ಖರ್ಗೆ ವಿರುದ್ಧ ಅಂದು ತೊಡೆ ತಟ್ಟಿದ್ದ ಚಿಂಚನಸೂರ್; ಇಂದು ಅವರನ್ನೇ ಅಪ್ಪ ಎಂದರು

Date:

  • ‘ಚಿತ್ತಾಪುರದಲ್ಲಿ ಬಿಜೆಪಿ ಹೇಳ ಹೆಸರಿಲ್ಲದಂತಾಗಲಿದೆ’
  • ‘ನಾನು ಡಿ ಕೆ ಶಿವಕುಮಾರ್ ಋಣ ತೀರಿಸಬೇಕಾಗಿದೆ‘

ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರು ಬಿಜೆಪಿ ತೊರೆದು ಬುಧವಾರ ಮತ್ತೆ ತಮ್ಮ ಮಾತೃ ಪಕ್ಷ ಕಾಂಗ್ರೆಸ್‌ಗೆ ಮರಳಿದ್ದಾರೆ. ಕಾಂಗ್ರೆಸ್ ಸೇರ್ಪಡೆ ಸಂದರ್ಭದಲ್ಲಿ ಮಾತನಾಡಿರುವ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹಾಡಿ ಹೊಗಳಿಸಿದ್ದಾರೆ.

- Advertisement -

ಬಾಬುರಾವ್ ಚಿಂಚನಸೂರ್ ಅವರು ತಲಾ ಎರಡು ಬಾರಿ ಚಿತ್ತಾಪುರ ಮತ್ತು ಗುರುಮಠಕಲ್ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದವರು. 2018ರ ವಿಧಾನಸಭಾ ಚುನಾವಣಾ ಸೋಲಿನ ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಬಂಡಾಯ ಸಾರಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮಾಡಿದವರು ಚಿಂಚನಸೂರ್. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಧಿಕೃತ ಕೆಲಸಕ್ಕೆ WHATSAPP ವೆಬ್ ಅಪಾಯಕಾರಿ ಏಕೆ? ಗೃಹ...

ಕಚೇರಿ, ಸಾರ್ವಜನಿಕ ಅಥವಾ ಹಲವರು ಹಂಚಿಕೊಂಡು ಬಳಸುವ ಕಂಪ್ಯೂಟರ್‌ಗಳಲ್ಲಿ WHATSAPP ವೆಬ್ ಬಳಸುವವರಿಗೆ ಕೇಂದ್ರ ಗೃಹ ಸಚಿವಾಲಯ ಮಹತ್ವದ ಭದ್ರತಾ ಎಚ್ಚರಿಕೆ ನೀಡಿದೆ. ಸಚಿವಾಲಯದ ಅಧೀನದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ...

ಆನೆ ಓಡಿಸಲು ಜೇನುನೊಣ ಸಾಕು! ಏನಿದು ತಂತ್ರ?

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೃಷಿಕರು ಆನೆ ಹಾವಳಿ ತಡೆಗೆ ಸರಳ ಮತ್ತು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಆನೆ ಬರುವ ದಾರಿಯಲ್ಲಿ ಜೇನು ಪೆಟ್ಟಿಗೆಗಳನ್ನಿಟ್ಟು ಗಜಪಡೆಯನ್ನು ಹಿಮ್ಮೆಟ್ಟಿಸುವ ಮಾರ್ಗವಿದು. ಆನೆಗಳ ಸೊಂಡಿಲಿನ ಒಳಭಾಗ...

ವೈದ್ಯರಿಲ್ಲ, ಔಷಧವೂ ಇಲ್ಲ! ದಶಕ ಕಳೆದರೂ ಚೇತರಿಸದ ಗಜೇಂದ್ರಗಡ...

ಗಜೇಂದ್ರಗಡ ತಾಲೂಕು ಘೋಷಣೆಯಾಗಿ ದಶಕ ಕಳೆದರೂ ಇಂದಿಗೂ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿಲ್ಲ. ವೈದ್ಯರ ಕೊರತೆ, ಅಗತ್ಯ ಔಷಧಿಗಳ ಕೊರತೆ, ಸಿಬ್ಬಂದಿಗಳ ಕೊರತೆ ಇರುವುದರಿಂದ, ಇಲ್ಲಿಗೆ ಬರುವ ರೋಗಿಗಳಿಗೆ ಸರಿಯಾದ ಚಿಕತ್ಸೆ,...

ಬಾಬುರಾವ್ ಚಿಂಚನಸೂರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಶತಾಗತಾಯ ಸೋಲಿಸಲೇ ಬೇಕೆಂದು ಕಾಂಗ್ರೆಸ್ ನಾಯಕ ಉಮೇಶ್ ಜಾದವ್ ಅವರನ್ನು ಸಹ ಬಿಜೆಪಿಗೆ ಕರೆ ತರುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಇದರ ಪರಿಣಾಮ ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಉಮೇಶ್ ಜಾದವ್ ವಿರುದ್ಧ ತಮ್ಮ ರಾಜಕೀಯ ಜೀವನದ ಮೊದಲ ಸೋಲು ಅನುಭವಿಸಿದ್ದರು.

ಲೋಕಸಭಾ ಚುನಾವಣೆಗೂ ಮೊದಲು ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿಯೇ ಸಿದ್ಧ ಎಂದಿದ್ದ ಬಾಬುರಾವ್ ಚಿಂಚನಸೂರ್ ಕಳೆದ ತಿಂಗಳಷ್ಟೇ ಪ್ರಿಯಾಂಕ್ ಖರ್ಗೆ ಅವರನ್ನು ಚಿತ್ತಾಪುರ ಕ್ಷೇತ್ರದಲ್ಲಿ ಸೋಲಿಸುವುದಾಗಿ ತೊಡೆ ತಟ್ಟಿದ್ದರು.  ಆದರೆ, ಬಾಬುರಾವ್ ಚಿಂಚನಸೂರ್ ಅವರಿಗೆ ಬಿಜೆಪಿ ಟಿಕೆಟ್ ಕೊಡಲು ನಿರಾಕರಿಸಿದ ಕಾರಣ ಕಮಲ ಪಡೆ ಬಿಟ್ಟು ಮತ್ತೆ ಕೈ ಹಿಡಿದಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಮ್ಮ ಹಳೆಯ ಮಾತುಗಳಿಗೆ ತಿರುಗೇಟು ಎಂಬಂತೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹಾಡಿಹೊಗಳಿದ್ದಾರೆ.

“ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರೀಯ ನಾಯಕರಾಗಿ ಬೆಳೆದಿದ್ದಾರೆ. ಡಿ ಕೆ ಶಿವಕುಮಾರ್‌ ಅವರು ಎಸ್ ಎಂ ಕೃಷ್ಣ ಸರ್ಕಾರದಲ್ಲಿ ನನಗೆ ಏಳು ಖಾತೆ ಕೊಡಿಸಿದ ಧೀಮಂತ ನಾಯಕ. ಏಳು ಜನ್ಮ ಬಂದರೂ ಶಿವಕುಮಾರ್ ಋಣ ತೀರಿಸಲು ಸಾಧ್ಯವಿಲ್ಲ. ಖರ್ಗೆ ನೇತೃತ್ವದಲ್ಲಿ ಹೈದರಾಬಾದ್ ಕರ್ನಾಟಕದಲ್ಲಿ ಜಯಭೇರಿ ಬಾರಿಸುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚಿತ್ತಾಪುರದಲ್ಲಿ ಕಾಂಗ್ರೆಸ್‌ ಅನ್ನು ಸೋಲಿಸುವ ಶಪಥ ಮಾಡಿದ್ದ ಚಿಂಚನಸೂರ್ ಇದೀಗ ಉಲ್ಟಾ ಹೊಡೆದು, “ಇಂದಿಗೆ ಬಿಜೆಪಿ ಮುಗಿದ ಅಧ್ಯಾಯ. ಚಿತ್ತಾಪುರದಲ್ಲಿ ಬಿಜೆಪಿ ಹೇಳ ಹೆಸರಿಲ್ಲದಂತಾಗಿದೆ. ನಾನು ಡಿ ಕೆ ಶಿವಕುಮಾರ್ ಬಗ್ಗೆ ಎಲ್ಲೂ ಚಕಾರ ಎತ್ತಿಲ್ಲ. ನಾನು ಶಿವಕುಮಾರ್ ಋಣ ತೀರಿಸಬೇಕಾಗಿದೆ. ನನಗೆ ಟಿಕೆಟ್ ನೀಡುವುದು ಕಾಂಗ್ರೆಸ್ ಹೈಕಮಾಂಡ್‌ಗೆ ಬಿಟ್ಟ ವಿಚಾರ” ಎಂದು ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರ ಜೊತೆಗಿನ ಜಗಳದ ಕುರಿತು ಪ್ರತಿಕ್ರಿಯೆ ನೀಡಿದ ಅವರು, “ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆಯಲಿದೆ. ಮಲ್ಲಿಕಾರ್ಜುನ ಖರ್ಗೆ ಜೊತೆಗಿನ ಭಿನ್ನಾಭಿಪ್ರಾಯ ವಿಚಾರವಾಗಿ ನಮ್ಮದು ಮತ್ತು ಖರ್ಗೆ ನಡುವೆ ತಂದೆ ಮಗನ ಜಗಳ. ತಂದೆ ಮಕ್ಕಳ ಭಿನ್ನಾಭಿಪ್ರಾಯ ಈಗ ಮುಗಿದಿದೆ” ಎಂದು ಸಮಜಾಯಿಷಿ ನೀಡಿದ್ದಾರೆ.

Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯದಲ್ಲಿ 1,350 ಕೆಪಿಎಸ್ ಶಾಲೆಗಳ ನಿರ್ಮಾಣ: ಸಚಿವ ಮಧು ಬಂಗಾರಪ್ಪ

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಮತ್ತು ಅವರ ಭವಿಷ್ಯವನ್ನು ಉಜ್ವಲಗೊಳಿಸುವ ಉದ್ದೇಶದಿಂದ...

‘ಹುಟ್ಟಿಗೂ, ಸಾವಿಗೂ ನಾವೇ ಬೇಕು… ನಮ್ಮ ಜೊತೆ ನಿಲ್ಲೋಕೆ ಯಾರೂ ಇಲ್ಲ’; ಆಶಾ ಅಳಲು

ಪೆಂಡಾಲಿನ ಒಂದು ಮೂಲೆಯಿಂದ ಆಶಾ ಕಾಯಕರ್ತೆಯರು " ರೂಪ ರೂಪಗಳನು ದಾಟಿ,...

ಕ್ಲಸ್ಟರ್ ಕಿಚನ್ ಸ್ಥಾಪಿಸುವ ಪ್ರಶ್ನೆಯೇ ಇಲ್ಲ : ಸಚಿವ ಮಧು ಬಂಗಾರಪ್ಪ

ರಾಜ್ಯದ 1ರಿಂದ 10ನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುವ...

2018ರ ಮಾನನಷ್ಟ ಮೊಕದ್ದಮೆ: ಧ್ರುವ್ ರಾಠಿ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ

2018ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಪ್ರಸಿದ್ಧ ಯೂಟ್ಯೂಬರ್ ಧ್ರುವ್ ರಾಠಿ...