ಬೀದರ್‌ | ಹೆಕ್ಟೇರ್‌ಗೆ ₹35 ಸಾವಿರ ಬರ ಪರಿಹಾರ ನೀಡಲು ಆಗ್ರಹ

Date:

ಬರದಿಂದಾಗಿ ಬೆಳೆ ಹಾನಿಗೊಳಗಾದ ಬೀದರ್ ಜಿಲ್ಲೆಯ ರೈತರಿಗೆ ಮಹಾರಾಷ್ಟ್ರ ಮಾದರಿಯಲ್ಲಿ ಹೆಕ್ಟೇರ್‌ಗೆ ₹35 ಸಾವಿರ ಪರಿಹಾರ ಒದಗಿಸಬೇಕು ಎಂದು ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಆಗ್ರಹಿಸಿದೆ.‌

- Advertisement -

ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಯ್ಯ ಸ್ವಾಮಿ ಹಾಗೂ ರಾಜ್ಯ ನಿರ್ದೇಶಕ ವಿಶ್ವನಾಥ ಪಾಟೀಲ ಮಾಡಗೋಳ್ ಅವರು ಬೆಂಗಳೂರಿನಲ್ಲಿ ಗುರುವಾರ ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿ, “ಸಣ್ಣ, ಅತಿ ಸಣ್ಣ ರೈತರು ಸೇರಿದಂತೆ ಎಲ್ಲ ರೈತರ ರೂ. 2 ಲಕ್ಷದ ವರೆಗಿನ ಸಾಲ ಮನ್ನಾ ಮಾಡಬೇಕು. ಹಿಂಗಾರು ಹಂಗಾಮಿಗೆ ಉಚಿತ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ವಿತರಿಸಬೇಕು” ಎಂದು ಆಗ್ರಹಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬರಗಾಲ | ಕಾಡಿನಿಂದ ನಾಡಿನತ್ತ ವನ್ಯಜೀವಿಗಳು: ಮನುಷ್ಯರ ಜೀವಕ್ಕೆ...

ಹಳೇ ಮೈಸೂರು ಕಾಡು ಪ್ರಾಣಿಗಳ ಆವಾಸಸ್ಥಾನ. ಆದರೆ, ಇಂದು ಆ ಕಾಡಿನಂಚಿನಲ್ಲಿ ಬದುಕುತ್ತಿರುವ ಮನುಷ್ಯರಿಗೂ ಕಾಡಿನೊಳಗಿನ ವನ್ಯಜೀವಿಗಳಿಗೂ ನಡುವಿನ ಅಂತರ ಕಡಿಮೆಯಾಗುತ್ತಿದೆ. ಆಹಾರ ಮತ್ತು ನೀರು ಅರಸಿ ಕಾಡಿನಿಂದ ನಾಡಿನತ್ತ ಬರುತ್ತಿರುವ ಆನೆ,...

ಇಂದು ಭಗತ್ ಸಿಂಗ್ ಹೆಸರು ಬಳಸುವ ಆರ್‌ಎಸ್‌ಎಸ್ ನಾಯಕರಿಗೆ...

ಜಾತ್ಯತೀತತೆ ಮತ್ತು ಸಮಾಜವಾದದ ಬಗ್ಗೆ ಗಟ್ಟಿಯಾಗಿ ಮಾತನಾಡುತ್ತಿದ್ದ, ಕೋಮುವಾದಿ ಧೋರಣೆಗಳನ್ನು ಕಟುವಾಗಿ ವಿಮರ್ಶಿಸುತ್ತಿದ್ದ ಭಗತ್ ಸಿಂಗ್ ಅವರನ್ನು ಇಂದು ಅದೇ ಸಿದ್ಧಾಂತಗಳ ವಿರುದ್ಧ ನಿಂತಿರುವ ಬಿಜೆಪಿ, ಆರ್‌ಎಸ್‌ಎಸ್, ಎಬಿವಿಪಿ ನಾಯಕರು ತಮ್ಮ 'ಸ್ವಂತ...

ಬರಗಾಲ | ಕಾಡಿನ ಮೌನದ ಹಿಂದೆ ಅಡಗಿದೆ ಜೀವಸಂಕುಲದ...

ಒಂದು ಆನೆಗೆ ದಿನಕ್ಕೆ ನೂರಾರು ಲೀಟರ್ ನೀರು ಮತ್ತು ನೂರಾರು ಕೆ.ಜಿ. ಆಹಾರ ಬೇಕಾಗುತ್ತದೆ. ಇನ್ನು ಕಾಡಿನಲ್ಲಿರುವ ಸಾವಿರಾರು ಆನೆಗಳು, ಹುಲಿಗಳು, ಚಿರತೆಗಳು, ಜಿಂಕೆಗಳು, ಕಾಡೆಮ್ಮೆಗಳು ಸೇರಿದಂತೆ ವಿವಿಧ ವನ್ಯಜೀವಿಗಳ ಅಗತ್ಯವನ್ನು ಲೆಕ್ಕಹಾಕಿದರೆ...
1006543715

ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಸರ್ಕಾರ ಇಲ್ಲವೇ ಯಾರಿಗಾದರೂ ಲೀಸ್‍ಗೆ ಕೊಟ್ಟು ಬರುವ ವರ್ಷದಿಂದ ಆರಂಭಿಸಬೇಕು. ಕಾರ್ಖಾನೆಗೆ 25 ಸಾವಿರ ಷೇರುದಾರರು ಇದ್ದಾರೆ. ಬೀದರ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನಿಂದ ಪಡೆದ ಸಾಲ ಮರು ಪಾವತಿ ಮಾಡದ ಕಾರಣ ಎರಡು ಬಾರಿ ಹರಾಜಿಗೆ ಬಂದಿದೆ. ಹೀಗಾಗಿ ಸರ್ಕಾರ ಮಧ್ಯಸ್ಥಿಕೆ ವಹಿಸಿ, ಬ್ಯಾಂಕ್‍ನ ಬಡ್ಡಿ ಮನ್ನಾ ಮಾಡಿಸಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ : ಬೀದರ್‌ | ಮತಗಳ್ಳತನ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ, ಸಿಇಸಿ ಜ್ಞಾನೇಶಕುಮಾರ ರಾಜೀನಾಮೆಗೆ ಆಗ್ರಹ

ತಮ್ಮ ಮನವಿಗೆ ಕೃಷಿ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಿದ್ರಾಮಯ್ಯ ಸ್ವಾಮಿ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾರು, ಸರ್ಕಾರಿ ನೌಕರಿ ಇದ್ದವರಿಗೂ ಉಚಿತ ಪಡಿತರ: ‘ಗರೀಬ್ ಕಲ್ಯಾಣ್’ ಯೋಜನೆಯಲ್ಲಿ ಶೇ 13.2 ಅನರ್ಹರು!

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಉಚಿತ ಆಹಾರ ಧಾನ್ಯ ಯೋಜನೆಯಾದ ‘ಪ್ರಧಾನ ಮಂತ್ರಿ...

720 ರನ್‌ಗಳ ದಾಖಲೆ ವ್ಯರ್ಥ; ಮಿಚೆಲ್–ಫಿಲಿಪ್ಸ್ ಅಚಲ ತಾಳ್ಮೆಯ ಆಟಕ್ಕೆ ಕೈಜಾರಿದ ಭಾರತದ ಜಯ

ರನ್ ಪರ್ವತವನ್ನೇ ಪೇರಿಸಿ ಗೆಲುವಿನ ಕನಸು ಕಂಡಿದ್ದ ಭಾರತಕ್ಕೆ ಬೇಸಿನ್ ರಿಸರ್ವ್...

ತಾಳಿಕೋಟೆ |ಟಿಪ್ಪು ಭಾವೈಕ್ಯತಾ ಸಮಾವೇಶ ಇಂದು

ವ್ಯಕ್ತಿತ್ವಗಳನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ, ಅವರ ಬದುಕಿನ ಮೌಲ್ಯಗಳು ಹಾಗೂ...

ಪತ್ರಕರ್ತರು ಪಕ್ಷಪಾತಿಗಳಾಗಿರಬೇಕು; ಸತ್ಯ ಮತ್ತು ಮಾನವೀಯತೆಯ ಪರವಾಗಿ ನಿಲ್ಲಬೇಕು: ನ್ಯಾ. ಸುಧಾಂಶು ಧುಲಿಯಾ

ಇಂದಿನ ಕಾಲಘಟ್ಟದಲ್ಲಿ ಪತ್ರಕರ್ತರು ಪಕ್ಷಪಾತಿಗಳಾಗಿರಬೇಕು—ಅಂದರೆ ತಟಸ್ಥತೆಯ ನೆಪದಲ್ಲಿ ಸುಮ್ಮನಿರದೆ ಸತ್ಯ ಮತ್ತು...