ಸಿಡಿಲಿನಿಂದ ರಕ್ಷಿಸಿಕೊಳ್ಳುವುದು ಹೇಗೆ; ರಾಜ್ಯದ ಜನರಿಗೆ ಸರ್ಕಾರದ ಸಲಹೆಗಳೇನು?

Date:

ರಾಜ್ಯದಲ್ಲಿ ಸುಡುಧಗೆಯ ನಡುವೆ ಸುರಿದ ಮಳೆ ತಂಪಿರಿಸಿದರೂ ಗುಡುಗು ಸಿಡಿಲಿನಿಂದ ಹಲವೆಡೆ ಅಹಿತಕರ ಘಟನೆಗಳು ಸಂಭವಿಸಿವೆ. ಸಿಡಿಲಿನ ಹೊಡೆತಕ್ಕೆ ಇದುವರೆಗೂ ಹಲವರು ಬಲಿಯಾಗಿದ್ದಾರೆ. ರಾಜ್ಯ ಸರ್ಕಾರ ಸಿಡಿಲು ಬಡಿತದಿಂದ ಪಾರಾಗಲು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

ಮರದ ಕೆಳಗೆ ನಿಲ್ಲಬೇಡಿ: ಮಳೆ ಬರುವ ಸಮಯ ಮರದ ಕೆಳಗೆ ನಿಲ್ಲುವುದು ಅಪಾಯಕಾರಿ ಇದರಿಂದ ಸಿಡಿಲು ಬಡಿಯುವ ಅಪಾಯ ಹೆಚ್ಚಿರುತ್ತದೆ. ಎತ್ತರದ ಮರಗಳಿಗೆ ಸಿಡಿಲು ಬಡಿಯುವ ಸಾಧ್ಯತೆ ಹೆಚ್ಚಾಗಿರುವುದರಿಂದ ಮಳೆ ಬರುವ ಮುನ್ನ ಹಾಗೂ ಮಳೆ ನಿಂತ ನಂತರ ಮರದ ಕೆಳಗೆ ನಿಲ್ಲುವುದು ವಾಹನಗಳನ್ನು ನಿಲ್ಲಿಸುವುದು ಅಪಾಯಕಾರಿಯಾಗಿದೆ.

- Advertisement -

ಇದನ್ನು ಓದಿದ್ದೀರಾ? ನೋಟರಿ ವಕೀಲರ ನೇಮಕಕ್ಕೆ ಲಂಚ; ಕೇಂದ್ರ ಸರ್ಕಾರದ ಹೆಚ್ಚುವರಿ ಕಾನೂನು ಸಲಹೆಗಾರ ಬಂಧನ

ಬಯಲು ಜಾಗಗಳಲ್ಲಿ ನಿಲ್ಲದಿರಿ: ಬಯಲು ಪ್ರದೇಶಗಳಲ್ಲಿ, ತೆರೆದ ಆವರಣಗಳಲ್ಲಿ ನಿಲ್ಲಬಾರದು. ಸಿಡಿಲು ಗುಡುಗಿನ ಮುನ್ಸೂಚನೆ ದೊರೆತಂತೆ ಹತ್ತಿರದ ಸುರಕ್ಷಿತ ಕಟ್ಟಡಗಳನ್ನು ತಲುಪಿ ಆಶ್ರಯ ಪಡೆಯಬೇಕು. ಆಶ್ರಯಿಸಲು ಯಾವುದೇ ಸೂಕ್ತ ಸ್ಥಳಗಳು ದೊರೆಯದೆ ಇದ್ದಾಗ ನೆಲದ ಮೇಲೆ ಮಂಡಿಯೂರಿ ಮೊಣಕಾಲುಗಳನ್ನು ಎದೆಗೆ ಅವುಚಿಕೊಂಡು, ಕಿವಿಗಳನ್ನು ಮುಚ್ಚಿ ದೇಹವನ್ನು ಚೆಂಡಿನಂತೆ ಮುದುರಿಸಿಕೊಂಡು ಮಲಗಿದರೆ ಸಿಡಿಲು ಎರಗುವಾಗ ಹೃದಯ ಹಾಗೂ ಮೆದುಳಿಗೆ ಘಾಸಿಯಾಗದಂತೆ ತಡೆಯಲು ಸಾಧ್ಯ.

ಎಲೆಕ್ಟ್ರಿಕ್‌ ಉಪಕರಣದಿಂದ ದೂರವಿರಿ: ಗುಡುಗು ಸಿಡಿಲಿನ ಸೂಚನೆ ದೊರೆತ ಕೂಡಲೇ ಟಿವಿ, ಫ್ರಿಡ್ಜ್‌, ಮತ್ತುಇತರೆ ಎಲೆಕ್ಟ್ರಿಕ್‌ ಸಾಧನಗಳ ವಿದ್ಯುತ್ ಸಂಪರ್ಕ‌ ಕಡಿತಗೊಳಿಸಿ. ವಿದ್ಯುತ್‌ ಉಪಕರಣಗಳಿಗೆ ಸಿಡಿಲು ಅಪ್ಪಳಿಸುವ ಸಾಧ್ಯತೆ ಹಚ್ಚಿರುತ್ತದೆ. ಕಾರ್ಡ್‌ ಫೋನ್‌ಗಳು(ಲ್ಯಾಂಡ್‌ ಲೈನ್‌) ಸಂಪರ್ಕ ಕಡಿತಗೊಳಿಸಬೇಕು ದೂರವಾಣಿ ಕೇಬಲ್‌ಗಳಿಂದ ಸಿಡಿಲು ಹಾಯುವ ಅಪಾಯವಿರುತ್ತದೆ. ಮೊಬೈಲ್‌ ಫೋನ್‌ಗಳಿಗು ಹಾನಿಯುಂಟಾಗುವ ಸಂಭವ ಇರುವುದರಿಂದ ಎಚ್ಚರಿಕೆ ವಹಿಸುವುದು ಸೂಕ್ತ.

ನೀರಿನ ಮೂಲಗಳಿಂದ ದೂರವಿರಿ: ನೀರಿನ ಮೂಲಗಳಾದ ಕೆರೆ ನದಿ ಕಾಲುವೆಗಳಿಗೆ ಇಳಿಯಬಾರದು. ಕೆರೆ, ನದಿ ಪ್ರದೇಶಗಳಲ್ಲಿ ಸಿಡಿಲು ಅಪ್ಪಳಿಸುವ ಸಾಧ್ಯತೆ ಹೆಚ್ಚಿರುತ್ತದೆ.

ಸಿಡಿಲು ಮಳೆಯ ವೇಳೆ ಸ್ನಾನ ಮಾಡದಿರಿ: ಕೊಳಾಯಿ ಅಥವಾ ಲೋಹದ ಕೊಳವೆಗಳಲ್ಲಿ ವಿದ್ಯುತ್‌ ಹರಿದು ಅವಘಡ ಸಂಭವಿಸಬಹುದು ಆದ್ದರಿಂದ ಮಳೆ ಬರುವ ಸಮಯ ಸ್ನಾನ ಮಾಡದಿರುವುದು ಉತ್ತಮ.

ಹೆಚ್ಚಿನ ಕಾಳಜಿ ಅಗತ್ಯ: ಹವಾಮಾನ ಇಲಾಖೆ ನೀಡುವ ಸೂಚನೆಗಳನ್ನು ಕಡೆಗಣಿಸದೆ ಪಾಲಿಸಬೇಕು. ಹವಾಮಾನ ಇಲಾಖೆಯ ವರದಿಯ ಅನ್ವಯ ದಿನಚರಿಯನ್ನು ಯೋಜಿಸುವುದು ಉತ್ತಮ. ಯಾರಾದರೂ ಸಿಡಿಲಿನ ಹೊಡೆತಕ್ಕೆ ತುತ್ತಾದ ಸಂದರ್ಭದಲ್ಲಿ 112 ಅಥವಾ 108 ಸಹಾಯವಾಣಿಗೆ ಕರೆ ಮಾಡಬಹುದು. ಸಿಡಿಲು ತಾಕಿದ ವ್ಯಕ್ತಿಯನ್ನು ಮುಟ್ಟಿ ಉಪಚರಿಸುವುದರಿಂದ ಯಾವುದೇ ಅಪಾಯ ಉಂಟಾಗುವುದಿಲ್ಲ. ವ್ಯಕ್ತಿಯ ನಾಡಿಮಿಡಿತ ಪರೀಕ್ಷಿಸಿ, ಉಸಿರಾಟ ಪ್ರಕ್ರಿಯೆ ನಿಧಾನಿಸಿದ್ದರೆ ಎದೆಯನ್ನು ಒತ್ತುವ ಮೂಲಕ ಎದೆಬಡಿತ ಮರಳಿ ಸಹಜ ಸ್ಥಿತಿಗೆ ತರಲು ಯತ್ನಿಸಿ, ಶೀಘ್ರವಾಗಿ ಆಸ್ಪತ್ರೆಗೆ ಕರೆದೊಯ್ಯಿರಿ ಎಂದು ಸರ್ಕಾರ ಸಲಹೆ ನೀಡಿದೆ.



eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

KPSC ಹಗರಣ | ಅಮಾನತಿನಲ್ಲಿರುವ ಐಎಎಸ್‌ ಗಂಗ್ವಾರ್‌ಗೆ ಜಾಮೀನು ನಿರಾಕರಣೆ

KPSC (ಕರ್ನಾಟಕ ಲೋಕಸೇವಾ ಆಯೋಗ) ನಡೆಸಿದ ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣಕ್ಕೆ...

ಏಕಪಕ್ಷೀಯ ನಿರ್ಧಾರ ವಿವಾದದ ಬೆನ್ನಲ್ಲೇ ಸಭೆ: ಸರ್ವಮತದಿಂದ ತೀಮಾರ್ನಗಳ ತಗೆದುಕೊಂಡಿದ್ದು ಎಂದ ಇಸಿಐ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಹಾಗೂ ಚುನಾವಣಾ ಆಯುಕ್ತರಾದ...

ಮಂಗಳೂರು | ಕಾರಿಡಾರ್‌ ಗೋಡೆ ಕುಸಿದು ಐವರು ವಿದ್ಯಾರ್ಥಿಗಳಿಗೆ ಗಾಯ, ಓರ್ವ ಗಂಭೀರ

ಮಂಗಳೂರಿನ ಪಾಂಡೇಶ್ವರ ಸಮೀಪದ ಎಮ್ಮೆಕೆರೆ ಕ್ರಾಸ್ ಬಳಿಯ ರಾಮಲಕ್ಷ್ಮೀ ಹಾಲ್ ಸಭಾಭವನದಲ್ಲಿ...

ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು: ಜನವಾದಿ ಮಹಿಳಾ ಸಂಘಟನೆ ಆಗ್ರಹ

ದೇಶದ ಚುನಾವಣಾ ಪ್ರಜಾಪ್ರಭುತ್ವದ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಪುನಃಸ್ಥಾಪಿಸಲು ಮುಖ್ಯ ಚುನಾವಣಾ...