. ಮುಸ್ಲಿಮರಿಗೆ ಆಗುತ್ತಿರುವ ಅನ್ಯಾಯವನ್ನು ತಕ್ಷಣ ನೋಟಿಫಿಕೇಶನ್ ಮಾಡುವಂತೆ ಆದೇಶಿಸುವಂತೆ ಮಾಡಿದರು. ಸಭಾಪತಿ ಸ್ಥಾನವನ್ನು ಜಾತ್ಯಾತೀತವಾಗಿ ನಿಭಾಯಿಸುತ್ತಿದ್ದಾರೆ. 35 ವರ್ಷಗಳ ರಾಜಕಾರಣದಲ್ಲಿ ಎಷ್ಟೇ ಪ್ರಭಾವಿತರಾಗಿದ್ದರೂ ಅಧಿಕಾರಿ ವ್ಯವಸ್ಥೆ ಹಾದಿ ತಪ್ಪಿಸಿದಾಗ ವ್ಯವಸ್ಥೆ ಸರಿಪಡಿಸಿ, ಉತ್ತಮ ಸಮಾಜ ಕಟ್ಟುವ ಕೆಲಸ ಮಾಡುತ್ತಿದ್ದಾರೆ” ಎಂದು ಅಭಿನಂದಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಜಕಾರಣಿಯ ಬೆಡ್‌ರೂಮಿನಲ್ಲಿ ಪ್ರಜಾಪ್ರಭುತ್ವ ಹುಡುಕುವ ಮಾಧ್ಯಮಗಳು!

ಒಂದು ಸಣ್ಣ ಪ್ರಶ್ನೆ, ಪ್ರಿಯ ಓದುಗರೇ! ಬೆಡ್‌ರೂಮಿನ ಹೊಗೆಯ ಹಿಂದೆ ಓಡುವ ಮಾಧ್ಯಮಗಳಿಗೆ, ಜನರ ಬದುಕನ್ನು ಸುಡುತ್ತಿರುವ ಬೆಂಕಿ ಕಾಣುವುದಿಲ್ಲವೇ? ರಾಜಕಾರಣಿಯೊಬ್ಬರ ಖಾಸಗಿ ಬದುಕಿನ ಬಗ್ಗೆ ಸುದ್ದಿ ಹೊರಬಿದ್ದರೆ ಸಾಕು; ಮಾಧ್ಯಮಗಳಲ್ಲಿ ಚರ್ಚೆಗಳ ಮಹಾಪೂರ. ಯಾರು...

ಬ್ರೆಜಿಲ್‌ನಲ್ಲಿ ʼಲೂಲಾʼ ಐತಿಹಾಸಿಕ ಗೆಲುವು: ನಾಗರಿಕ ಸಂಘಟನೆಗಳು ಚುನಾವಣೆಯ...

ಬ್ರೆಜಿಲ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಎಡಪಂಥೀಯ ನಾಯಕ ಲೂಯಿಸ್ ಇನಾಸಿಯೊ ಲೂಲಾ ಡಿ ಸಿಲ್ವಾ ಅವರು ಅತ್ಯಂತ ಐತಿಹಾಸಿಕ ರೀತಿಯಲ್ಲಿ ಮರುಆಯ್ಕೆಯಾಗಿದ್ದಾರೆ. ಅಕ್ಟೋಬರ್ 25ರಂದು ನಡೆದ ಎರಡನೇ ಸುತ್ತಿನ ಮತದಾನದಲ್ಲಿ ಅವರು ಬಲಪಂಥೀಯ ಅಭ್ಯರ್ಥಿ...

ರಕ್ತಪಾತಕ್ಕೆ ಬೇಕಿದೆ ಪೂರ್ಣವಿರಾಮ: ಇಸ್ರೇಲ್ ಚುನಾವಣೆಯಲ್ಲಿ ಮೊಳಗಲಿದೆಯೇ ಶಾಂತಿಯ...

ಇಸ್ರೇಲ್ ದೇಶದ ಸಂಸತ್ತನ್ನು ‘ನೆಸೆಟ್’ (Knesset) ಎಂದು ಕರೆಯಲಾಗುತ್ತದೆ. ಇಲ್ಲಿನ ಚುನಾವಣಾ ವ್ಯವಸ್ಥೆಯು ಜಗತ್ತಿನ ಇತರ ದೇಶಗಳಿಗಿಂತ ಭಿನ್ನವಾಗಿದ್ದು, 'ಪ್ರಾತಿನಿಧಿಕ ವ್ಯವಸ್ಥೆ' (Proportional representation) ಅಡಿಯಲ್ಲಿ ನಡೆಯುತ್ತದೆ. ಅಂದರೆ, ಭಾರತದಂತೆ ಇಲ್ಲಿನ ಮತದಾರರು...

ಸಭಾಪತಿ ಸಲೀಂ ಅಹಮದ್ ಮಾತನಾಡಿ, “ಶೇರ್ ಹೇಳುವ ಮೂಲಕ ಮಾತು ಆರಂಭಿಸಿದರು. ಸಭಾಪತಿ ಆದ ಬಳಿಕ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಬಹಳ ಮುಖ್ಯ. ಗಾಂಧೀಜಿ ಜೊತೆ ಮೌಲಾನಾ ಆಜಾದ್ ಇದ್ದರು. ಅವಶ್ಯಕತೆ ಇದ್ದರೆ ಮುಸಲ್ಮಾನರು ದೇಶಕ್ಕೆ ಜೀವ ಕೊಡಲು ಹಿಂದೆ ಮುಂದೆ ಯೋಚಿಸದೆ ಎದ್ದು ನಿಲ್ಲುತ್ತಾರೆ. ರಾಜ್ಯದಲ್ಲಿ ಕೋಮು ಸೌಹಾರ್ದತೆಯ ಅವಶ್ಯಕತೆ ಇದೆ. ಸರ್ವಜನಾಂಗದ ಶಾಂತಿಯ ತೋಟ ಇದಾಗಬೇಕು. ನಾನೀಗ ಪಕ್ಷಾತೀತ. ಪಕ್ಷಗಳ ಬಗ್ಗೆ ರಾಜಕಾರಣ ಮಾತನಾಡಲು ಸಾಧ್ಯವಿಲ್ಲ. ನಮ್ಮ ಜವಾಬ್ದಾರಿ ಒಟ್ಟಾಗಿ ಬಾಳುವ, ಬದುಕುವ ವ್ಯವಸ್ಥೆ ಮಾಡುವುದೇ ಆಗಿದೆ ಎಂದರು.ರಾಜ್ಯದಲ್ಲಿ ಬರ, ರೈತರ ಸಮಸ್ಯೆ ಇದೆ. ಅಲ್ಪಸಂಖ್ಯಾತರು ಬಹಳ ಬೇಡಿಕೆ ಇಟ್ಟಿದ್ದಾರೆ. ಅದನ್ನು ಪಕ್ಷಗಳ ಗಮನಕ್ಕೆ ತರುತ್ತೇನೆ” ಎಂದಿದ್ದಾರೆ.

Advertisements

“ರಾಜ್ಯದ ಏಳು ಕೋಟಿ ಜನರಲ್ಲಿ ಕೇವಲ 300 ಜನಕ್ಕೆ ಮಾತ್ರ ಅಲ್ಲಿ ಅವಕಾಶವಿದೆ. ಆ ಜವಾಬ್ದಾರಿ ಸ್ಥಾನದಲ್ಲಿ ಕೂರಲು ಜನರ ಆಶೀರ್ವಾದವೇ ಕಾರಣ. ಸದನಗಳಲ್ಲಿ ಮುಖ್ಯವಾಗಿ ಜನರ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು. ನಾನು ಪಕ್ಷಗಳ ಸಭೆಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದರೆ ಸಮಾಜದ ಅಭಿವೃದ್ಧಿ ಸಾಧ್ಯ. ಜನರು ಲಿಖಿತವಾಗಿ ನೀಡಿರುವ ಬೇಡಿಕೆಗಳನ್ನು ಸಂಬಂಧಪಟ್ಟವರಿಗೆ ತಲುಪಿಸಿ ಸಮಸ್ಯೆ ಬಗೆಹರಿಸುವೆ” ಎಂದರು.

ಕಾರ್ಯಕ್ರಮದಲ್ಲಿ ಕಿರಾತ್ ಅನ್ನು ಮೌಲಾನಾ ಹಾಫಿಜ್ ಮುಸಾವಿರ್ ಸಾಬ್ ನೆರವೇರಿಸಿದರು. ಮೊಹಮದ್ ಮುಹೀಬ್ ಉಲ್ಲಾ, ಆಸಿಫ್ ಷರೀಫ್ ಸ್ವಾಗತಿಸಿದರು. ಮೌಲಾನಾ ಹಮೀದ್ ಉಮ್ರಿ ಸಾಬ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಜರತ್ ಸೈಯದ್ ಶಾ ಹೈದರ್ ವಲಿ ಸಜ್ಜಾದ ನಶೀನ್, ಮುಕ್ತಿಯಾರ್ ಅಹಮದ್ ಸಾಬ್, ಸೈಯದ್ ವಾಹಿದ್ ಅದ್ದು, ರಿಯಾಜ್ ಅಹಮದ್, ಮುಷ್ತಿಯಾರ್ ಅಹಮದ್, ಅಫ್ತಾಬ್ ಪರ್ವೇಜ್ ಶಿ ಜು ಪಾಶ ಸೇರಿದಂತೆ ಹಲವರು ಉಪಸ್ಥಿತರಿದ್ದರು. ರಿಯಾಜ್ ಅಹಮದ್ ಸಾಬ್ ವಂದಿಸಿದರು.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಸಾರ್ವಜನಿಕ ಸೇವೆಗಳಲ್ಲಿ ಲೋಪ; ಅಧಿಕಾರಿಗಳಿಗೆ ನೋಟಿಸ್ ನೀಡಲು ಸಿಇಒ ಗಜಾನನ ಬಾಲೆ ಸೂಚನೆ

ಬಡವರು, ರೋಗಿಗಳು, ವಿದ್ಯಾರ್ಥಿನಿಯರು ಹಾಗೂ ವೃದ್ಧರಿಗೆ ಉತ್ತಮ ಸೌಲಭ್ಯ ಕಲ್ಪಿಸಬೇಕಾದ ಸರ್ಕಾರಿ...

ಗ್ಯಾನೇಶ್ ಕುಮಾರ್ ವಜಾಗೊಂಡರೆ, 30 ಸೆಕೆಂಡ್‌ನಲ್ಲಿ ಪ್ರತಿಭಟನೆ ಅಂತ್ಯ: ರಾಹುಲ್‌ ಗಾಂಧಿ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರನ್ನು ವಜಾಗೊಳಿಸುವಂತೆ ಪ್ರಧಾನಿ...

ರಾಜಕಾರಣಿಯ ಬೆಡ್‌ರೂಮಿನಲ್ಲಿ ಪ್ರಜಾಪ್ರಭುತ್ವ ಹುಡುಕುವ ಮಾಧ್ಯಮಗಳು!

ಒಂದು ಸಣ್ಣ ಪ್ರಶ್ನೆ, ಪ್ರಿಯ ಓದುಗರೇ! ಬೆಡ್‌ರೂಮಿನ ಹೊಗೆಯ ಹಿಂದೆ ಓಡುವ ಮಾಧ್ಯಮಗಳಿಗೆ,...

ಬೀದರ್‌ | ಕಟಾವಿಗೆ ಬಂದಿದ್ದ ಕಬ್ಬಿನ ಬೆಳೆ ʼಬೆಂಕಿʼ ಪಾಲು, ಆರ್ಥಿಕ ಸಂಕಷ್ಟದಲ್ಲಿ ರೈತರು

ಜಿಲ್ಲೆಯ ವಿವಿಧೆಡೆ ಸಂಭವಿಸುತ್ತಿರುವ ಬೆಂಕಿ ಅವಘಡಗಳಿಂದಾಗಿ ಕೈಗೆ ಬಂದಿದ್ದ ಕಬ್ಬು ಸುಟ್ಟು...