ಇತಿಹಾಸದ ಗಾಯಗಳಿಗೆ ಮನುಷ್ಯತ್ವದ ಮದ್ದು ಹಚ್ಚುವ ‘ಸ್ವಾತಂತ್ರ್ಯದ ಓಟ’

Date:

ನನ್ನದೇ ಕೆಲವು ವೈಯಕ್ತಿಕ ಕೆಲಸಗಳಲ್ಲಿ ಬಿಜ಼ಿಯಾಗಿದ್ದ ನಾನು, ‘ಸ್ವಾತಂತ್ರ್ಯದ ಓಟ’ ನಾಟಕವನ್ನು ನೋಡುವ ಸಮಯಾವಕಾಶಕ್ಕಾಗಿ ಕಾಯುತ್ತಿದ್ದೆ. ಕೊನೆಗೂ ಧಾರವಾಡ ರಂಗಾಯಣವು ಜುಲೈ 5ರಂದು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಈ ನಾಟಕವನ್ನು ಆಯೋಜಿಸಿದ್ದರಿಂದ, ಪ್ರದರ್ಶನವನ್ನು ಕಣ್ಣುಂಬಿಕೊಳ್ಳುವ ಭಾಗ್ಯ ನನ್ನದಾಯಿತು.

- Advertisement -

ಬೃಹತ್ ಕಾದಂಬರಿಯೊಂದನ್ನು ರಂಗಭೂಮಿಯ ಚೌಕಟ್ಟಿಗೆ ತರುವುದು ಎಂದರೆ ಕೇವಲ ಪುಟಗಳನ್ನು ದೃಶ್ಯಗಳಾಗಿ ಭಾಷಾಂತರಿಸುವುದಲ್ಲ; ಅದು ಆ ಕೃತಿಯ ಆತ್ಮವನ್ನು ರಂಗದ ಮೇಲೆ ಆವಾಹಿಸಿಕೊಳ್ಳುವುದು. ಶಿವಮೊಗ್ಗ ರಂಗಾಯಣ ಪ್ರಸ್ತುತಪಡಿಸಿದ, ನಟರಾಜ್ ಹೊನ್ನವಳ್ಳಿ ನಿರ್ದೇಶನದ ಮತ್ತು ಸಲ್ಮಾ ದಂಡಿನ ಅವರ ಸಹ-ನಿರ್ದೇಶನದ ಬೋಳುವಾರು ಮಹಮದ್ ಕುಂಞಯವರು ಬರೆದ ‘ಸ್ವಾತಂತ್ರ್ಯದ ಓಟ’ ನಾಟಕವು ಈ ರಂಗ-ರೂಪಾಂತರದ ಪ್ರಕ್ರಿಯೆಯಲ್ಲಿ ಹೊಸದೊಂದು ಮೈಲಿಗಲ್ಲನ್ನು ಸ್ಥಾಪಿಸಿದೆ. ಕನ್ನಡ ರಂಗಭೂಮಿಯಲ್ಲಿ ಬೃಹತ್ ಕಾದಂಬರಿ ಅಥವಾ ಕೃತಿಗಳನ್ನು ರಂಗರೂಪಕ್ಕೆ ತಂದು ನಾಟಕ ಕಟ್ಟುವುದು ಹೊಸದೇನಲ್ಲ; ನಮ್ಮ ರಂಗಭೂಮಿ ಅಂತಹ ಸಾಮರ್ಥ್ಯವನ್ನು ಬಹಳ ಹಿಂದಿನಿಂದಲೇ ಮೈಗೂಡಿಸಿಕೊಂಡು ಬಂದಿದೆ. ಆ ಸಾಲಿಗೆ ಸೇರುವ ಮತ್ತೊಂದು ಮಹತ್ಕಾರ್ಯ ಈ ಪ್ರಯೋಗವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭಾರತಕ್ಕೆ ಬರದ ಬುಲೆಟ್ ಟ್ರೈನ್: ತಡವಾಗುತ್ತಿರುವುದು ಮೋದಿಯಿಂದಲೋ, ಜಪಾನ್‌ನವರಿಂದಲೋ?

ಮುಂಬೈ ಮತ್ತು ಅಹಮದಾಬಾದ್ ನಡುವಿನ 508 ಕಿ.ಮೀ ಉದ್ದದ ಈ ಮಾರ್ಗವು ಭಾರತೀಯ ರೈಲ್ವೆಯನ್ನು ಆಧುನೀಕರಿಸುವ ಯೋಜನೆಯ ಭಾಗವಾಗಿ ನರೇಂದ್ರ ಮೋದಿಯವರು ಘೋಷಿಸಿದ್ದರು. ಅದಾಗಿ ಹತ್ತು ವರ್ಷವಾದರೂ ಸುದ್ದಿಯೇ ಇಲ್ಲ. ಬುಲೆಟ್ ಟ್ರೈನ್...

ನೊಬೆಲ್‌ ಪ್ರಶಸ್ತಿ ಸರಣಿ | ರಸಾಯನವಿಜ್ಞಾನದ ʼಅಸಮಮಿತಿʼ (Chirality)ಯ...

ರಸಾಯನವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಈ ಬಾರಿ ಹೆನ್ರಿ ಕಗಾನ್‌ ಮತ್ತು ಕೆನ್ಸೊ ಸುಆಯ್‌ ಅವರಿಗೆ ನೀಡಲಾಗಿದೆ. ಅವರ ಸಂಶೋಧನೆಯ ಕೇಂದ್ರ ಬಿಂದು ರಸಾಯನವಿಜ್ಞಾನದಲ್ಲಿ ಶತಮಾನಗಟ್ಟಲೆ ಅತ್ಯಂತ ಕುತೂಹಲಕಾರಿ ಪ್ರಶ್ನೆಯಾಗಿದ್ದ- ಒಂದಕ್ಕೊಂದು ಕನ್ನಡಿಯ ಪ್ರತಿಬಿಂಬದಂತಿರುವ...

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಇತ್ತೀಚಿನ ದಿನಗಳಲ್ಲಿ ಕಲೆಯನ್ನಾಗಲಿ, ಸುದೀರ್ಘ ದೃಶ್ಯಕಾವ್ಯವನ್ನಾಗಲಿ ತಾಳ್ಮೆಯಿಂದ ಆಸ್ವಾದಿಸುವ ಗುಣ ಪ್ರೇಕ್ಷಕರಲ್ಲಿ ಕಡಿಮೆಯಾಗುತ್ತಿರುವುದು ಬೇಜಾರಿನ ಸಂಗತಿ. ಆದರೆ, ಮೂರೂವರೆ ಗಂಟೆಗಳ ಕಾಲ ಪ್ರೇಕ್ಷಕರನ್ನು ಕಾಲದ ಗರ್ಭದೊಳಗೆ ಹಿಡಿದಿಟ್ಟುಕೊಳ್ಳುವ ಈ ನಾಟಕ, ಕೇವಲ ಇತಿಹಾಸವನ್ನು ನೆನಪಿಸುವುದಿಲ್ಲ; ಬದಲಿಗೆ ಇಂದಿನ ವರ್ತಮಾನಕ್ಕೂ ಕನ್ನಡಿ ಹಿಡಿಯುತ್ತದೆ.

ಕಾಲದ ಉರುಳಿನಲ್ಲಿ ಅಸ್ತಿತ್ವದ ಹುಡುಕಾಟ ನಡೆಸುತ್ತ, ಉತ್ತರ ಕರ್ನಾಟಕದ ಸೌಹಾರ್ದತೆಯ ಕಲೆಯಾದ ಹೆಜ್ಜೆ ಮೇಳದ ಲಯದೊಂದಿಗೆ ಹೆಜ್ಜೆ ಹಾಕುವ ಈ ನಾಟಕವು ಕೇವಲ ರಾಜಕೀಯ(ದೇಶ) ವಿಭಜನೆಯ ಕಥೆಯಾಗಿ ಉಳಿಯುವುದಿಲ್ಲ. ಅದು ವ್ಯಕ್ತಿಯೊಬ್ಬನ ಅಸ್ತಿತ್ವದ ತಲ್ಲಣಗಳ ಸುತ್ತ ಮೌನವಾಗಿ ಆವರಿಸಿಕೊಳ್ಳುತ್ತದೆ. ಕರಾಚಿಯಿಂದ ಮುತ್ತುಪ್ಪಾಡಿಯವರೆಗೆ ಚಾಂದ್ ಅಲಿ ಎಂಬುವ ವ್ಯಕ್ತಿಯ ಪಯಣವು ಬರೀ ಗಡಿಗಳನ್ನು ದಾಟುವ ಓಟವಾಗದೆ, ತನ್ನೊಳಗಿನ ಶಾಂತಿಯನ್ನು ಹುಡುಕುವ ಧ್ಯಾನದಂತೆ ಪ್ರತಿಫಲಿಸುತ್ತದೆ. ವಿಭಜನೆಯ ರಕ್ತಸಿಕ್ತ ಇತಿಹಾಸವು ದೇಶಗಳ ನಕ್ಷೆಯನ್ನು ಬದಲಾಯಿಸಿದರೆ, ಮನುಷ್ಯರ ಮನಸುಗಳಲ್ಲಾದ ಸ್ಥಿತ್ಯಂತರಗಳನ್ನು ನಾಟಕದ ಪ್ರತಿ ದೃಶ್ಯವೂ ಸೂಕ್ಷ್ಮವಾಗಿ ಧ್ವನಿಸುತ್ತದೆ.

ರಾಜಕೀಯ ಸಿದ್ಧಾಂತಗಳಿಗಿಂತ ಮನುಷ್ಯನ ಸಹಜ ಬದುಕು ಎಷ್ಟು ದೊಡ್ಡದು ಎಂಬುದನ್ನು ಚಾಂದ್ ಅಲಿಯ ಪಾತ್ರ ನಿರೂಪಿಸುವ ರೀತಿ ಅನನ್ಯ. ನಾಟಕದುದ್ದಕ್ಕೂ ಮೂರು ಪಾತ್ರಧಾರಿಗಳು ಚಾಂದ್ ಅಲಿಯನ್ನು ಪ್ರತಿನಿಧಿಸುತ್ತ, ಒಬ್ಬರ ಭಾವ ಸ್ಮೃತಿಯೊಳಗೆ ಮತ್ತೊಬ್ಬರು ಇಣುಕುತ್ತ, ಭೂತ ಮತ್ತು ಭವಿಷ್ಯತ್ತನ್ನು ಮುಖಾಮುಖಿಯಾಗಿಸುವ ನಿರ್ದೇಶಕರ ಕ್ರಿಯಾಶೀಲತೆ ಅದ್ಭುತವಾಗಿ ಮೂಡಿಬಂದಿದೆ. ಬಿರ್ಲಾ ಹೌಸ್ ದೃಶ್ಯವಂತು ನಿರ್ದೇಶಕರ ಕ್ರೀಯಾಶೀಲತೆಗೆ ದೊಡ್ಡ ಉದಾಹರಣೆ. ನಿರಾಕಾರ ಬಾಪೂಜಿಯ ಆಗಮನ ಮತ್ತು ಅವರ ಹತ್ಯೆಯನ್ನು ಎಷ್ಟು ಸಾಂಕೇತಿಕವಾಗಿ ಕಟ್ಟಲಾಗಿತ್ತೆಂದರೆ ರಂಗದ ಮೇಲೂ ಹಿಂಸೆಯ ಅನಾವರಣವಾಗದಂತೆ ಕಟ್ಟಲಾಗಿತ್ತು.

ಸೂಫಿ ಬದ್ರುದ್ದೀನ್ ಹರಿವ ನೀರ ಮೇಲಿನ ಗುಳ್ಳೆಯಂತೆ ದರ್ಶನವಾಗುವ ಪರಿಯನ್ನು ನಿರ್ದೇಶಕರು ಬಹಳ ಜಾಗೃತ ಪ್ರಜ್ಞೆಯಲ್ಲಿ ಕಟ್ಟಿದಂತಿದೆ.
ಈ ರಂಗಪ್ರಯೋಗದ ಅತಿ ದೊಡ್ಡ ಶಕ್ತಿ ದೃಶ್ಯ ಮತ್ತು ಶ್ರವ್ಯ ಮಾಧ್ಯಮಗಳ ಸಮನ್ವಯತೆಯಲ್ಲಿ ಇದೆ. ಸೂಫಿ ಸಂತರ ತತ್ವಪದಗಳು ಮತ್ತು ಕಬೀರ್, ಠ್ಯಾಗೋರರ ಕಾವ್ಯದ ಎಳೆಗಳು ನಾಟಕದ ತುಂಬೆಲ್ಲ ಅಂತರ್ವಾಹಿನಿಯಾಗಿ ಹರಿಯುತ್ತವೆ. ಇವು ಕೇವಲ ಹಿನ್ನೆಲೆ ಸಂಗೀತವಾಗಿ ಬಳಕೆಯಾಗದೆ, ಕಥೆಯ ಭಾಗವಾಗಿಯೇ ಮೂಡಿಬಂದಿರುವುದು ʼರಂಗ ಸೂಫಿʼ ರಾಘವ ಕಮ್ಮಾರ ಅವರ ಅದ್ಭುತ ಸಂಗೀತ ಪ್ರಜ್ಞೆಗೆ ಸಾಕ್ಷಿಯಾಗಿದೆ.

ವೆಂಕಟೇಶ್ ರೆಡ್ಡಿ ಮತ್ತು ಮೇಘಾ ಕೊತಬಾಳ ಅವರ ಗಾಯನವಂತೂ ಈಗಲೂ ಎದೆಯಾಳದಲ್ಲಿ ಗುನುಗುತ್ತಿದೆ. ಪಕ್ಕವಾದ್ಯ ನಡೆಸಿದ ಹೆಸರಾಂತ ಕಲಾವಿದರಾದ ಅಕ್ಷಯ ಜೋಷಿ, ಕೃಷ್ಣ ಬಡೀಗೇರ ಹಾಗೂ ಅಭಿಷೇಕ ಹುಲ್ಲೆಣ್ಣವರ ಅವರ ಮಾಂತ್ರಿಕ ಕೈಚಳಕ ಅದ್ಭುತವಾಗಿತ್ತು. ದ್ವೇಷದ ದಳ್ಳುರಿಯ ನಡುವೆಯೂ ಪ್ರೀತಿಯ ತಂಗಾಳಿಯನ್ನು ಬೀಸುವ ಸೂಫಿ ಸಂಗೀತವು, ಪ್ರೇಕ್ಷಕರನ್ನು ಅಧ್ಯಾತ್ಮದ ಮತ್ತು ಸೌಹಾರ್ದತೆಯ ಉತ್ತುಂಗಕ್ಕೆ ಕೊಂಡೊಯ್ಯುತ್ತದೆ. ರಂಗದ ಮೇಲೆ ಹೆಜ್ಜೆ ಮೇಳ ಬಂದಾಗಲಂತೂ ಪ್ರೇಕ್ಷಕರಿಗೂ ಎದ್ದು ಕುಣಿಯಬೇಕೆನಿಸುವಷ್ಟು ಲವಲವಿಕೆ ತುಂಬಿಕೊಳ್ಳುತ್ತದೆ. ಇಲ್ಲಿ ಮೂಲ ಅಲಾವಿ ಪದಗಳನ್ನು ಬಳಸಿರುವುದು ರಂಗಸಂಗೀತಕ್ಕೆ ಹೊಸ ಮೆರುಗನ್ನು ನೀಡಿದೆ.

ಕಥೆಯ ಕೇಂದ್ರ ಬಿಂದುವಾದ ʼಮುತ್ತುಪ್ಪಾಡಿ’ ಎಂಬ ಹಳ್ಳಿ ಗಾಂಧೀಜಿ ಕನಸು ಕಂಡ ಭಾರತದ ಜೀವಂತ ರೂಪಕವಾಗಿ ನಾಟಕದುದ್ದಕ್ಕೂ ತೆರೆದುಕೊಳ್ಳುತ್ತದೆ. ಜಗತ್ತಿನಾದ್ಯಂತ ಧರ್ಮಾಂಧತೆಯ ಕೋಲಾಹಲವಿದ್ದರೂ, ಈ ಪುಟ್ಟ ಹಳ್ಳಿಯ ಸಣ್ಣಪುಟ್ಟ ಜಗಳಗಳು, ಪ್ರೇಮ ಮತ್ತು ನೈತಿಕತೆಗಳು ಬದುಕಿನ ಸಹಜ ಸೌಂದರ್ಯವನ್ನು ಎತ್ತಿಹಿಡಿಯುತ್ತವೆ. ಮನುಷ್ಯತ್ವದ ಕೊರತೆಗಳಿಗೆ ಮನುಷ್ಯರೇ ಮದ್ದಾಗಬಲ್ಲರು ಎಂಬ ಆಶಯ ಇಲ್ಲಿನ ಪ್ರತಿ ಪಾತ್ರದ ಮೂಲಕ ಅನಾವರಣಗೊಳ್ಳುತ್ತದೆ.

ದೇಶ ವಿಭಜನೆಯ ಸಂದರ್ಭದಲ್ಲಿ ಮೊಹಿಂದರ್ ಬಾಬಿ ಹಾಗೂ ಆಕೆಯ ತಂಗಿ ತನ್ವೀರ್ ಇಬ್ಬರು ಸಹೋದರಿಯರು ಧರ್ಮಾಂಧರಿಗೆ ಹೆದರಿ ಊರು ಬಿಡುವ ಸಮಯದಲ್ಲಿ ಚಾಂದ್ ಅಲಿಗೆ ನೀಡಿದ ಒಡವೆಗಳ ಸುತ್ತ ಹೆಣೆಯಲಾದ ನೈತಿಕ ಸಂಘರ್ಷವು, ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕೆ ನಾಂದಿ ಹಾಡುತ್ತದೆ.

ಧರ್ಮಾಂಧತೆಯ ಹುನ್ನಾರಗಳನ್ನು ಕಟುವಾಗಿ ವಿಮರ್ಶಿಸುತ್ತಲೇ, ಅಂತಿಮವಾಗಿ ‘ಮನುಷ್ಯ ಪ್ರೀತಿ’ಯೇ ಎಲ್ಲದಕ್ಕೂ ಮಿಗಿಲಾದದ್ದು ಎಂಬ ಸತ್ಯವನ್ನು ನಾಟಕ ಪ್ರೇಕ್ಷಕರ ಎದೆಯಾಳಕ್ಕೆ ಇಳಿಸುತ್ತದೆ..

ಮಂಜುನಾಥ್ ಗೋಮರದಹಳ್ಳಿ ಅವರ ರಂಗರೂಪಾಂತರದಲ್ಲಿ ಎಲ್ಲೂ ಕಥೆಯ ವೇಗ ಕುಂಠಿತವಾಗುವುದಿಲ್ಲ. ಸಾವಿರ ಪುಟಗಳ ಕಾದಂಬರಿಯನ್ನು ಬಿಗಿಯಾದ ರಂಗಪಠ್ಯವನ್ನಾಗಿಸಿದ ಜಾಣ್ಮೆ ಎದ್ದು ಕಾಣುತ್ತದೆ. ರಂಗಸಜ್ಜಿಕೆ ಮತ್ತು ಬೆಳಕಿನ ವಿನ್ಯಾಸವು ಅದ್ದೂರಿತನಕ್ಕಿಂತ ಹೆಚ್ಚಾಗಿ ಕಥೆಯ ಗಾಂಭೀರ್ಯಕ್ಕೆ ಪೂರಕವಾದ ಸಂಯಮವನ್ನು ಕಾಯ್ದುಕೊಂಡಿದೆ. ನಾಟಕದಲ್ಲಿ ಬಳಸಲಾದ ಸಹನಾ ಪಿಂಜಾರ ಅವರು ಮಾಡಿರುವ ವೇಷಭೂಷಣಗಳ ವಿನ್ಯಾಸವು ಕಾಲ ಮತ್ತು ಸ್ಥಳ ಹಾಗೂ ಭೌಗೋಳಿಕ ಸಾಂಪ್ರದಾಯಿಕತೆಗೆ ಪೂರಕವಾಗಿವೆ. ಎಲ್ಲ ನಟರ ಸಹಜ ಅಭಿನಯ ಮತ್ತು ಚಲನೆಗಳು ರಂಗದ ಮೇಲೆ ಒಂದು ಜೀವಂತ ಚಿತ್ರಕಲೆಯನ್ನು ಮೂಡಿಸಿದಂತಿತ್ತು.

ಇದನ್ನೂ ಓದಿದ್ದೀರಾ? ಮಂಡ್ಯ | ಮೈಷುಗರ್ ಕಾರ್ಖಾನೆಯ ಬಾಯ್ಲರ್‌ಗೆ ಅಗ್ನಿಸ್ಪರ್ಷ: ಜು.15ರಿಂದ ಕಬ್ಬು ಅರೆಯುವಿಕೆ ಆರಂಭ

ಶುರುವಾತಿನಲ್ಲಿ ನಾಟಕದ ವೇಗ ಕಡಿಮೆ ಎನಿಸಿದರೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇಲ್ಲಿ ನಾಟಕದ ವಿಷಯ ವಸ್ತುವನ್ನು ಬಿಟ್ಟು ಕೇವಲ ನನ್ನ ಅನುಭವ ಹಂಚಿಕೊಂಡಿದ್ದೇನೆ ‘ಸ್ವಾತಂತ್ರ್ಯದ ಓಟ’ ಮನಸ್ಸನ್ನು ಆವರಿಸಿಕೊಳ್ಳುವ ತತ್ವ. ಇಂದು ಸಮಾಜ ಎದುರಿಸುತ್ತಿರುವ ಅಸಹನೆಗೆ ಉತ್ತರ ಹುಡುಕಬಯಸುವ ಪ್ರತಿಯೊಬ್ಬರೂ ನೋಡಲೇಬೇಕಾದ, ಚಿಂತಿಸಬೇಕಾದ ಅತ್ಯಂತ ಪ್ರಬುದ್ಧ ರಂಗಪ್ರಯೋಗವಿದು. ಆ ಕಾರಣಕ್ಕಾಗಿ ಇದನ್ನು ಎಲ್ಲರೂ ನೋಡಲಿ ಎಂಬುದು ಆಸೆ. ಇಂತಹದೊಂದು ಸಾಹಸಕ್ಕೆ ಕೈಹಾಕಿ ಯಶಸ್ವಿಯಾದ ಇಡೀ ರಂಗತಂಡಕ್ಕೆ, ಶಿವಮೊಗ್ಗ ರಂಗಾಯಣಕ್ಕೆ, ನಾಟಕದ ನಿರ್ದೇಶಕ ಹಾಗೂ ಸಹ-ನಿರ್ದೇಶಕರಿಗೆ, ಕೃತಿಕಾರರಿಗೆ ಮತ್ತು ನೇಪಥ್ಯ ತಂಡಕ್ಕೆ ಹೃತ್ಪೂರ್ವಕ ಕೃತಜ್ಞತೆಗಳು. ನಮ್ಮ ಧಾರವಾಡ ರಂಗಾಯಣಕ್ಕೆ ಇಂತಹದೊಂದು ಉತ್ತಮ ಯೋಜನೆ ಸಿಕ್ಕು ಜನಸಾಮಾನ್ಯರೆಲ್ಲರನ್ನೂ ತಲುಪುವ ನಾಟಕವಾಗಿ ನಾಡಿನಾದ್ಯಂತ ಹೆಚ್ಚು ಪ್ರದರ್ಶನಗಳನ್ನು ಕಾಣಲಿ ಎಂದು ಬಯಸುತ್ತಲೇ ಇರುತ್ತೇನೆ ..

ಬರಹ : ಕುಮಾರ್ ಲಾಲ್

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಲಿನ ದರ ಏರಿಕೆ ಬೆನ್ನಲ್ಲೇ ಬಸ್ ಟಿಕೆಟ್ ದರ ಏರಿಕೆಗೆ ಮುಂದಾದ ರಾಜ್ಯ ಸರ್ಕಾರ!

ಕರ್ನಾಟಕದಲ್ಲಿ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ತಣ್ಣಗಾಗುವ ಮುನ್ನವೇ,...

ಬೀದರ್‌ | 9 ವರ್ಷಗಳ ಹಿಂದೆ ಬೀದರ್‌ಗೆ ಆಗಮಿಸಿದ್ದ ನಟ ನಾನಾ ಪಾಟೇಕರ್

ಹೃದಯಾಘಾತದಿಂದ ನಿಧನರಾದ ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್‌ಗೆ ಬೀದರ್...

ಪ್ರಧಾನಿ ಮೋದಿ ‘ವೋಟ್ ಚೋರ್, ಗದ್ದಿ ಚೋರ್’ – ಪ್ರಕಾಶ್ ರಾಜ್ ಆಕ್ರೋಶ

ಬೆಂಗಳೂರಿನಲ್ಲಿ 'ಎಸ್‌ಐಆರ್ ವಿರೋಧಿ ಕರ್ನಾಟಕ' ಸಂಘಟನೆಯು ಆಯೋಜಿಸಿದ್ದ 'ಜನತಾ ನ್ಯಾಯಾಲಯ' ಕಾರ್ಯಕ್ರಮದಲ್ಲಿ...

ಆಲಗೂರ ಪುನರ್ವಸತಿ ಕೇಂದ್ರವನ್ನು ಮರಳಿ ಗ್ರಾಮ ಪಂಚಾಯತಿಗೆ ಸೇರಿಸಲು ಆಗ್ರಹ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರಸಭೆ ವ್ಯಾಪ್ತಿಗೆ ಸೇರಿಸಲಾಗಿರುವ ಆಲಗೂರ ಪುನರ್ವಸತಿ ಕೇಂದ್ರವನ್ನು...