ಯಾರದ್ದೋ ಮೀಸಲಾತಿ ಕಿತ್ತು ಒಕ್ಕಲಿಗರಿಗೆ ನೀಡಲಾಗಿದೆ: ನಂಜಾವಧೂತ ಸ್ವಾಮೀಜಿ

Date:

  • ಒಕ್ಕಲಿಗರು ಇನ್ನೊಬ್ಬರ ಅನ್ನ ಕಿತ್ತು ತಿನ್ನುವವರಲ್ಲ, ಹಂಚಿ ತಿನ್ನುವವರು
  • ಶೇ. 16ರಷ್ಟು ಮೀಸಲಾತಿ ಹೆಚ್ಚಳ ಮಾಡಿ ಎಂಬುದು ನಮ್ಮ ಬೇಡಿಕೆಯಾಗಿತ್ತು

“ಯಾರದ್ದೋ ಮೀಸಲಾತಿ ಕಿತ್ತು ಒಕ್ಕಲಿಗ ಸಮುದಾಯದ ಶೇ. 2ರಷ್ಟು ಮೀಸಲಾತಿ ಹೆಚ್ಚಿಸಿದ್ದಾರೆ. ಇದು ಬಕಾಸುರನ ಹೊಟ್ಟೆಗೆ ಅರೆಪಾವು ಮಜ್ಜಿಗೆ ಕೊಟ್ಟಂತಾಗಿದೆ. ಒಕ್ಕಲಿಗರು ಬೇರೆಯವರ ಅನ್ನವನ್ನು ಕಿತ್ತು ತಿನ್ನುವವರಲ್ಲ” ಎಂದು ಸ್ಫಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯೊಳಗಿನ 2(ಬಿ) ವರ್ಗದ ಮೂಲಕ ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಶೇ. 4ರಷ್ಟು ಮೀಸಲಾತಿಯನ್ನು ತೆಗೆದುಹಾಕಿ, ಅದನ್ನು ಲಿಂಗಾಯತ ಮತ್ತು ಒಕ್ಕಲಿಗರಿಗೆ ತಲಾ ಶೇ. 2 ರಂತೆ ಹಂಚಿರುವ ಕುರಿತು ಪ್ರತಿಕ್ರಿಯಿಸಿರುವ ಸ್ವಾಮೀಜಿ, ಬಿಜೆಪಿ ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ.

“ಒಕ್ಕಲಿಗರು ರಾಜ್ಯದ ಜನಸಂಖ್ಯೆಯಲ್ಲಿ ಶೇ. 16ರಷ್ಟು ಇದ್ದಾರೆ. ಶೇ. 4 ರಿಂದ ಶೇ. 16ಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿ ಎಂದು ನಾವು ಕೇಳಿದೆವು. ಆದರೆ ಯಾರದ್ದೋ ಶೇ. 2ರಷ್ಟು ಮೀಸಲಾತಿ ಕಿತ್ತು ಶೇ. 6ಕ್ಕೆ ಮೀಸಲಾತಿ ಏರಿಕೆ ಮಾಡಿದ್ದಾರೆ. ಒಕ್ಕಲಿಗರು ಬೇರೆಯವರ ಅನ್ನವನ್ನು ಕಸಿದು ತಿನ್ನಬೇಕು ಎನ್ನುವವರಲ್ಲ. ನಾಡಿನ ಒಕ್ಕಲಿಗ ಮಕ್ಕಳು ತಾವು ದುಡಿದಿದ್ದನ್ನು ಹಂಚಿ, ಉಳಿದರೆ ತಾವು ತಿನ್ನಬೇಕು ಎಂಬ ಧ್ಯೇಯ ಇಟ್ಟುಕೊಂಡಿದ್ದಾರೆ” ಎಂದು ಹೇಳಿದ್ದಾರೆ.

“ರಾಜ್ಯದಲ್ಲಿ ಶೇ. 16ರಷ್ಟು ಒಕ್ಕಲಿಗರಿದ್ದು, ಶೇ. 4ರಷ್ಟು ಮಾತ್ರವೇ ಮೀಸಲಾತಿ ಕೊಟ್ಟಿದ್ದೀರಿ. ಅದರಲ್ಲಿ ಹತ್ತಾರು ಸಮುದಾಯ ಸೇರಿಸಿದ್ದು, ಒಕ್ಕಲಿಗರಿಗೆ ಶೇ. 1.5 ನಿಂದ ಶೇ. 2 ರಷ್ಟು ಮೀಸಲಾತಿ ಮಾತ್ರ ಸಿಗುತ್ತದೆ. ಇದರಿಂದ ಎಲ್ಲ ಅವಕಾಶಗಳಿಂದ ಒಕ್ಕಲಿಗರ ಮಕ್ಕಳು ವಂಚಿತರಾಗುತ್ತಿದ್ದಾರೆ” ಎಂದು ವಿವರಿಸಿದ್ದಾರೆ.

ಜನರೇ ನಿಮ್ಮ ವಿರುದ್ಧ ತಿರುಗಿ ಬೀಳುತ್ತಾರೆ

“ಹಲವು ರಾಜ್ಯಗಳ ಸರ್ಕಾರಗಳನ್ನು ನೋಡುತ್ತಿದ್ದೇವೆ. ಕೀಳುಮಟ್ಟದ ಜನಪ್ರಿಯ ಕಾರ್ಯಕ್ರಮಗಳನ್ನು ಘೋಷಿಸುತ್ತಿದ್ದಾರೆ. ಅಗತ್ಯಕ್ಕೂ ಮೀರಿ ಜನರ ಮೇಲೆ ಸಾಲದ ಹೊರೆ ಹೊರಿಸುತ್ತಾರೆ. ಅಂತಹದ್ದೇ ರಾಜ್ಯ ನಮ್ಮದು ಆಗಬಾರದು” ಎಂದು ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಪ್ರಣಾಳಿಕೆ ಕುರಿತು ಅಭಿಪ್ರಾಯಪಟ್ಟಿದ್ದಾರೆ.

“ಅಭಿವೃದ್ಧಿ ಇಲ್ಲ, ಆದರೆ, ಎಲ್ಲ ಸೌಲಭ್ಯಗಳನ್ನ ಜನರ ಮನೆ ಬಾಗಿಲಿಗೆ ಕೊಡುತ್ತೀರಿ. ರಸ್ತೆ ಸರಿಯಿಲ್ಲ, ನೀರಾವರಿ ವ್ಯವಸ್ಥೆ ಇಲ್ಲ. ಮೂಲ ಸೌಕರ್ಯಗಳಿಲ್ಲ. ಕೊನೆಗೆ ಅದೇ ಜನರು ನಿಮ್ಮ ಮೇಲೆ ತಿರುಗಿ ಬೀಳುತ್ತಾರೆ. ಆದ್ದರಿಂದ ದುಡಿಯ ವರ್ಗವನ್ನು ಸರ್ಕಾರಗಳು ಸೃಷ್ಟಿ ಮಾಡಬೇಕು. ನಮ್ಮ ಜನರನ್ನು ಸ್ವಶಕ್ತರಾಗಿ, ಆರ್ಥಿಕ ಸಬಲರನ್ನಾಗಿ ಮಾಡಬೇಕು. ಆ ತರಹದ ಯೋಜನೆಗಳನ್ನು ಈ ವ್ಯವಸ್ಥೆಯಲ್ಲಿ ತರಬೇಕು” ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಗೋ ರಕ್ಷಣೆಯ ನೆಪದಲ್ಲಿ 2 ಲಕ್ಷ ರೂ.ಗೆ ಬೇಡಿಕೆ: ನಿರಾಕರಿಸಿದ್ದಕ್ಕೆ ಹತ್ಯೆಗೈದ ಪುನೀತ್‌ ಕೆರೆಹಳ್ಳಿ

ಮುಸ್ಲಿಂ ಜಾಗೃತ ವೇದಿಕೆಯು ಹೈಕೋರ್ಟ್ ಮೆಟ್ಟಿಲೇರಿದೆ

ಮೀಸಲಾತಿಯನ್ನು ಕಿತ್ತು ಹಾಕಿರುವುದನ್ನು ಪ್ರಶ್ನಿಸಿ ಮುಸ್ಲಿಂ ಜನಾಂಗ ಜಾಗೃತ ವೇದಿಕೆಯು ಹೈಕೋರ್ಟ್ ಮೆಟ್ಟಿಲೇರಿದೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ ಎಸ್ ದ್ವಾರಕಾನಾಥ್ ಅವರು ಇದಕ್ಕೆ ಕೈಜೋಡಿಸಿದ್ದಾರೆ.

ಬಿಜೆಪಿ ಸರ್ಕಾರವು 3(ಎ) ಮತ್ತು 3(ಬಿ) ಒಬಿಸಿ ಉಪವರ್ಗಗಳನ್ನು 2(ಸಿ) ಮತ್ತು 2 (ಡಿ) ನೊಂದಿಗೆ ಬದಲಾಯಿಸಿದೆ. ಕೊಡವರು ಮತ್ತು ಬಣಜಿಗರೊಂದಿಗೆ 3(ಎ) ನಲ್ಲಿ ಒಕ್ಕಲಿಗರು ಇದ್ದರು. ಇತರ ಸಮುದಾಯಗಳೊಂದಿಗೆ ಹಲವಾರು ಲಿಂಗಾಯತ ಉಪಜಾತಿಗಳು 3(ಬಿ)ಯಲ್ಲಿ ಇದ್ದವು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ಮಕ್ಕಳಿಗಿದು ಸುರಕ್ಷಿತ ತಾಣವೇ?

ಕಳೆದ ಐದು ವರ್ಷಗಳಲ್ಲಿ ಕರ್ನಾಟಕ ನಾಲ್ವರು ಮುಖ್ಯಮಂತ್ರಿಗಳನ್ನು ಕಂಡಿದೆ. ಆದರೂ ರಾಜ್ಯದ...

ಹೆಣ್ಣುಭ್ರೂಣ ಹತ್ಯೆ ಪ್ರಕರಣ: 9 ಮಂದಿ ಆರೋಪಿಗಳ ಬಂಧನ; ಹಲವರ ಕೈವಾಡವಿರುವ ಶಂಕೆ

ಭ್ರೂಣ ಲಿಂಗ ಪತ್ತೆ ಹಾಗೂ ಗರ್ಭಪಾತ ಪ್ರಕರಣದ ಆರೋಪಿಗಳು 1,500ಕ್ಕೂ ಅಧಿಕ...

ಬೆಂಗಳೂರು | ನ. 29ರಂದು ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ ಪ್ರದಾನ; ಕನ್ನಡ-ಉರ್ದು ಕವಿಗೋಷ್ಠಿ

ಕನ್ನಡದಲ್ಲಿ ಪ್ರಕಟಿತ ಮುಸ್ಲಿಮ್ ಬರಹಗಾರರ ಅತ್ಯುತ್ತಮ ಕೃತಿಗೆ ಕರ್ನಾಟಕ ಮುಸ್ಲಿಮ್ ಲೇಖಕರ...

ಗದಗ | ʼಸೊಸೆಗೆ ಸೀರೆ ಉಡಿಸಬೇಕುʼ ವದಂತಿ; ಅಂಗಡಿಗಳಲ್ಲಿ ವ್ಯಾಪಾರ ಜೋರು

ವೈಜ್ಞಾನಿಕವಾಗಿ ಜಗತ್ತು ಎಷ್ಟೇ ಮುಂದುವರೆದ್ರೂ ಮೌಢ್ಯ ಆಚರಣೆಗಳನ್ನ ಮಾತ್ರ ಬಿಟ್ಟಿಲ್ಲ. ಇದಕ್ಕೆ...