ಬೆಂಗಳೂರು | ಸತ್ತು ವರ್ಷವಾದರೂ ಸಿಗದ ಸುಳಿವು; ವರ್ಷದ ಬಳಿಕ ಮನೆಯಲ್ಲಿ ಮಹಿಳೆಯ ಅಸ್ಥಿಪಂಜರ ಪತ್ತೆ!

Date:

ಮನೆಯೊಂದರಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ 57 ವರ್ಷದ ಮಹಿಳೆಯ ಶವವು ಸಂಪೂರ್ಣವಾಗಿ ಕೊಳೆತು ಅಸ್ಥಿಪಂಜರವಾದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬೆಂಗಳೂರಿನ ಬಾಗಲಗುಂಟೆಯಲ್ಲಿ ನಡೆದಿದೆ. ಆಕೆ ಸುಮಾರು ಒಂದು ವರ್ಷದ ಹಿಂದೆಯೇ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

- Advertisement -

ಬಾಗಲಗುಂಟೆಯ  ಹಾವನೂರು ಲೇಔಟ್‌ನಲ್ಲಿರುವ ಡುಪ್ಲೆಕ್ಸ್ ಮನೆಯಲ್ಲಿ ಶುಕ್ರವಾರ (ಆ.7) ಮಹಿಳೆಯ ಅಸ್ಥಿಪಂಜರ ಪತ್ತೆಯಾಗಿದೆ. ಮೃತರನ್ನು ದಾಕ್ಷಾಯಿಣಿ ಎಂದು ಗುರುತಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ನಮ್ಮ ಜೀವನ ಪ್ರೇಮ, ಸ್ನೇಹ, ಸೌಂದರ್ಯ ಹರಡುವ ಹೂವಿನಂತಿರಲಿ:...

ಶ್ರೀರಂಗಪಟ್ಟಣ ಪುರಸಭೆ ಚಾಮನ್ ಬಯಲನ್ನು ʼಹೂವಿನ ಗ್ರಾಮʼ ಎಂದು ಘೋಷಿಸಿ, ಅಲ್ಲಿ ಗುಲಾಬಿ ಎಣ್ಣೆ ತಯಾರಿಕಾ ಘಟಕ, ಪ್ರವಾಸಿ ತಾಣ ಮಾಡಬೇಕು. ಟಿಪ್ಪು ಕಾಲದ ಚಾಮನ್ ಎಂಬ ಹೆಸರನ್ನು ಉಳಿಸಬೇಕು. ಗುಲಾಬಿ ಕೇವಲ ಒಂದು...

ಜರ್ಮನಿಯಲ್ಲಿ ತೀವ್ರಗಾಮಿಗಳ ಅಬ್ಬರ: ದಿಕ್ಕುತಪ್ಪಿದ ಮಧ್ಯಮಾರ್ಗ, ಮರುಜೀವ ಪಡೆಯುತ್ತಿದೆಯೇ...

ಜರ್ಮನಿಯಲ್ಲಿ ತೀವ್ರ ಬಲಪಂಥೀಯರ ಈ ಮಟ್ಟದ ಏರಿಕೆ ಕೇವಲ ರಾಜಕೀಯ ಪೈಪೋಟಿಯಲ್ಲ, ಬದಲಾಗಿ ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಜರ್ಮನಿ ಮತ್ತು ಬಲಪಂಥ ಎಂದಾಕ್ಷಣ ಇಡೀ ವಿಶ್ವಕ್ಕೆ ಅಡಾಲ್ಫ್ ಹಿಟ್ಲರ್ ಮತ್ತು ಆತನ ನಾಜಿ...

ಸೌಜನ್ಯಳನ್ನು ಕೊಂದವರು ಯಾರು? ಹೊಸ ತನಿಖೆಯಲ್ಲಿ ಉತ್ತರ ಸಿಗುವ...

14 ವರ್ಷಗಳು... 3 ತನಿಖಾ ಸಂಸ್ಥೆಗಳಾದ ಪೊಲೀಸ್, ಸಿಐಡಿ, ಸಿಬಿಐ ತನಿಖೆಗಳು... ಅಮಾಯಕನಾದ ಒಬ್ಬನೇ ಆರೋಪಿಯ ಸುತ್ತಲಿನ ತನಿಖೆ-... ಕೊನೆಗೆ ಆತ ನಿರಪರಾಧಿ ಎಂದು ಸಾಬೀತು, ಆತನ ಖುಲಾಸೆ. ಹಾಗಾದರೆ 17 ವರ್ಷದ...

ಹಲವು ತಿಂಗಳುಗಳಿಂದ ಮನೆಗೆ ಬೀಗ ಹಾಕಿರುವುದನ್ನು ಗಮನಿಸಿ ಅನುಮಾನಗೊಂಡ ಸಾರ್ವಜನಿಕರು ಮತ್ತು ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ.

“ಮನೆ ಬಹುಕಾಲದಿಂದ ಯಾವುದೇ ಚಟುವಟಿಕೆಗಳಿಲ್ಲದೆ ಖಾಲಿಯಿದ್ದಂತೆ ಕಾಣುತ್ತಿತ್ತು. ಬಾಡಿಗೆ ಉದ್ದೇಶಕ್ಕಾಗಿ ಮನೆ ವೀಕ್ಷಿಸಲು ಬಂದಿದ್ದ ಬ್ರೋಕರ್‌ಗಳು ಸೇರಿದಂತೆ ಹಲವಾರು ಜನರು ಮನೆಯ ಬಳಿ ಬರುತ್ತಿದ್ದರು. ಆದರೆ, ಬಾಗಿಲು ತೆರೆಯಲು ಸಾಧ್ಯವಾಗಿರಲಿಲ್ಲ. ಇದರಿಂದ ಏನೋ ಅನಾಹುತ ನಡೆದಿರಬಹುದು ಎಂಬ ಅನುಮಾನದಿಂದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆಯೇ ಬಾಗಲಗುಂಟೆ ಪೊಲೀಸ್ ಠಾಣೆಯ ತಂಡ ಸ್ಥಳಕ್ಕೆ ಧಾವಿಸಿ ಬಾಗಿಲು ತೆರೆದು ಪರಿಶೀಲಿಸಿದ್ದಾರೆ. ಈ ವೇಳೆ, ದಾಕ್ಷಾಯಿಣಿ ಅವರ ಅಸ್ಥಿಪಂಜರ ಪತ್ತೆಯಾಗಿದೆ. ಅವರು ಯಾವಾಗ, ಹೇಗೆ ಮೃತಪಟ್ಟರು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪೋಲಿಸರು ನೀಡಿದ ಮಾಹಿತಿಯ ಪ್ರಕಾರ, ದಾಕ್ಷಾಯಿಣಿ ಅವರು ಹಲವು ವರ್ಷಗಳಿಂದ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. 2005ರಲ್ಲಿ ಅವರ ಮಗ ಅನಾರೋಗ್ಯದ ಕಾರಣದಿಂದ ಮೃತಪಟ್ಟಿದ್ದನು. ಮಗನ ಸಾವು ಅವರಿಗೆ ಭಾರೀ ಆಘಾತವನ್ನುಂಟು ಮಾಡಿತ್ತು. ಇದರಿಂದಾಗಿ ಅವರು ತೀವ್ರ ಮಾನಸಿಕ ಖಿನ್ನತೆ ಮತ್ತು ಮಾನಸಿಕ ಕಾಯಿಲೆಗೆ (ಸ್ಕಿಜೋಫ್ರೇನಿಯಾ) ತುತ್ತಾಗಿದ್ದರು. ಕುಟುಂಬದವರು ಅವರಿಗೆ ಚಿಕಿತ್ಸೆ ಕೊಡಿಸಿ ಆರೈಕೆ ಮಾಡುತ್ತಿದ್ದರು.

ಬಳಿಕ, 2017ರಲ್ಲಿ ಅವರ ಪತಿ ಉಮೇಶ್ ಕೂಡ ನಿಧನರಾದರು. ಪತಿಯ ನಿಧನದ ನಂತರ ದಾಕ್ಷಾಯಿಣಿ ಅವರು ಹಾವನೂರು ಲೇಔಟ್‌ನಲ್ಲಿರುವ ತಮ್ಮ ಸ್ವಂತ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು.

ದಾಕ್ಷಾಯಿಣಿ ಅವರ ಸಹೋದರ ಮಹೇಶ್ ಅವರ ಪ್ರಕಾರ, ಕುಟುಂಬದವರು ಕಳೆದ ಎರಡು ವರ್ಷಗಳಿಂದ ದಾಕ್ಷಾಯಿಣಿ ಅವರೊಂದಿಗೆ ಯಾವುದೇ ಸಂಪರ್ಕದಲ್ಲಿರಲಿಲ್ಲ.

ಪ್ರಸ್ತುತ ಬಾಗಲಗುಂಟೆ ಪೊಲೀಸರು ಅಸಹಜ ಸಾವು (UDR) ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರ ಕುಟುಂಬಸ್ಥರು ಯಾವುದೇ ರೀತಿಯ ಅನುಮಾನ ವ್ಯಕ್ತಪಡಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

“ಮಹಿಳೆಯ ಅಸ್ಥಿಪಂಜರವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಆಕೆ ನಿಖರವಾಗಿ ಯಾವಾಗ ಮತ್ತು ಯಾವ ಕಾರಣಕ್ಕಾಗಿ ಮೃತಪಟ್ಟಿದ್ದಾರೆ ಎಂಬುದು ವಿಧಿವಿಜ್ಞಾನ ವರದಿ ಬಂದ ನಂತರವಷ್ಟೇ ಸ್ಪಷ್ಟವಾಗಲಿದೆ. ವರದಿಗಾಗಿ ಕಾಯುತ್ತಿದ್ದೇವೆ” ಎಂದು ತನಿಖಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಸುಪ್ರೀಂ’ ನಲ್ಲಿ ವಂದೇ ಮಾತರಂ ವಿಚಾರಣೆ-  ಟಿ.ಎಂ.ಕೃಷ್ಣ ನಕ್ಸಲೈಟ್ ಎಂದು ಜರೆದ ಸಾಲಿಸಿಟರ್ ಜನರಲ್

ಮಂಗಳವಾರ ಸುಪ್ರೀಮ್ ಕೋರ್ಟಿನಲ್ಲಿ ವಿಚಾರಣೆಯ ಸಂದರ್ಭದಲ್ಲಿ ಸಾಲಿಸಿಟರ್ ಜನರಲ್  ತುಷಾರ್ ಮೆಹ್ತಾ...

‘ವಂದೇ ಮಾತರಂ’ ಹಾಡದಿದ್ದರೆ ಅಪರಾಧವಲ್ಲ, ಶಿಕ್ಷೆಯೂ ಇಲ್ಲ: ಸುಪ್ರೀಂ ಕೋರ್ಟ್

‘ವಂದೇ ಮಾತರಂ’ನ ಹಾಡುವುದು ಕಡ್ಡಾಯವಲ್ಲ. ಹಾಡದಿದ್ದ ಕಾರಣಕ್ಕೆ ಶಿಕ್ಷೆ ನೀಡಲಾಗುವುದಿಲ್ಲ ಎಂದು...

ನಮ್ಮ ಜೀವನ ಪ್ರೇಮ, ಸ್ನೇಹ, ಸೌಂದರ್ಯ ಹರಡುವ ಹೂವಿನಂತಿರಲಿ: ಸೆ.22 ವಿಶ್ವ ಗುಲಾಬಿ ದಿನ

ಶ್ರೀರಂಗಪಟ್ಟಣ ಪುರಸಭೆ ಚಾಮನ್ ಬಯಲನ್ನು ʼಹೂವಿನ ಗ್ರಾಮʼ ಎಂದು ಘೋಷಿಸಿ, ಅಲ್ಲಿ...

ಜಗತ್ತಿನಲ್ಲೇ ಮೊದಲು: ಹಂದಿ ಮೂತ್ರಪಿಂಡದಿಂದ 9 ತಿಂಗಳು ಜೀವಿಸಿದ ವ್ಯಕ್ತಿ

ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬೆಳವಣಿಗೆಯೊಂದು ನಡೆದಿದೆ. ತಳಿವಿಜ್ಞಾನದ (ಜೆನೆಟಿಕ್ಸ್‌) ಮೂಲಕ...