ಲೇಖಕಿ ಗೀತಾ ವಸಂತ ಆಡಿಯೊ ಸಂದರ್ಶನ | ‘ಮಾವಿನ ಹಣ್ಣಿಗಾಗಿ ಹುಡುಗರೊಂದಿಗೆ ಭರ್ಜರಿ ಫೈಟ್ ಮಾಡಿದ್ದೆ!’

Date:

ರಾಜ್‌ ಕಪೂರ್ ಸಿನಿಮಾ 'ಅನಾಡಿ'ಯಲ್ಲಿ 'ಕಿಸೀ ಕಿ ಮುಸ್ಕುರಾಹಟೋಂ ಪೆ ಹೋ ನಿಸಾರ್' ಎಂಬ ಅತ್ಯದ್ಭುತ ಹಾಡೊಂದಿದೆ. "ಸಾಧ್ಯವಾದರೆ ನಿಮ್ಮ ಸುತ್ತಮುತ್ತಲಿನವರ ಮೊಗದಲ್ಲಿ ನಗು ಮೂಡಿಸಿ. ನಿಮ್ಮಿಂದ ಸಾಧ್ಯವಾದರೆ, ಇತರರ ನೋವಿನ ಭಾರವನ್ನು ನಿಮ್ಮ ಹೆಗಲಿಗೂ ಸ್ವಲ್ಪ ತಂದುಕೊಳ್ಳಿ. ಎದೆಯಲ್ಲಿ ಸದಾ ಪ್ರೀತಿ ಇರಲಿ. ಇದೆಲ್ಲದರ ಹೆಸರೇ ಬದುಕು..." ಅಂತ ಪಿಸುಗುಡುವ ಈ ಹಾಡು ಸಾಕಷ್ಟು ಮಂದಿಗೆ ಗೊತ್ತು. ಬಹುತೇಕರಿಗೆ ಇದು ಹಾಡು ಮಾತ್ರ. ಆದರೆ, ಸಂಖ್ಯೆಯಲ್ಲಿ ಕಡಿಮೆಯಾದರೂ, ಈ ಹಾಡಿನ ಮೌಲ್ಯವನ್ನು ಬದುಕಲ್ಲಿ ಅಳವಡಿಸಿಕೊಂಡವರೂ ಉಂಟು. ಅಂಥವರಲ್ಲಿ ಗೀತಾ ವಸಂತ ಕೂಡ ಒಬ್ಬರು.

ದಟ್ಟ ಕಾಡಿನಂತೆ ಹೆಚ್ಚಾಗಿ ಮೌನವನ್ನೇ ಧ್ಯಾನಿಸುವ ಇವರ ಊರು - ಉತ್ತರ ಕನ್ನಡ ಜಿಲ್ಲೆಯ ದಟ್ಟ ಕಾನನದ ನಡುವಿನ ಕಾಟೀಮನೆ. ಓದಿದ್ದೆಲ್ಲ ಶಿರಸಿ ಮತ್ತು ಧಾರವಾಡದಲ್ಲಿ. ಕೆಲಸದ ನೆಪದಲ್ಲಿ ಇವರ ಊರಾಗಿದ್ದು ತುಮಕೂರು. ಸದ್ಯ, ತುಮಕೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಮೇಷ್ಟ್ರು.

ಮನಸ್ಸು ತಲ್ಲಣಿಸುವಂತೆ ಮಾಡುವಂತಹ ವಿದ್ಯಮಾನಗಳು ಎಲ್ಲಿಯೇ ನಡೆದರೂ ತಳಮಳಗೊಳ್ಳುವ, ಆ ಕುರಿತು ಆಳವಾಗಿ ಆಲೋಚಿಸುವ, ಅಂತಹ ಘಟನೆಗಳ ನೋವಿನ ಭಾರವನ್ನು ತನ್ನ ಹೆಗಲಿಗೆ ತಂದುಕೊಳ್ಳುವ ಇವರು, ಇದೇ ಕಾರಣಕ್ಕೆ ಅಪರೂಪದ ಲೇಖಕಿ. ಇಂತಹ ಅನನ್ಯ ವ್ಯಕ್ತಿತ್ವದ ಗೀತಾ ವಸಂತ ಅವರ ಬದುಕಿನ ಕತೆಗಳನ್ನು ಅವರದೇ ದನಿಯಲ್ಲಿ ಕೇಳುವ ಸಮಯವಿದು. 

ಸಂದರ್ಶನದ ಮುಖ್ಯಾಂಶಗಳು:

- Advertisement -

“ಈಸಾಡತಾವ ಜೀವಾ ಮಾನಸ ಸರೋವರ ಹೊಕ್ಕು’ ಅನ್ನೋ ಬೇಂದ್ರೆಯವರ ಸಾಲು, ‘ಕತ್ತಲು-ಬೆಳಕು ಬೇರೆ ಅಲ್ಲವೇ ಅಲ್ಲ’ ಅನ್ನೋ ಅಲ್ಲಪ್ರಭುವಿನ ಮಾತು ಸದಾ ನನ್ನ ಜೊತೆಗಿರುತ್ವೆ.”

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ಎಚ್ಚೆತ್ತುಕೊಳ್ಳುತ್ತಿವೆ DMK, YSRCP; ಡಿಲಿಮಿಟೇಷನ್‌ ಮಸೂದೆ ಮತ್ತೆ ಸೋಲುವ...

ಮೋದಿಯವರ ಅಹಂಕಾರದ ಆಡಳಿತಕ್ಕೆ ದಕ್ಷಿಣ ಭಾರತವು ಎಂದಿಗೂ ತಲೆಬಾಗುವುದಿಲ್ಲ, ಮತ್ತು ಈ ಬಾರಿಯ ಅವರ ಹತಾಶೆಯ ರಾಜಕೀಯ ಕುತಂತ್ರಗಳು ಅವರ ಪಾಲಿಗೆ ತಿರುಗುಬಾಣವಾಗಿ ದೇಶದ ಪ್ರಜಾಪ್ರಭುತ್ವವು ಗೆಲ್ಲುವುದು ಖಚಿತ ಮಹಿಳಾ ಮೀಸಲಾತಿ ಎಂಬ ಪವಿತ್ರ...

“ಊರಿನ ನಮ್ಮ ಮನೆಯ ಮುಂದೆ ಗದ್ದೆ. ಗದ್ದೆಯಾಚೆಗೆ ಒಂದು ದೊಡ್ಡ ಗುಡ್ಡ. ಅದು ನನಗೆ ಅಮ್ಮನ ಮಡಿಲಿದ್ದಂತೆ…”

“ಮೊದಲಿಂದಾನೂ ಏನೋ ಭಾರ ಹೊತ್ಕಂಡು ಇದ್ದಂತಿದ್ದ ಹುಡುಗಿ ನಾನು… ಈಗ ಅನ್ನಿಸ್ತಿದೆ ತರ್ಲೆ ಮಾಡ್ಬೇಕಿತ್ತೇನೋ ಅಂತ!

“ನನ್ನ ಮುತ್ತಜ್ಜಿಯೊಬ್ಬರಿದ್ರು… ಕತೆ ಹೇಳೋರು. ಅವರು ಆವೇಶಭರಿತರಾಗಿ ಪಾತ್ರವೇ ತಾವಾಗಿ ಅಭಿನಯಿಸ್ತಾ ಕತೆ ಹೇಳುವಾಗ ನಂಗನ್ನಿಸೋದು… ಅಡುಗೆಮನೇಲಿ ಸುಮ್ನೆ ಇರ್ತಿದ್ದ ಅಜ್ಜಿ ಇವ್ರೇನಾ ಅಂತ!”

“ಧಾರವಾಡದಲ್ಲಿ ಹಾಸ್ಟೆಲ್‌ನಲ್ಲಿ ಇದ್ದಾಗ, ಬಕೆಟ್ ನೀರಿಗಾಗಿ ಜೋರು ಜಗಳ ಮಾಡಿದ್ದೆ. ಈಗ ನೆನೆದರೆ ನಾನು ಜಗಳ ಮಾಡಿದ್ದೆನಾ ಅಂತ ಆಶ್ಚರ್ಯ ಆಗುತ್ತೆ!”

ಗೀತಾ ವಸಂತ ಅವರ ಯುಟ್ಯೂಬ್ ವಾಹಿನಿಯ ಲಿಂಕ್: https://www.youtube.com/@geetavasant730

“ಒಂದಿನ ಬಸ್‌ನಲ್ಲಿ ಕನ್ನಡಕದ ಗೂಡು ಬಿಟ್ಟು ಬಂದಿದ್ದ ಅಪ್ಪ, ಅದರಲ್ಲಿದ್ದ ಫೋನ್ ನಂಬರ್ ಬಳಸಿ ಯಾರಾದ್ರೂ ಫೋನ್ ಮಾಡ್ತಾರೆ ಕಾದಿದ್ದೇ ಕಾದಿದ್ದು… ಕೊನೆಗೂ ಫೋನ್ ಬಂತು. ಅಲ್ಲೆಲ್ಲೋ ಮುಂಡಗೋಡಿನಂಚಿನ ಯಾವುದೋ ಊರು! ಅಪ್ಪ ಹೊರಟೇಬಿಟ್ರು!”

“ಅಪ್ಪ ದುಷ್ಯಂತ-ಶಾಕುಂತಲೆಯ ಕತೆಯನ್ನು ಎಷ್ಟು ಚಿತ್ರವತ್ತಾಗಿ ಹೇಳ್ತಿದ್ರು ಅಂದ್ರೆ, ಅದರಲ್ಲಿನ ಶಾಕುಂತಲೆ ನಾನೇ ಅನ್ನಿಸಿಬಿಡ್ತಿತ್ತು…”

“ಹೆಣ್ಮಕ್ಕಳನ್ನು ಯಾವಾಗಲೂ ಧರ್ಮದಿಂದಾಚೆ, ಚರಿತ್ರೆಯಿಂದಾಚೆ, ಭಾಷೆಯಿಂದಾಚೆ… ಹೀಗೆ ಯಾವಾಗಲೂ ಒಂದಲ್ಲ ಒಂದು ಬಗೆಯಲ್ಲಿ ಆಚೆ ಇರಬೇಕು ಅನ್ನೋದಿದೆಯಲ್ಲ, ಅದು ತುಂಬಾನೇ ಕಾಡುತ್ತೆ…”

“ನಮ್ಮ ಪೌರಕಾರ್ಮಿಕ ಮಹಿಳೆಯರು ಶುದ್ಧಗೊಳಿಸೋದು ರಸ್ತೆಗಳನ್ನೋ, ಆಸ್ಪತ್ರೆಗಳನ್ನೋ ಅಥವಾ ಬರೀ ಕೊಳಕಾಗಿರೋ ಜಾಗಗಳನ್ನೋ ಅಲ್ಲ; ಅವೆಲ್ಲದರ ಜೊತೆಗೆ ನಮ್ಮ ಅಂತರಂಗವನ್ನೂ…”

“ಕಾಟೀಮನೆಯಂತಹ ಕಾಡಿನ, ಏನೇನೂ ಗೊತ್ತಿಲ್ಲದ ಹುಡುಗಿಯಾಗಿದ್ದವಳು ತುಮಕೂರು ವಿಶ್ವವಿದ್ಯಾಲಯದಂತಹ ಬೌದ್ಧಿಕ ಪ್ರಪಚಂಕ್ಕೆ ಬಂದು, ಅನೇಕ ಪಟ್ಟುಗಳನ್ನು ನೋಡಿದ್ದೀನಿ, ಕೆಲವು ಸಾರಿ ಕಲಿತಿದ್ದೀನಿ…”

ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ಪೋಸ್ಟ್ ಹಂಚಿಕೊಳ್ಳಿ:

ಈದಿನ.ಕಾಮ್ ಕೇಳುದಾಣ
ಈದಿನ.ಕಾಮ್ ಕೇಳುದಾಣ
ಬದುಕಿನ ಮೇಲಿನ ಪ್ರೀತಿ ಹೆಚ್ಚಿಸುವ ಆಡಿಯೊ-ಬರಹಗಳ ನಿಲುದಾಣ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಂಜಾಬ್ ಆಪ್ ಸರ್ಕಾರ ಉರುಳಿಸಲು ಮೋದಿ ಮಹಾಸಂಚು?

ಈ ಸಂಪೂರ್ಣ ರಾಜಕೀಯ ಬಿಕ್ಕಟ್ಟಿಗೆ ಕೇವಲ ಆಪ್‌ನ ಆಂತರಿಕ ದೌರ್ಬಲ್ಯಗಳಷ್ಟೇ ಕಾರಣವಲ್ಲ;...

ಟ್ರಂಪ್ ಆಡಳಿತದಿಂದ ಅಮೆರಿಕ ಬಿಡಲು ಮುಂದಾದ ಶೇ. 40ರಷ್ಟು ಭಾರತೀಯರು; ಸಮೀಕ್ಷೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ

ಟ್ರಂಪ್ ಆಡಳಿತದ 'ಅಮೆರಿಕನ್ನರಿಗೆ ಮಾತ್ರ ಅಮೆರಿಕ' ಎಂಬ ಉಗ್ರ ರಾಷ್ಟ್ರೀಯವಾದಿ ನಿಲುವು...

ಕಿಂಗ್ ಕೊಹ್ಲಿ ಜರ್ಸಿ ನಂಬರ್ 18ರ ಹಿಂದಿದೆ ಕಣ್ಣೀರಿನ ಕಥೆ; ಕರ್ನಾಟಕಕ್ಕೂ ಇದಕ್ಕೂ ಏನು ನಂಟು?

ಇಂದಿನ ಯುವಕರು ವಿರಾಟ್ ಕೊಹ್ಲಿ ಅವರ ಕೇವಲ ಅಭಿಮಾನಿಗಳಾಗುವುದಲ್ಲ. ಅವರು ಹೇಗೆ...