ಲೇಖಕ ರಹಮತ್ ತರೀಕೆರೆ ದನಿಯಲ್ಲಿ ಕೇಳಿ… ಆತ್ಮಕತೆ ‘ಕುಲುಮೆ’ಯಿಂದ ಆಯ್ದ ಮದುವೆಯ ಕಥನ

Date:

(ಆಡಿಯೊ ಪೂರ್ಣಪ್ರಮಾಣದಲ್ಲಿ ಸಿಗದಿದ್ದಲ್ಲಿ, ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ‘ಸ್ಪಾಟಿಫೈ’ನಲ್ಲಿ ಕೇಳಿ…)

ಒಂದಷ್ಟು ಮಂದಿಗೆ ಪ್ರೀತಿಯ ಮೇಷ್ಟ್ರು. ಇನ್ನೊಂದಷ್ಟು ಮಂದಿಗೆ ಪಕ್ಕಾ ವಿಮರ್ಶಕ. ಕೆಲವರಿಗೆ ಸಂಶೋಧನಾ ಮಾರ್ಗದರ್ಶಿ. ಕೆಲವರ ದೃಷ್ಟಿಯಲ್ಲಿ ಅಪ್ಪಟ ಪ್ರವಾಸಿ… ಹೀಗೆ, ಲೇಖಕ ರಹಮತ್ ತರೀಕೆರೆ ನಾಡಿನ ಜನತೆಗೆ ತರಹೇವಾರಿ ತಿರುವುಗಳಲ್ಲಿ ಸಿಕ್ಕವರು. ಸಿದ್ಧರು, ನಾಥರು, ಸೂಫಿಗಳ ಬೆನ್ನು ಹತ್ತಿ ಅವರು ಕಂಡುಕೊಂಡ ಸಂಗತಿಗಳು ಅತ್ಯಮೂಲ್ಯ ಕಣಜ. ಸದ್ಯಕ್ಕೆ, ಪಾಠ ಹೇಳುವ ಕೆಲಸದಿಂದ ತಾಂತ್ರಿಕವಾಗಿ ಆಚೆ ಬಂದಿದ್ದರೂ, ನಿಜದಲ್ಲಿ ನಿವೃತ್ತರಾಗುವುದಿಲ್ಲ ಎಂಬುದು ಅವರ ಶಿಷ್ಯವೃಂದದ ಪ್ರತಿಪಾದನೆ – ಇದನ್ನು ಅವರು ಆಗಾಗ ನಿಜವೆಂದು ಮನಗಾಣಿಸುತ್ತಲೇ ಇದ್ದಾರೆ.

ಇತ್ತೀಚೆಗೆ ಬಿಡುಗಡೆ ಆಗಿರುವ ರಹಮತ್ ತರೀಕೆರೆ ಅವರ ಆತ್ಮಕತೆ ‘ಕುಲುಮೆ’ ನಾನಾ ಕಾರಣಗಳಿಗೆ ಆಸಕ್ತಿದಾಯಕ ಪುಸ್ತಕ. ಅದೇಕೆ ಎಂಬುದನ್ನು ಅವರೇ ಬರೆದುಕೊಂಡಿರುವ ಈ ಮಾತುಗಳಲ್ಲಿ ಕಾಣಬಹುದು… “ನನ್ನ ಪಾಲಿಗೆ ದಕ್ಕಿದ ಬಾಳನ್ನು ಭರಪೂರವಾಗಿ ಅನುಭವಿಸಿದೆ. ಅದರ ಅಪೂರ್ವ ಲೀಲೆಗೆ ಬೆರಗಾದೆ. ದುಗುಡಗಳು ಘಾತಿಸಿದ್ದುಂಟು. ಬವಣೆಗಳು ಸುಸ್ತು ಮಾಡಿದ್ದುಂಟು. ಅಸುರಕ್ಷತೆ ಕಾಡಿದ್ದುಂಟು. ಉತ್ಕಟವಾದ ಖುಷಿ ಮೈಮರೆಸಿದ್ದೂ ಉಂಟು. ಹೀಗಾಗಿಯೇ ಈ ಕಥನವು – ಕುಟುಂಬ, ಬೀದಿ, ಊರು, ಸೀಮೆಗಳನ್ನು ಪ್ರತಿಫಲಿಸುವ ಕಥನ…”

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

‘ಕುಲುಮೆ’ಯ ಆಯ್ದ ಭಾಗವನ್ನು ಖುದ್ದು ರಹಮತ್ ತರೀಕೆರೆಯವರೇ ಓದಿದ್ದಾರೆ, ಆಲಿಸಿ. ಸಾಧ್ಯವಾದರೆ, ಹೇಗಿದೆ ತಿಳಿಸಿ.


ಪುಸ್ತಕ: ಕುಲುಮೆ (ಬಾಳ ಚಿತ್ರಗಳು) | ಲೇಖಕರು: ರಹಮತ್ ತರೀಕೆರೆ | ಪುಟಗಳು: 312 | ಬೆಲೆ: 330 | ಪ್ರಕಾಶಕರು: ಅಹರ್ನಿಶಿ ಪ್ರಕಾಶನ, ಶಿವಮೊಗ್ಗ | ಸಂಪರ್ಕ ಸಂಖ್ಯೆಗಳು: 94491 74662, 9448628511

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ಈದಿನ.ಕಾಮ್ ಕೇಳುದಾಣ
ಈದಿನ.ಕಾಮ್ ಕೇಳುದಾಣ
ಬದುಕಿನ ಮೇಲಿನ ಪ್ರೀತಿ ಹೆಚ್ಚಿಸುವ ಆಡಿಯೊ-ಬರಹಗಳ ನಿಲುದಾಣ

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸುತ್ತಾಟದಲ್ಲಿ ಸಿಕ್ಕವರು | ಶಿವಮೊಗ್ಗ ಜಿಲ್ಲೆ ಕಾಗೆ ಕೋಡಮಗ್ಗಿಯ ಅಬ್ದುಲ್ ಫಾರೂಖ್

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಸಂಕ್ರಾಂತಿ ವಿಶೇಷ ಆಡಿಯೊ | ನಂಜಿಲ್ಲದ ದೇವ ಬರುತ್ತಿದ್ದ ನಂಜನಗೂಡಿನಿಂದ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...