ನಾವು ಸಂಘಟಿತರಾದರೆ ಮಾತ್ರ ಮೀಸಲಾತಿ ಪಡೆಯಬಹುದು: ಸಿ ಎಸ್ ದ್ವಾರಕಾನಾಥ್

Date:

“ಅಲೆಮಾರಿ ಮತ್ತು ಆದಿವಾಸಿ ಸಮುದಾಯಗಳು ಜನಸಂಖ್ಯೆಯಲ್ಲಿ ದೊಡ್ಡಮಟ್ಟದಲ್ಲಿ ಇಲ್ಲದಿರುವುದರಿಂದಲೇ ರಾಜಕಾರಣಿಗಳು ನಮ್ಮ ಮತಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಆದ್ದರಿಂದ ನಾವು ಸಂಘಟಿತರಾಗಿ ನಮ್ಮ ಮೀಸಲಾತಿಯನ್ನು ಕೇಳಬೇಕು” ಎಂದು ಹಿರಿಯ ನ್ಯಾಯಾವಾದಿ ಸಿ.ಎಸ್.ದ್ವಾರಕಾನಾಥ್ ಅವರು ಹೇಳಿದರು.

- Advertisement -

ಬೆಂಗಳೂರು ನಗರದ ಗಾಂಧಿಭವನದಲ್ಲಿ ಮಂಗಳವಾರ ಕರ್ನಾಟಕ ಅಲೆಮಾರಿ ಹಕ್ಕಿಪಿಕ್ಕಿ ಬುಡಕಟ್ಟು ಸಂರಕ್ಷಣಾ ಸಮಿತಿ, ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ, ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಮತ್ತು ಪಾರ್ಧಿ ಹರಣಾ ಶಿಕಾರಿ ಸಂಘ ಸೇರಿ, ಆದಿವಾಸಿ ಒಳ ಮೀಸಲಾತಿ ಕುರಿತು ಚಿಂತನ ಮಂಥನ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಇದನ್ನು ಓದಿದ್ದೀರಾ?: ಅಸ್ಪೃಶ್ಯ ಅಲೆಮಾರಿ ಒಳಮೀಸಲಾತಿ ಹೋರಾಟ; ಮಳೆಗೆ ಟೆಂಟ್ ಧ್ವಂಸ

“ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿಯೂ 48 ಬುಡಕಟ್ಟು ಸಮುದಾಯಗಳಿಗೆ ಮೀಸಲಾತಿ ದೊರೆತಿಲ್ಲ. ಇವ್ಯಾವುದು ಇಲ್ಲದೆ ಈ ಸಮುದಾಯಗಳು ಹೇಗೆ ಬದುಕಬೇಕು. ರಾಜಕೀಯ ಮೀಸಲಾತಿಯನ್ನು ಪಡೆಯಬೇಕಾದರೆ ನಾವು ಸಂಘಟಿತರಾಗಬೇಕು.” ಎಂದು ಹೇಳಿದರು.

Screenshot2025 11 11at7.03.27P

ಈ ಸಭೆಯಲ್ಲಿ ಪ್ರಮುಖ ನಿರ್ಣಯವನ್ನು ಕೈಗೊಳ್ಳುವ ಕುರಿತು ದ್ವಾರಕಾನಾಥ್ ಅವರು ಐದು ನಿರ್ಣಯಗಳನ್ನು ಮಂಡಿಸಿದರು.

  1. ಕರ್ನಾಟಕ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಒಳಮೀಸಲಾತಿ ಕಲ್ಪಿಸಿದಂತೆ, ಪರಿಶಿಷ್ಟ ಪಂಗಡ, ಬುಡಕಟ್ಟುಗಳಿಗೂ ಒಳಮೀಸಲಾತಿ ಕಲ್ಪಿಸಲು, ಪರಿಶಿಷ್ಟ ಪಂಗಡ ಒಳ ಮೀಸಲಾತಿ ಆಯೋಗ ರಚನೆ ಮಾಡುವ ಕುರಿತು
  2. ಕರ್ನಾಟಕ ರಾಜ್ಯದಲ್ಲಿನ 50 ಬುಡಕಟ್ಟುಗಳಲ್ಲಿ 48 ಪರಿಶಿಷ್ಟ ಪಂಗಡಗಳನ್ನು ಒಳಗೊಂಡಂತೆ ಪರಿಶಿಷ್ಟ ಪಂಗಡಗಳ ಕ್ರಮ ಸಂಖ್ಯೆ 37/38 ರ ಪ್ರತ್ಯೇಕ ಅಭಿವೃದ್ಧಿ ನಿಗಮ ಇರುವುದರಿಂದ ಅವುಗಳನ್ನು ಹೊರತುಪಡಿಸಿ, ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮವನ್ನು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಕರ್ನಾಟಕ ಪರಿಶಿಷ್ಟ ಪಂಗಡಗಳ ನಿಗಮದಿಂದ ಪ್ರತ್ಯೇಕಿಸಿ ಸ್ಥಾಪಿಸುವ ಕುರಿತು
  3. ಆದಿವಾಸಿ ನಾಯಕ ಬಿರ್ಸಾಮುಂಡಾ ದಿನಾಚರಣೆಯನ್ನು ಪ್ರತಿವರ್ಷ ಸರ್ಕಾರದ ಮೂಲಕ ಆಚರಿಸುವ ಕುರಿತು
  4. ಮಲೆಮಹದೇಶ್ವರ ವನ್ಯಜೀವಿ ಧಾಮದಲ್ಲಿ ಹುಲಿ ಸಂರಕ್ಷಿತ ಅರಣ್ಯಧಾಮವಾಗಿ ಘೋಷಿಸುವ ಪ್ರಸ್ತಾವನೆ ಕುರಿತು
  5. ಪಶ್ಚಿಮ ಘಟ್ಟ ಪ್ರದೇಶದ ಬುಡಕಟ್ಟುಗಳ ಅರಣ್ಯ ಹಕ್ಕು ಕಾಯಿದೆಯ ಅನುಷ್ಟಾನ, ಲೈನ್ ಮನೆಗಳಲ್ಲಿ ಮತ್ತು ಅರಣ್ಯವಾಸಿ ಬುಡಕಟ್ಟುಗಳ ಕುಂದುಕೊರತೆಗಳ ಕುರಿತು

ಕೊನೆಯಲ್ಲಿ ಈ ನಿರ್ಣಯಗಳ ಕುರಿತು ಅಲೆಮಾರಿ, ಆದಿವಾಸಿ ಮತ್ತು ಬುಡಕಟ್ಟು ಸಮುದಾಯದ ಮುಖಂಡರು ಚರ್ಚೆ ನಡೆಸಿದರು.

Screenshot2025 11 11at7.04.41P
WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಣರಣ ಬಿಸಿಲಿಗೆ ಬೆಂಗಳೂರು ತತ್ತರ; 35.2 ಡಿಗ್ರಿ ಸೆಲ್ಸಿಯಸ್ ತಾಪಮಾನ

ಸಿಲಿಕಾನ್ ಸಿಟಿ ಬೆಂಗಳೂರು ಏಪ್ರಿಲ್ ಆರಂಭದಲ್ಲೇ ತೀವ್ರ ಬಿಸಿಲಿನ ತಾಪಕ್ಕೆ ತತ್ತರಿಸಿದ್ದು,...

ಮಧ್ಯಪ್ರಾಚ್ಯದ ಬಿಕ್ಕಟ್ಟು | ಮಸಾಲೆ-ದಿನಸಿ ವ್ಯಾಪಾರಕ್ಕೂ ಭಾರಿ ಆಘಾತ  

ಮಧ್ಯಪ್ರಾಚ್ಯದ ಬಿಕ್ಕಟ್ಟಿನ ಪರಿಣಾಮ ಈಗ ರಾಜಧಾನಿ ಬೆಂಗಳೂರಿನಲ್ಲಿ ಮಸಾಲೆ ಹಾಗೂ ದಿನಸಿ...

ಪ್ರಗತಿಪರ ಹೈನುಗಾರ ಮಹಿಳೆಯರ ಸಮಾವೇಶ: ಮಹಿಳೆಯರು ಹೇಳಿದ್ದಿಷ್ಟು!

ಗ್ರಾಮೀಣ ಭಾರತದ ಹಳ್ಳಿಗಳಲ್ಲಿ, ಸೂರ್ಯೋದಯದ ಮೊದಲೇ ಎದ್ದು ಹಸುಗಳ ಬಳಿ ಹೋಗುವ...

ಕೋಗಿಲು ಪ್ರಕರಣ | ಬೂಟಾಟಿಕೆ ಬಿಟ್ಟು ಮಾನವ ಧರ್ಮ ಪಾಲಿಸಿ : ಬಿ ಟಿ ಲಲಿತಾ ನಾಯಕ್ ಆಗ್ರಹ

“ಬೂಟಾಟಿಕೆ ಬಿಟ್ಟು ಮಾನವ ಧರ್ಮ ಪಾಲಿಸಿ. ಭಾಷೆ ಮತ್ತು ಧರ್ಮ ನೋಡಬೇಡಿ....