ಜನರು ಇತಿಹಾಸ ಸರಿಯಾಗಿ ತಿಳಿದರೆ ‘ಖಾಕಿ ಚಡ್ಡಿ, ಕರಿ ಟೋಪಿ’ಯವರು ಊರು ಬಿಡಬೇಕಾದೀತು: ಹರಿಪ್ರಸಾದ್

Date:

“ದೇಶದ ಜನರು ಸ್ವಾತಂತ್ರ್ಯ ಹೋರಾಟದ 25% ಇತಿಹಾಸ ತಿಳಿದುಕೊಂಡರೆ ಸಾಕು, ಖಾಕಿ ಚಡ್ಡಿ, ಕರಿ ಟೋಪಿಯವರು (ಆರ್‌ಎಸ್‌ಎಸ್‌) ಊರು ಬಿಟ್ಟು ಹೋಗಬೇಕಾಗುತ್ತದೆ. ಆ ಸಂಘಟನೆಯವರು ಮಹಾತ್ಮಾಗಾಂಧಿ ಅವರ ಸರ್ವಧರ್ಮ ಸಮ ಭಾವ ಎಂಬ ತತ್ವ ಸಿದ್ಧಾಂತ, ಭಾರತದ ಸಂವಿಧಾನ ಹಾಗೂ ತ್ರಿವರ್ಣ ಧ್ವಜ ಒಪ್ಪಿಕೊಂಡರೆ ನಾವು ಅವರನ್ನು ವಿರೋಧಿಸುವುದಿಲ್ಲ” ಎಂದು ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಹೇಳಿದರು.

- Advertisement -

ಭಾರತ ಜೋಡೋ ಭವನದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, “ನಮ್ಮ ಪೂರ್ವಜರು ಹೋರಾಟ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ನಮಗೆ ಪ್ರಜಾಪ್ರಭುತ್ವ ವ್ಯವಸ್ಥೆ ಕೊಟ್ಟಿದ್ದಾರೆ. ಸ್ವಾತಂತ್ರ್ಯ ಸಿಕ್ಕ ಬಳಿಕ ಸುಮಾರು 6-7 ರಾಜ ಸಂಸ್ಥಾನಗಳು ಭಾರತದೊಂದಿಗೆ ಸೇರುವುದಿಲ್ಲ, ನಾವು ರಾಜರಾಗಿಯೇ ಉಳಿಯುತ್ತೇವೆ ಎಂದು ಹೇಳಿದ್ದರು. ಕಾಶ್ಮೀರ, ಗುಜರಾತ್, ಭೋಪ್ ನವಾಬರು, ಹೈದರಾಬಾದ್ ನಿಜಾಮರ ಮನವೊಲಿಸಿದ ಬಳಿಕ ಭಾರತದೊಂದಿಗೆ ಅವರು ಸೇರ್ಪಡೆಯಾದರು” ಎಂದು ಇತಿಹಾಸ ನೆನೆದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಮೊಳಗಿಸಿದ್ದ ಮತ ಹಕ್ಕಿನ ಕೂಗಿಗೆ...

ಮತದಾನ ಕೇವಲ ಹಕ್ಕಲ್ಲ, ಅದು ಪ್ರಜೆಯೊಬ್ಬನ ಘನತೆ ಹಾಗೂ ಅಸ್ತಿತ್ವದ ಸಂಕೇತ. 131 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಇದೇ ಮತಾಧಿಕಾರಕ್ಕಾಗಿ ಗಾಂಧೀಜಿ ಬ್ರಿಟಿಷರ ವಿರುದ್ಧ ಸಿಡಿದೆದ್ದಿದ್ದರು. ಆದರೆ, ಇಂದು ಸ್ವತಂತ್ರ ಭಾರತದಲ್ಲಿ...

ಇದನ್ನೂ ಓದಿ: ರಾಮಮಂದಿರ ಲೂಟಿ | ಬಾಯಿ ಬಿಟ್ಟರೆ ಮುಖವಾಡ ಕಳಚುವ ಭಯವೇ: ಬಿಜೆಪಿಗರಿಗೆ ಹರಿಪ್ರಸಾದ್ ಪ್ರಶ್ನೆ

ಹಾಗೆಯೇ, “ಜನರು ಸ್ವಾತಂತ್ರ್ಯ ಇತಿಹಾಸ ತಿಳಿದರೆ ‘ಖಾಕಿ ಚಡ್ಡಿ, ಕರಿ ಟೋಪಿ’ಯವರು ಊರು ಬಿಡಬೇಕಾಗುತ್ತದೆ. ಆರ್‌ಎಸ್‌ಎಸ್‌ನವರು ದೇಶದ ಭದ್ರ ಬುನಾದಿಯಾಗಿರುವ ಸಂವಿಧಾನ, ಪ್ರಜಾತಂತ್ರ, ತ್ರಿವರ್ಣಧ್ವಜ, ಜಾತ್ಯಾತೀತ ತತ್ವ ಒಪ್ಪಿದರೆ ನಾವು ಅವರನ್ನು ವಿರೋಧಿಸುವುದಿಲ್ಲ” ಎಂದರು.

“ಈ ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲೂ ಸ್ವಾತಂತ್ರ್ಯ ಹೋರಾಟದ ವಿರುದ್ಧವಿದ್ದವರು, ಸ್ವಾತಂತ್ರ್ಯ ಬಂದ ನಂತರವೂ ದೇಶದ ಆಶಯಗಳಿಗೆ ವಿರುದ್ಧವಾಗಿದ್ದಾರೆ. ಹೀಗಾಗಿ ಅವರನ್ನು ನಾವು ವಿರೋಧ ಮಾಡಲೇಬೇಕು. ನಮ್ಮ ಮುಂದಿನ ಪೀಳಿಗೆಗೆ ನಾವು ಹಿಂಸೆ, ದ್ವೇಷ, ಸುಳ್ಳಿನ ಭಾರತವನ್ನು ಕೊಡಬಾರದು. ದೇಶಕ್ಕಾಗಿ ಕಾಂಗ್ರೆಸ್‌ನ ಎಷ್ಟು ಜನ ಪ್ರಾಣತ್ಯಾಗ ಮಾಡಿದ್ದಾರೆ ಎಂಬುದನ್ನು ಅರಿಯಬೇಕು” ಎಂದು ತಿಳಿಸಿದರು.

“ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಬಡತನ ಕಿತ್ತು ತಿನ್ನುವಂತಿತ್ತು. 60-70% ಜನ ಹಸಿವಿನಿಂದ ಬಳಲುತ್ತಿದ್ದರು. ವಿದೇಶದಿಂದ ಆಹಾರ ಪಡೆಯಲಾಗುತ್ತಿತ್ತು. ನೆಹರು, ಇಂದಿರಾ ಗಾಂಧಿ ಅವರ ನೇತೃತ್ವದಲ್ಲಿ ದೇಶದಲ್ಲಿ ಹಸಿರು ಕ್ರಾಂತಿ ಮಾಡಿ, ವಿಶ್ವದಲ್ಲೇ ಅತಿ ಹೆಚ್ಚು ಭತ್ತ ಬೆಳೆಯುವ ರಾಷ್ಟ್ರ ಭಾರತವಾಗಿದೆ. ಡೆನ್ಮಾರ್ಕ್‌ನಿಂದ ಹಾಲಿನ ಪುಡಿ ಪಡೆಯುತ್ತಿದ್ದ ಭಾರತ ಇಂದು ಹಾಲಿನ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದ್ದೇವೆ. ತರಕಾರಿ ಉತ್ಪಾದನೆಯಲ್ಲಿ ಚೀನಾ ಹಾಗೂ ಬ್ರೆಜಿಲ್ ನಂತರ ಭಾರತ ಸ್ಥಾನ ಪಡೆದಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ 3ನೇ ಸ್ಥಾನದಲ್ಲಿದ್ದೇವೆ. ಇದೆಲ್ಲವನ್ನು ಮೋದಿ, ಆರ್‌ಎಸ್ಎಸ್‌ನವರು ಬಂದು ಮಾಡಿದ್ದಾರಾ” ಎಂದು ಪ್ರಶ್ನಿಸಿದರು.

hariprasad 3
ಭಾರತ ಜೋಡೋ ಭವನದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್

“ರಿವರ್ಸ್ ಗೇರ್‌ನಲ್ಲಿ ಹೋಗುತ್ತಿರುವ ಬಿಜೆಪಿಗರು”

“ಬಿಜೆಪಿಯವರು ರಿವರ್ಸ್ ಗೇರ್‌ನಲ್ಲಿ ಹೋಗುತ್ತಿದ್ದಾರೆ. ಜನರು ಅನಕ್ಷರಸ್ಥರಿದ್ದಷ್ಟು ಅಂಧಭಕ್ತರನ್ನು ಸೃಷ್ಟಿಸಬಹುದು. ಜಾತಿ ಹೆಸರಿನಲ್ಲಿ ಜಗಳ ಮಾಡಿಸಬಹುದು ಎಂಬುದು ಬಿಜೆಪಿ ತಂತ್ರ. ಜಾತಿ ಧರ್ಮದ ಹೆಸರಿನ ಗಲಾಟೆಯಲ್ಲಿ ಜೈಲಿಗೆ ಹೋಗುವವರು ದಲಿತರು, ಶೂದ್ರರು. ಆದರೆ ರಾಮಮಂದಿರ ಲೂಟಿ ಮಾಡಿದವರು ಯಾರು? ದಲಿತರು, ಶೂದ್ರರೇ” ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ರಾಮಮಂದಿರ ಹಗರಣ | ಆರ್‌ಎಸ್‌ಎಸ್-ಬಿಜೆಪಿಯ ನಿಜವಾದ ಮುಖ ಬಹಿರಂಗ: ಕೇರಳ ಸಿಪಿಐ

“ದೇವಸ್ಥಾನ ಕಟ್ಟಲು ಹೊರಟವರೇ ಲೂಟಿ ಹೊಡೆದಿದ್ದಾರೆ. ಇತಿಹಾಸದಲ್ಲಿ ಮಹ್ಮದ್ ಘಜ್ನಿ ಭಾರತವನ್ನು 17 ಬಾರಿ ಲೂಟಿ ಮಾಡಿದ್ದಾನೆ ಎಂದು ಓದಿದ್ದೇವೆ. ಅವರನ್ನು ಬಿಟ್ಟರೆ, ದೇವಸ್ಥಾನಗಳನ್ನು ಲೂಟಿ ಮಾಡಿರುವವರು ಆರ್‌ಎಸ್ಎಸ್ ಹಾಗೂ ಬಿಜೆಪಿಯವರು. ಇವರು ನಮಗೆ ದೇವರ ಬಗ್ಗೆ ಪಾಠ ಮಾಡುತ್ತಾರೆ” ಎಂದು ಟೀಕಿಸಿದರು.

“ನಾನು ಹೆಮ್ಮೆಯಿಂದ ಹಿಂದೂ ಎಂದು ಹೇಳಿಕೊಳ್ಳುತ್ತೇನೆ. ನಾನು ಪಾಲಿಸುವ ಹಿಂದೂ ಧರ್ಮ ಮಹಾತ್ಮಾ ಗಾಂಧಿ, ವಿವೇಕಾನಂದ, ನಾರಾಯಣಗುರು, ಕನಕದಾಸ, ಬಸವಣ್ಣ ಹೇಳುವ ಧರ್ಮ. ಗೋಲ್ವಾಲ್ಕರ್, ಗೋಡ್ಸೆ, ಹೆಡಿಗೆವಾರ್ ಹೇಳುವ ಹಿಂದೂ ಧರ್ಮವಲ್ಲ. ಜಾತ್ಯಾತೀತ ತತ್ವ ಎಂದರೆ ಎಲ್ಲಾ ಧರ್ಮಗಳು ಒಂದಾಗಿ ಸಾಗುವುದು” ಎಂದರು.

ಕಾರ್ಯಕ್ರಮದಲ್ಲಿ ಪ್ರಚಾರ ಸಮಿತಿಯ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಮಾಜಿ ಸಚಿವೆ ರಾಣಿ ಸತೀಶ್, ಕಿಮ್ಮನೆ ರತ್ನಾಕರ್, ಶಿವಣ್ಣ, ಮಾಜಿ ಸಂಸದ ಎಲ್ ಹನಮಂತಯ್ಯ ಸೇರಿದಂತೆ ಅನೇಕ ಮುಖಂಡರುಗಳು ಭಾಗವಹಿಸಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘Instagram ಹೆಣ್ಮಕ್ಕಳಿಗೆ ಮಾತ್ರ’; ಎಲಾನ್ ಮಸ್ಕ್ ಹೀಗ್ಯಾಕಂದ್ರು?

ಟೆಕ್ ಜೈಂಟ್ ಎಲಾನ್ ಮಸ್ಕ್ ಮತ್ತೊಮ್ಮೆ ತಮ್ಮ ವಿವಾದಾತ್ಮಕ ಹೇಳಿಕೆಗಳ...

ಜಂತರ್‌ ಮಂತರ್‌ನಲ್ಲಿ 500ಕ್ಕೂ ಅಧಿಕ ಮಂದಿ ಅರೆಸ್ಟ್: ‘ಗ್ಯಾನೇಶ್ ಕುಮಾರ್ ಬಂಧನವಾಗಲಿ’ ಎಂದ ನಾಯಕರು

ಎಸ್‌ಐಆರ್ ಮೊದಲಾದ ಪ್ರಕ್ರಿಯೆ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ...

ವಿಜಯಪುರ | ರೂ. 2,500 ಸಬ್ಸಿಡಿಗೆ ವಿರೋಧ: ಸರ್ಕಾರಕ್ಕೆ ದೇಣಿಗೆ ಸಂಗ್ರಹಿಸಿ ಕೊಟ್ಟ ರೈತರು!

ಭೀಕರ ಬರದಿಂದ ನಲುಗಿರುವ ರೈತರಿಗೆ ರಾಜ್ಯ ಸರ್ಕಾರ ಘೋಷಿಸಿರುವ ₹2,500 ಇನ್‌ಪುಟ್...