ಧಾರವಾಡ | ಆಧುನೀಕತೆ ಪ್ರವೇಶವಾದರೂ ಸಂಪ್ರದಾಯ ಬಿಡದ ಮಹಿಳಾ ಕಾದಂಬರಿಕಾರರು: ಡಾ. ವಿನಯಾ ಒಕ್ಕುಂದ

Date:

ಆಧುನೀಕತೆ ಪ್ರವೇಶವಾದರೂ ಸಂಪ್ರದಾಯವನ್ನು ಬಿಡಲಾರದ ಮಾದರಿಯಲ್ಲಿ ಇವತ್ತಿನ ಮಹಿಳಾ ಕಾದಂಬರಿಕಾರರು ಬರೆದದ್ದನ್ನು, ಬರೆಯುತ್ತಿರುವುದನ್ನು ಕಾಣುತ್ತೇವೆ ಎಂದು ಬೆಟಗೇರಿ ಕೃಷ್ಣಶರ್ಮ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನ ಅಧ್ಯಕ್ಷೆ ಡಾ. ವಿನಯಾ ಒಕ್ಕುಂದ ಹೇಳಿದರು.

- Advertisement -

ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ಬಸು ಬೇವಿನಗಿಡದ ಅವರು ಅನುವಾದಿಸಿದ ವರ್ಜಿನಿಯಾ ವೂಲ್ಪ್ ಅವರ ‘ಲೈಟ್ ಹೌಸ್’ ಕೃತಿ ಬಿಡುಗಡೆ ಮಾಡಿ ಮಾತನಾಡಿ, ಲೈಟ್ ಹೌಸ್ ಕಾದಂಬರಿ, ನೂರು ವರ್ಷಗಳ ಹಿಂದೆ ರಚಿತವಾಗಿದ್ದರೂ ಕೂಡ ಇವತ್ತಿನ ಕಾಲ ಘಟ್ಟದಲ್ಲೂ ಮುಖಾಮುಖಿಯಾಗಿ ನಿಲ್ಲುತ್ತದೆ. ಸಹೃದಯರ ಮನಸ್ಸಿನ ಆಳಕ್ಕೆ ಪಾತ್ರಗಳು ಇಳಿಯುತ್ತವೆ. ಸಂಪ್ರದಾಯದಿAದ ಆಧುನೀಕತೆಯ ಕಡೆಗೆ ಚಲಿಸುವ ಮಹಿಳೆಯ ರೂಪಕಗಳು ಅಗಾಧವಾದ ಅರ್ಥವನ್ನು ಹೊರಸೂಸುತ್ತವೆ. ಹೆಣ್ಣು ಮೀನಿನ ಅತಿಯಾದ ಆಸೆಯಿಂದ ಇಡೀ ಕುಟುಂಬ  ನಾಶವಾಗುವ ಸಂದರ್ಭವನ್ನು ಸೊಗಸಾಗಿ ಕಟ್ಟಿಕೊಡಲಾಗಿದೆ. ಇಲ್ಲಿ ಬರುವ  ಪಾತ್ರಗಳು ಸಾಮಾನ್ಯವಾದವುಗಳಲ್ಲ. ಎಲ್ಲವೂ ಸೃಜನಶೀಲ ಪಾತ್ರಗಳು ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಕೃತಿಯ ಕುರಿತು ಕವಯತ್ರಿ, ಪ್ರಾಧ್ಯಾಪಕಿ, ಡಾ. ಅನಸೂಯ ಕಾಂಬಳೆ ಮಾತನಾಡಿ, ಮಹಿಳಾ ಸಾಹಿತ್ಯದ ಅನುವಾದ ಆಗದೇ ಇರುವುದು ಖೇದದ ಸಂಗತಿ. ಬಸು ಬೇವಿನಗಿಡದ ಇದಕ್ಕೆ ಹೊರತಾಗಿ, ಇದನ್ನು ಅನುವಾದಿಸಿದ್ದು ಸಂತಸದ ಸಂಗತಿ. ‘ಲೈಟ್ ಹೌಸ್’ ಎಂಬುದು ಬೆಳಕಿನ ಸಂಕೇತ. ಬರುವ ಹಡಗಿಗೆ ದಾರಿ ತೋರಿಸುವಂತೆ, ಒಂದು ಕುಟುಂಬಕ್ಕೆ ಮಹಿಳೆ ಬೆಳಕಾಗಿ ಹೇಗೆ ನಿಲ್ಲುತ್ತಾಳೆ ಎಂಬುದರ ಸಂಕೇತವಾಗಿದೆ. ಆದರೆ ಇದಕ್ಕೆ ಗಂಡನಾದವನು ಹೇಗೆ  ತಡೆಗೋಡೆಯಾಗಿ ವರ್ತಿಸುತ್ತಾನೆ ಎಂಬುದರ ಚಿತ್ರಣವಿದೆ. ನಿರೂದ್ಯೋಗದ ಸಮಸ್ಯೆ, ವರ್ಗ ವೈಷಮ್ಯದ ಚಿತ್ರಣವಿದೆ. ಯುದ್ಧ ಸಂದರ್ಭದಲ್ಲಿ ಯುದ್ಧ ಎನ್ನುವುದು ಅಧಿಕಾರದ ಅಭಿವ್ಯಕ್ತಿಯ ಭಾವವಾಗಿದೆ. ಕಾದಂಬರಿಯ ಅನುವಾದದ ಭಾಷೆ ಓದುಗರ ಮನವನ್ನು ಗೆಲ್ಲುವಲ್ಲಿ ಯಶಸ್ಸು ಕಾಣುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ ಧಾರವಾಡ | ರಂಗಭೂಮಿ; ಜೀವನ ಶಿಕ್ಷಣವನ್ನು ನೀಡುವ ಒಂದು ಉತ್ತಮ ಮಾಧ್ಯಮ: ಡಾ. ಈಶ್ವರ ಉಳ್ಳಾಗಡ್ಡಿ

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾ. ಶಶಿಧರ ತೋಡಕರ ಮಾತನಾಡಿ, ಕಾದಂಬರಿ ಶತಮಾನದ ಹಿಂದೆ ರಚಿತಗೊಂಡಿದ್ದರೂ ಇದರ ವಸ್ತು, ಬರುವ ಪಾತ್ರಗಳು ಇವತ್ತಿನ ಕಾಲಕ್ಕೂ ಅನ್ವಯವಾಗುತ್ತವೆ. ಸಹೃದಯರೂ ಕೂಡ ಇದರಲ್ಲಿ ಪಾಲುದಾರ ಪಾತ್ರದಾರಿಯಾಗುತ್ತಾರೆ. ಸಂಶೋಧನೆ ಮಾಡುತ್ತಿರುವ ವಿದ್ಯಾರ್ಥಿ ತನ್ನ ಸ್ವಾರ್ಥ ಹಾಗೂ ಸಮಯ ಸಾಧನೆಗಾಗಿ ಮಾರ್ಗದರ್ಶನದೊಂದಿಗೆ ವರ್ತಿಸುವ ಬಗೆ, ಆ ಕಾಲಕ್ಕೆ ಮಾತ್ರ ಸೀಮಿತವಾದದ್ದಲ್ಲ. ಇಂದಿಗೂ ಅಂತಹ ಚಿತ್ರಣ ಕಣ್ಮುಂದೆ ಬಂದು ನಿಲ್ಲುತ್ತದೆ ಎಂಬ ಹೇಳಿದರು.

WhatsApp Image 2024 09 06 at 11.32.31 a95e9ba6
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪರಪ್ಪನ ಅಗ್ರಹಾರದಿಂದ ಬೆಳಗಾವಿ ಹಿಂಡಲಗಾ ಜೈಲಿಗೆ ಪ್ರಜ್ವಲ್ ರೇವಣ್ಣ ಎತ್ತಂಗಡಿ

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮವಾಗಿ ಮೊಬೈಲ್ ಫೋನ್ ಬಳಸಿದ...

Form 7 ಅರ್ಜಿ ವಿವಾದ; ತನಿಖೆಗೆ SIT ರಚನೆಗೆ ಸರ್ಕಾರ ಚಿಂತನೆ

ರಾಜ್ಯದಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸುವ ಉದ್ದೇಶದಿಂದ ಬೃಹತ್‌ ಪ್ರಮಾಣದಲ್ಲಿ Form...

ಎಸ್‌ಐಆರ್ ವಿರೋಧಿ ಹೋರಾಟ: ಯುವ ಪೀಳಿಗೆಗೆ ಕರ್ನಾಟಕ ನಾಗರಿಕ ಸಮಾಜ ಬೆಂಬಲ, ಕೇಂದ್ರ ಸರ್ಕಾರಕ್ಕೆ ನೂರ್ ಶ್ರೀಧರ್ ಎಚ್ಚರಿಕೆ

ದೆಹಲಿಯಲ್ಲಿ ನಡೆಯಲಿರುವ ಎಸ್‌ಐಆರ್ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿರುವ ಯುವ ಹೋರಾಟಗಾರರ ಮೇಲೆ...

ಮೋಶಾ ಜೋಡಿ ಪ್ರಜಾಪ್ರಭುತ್ವದ ಹತ್ಯೆಗೆ ಸಂಚು ರೂಪಿಸಿದೆ; ಅಭಿಜೀತ್ ದೀಪ್ಕೆ

ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ಚುನಾವಣಾ ಆಯೋಗವು ಸೇರಿ ದೇಶದಲ್ಲಿ...