‘ಭಾರತದ ನಿಜವಾದ ಬಾಸ್ ಅಂಬಾನಿಯೇ’: ಸ್ಟಾರ್‌ಲಿಂಕ್ ಸೇವೆಗೆ ಅನುಮತಿ ವಿಳಂಬದ ಬಗ್ಗೆ ಎಲಾನ್ ಮಸ್ಕ್ ಪ್ರಶ್ನೆ

Date:

ವಾಷಿಂಗ್ಟನ್‌ ಡಿಸಿ/ನವದೆಹಲಿ: ಭಾರತದಲ್ಲಿ ತನ್ನ ಸ್ಟಾರ್‌ಲಿಂಕ್ (Starlink) ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಆರಂಭಿಸಲು ಅನುಮತಿ ಪ್ರಕ್ರಿಯೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ, ಉದ್ಯಮಿ ಎಲಾನ್ ಮಸ್ಕ್ ಅವರು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಪ್ರಭಾವದ ಕುರಿತು ಪರೋಕ್ಷವಾಗಿ ಪ್ರಶ್ನೆ ಎತ್ತಿದ್ದಾರೆ ಎನ್ನಲಾಗಿದೆ.

- Advertisement -

‘ಭಾರತದ ನಿಜವಾದ ಬಾಸ್ ಅಂಬಾನಿಯೇ’ ಎಂಬ ಪ್ರಶ್ನೆಯ ಮೂಲಕ ಮಸ್ಕ್ ಅವರು ಸರ್ಕಾರದ ಅನುಮತಿ ಪ್ರಕ್ರಿಯೆ ಹಾಗೂ ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿನ ಸ್ಪರ್ಧೆಯ ಕುರಿತು ಹೊಸ ಚರ್ಚೆಗೆ ಕಾರಣರಾಗಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬರಗಾಲ | ಕಾಡಿನಿಂದ ನಾಡಿನತ್ತ ವನ್ಯಜೀವಿಗಳು: ಮನುಷ್ಯರ ಜೀವಕ್ಕೆ...

ಹಳೇ ಮೈಸೂರು ಕಾಡು ಪ್ರಾಣಿಗಳ ಆವಾಸಸ್ಥಾನ. ಆದರೆ, ಇಂದು ಆ ಕಾಡಿನಂಚಿನಲ್ಲಿ ಬದುಕುತ್ತಿರುವ ಮನುಷ್ಯರಿಗೂ ಕಾಡಿನೊಳಗಿನ ವನ್ಯಜೀವಿಗಳಿಗೂ ನಡುವಿನ ಅಂತರ ಕಡಿಮೆಯಾಗುತ್ತಿದೆ. ಆಹಾರ ಮತ್ತು ನೀರು ಅರಸಿ ಕಾಡಿನಿಂದ ನಾಡಿನತ್ತ ಬರುತ್ತಿರುವ ಆನೆ,...

ಇಂದು ಭಗತ್ ಸಿಂಗ್ ಹೆಸರು ಬಳಸುವ ಆರ್‌ಎಸ್‌ಎಸ್ ನಾಯಕರಿಗೆ...

ಜಾತ್ಯತೀತತೆ ಮತ್ತು ಸಮಾಜವಾದದ ಬಗ್ಗೆ ಗಟ್ಟಿಯಾಗಿ ಮಾತನಾಡುತ್ತಿದ್ದ, ಕೋಮುವಾದಿ ಧೋರಣೆಗಳನ್ನು ಕಟುವಾಗಿ ವಿಮರ್ಶಿಸುತ್ತಿದ್ದ ಭಗತ್ ಸಿಂಗ್ ಅವರನ್ನು ಇಂದು ಅದೇ ಸಿದ್ಧಾಂತಗಳ ವಿರುದ್ಧ ನಿಂತಿರುವ ಬಿಜೆಪಿ, ಆರ್‌ಎಸ್‌ಎಸ್, ಎಬಿವಿಪಿ ನಾಯಕರು ತಮ್ಮ 'ಸ್ವಂತ...

ಬರಗಾಲ | ಕಾಡಿನ ಮೌನದ ಹಿಂದೆ ಅಡಗಿದೆ ಜೀವಸಂಕುಲದ...

ಒಂದು ಆನೆಗೆ ದಿನಕ್ಕೆ ನೂರಾರು ಲೀಟರ್ ನೀರು ಮತ್ತು ನೂರಾರು ಕೆ.ಜಿ. ಆಹಾರ ಬೇಕಾಗುತ್ತದೆ. ಇನ್ನು ಕಾಡಿನಲ್ಲಿರುವ ಸಾವಿರಾರು ಆನೆಗಳು, ಹುಲಿಗಳು, ಚಿರತೆಗಳು, ಜಿಂಕೆಗಳು, ಕಾಡೆಮ್ಮೆಗಳು ಸೇರಿದಂತೆ ವಿವಿಧ ವನ್ಯಜೀವಿಗಳ ಅಗತ್ಯವನ್ನು ಲೆಕ್ಕಹಾಕಿದರೆ...

ಈ ಬಗ್ಗೆ ಸಾಮಾಜಿಕ ಜಾಲತಾಣ  X ನಲ್ಲಿ ಬರೆದಿರುವ ಅವರು, Starlink 165ಕ್ಕೂ ಹೆಚ್ಚು ದೇಶಗಳಲ್ಲಿ ಸೇವೆ ನೀಡಲು ಪರವಾನಗಿ ಪಡೆದಿದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಸರ್ಕಾರದ ಕಾನೂನು ಮತ್ತು ನಿಯಮಗಳನ್ನು ಪಾಲಿಸಲು ಐದು ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ಅನುಮತಿ ಏಕೆ ಸಿಕ್ಕಿಲ್ಲ ಎಂದು ಪ್ರಶ್ನಿಸಿದ್ದಾರೆ.

ಬುಧವಾರದ ತಮ್ಮ ಮೊದಲ ಪ್ರತಿಕ್ರಿಯೆಯಲ್ಲಿ ಯಾರ ಹೆಸರನ್ನೂ ಉಲ್ಲೇಖಿಸದ ಮಸ್ಕ್, ‘ಅವರು ಯಾರೆಂಬುದನ್ನು ನೀವೇ ಊಹಿಸಬಹುದು’ ಎಂದು ಹೇಳಿದ್ದರು.

ಈ ವಿವಾದಕ್ಕೆ ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಪ್ರತಿಕ್ರಿಯಿಸಿದ್ದಾರೆ.

‘ಎಲಾನ್, ಭಾರತಕ್ಕೆ ಸ್ವಾಗತ. ಇನ್ನೊಬ್ಬ ವ್ಯಕ್ತಿಯನ್ನು ನೀವು ಕಂಡುಕೊಳ್ಳುವವರೆಗೆ ಕಾಯಿರಿ’ ಎಂದು ರಾಹುಲ್ ಗಾಂಧಿ ಎಕ್ಸ್‌ನಲ್ಲಿ ಬರೆದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಮಸ್ಕ್, ‘ಧನ್ಯವಾದಗಳು, ರಾಹುಲ್. ಇದು ನಿಜಕ್ಕೂ ಕಳವಳಕಾರಿ ಸಂಗತಿ’ ಎಂದು ಹೇಳಿದ್ದಾರೆ.

ಮಸ್ಕ್ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ದೂರಸಂಪರ್ಕ ಇಲಾಖೆ, ಭಾರತದ ಉಪಗ್ರಹ ಸಂವಹನ ಸೇವೆಗಳ ನಿಯಂತ್ರಣ ವ್ಯವಸ್ಥೆಯು ನ್ಯಾಯಸಮ್ಮತವಾಗಿದ್ದು, ಯಾವುದೇ ತಾರತಮ್ಯವಿಲ್ಲದೆ ಕಾರ್ಯನಿರ್ವಹಿಸುತ್ತಿದೆ ಎಂದು ಸ್ಪಷ್ಟಪಡಿಸಿದೆ.

ಗುರುವಾರವೂ ಎಕ್ಸ್‌ನಲ್ಲಿ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ ಮಸ್ಕ್, ಸ್ಟಾರ್‌ಲಿಂಕ್ ಈಗಾಗಲೇ 165ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸಲು ಪರವಾನಗಿ ಪಡೆದಿದೆ ಎಂದು ಹೇಳಿದ್ದಾರೆ.

‘ಸ್ಟಾರ್‌ಲಿಂಕ್ ಭಾರತ ಸರ್ಕಾರದ ಪ್ರತಿಯೊಂದು ಕಾನೂನು ಮತ್ತು ಅಗತ್ಯ ನಿಯಮಗಳನ್ನು ಪಾಲಿಸಲು ಐದು ವರ್ಷಗಳನ್ನು ವ್ಯಯಿಸಿದೆ. ಹಾಗಿದ್ದರೂ ಇನ್ನೂ ಪರವಾನಗಿ ಏಕೆ ಸಿಕ್ಕಿಲ್ಲ, ಭಾರತದಲ್ಲಿ ಅಂಬಾನಿಯೇ ನಿಜವಾದ ಪ್ರಭಾವಿ ವ್ಯಕ್ತಿಯೇ’ ಎಂದು ಅವರು ಪ್ರಶ್ನಿಸಿದ್ದಾರೆ.

ಸ್ಟಾರ್‌ಲಿಂಕ್ ಸೇವೆಯನ್ನು ವಿರೋಧಿಸುವವರು ಅತ್ಯಂತ ಕಡಿಮೆ ಇಂಟರ್ನೆಟ್ ಸೌಲಭ್ಯ ಹೊಂದಿರುವ ಜನರಿಗೆ ಹಾನಿ ಮಾಡುತ್ತಿದ್ದಾರೆ ಎಂದು ಮಸ್ಕ್ ಅಭಿಪ್ರಾಯಪಟ್ಟಿದ್ದಾರೆ.

ಶ್ರೀಮಂತರು ಮತ್ತು ದೊಡ್ಡ ನಗರಗಳಲ್ಲಿ ವಾಸಿಸುವ ಜನರಿಗೆ ಈಗಾಗಲೇ ಉತ್ತಮ ಇಂಟರ್ನೆಟ್ ಸೌಲಭ್ಯವಿದೆ. ಹೀಗಾಗಿ, ಇಂಟರ್ನೆಟ್ ಸೌಲಭ್ಯವಿಲ್ಲದ ಅಥವಾ ಕಡಿಮೆ ಇರುವ ಪ್ರದೇಶಗಳ ಜನರ ಸಮಸ್ಯೆ ಅವರಿಗೆ ಅರ್ಥವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಭಾರತದ ದೂರದ ಪ್ರದೇಶಗಳಲ್ಲಿ, ಇಂಟರ್ನೆಟ್ ಸಂಪರ್ಕ ದುರ್ಬಲವಾಗಿರುವ ಸ್ಥಳಗಳಲ್ಲಿ ಹಾಗೂ ಮೊಬೈಲ್ ನೆಟ್‌ವರ್ಕ್ ಸೌಲಭ್ಯವಿಲ್ಲದ ಪ್ರದೇಶಗಳಲ್ಲಿ ಸ್ಟಾರ್‌ಲಿಂಕ್ ಉಪಯುಕ್ತವಾಗಲಿದೆ ಎಂದು ಮಸ್ಕ್ ತಿಳಿಸಿದ್ದಾರೆ.

ಅನುಮತಿಗಾಗಿ ಕಾಯುತ್ತಿರುವ ಒನ್‌ವೆಬ್

ಭಾರತ ಮೊಬೈಲ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಭಾರ್ತಿ ಏರ್‌ಟೆಲ್ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್, ತಮ್ಮ ಕಂಪನಿಯ ಉಪಗ್ರಹ ಸಂವಹನ ಉದ್ಯಮವಾದ ಯುಟೆಲ್‌ಸ್ಯಾಟ್ ಒನ್‌ವೆಬ್ ಕೂಡ ಸೇವೆ ಆರಂಭಿಸಲು ಅಗತ್ಯ ಅನುಮತಿಗಾಗಿ ಕಾಯುತ್ತಿದೆ ಎಂದು ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾರು, ಸರ್ಕಾರಿ ನೌಕರಿ ಇದ್ದವರಿಗೂ ಉಚಿತ ಪಡಿತರ: ‘ಗರೀಬ್ ಕಲ್ಯಾಣ್’ ಯೋಜನೆಯಲ್ಲಿ ಶೇ 13.2 ಅನರ್ಹರು!

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಉಚಿತ ಆಹಾರ ಧಾನ್ಯ ಯೋಜನೆಯಾದ ‘ಪ್ರಧಾನ ಮಂತ್ರಿ...

720 ರನ್‌ಗಳ ದಾಖಲೆ ವ್ಯರ್ಥ; ಮಿಚೆಲ್–ಫಿಲಿಪ್ಸ್ ಅಚಲ ತಾಳ್ಮೆಯ ಆಟಕ್ಕೆ ಕೈಜಾರಿದ ಭಾರತದ ಜಯ

ರನ್ ಪರ್ವತವನ್ನೇ ಪೇರಿಸಿ ಗೆಲುವಿನ ಕನಸು ಕಂಡಿದ್ದ ಭಾರತಕ್ಕೆ ಬೇಸಿನ್ ರಿಸರ್ವ್...

ತಾಳಿಕೋಟೆ |ಟಿಪ್ಪು ಭಾವೈಕ್ಯತಾ ಸಮಾವೇಶ ಇಂದು

ವ್ಯಕ್ತಿತ್ವಗಳನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ, ಅವರ ಬದುಕಿನ ಮೌಲ್ಯಗಳು ಹಾಗೂ...

ಪತ್ರಕರ್ತರು ಪಕ್ಷಪಾತಿಗಳಾಗಿರಬೇಕು; ಸತ್ಯ ಮತ್ತು ಮಾನವೀಯತೆಯ ಪರವಾಗಿ ನಿಲ್ಲಬೇಕು: ನ್ಯಾ. ಸುಧಾಂಶು ಧುಲಿಯಾ

ಇಂದಿನ ಕಾಲಘಟ್ಟದಲ್ಲಿ ಪತ್ರಕರ್ತರು ಪಕ್ಷಪಾತಿಗಳಾಗಿರಬೇಕು—ಅಂದರೆ ತಟಸ್ಥತೆಯ ನೆಪದಲ್ಲಿ ಸುಮ್ಮನಿರದೆ ಸತ್ಯ ಮತ್ತು...