ಧಾರವಾಡ | ರಂಗಭೂಮಿ; ಜೀವನ ಶಿಕ್ಷಣವನ್ನು ನೀಡುವ ಒಂದು ಉತ್ತಮ ಮಾಧ್ಯಮ: ಡಾ. ಈಶ್ವರ ಉಳ್ಳಾಗಡ್ಡಿ

Date:

ರಂಗಭೂಮಿಯು ಜೀವನ ಶಿಕ್ಷಣವನ್ನು ನೀಡುವ ಒಂದು ಉತ್ತಮ ಮಾಧ್ಯಮ. ನಾಟಕವು ಸರ್ವರಿಗೂ ಜ್ಞಾನವನ್ನು ನೀಡುವ ಮೌಲ್ಯಾಧಾರಿತ ವಿಷಯವನ್ನು ಒಳಗೊಂಡಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದರು.

- Advertisement -

ಧಾರವಾಡದ ಡಯಟ್ ಆವರಣದಲ್ಲಿರುವ ಡೆಪ್ಯೂಟಿ ಚನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನ ಮತ್ತು ಡಾ.ಎಚ್.ಎಫ್.ಕಟ್ಟೀಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನವು ರಂಗಾಯಣದ ಸಹಯೋಗದೊಂದಿಗೆ ಪಠ್ಯಾಧಾರಿತ ಮಕ್ಕಳ ನಾಟಕೋತ್ಸವ ಹಾಗೂ ‘ರಂಗ ರಶ್ಮಿ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಾಟಕವು ಸರ್ವರಿಗೂ ಶಿಕ್ಷಣವನ್ನು ನೀಡುವ ಚಟುವಟಿಕೆಪೂರಿತ ಮಾಧ್ಯಮವಾಗಿದೆ. ಇಲ್ಲಿ ಶಿಕ್ಷಕರು ವಿದ್ಯಾರ್ಥಿಗಳು ಪಾಲಕರೂ ಹಾಗೂ ಸಮುದಾಯವೂ ಪಾಲ್ಗೊಳ್ಳುತ್ತದೆ. ಇಂಥಹ ಒಂದು ಮೌಲ್ಯಭರಿತ ಪಠ್ಯಾಧಾರಿತ ನಾಟಕೋತ್ಸವವನ್ನು ಸುದೀರ್ಘ 31ವರ್ಷ ನಡೆಸಿಕೊಂಡು ಬಂದಿರುವುದು ಪ್ರತಿಷ್ಠಾನದ ಹೆಗ್ಗಳಿಕೆ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಇದೇ ವೇಳೆ ಖ್ಯಾತ ರಂಗಕರ್ಮಿ ವೀಣಾ ಮೋಡಕ ಅವರಿಗೆ ‘ರಂಗರಶ್ಮಿ’ ಪ್ರಶಸ್ತಿ ಪ್ರದಾನ ಮಾಡಿದ ಧಾರವಾಡ ಆಕಾಶವಾಣಿ ಕಾರ್ಯಕ್ರಮದ ನಿರ್ದೇಶಕ ಶರಣಬಸವ ಚೋಳಿನ ಮಾತನಾಡಿ, ಬಾಲ್ಯದಿಂದ ಮುಪ್ಪಿನವರೆಗೂ ಪ್ರಿಯವಾದದ್ದು ನಾಟಕ. ಇದನ್ನು  ಶಿಕ್ಷಣಕ್ಕಾಗಿ ಬಳಸಿಕೊಂಡಿದ್ದು ಒಂದು ಹೊಸತನ ಮಕ್ಕಳ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವವರು ಕ್ರಿಯಾಶೀಲ ಶಿಕ್ಷಕರಾಗಿರುತ್ತಾರೆ. ಅಂತಹವರನ್ನು ಗುರುತಿಸಿ ಗೌರವಿಸುವುದಕ್ಕಾಗಿ ಈ ನಾಟಕೋತ್ಸವದ ಸಂಯೋಜಕರಾದ ಕೆ.ಎಚ್.ನಾಯಕ ತಮ್ಮ ಮಗಳು ದಿ.ರಶ್ಮಿ ನಾಯಕ ಅವರ ಸ್ಮರಣಾರ್ಥ ‘ರಂಗರಶ್ಮಿ’ ಪ್ರಶಸ್ತಿಯನ್ನು ಪ್ರತಿವರ್ಷ ಕೊಡಲು ಅನುವು ಮಾಡಿದ್ದು ಈ ಯೋಜನೆ ಒಂದು ಪ್ರೇರಕ ಶಕ್ತಿಯಾಗಿದೆ ಎಂದರು. ಪ್ರಥಮ ಪ್ರಶಸ್ತಿ ಸ್ವೀಕರಿಸಿದ ವೀಣಾ ಮೋಡಕ ಅವರನ್ನು ಅಭಿನಂದಿಸಿದರು.

ನಾಟಕೋತ್ಸವ ಸಂಯೋಜಕ ಕೆ.ಎಚ್.ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ, 31 ವರ್ಷದವರೆಗೆ ನಿರಂತರವಾಗಿ ಪಠ್ಯಾಧಾರಿತ ನಾಟಕೋತ್ಸವವನ್ನು ದತ್ತಿ ದಾನಿಗಳ ನೆರವಿನಿಂದ ನಡೆಸುತ್ತಾ ಬಂದಿದ್ದೇವೆ. ನಮ್ಮ ಶಿಕ್ಷಕ ಸಮೂಹದ ಕೊಡುಗೆ ಅಪಾರವಾಗಿದೆ. ಅಂತಹ ಶಿಕ್ಷಕರಿಗೆ ರಂಗಭೂಮಿಯ ಮನ್ನಣೆ ಸಿಗಬೇಕೆಂದು ಈ ವರ್ಷದಿಂದ ‘ರಂಗರಶ್ಮಿ’ ಪ್ರಶಸ್ತಿಯನ್ನು ಪ್ರತಿಷ್ಠಾನ ನೀಡುತ್ತಿದೆ. ಇಷ್ಟು ದೀರ್ಘಾವಧಿ ನಾಟಕೋತ್ಸವವನ್ನು ನಡೆಸಿಕೊಂಡು ಬಂದಿರುವುದು ರಾಜ್ಯದಲ್ಲಿಯೇ ಧಾರವಾಡ ಡಯಟ್ ಸಂಸ್ಥೆಯ ಅಂಗಸಂಸ್ಥೆಯಾದ ಎರಡೂ ಪ್ರತಿಷ್ಠಾನಗಳ ಹೆಮ್ಮೆಯ ಸಂಗತಿ ಎಂದರು.

ಇದನ್ನೂ ಓದಿ ಮಡಿಕೇರಿ | ಬಸವಾದಿ ಶರಣರ ವಚನಗಳೇ ಸಂವಿಧಾನ ರಚನೆಗೆ ಮೂಲ ಆಧಾರವಾಯಿತು: ಕೆ.ಪಿ ಜಯಕುಮಾರ್

ಡಯಟ ಪ್ರಾಚಾರ್ಯ ಬಸವರಾಜ ನಾಲತ್ವಾಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಂ.ಎಂ.ಚಿಕ್ಕಮಠ ಸ್ವಾಗತಿಸಿದರು. ಪ್ರತಿಷ್ಠಾನದ ಗೌರವ ನಿರ್ದೇಶಕ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತಾಲಯದ  ಆಡಳಿತ ವಿಭಾಗದ ಉಪನಿರ್ದೇಶಕ ಗಿರೀಶ ಪದಕಿ, ಶಿವಶಂಕರ ಹಿರೇಮಠ, ಸಿದ್ಧರಾಮ ಮನಹಳ್ಳಿ ಉಪಸ್ಥಿತರಿದ್ದರು. ರೋಹಿಣಿ ದಾನಿ ನಿರೂಪಿಸಿದರು. ಡಾ. ಕುಮದ್ವತಿ ಭರಮಗೌಡ್ರ ವಂದಿಸಿದರು.

WhatsApp Image 2024 09 06 at 11.32.31 a95e9ba6
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಳ್ಳಾರಿ | ತೆಕ್ಕಲಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್ ಇಲ್ಲದೆ ಕತ್ತಲಲ್ಲಿ ಬಾಣಂತಿಯರು, ಮಕ್ಕಳು

ಸಿರಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಬಾಣಂತಿ ಮತ್ತು...

ಉಡುಪಿ ಜಿಲ್ಲೆಯ ಪಂಚಾಯತ್ ಮೀಸಲಾತಿ ಪಟ್ಟಿಯಲ್ಲಿ ಎಸ್‌ಸಿ, ಎಸ್‌ಟಿ ಪುರುಷರಿಗೆ ಅವಕಾಶವಿಲ್ಲವೇ? ಮರುಪರಿಶೀಲನೆಗೆ ಆಗ್ರಹ

ರಾಜ್ಯದಲ್ಲಿ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಹಾಗೂ ಗ್ರಾಮ ಪಂಚಾಯತ್‌ ಚುನಾವಣೆಗಳು...

ಉಡುಪಿ | ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಪ್ರತಿಭಟನೆ

ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಕೂಡಲೇ ರಾಜೀನಾಮೆ ನೀಡುವಂತೆ...