ಚಿಂತಾಮಣಿ : ತಾಲ್ಲೂಕಿನ ಸಂತೇಕಲ್ಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಕ್ಕಿಮಂಗಲ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವೆಂಕಟೇಶಪ್ಪ ಉಪಾಧ್ಯಕ್ಷರಾಗಿ ಹನುಮಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಸದರಿ ಹಾಲು ಉತ್ಪಾದಕರ ಸಹಕಾರ ಸಂಘದ ಎಲ್ಲಾ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಇಂದು ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಿತು, ಅಧ್ಯಕ್ಷರ ಸ್ಥಾನಕ್ಕೆ ವೆಂಕಟೇಶಪ್ಪ ಉಪಾಧ್ಯಕ್ಷರ ಸ್ಥಾನಕ್ಕೆ ಹನುಮಪ್ಪ ನಾಮಪತ್ರ ಸಲ್ಲಿಸಿದ್ದು, ಬೇರೆ ಯಾರು ನಾಮಪತ್ರ ಸಲ್ಲಿಸದೇ ಇರುವ ಕಾರಣಕ್ಕೆ ಚುನಾವಣಾ ಅಧಿಕಾರಿಯಾದ ಭಾಸ್ಕರ್ ರೆಡ್ಡಿ ಕೆ ಎಸ್ ರವರು ಇಬ್ಬರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಣೆ ಮಾಡಿದರು.
ನೂತನವಾಗಿ ಆಯ್ಕೆಯಾದ ಅಧ್ಯಕ್ಷರಾದ ವೆಂಕಟೇಶಪ್ಪ ರವರು ಮಾಧ್ಯಮದವರೊಂದಿಗೆ ಮಾತನಾಡಿ ಪಕ್ಷಾತೀತವಾಗಿ ಎಲ್ಲಾ ನಿರ್ದೇಶಕರನ್ನು ಒಟ್ಟಿಗೆ ತೆಗೆದುಕೊಂಡು ಹಾಲು ಉತ್ಪಾದಕರ ಸಹಕಾರ ಸಂಘವನ್ನು ಇನ್ನಷ್ಟು ಹೆಚ್ಚಾಗಿ ಅಭಿವೃದ್ಧಿಪಡಿಸುತ್ತೇನೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ..? ಪಾಲಾರ್ ಕೆರೆಗಳಲ್ಲಿ ನೀರು: ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ : ಎಂ.ರೂಪಕಲಾ
ಈ ಸಂದರ್ಭದಲ್ಲಿ ಎ ಟಿ ಚಂದ್ರಶೇಖರ್,ಮುನಿರಾಮಪ್ಪ, ಮಂಜುನಾಥ,ವೆಂಕಟರೆಡ್ಡಿ,ಶ್ರೀನಿವಾಸ್,ಸಾವಿತ್ರಮ್ಮ,ಪಿ ರವೀಂದ್ರ, ಸುರೇಶ ಎ ಎನ್,ಕವಿತಾ,ಲಲಿತಮ್ಮ,ಡೈರಿ ಕಾರ್ಯದರ್ಶಿ ಶಿವ ಕುಮಾರ,ಇದ್ದರು.




