ಭಾರತ ರೂಪುಗೊಂಡಿದ್ದೇ ಸ್ವಾತಂತ್ರ್ಯ ಹೋರಾಟದ ಬಳಿಕ: ಡಾ. ವಾಸು ಎಚ್ ವಿ

Date:

ಭಾರತ ರೂಪುಗೊಂಡಿದ್ದೇ ಸ್ವಾತಂತ್ರ್ಯ ಹೋರಾಟದ ಬಳಿಕ. ಭಾರತದ ಸ್ವಾತಂತ್ರ್ಯ ಸಂಗ್ರಾಮವನ್ನು ನಾವು ಈ ಒಟ್ಟಾರೆ ದೃಷ್ಟಿಕೋನದಿಂದ ನೋಡಬೇಕು. ಸ್ವಾತಂತ್ರ್ಯ ಸಂಗ್ರಾಮ ಎಂದಾಗ ಬರೀ ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ಭಗತ್‌ ಸಿಂಗ್ ಮೊದಲಾದವರ ಹೆಸರನ್ನು ನಾವು ನೆನೆಯುವಂತೆ ಸಮಾನತೆ, ಪ್ರಜಾಪ್ರಭುತ್ವಕ್ಕಾಗಿ ಹೋರಾಡಿದ ಆದಿವಾಸಿ ಹುತಾತ್ಮರಿಂದ ಹಿಡಿದು ಬಾಬಾ ಸಾಹೇಬ್ ಅಂಬೇಡ್ಕರ್‌ವರೆಗೂ ನೆನೆಯಬೇಕು ಎಂದು ‘ಜಾಗೃತ ಕರ್ನಾಟಕ’ ಸಂಘಟನೆಯ ರಾಜ್ಯ ಸಂಚಾಲಕ ಡಾ. ವಾಸು ಎಚ್‌ ವಿ ಅವರು ಹೇಳಿದರು.

- Advertisement -

‘ಜಾಗೃತ ಕರ್ನಾಟಕ’ ಸಂಘಟನೆ ಆನ್‌ಲೈನ್‌ನಲ್ಲಿ ಆಯೋಜಿಸಿದ್ದ ‘ನಮ್ಮ ಭಾರತದ ಸ್ವಾತಂತ್ರ್ಯ ಸಂಗ್ರಾಮದ ವಿಶಿಷ್ಟ ಕಥನ’ ಸಂವಾದದಲ್ಲಿ ಮಾತನಾಡಿದ ವಾಸು ಎಚ್‌ ವಿ ಅವರು, “ಇಂಗ್ಲೆಂಡ್‌ನಲ್ಲಿ ಪ್ರೊಟೆಸ್ಟೆಂಟ್ ಕ್ರೈಸ್ತರು, ಫ್ರಾನ್ಸ್ ಕ್ಯಾಥೋಲಿಕ್ ಪ್ರಾಬಲ್ಯವಿರುವ ಏಕರೂಪತೆ ಇರುವ ದೇಶಗಳು. ಭಿನ್ನ ಕೋಮಿನ, ಪಂಗಡದ ಜತೆ ಯುದ್ಧ ಮಾಡುತ್ತಾ ಮಾಡುತ್ತಾ ನಾವೆಲ್ಲ ಒಂದೇ ಅಂದುಕೊಂಡವರು. ಆದರೆ ನಮ್ಮದು ಒಂದೇ ಜನಾಂಗವಲ್ಲ, ಒಂದೇ ಧರ್ಮವಲ್ಲ, ಒಂದೇ ರೀತಿಯ ಭೂಭಾಗವಿಲ್ಲ, ಪಟ್ಟಣ ಒಂದೆಡೆ, ಹಸಿವಿನಿಂದ ಸಾಯುವ ಗ್ರಾಮೀಣ ಭಾಗ ಇನ್ನೊಂದೆಡೆ. ಇವೆಲ್ಲವನ್ನೂ ಸೇರಿ ನಡೆದಿದ್ದು ಭಾರತದ ಸ್ವಾತಂತ್ರ್ಯ ಹೋರಾಟ” ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಇದನ್ನೂ ಓದಿ: ಮೈಸೂರು | ಜಾತಿ ವ್ಯವಸ್ಥೆಯೇ, ಅಭಿವೃದ್ಧಿಯ ವಿರೋಧಿ: ಡಾ ಎಚ್ ವಿ ವಾಸು

“ನಮ್ಮ ದೇಶದಲ್ಲಿ ನೂರಾರು ಪಾಂತ್ಯಗಳು ಇದ್ದವು. ಯಾರೂ ಆಳ್ವಿಕೆ ಮಾಡದ ಕಾಡುಗಳಿದ್ದವು. ಆದಿವಾಸಿಗಳು ಆ ಕಾಡನೇ ತಮ್ಮ ಆಸ್ತಿಯನ್ನಾಗಿಸಿ ಅಲ್ಲಿ ವಾಸಿಸುತ್ತಿದ್ದರು. ಆದರೆ ಬ್ರಿಟಿಷರು ಬಂದು ಕಾಡು ಸರ್ಕಾರದ್ದು ಎಂದರು. ಈ ವೇಳೆ ಆದಿವಾಸಿಗಳು ತಮ್ಮ ಆಸ್ತಿಯನ್ನು ಉಳಿಸಿಕೊಳ್ಳಲು ಬ್ರಿಟಿಷರ ವಿರುದ್ಧ ಹೋರಾಡಿದರು. ಬ್ರಿಟಿಷರ ವಿರುದ್ಧ ಮೊದಲ ಸ್ವಾತಂತ್ರ್ಯ ಹೋರಾಟ ಮಾಡಿದವರು ಆದಿವಾಸಿಗಳು” ಎಂದರು.

“ಏಕರೂಪದ ಧರ್ಮ ಎಂಬುದು ಭಾರತದಲ್ಲಿ ಇರಲಿಲ್ಲ. ಆದರೆ ಭಾರತದಲ್ಲಿ ಜಾತಿ ಪದ್ಧತಿ, ಅಸ್ಪೃಶ್ಯತೆ, ಪರಸ್ಪರ ಇನ್ನೊಬ್ಬರ ನಾಶಕ್ಕೆ ಹವಣಿಸುತ್ತಿದ್ದ ರಾಜಪ್ರಭುತ್ವಗಳಿದ್ದವು. ಇವೆಲ್ಲವೂ ಒಂದು ರಾಜಕೀಯ ಚೌಕಟ್ಟಿಗೆ ಬಂದಿದ್ದು ಬ್ರಿಟಿಷರಿಂದಾಗಿ. ಆ ಕಾಲದಲ್ಲಿ ನಾಗಾಲ್ಯಾಂಡ್‌ಗೆ ಬ್ರಿಟಿಷರಿಗೆ ಹೋಗಲು ಅವಕಾಶವಿರಲಿಲ್ಲ. ರಾಷ್ಟ್ರ ಎಂಬುದು ಸಾಮಾಜಿಕ ರಚನೆ ರೀತಿಯಲ್ಲಿ, ರಾಜಕೀಯ ಘಟಕಗಳ ಒಕ್ಕೂಟವಾಗಿರಬೇಕು. ಆದರೆ ಸ್ವಾತಂತ್ರ್ಯಕ್ಕೂ ಮುನ್ನ ಭಾರತ ಹಾಗೆ ಇರಲಿಲ್ಲ. ಭಾರತ ಎಂದಿಗೂ ಒಂದು ಸಾಂಸ್ಕೃತಿಕ ಘಟಕವಾಗಿರಲಿಲ್ಲ. ಇಂದಿಗೂ ಇಲ್ಲ” ಎಂದು ತಿಳಿಸಿದರು.

ಕರ್ನಾಟಕದ ಒಂದೊಂದು ಭಾಗದಲ್ಲಿ ಕಂದಾಯ ಅಧಿಕಾರಿಗಳನ್ನು ಒಂದೊಂದು ರೀತಿಯಲ್ಲಿ ಕರೆಯುತ್ತಾರೆ. ಕೆಲವೆಡೆ ತಲಾಟಿ ಎನ್ನುತ್ತಾರೆ, ಕೆಲವೆಡೆ ಗ್ರಾಮಲೆಕ್ಕಿಗ ಎನ್ನುತ್ತಾರೆ. ಹೀಗೆಯೇ ಮನೆಯ ನಂಬರ್‌ (ಡೋರ್ ನಂಬರ್) ಇರುವ ಶೈಲಿಯೂ ವಿಭಿನ್ನವಾಗಿರುತ್ತದೆ. ಹೀಗಿದ್ದ ಭಾರತದಲ್ಲಿ ಬ್ರಿಟಿಷರು ಹೊಕ್ಕರು” ಎಂದರು.

“ಚೌಹಾರ್‌ ಎಂಬ ಆದಿವಾಸಿಗಳು ಬ್ರಿಟಿಷರ ವಿರುದ್ಧ ಧಂಗೆ ಎದ್ದರು. ಅದಾದ ಬಳಿಕ ಹಲವು ಆದಿವಾಸಿಗಳು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದಾರೆ. ಧೀರೋದಾತ್ತ, ವಿರೋಚಿತ ಹೋರಾಟ ನಡೆಸಿದವರು ಆದಿವಾಸಿಗಳು. ಅದು ರಕ್ತಸಿಕ್ತವಾದುದ್ದು. ಶರಣಾಗುವುದರ ಬದಲಾಗಿ ಸಾಯುವವರೆಗೆ ಹೋರಾಡಿದವರು ಆದಿವಾಸಿಗಳು. ಸಂತಾಲರು 1855-56ರಲ್ಲಿ ಸಿದ್ಧೂ ಮತ್ತು ಕಾನಹ ನೇತೃತ್ವದಲ್ಲಿ ಬ್ರಿಟಿಷರ ವಿರುದ್ಧ ‘ಸಂತಾಲ್ ಹುಲ್’ (ದಂಗೆ) ನಡೆಸಿದರು. ಹತ್ತು ಸಾವಿರಕ್ಕೂ ಅಧಿಕ ಸಂತಾಲರು ಬಿಲ್ಲು-ಬಾಣಗಳಿಂದ ಹೋರಾಡಿದರು. ಬ್ರಿಟಿಷರು ಕ್ರೂರವಾಗಿ ದಂಗೆಯನ್ನು ಹತ್ತಿಕ್ಕಿ ಸಾವಿರಾರು ಜನರನ್ನು ಕೊಂದುಹಾಕಿದರು” ಎಂಬುದನ್ನು ನೆನಪಿಸಿದರು.

“:ಆದಿವಾಸಿಗಳಂತೆ, ರೈತರು, ಕಾರ್ಮಿಕರು, ಈ ದೇಶದ ಅತ್ಯಂತ ಜನ ಸಾಮಾನ್ಯರು ಹೋರಾಟ ನಡೆಸಿದರು. ಯಾಕೆ ಈ ಹೋರಾಟ ನಡೆಸಿದರು ಎಂದು ಅರ್ಥ ಮಾಡಿಕೊಂಡರೆ ಈ ದೇಶದ ಸಂವಿಧಾನ, ಈ ದೇಶ ವಿಶಿಷ್ಟ ಯಾಕೆ ಎಂಬುದು ಅರ್ಥವಾಗುತ್ತದೆ. ಅವರು ಅಖಂಡ ಭಾರತ ಕಟ್ಟಲು ಹೋರಾಟ ಮಾಡಿದ್ದಾರಾ? ಅದರ ಕಲ್ಪನೆಯಿತ್ತಾ? ಸರ್ಕಾರ ಕಟ್ಟುವ, ಪ್ರಧಾನಿ ಮಾಡುವ ಪರಿಕಲ್ಪನೆ ಇತ್ತ? ಖಂಡಿತವಾಗಿಯೂ ಇಲ್ಲ. ಈ ಹೋರಾಟ ಶುರುವಾಗಿದ್ದು ಕಾಡಿನಲ್ಲಿ. ನಮ್ಮ ಆಸ್ತಿಯಾದ ಕಾಡನ್ನು ನಮ್ಮದ್ದಲ್ಲ ಎನ್ನಲು ನೀನ್ಯಾರು ಎಂಬ ಪ್ರಶ್ನೆ ಎತ್ತಿ ಬ್ರಿಟಿಷರ ವಿರುದ್ಧ ನಡೆದ ಹೋರಾಟ” ಎಂದು ತಿಳಿಸಿದರು.

ಇದನ್ನೂ ಓದಿ: ಉಡುಪಿ | ಜನರ ಹಕ್ಕನ್ನು ಖಚಿತಪಡಿಸುವ ಉಚಿತ ಯೋಜನೆಗಳು ಬಿಟ್ಟಿಯಲ್ಲ: ಎಚ್ ವಿ ವಾಸು

“ಅರಣ್ಯ ಹಕ್ಕು ಕಾಯ್ದೆಯೂ ಒಂದು ಇತಿಹಾಸವಿದೆ. ಮಣಿಪುರ, ತ್ರಿಪುರಾ, ಅಸ್ಸಾಂ, ಸಿಕ್ಕಿಂ ಈ ದೇಶದೊಳಗೆ ಸೇರುವಾಗ ನಿಮಗೆ ಸಂವಿಧಾನಿಕ ಹಕ್ಕು ಇರುತ್ತದೆ ಎಂಬ ಭರವಸೆಯನ್ನು ಈ ದೇಶದ ಪ್ರಥಮ ನಾಯಕರು, ನಾಯಕಿಯರು ಕೊಟ್ಟಿದ್ದರಿಂದ ಆ ರಾಜ್ಯಗಳು ಭಾರತದೊಂದಿಗೆ ಸೇರಿಕೊಂಡಿದೆ ಎಂಬುದನ್ನು ನಾವು ಮರೆಯಬಾರದು” ಎಂದರು.

“1865ರಲ್ಲಿ ಮೊದಲು ಅರಣ್ಯ ಕಾಯ್ದೆ ಬಂತು. ಕಾಡನ್ನು ಸರ್ಕಾರದ ಆಸ್ತಿ ಎಂದು ಘೋಷಿಸಲಾಯಿತು. ಅದಾ ಬಳಿಕ ಶಸ್ತ್ರಾಸ್ತ್ರ ಕಾಯ್ದೆ, ಕ್ರಿಮಿನಲ್ ಟ್ರೈಬ್ಸ್ ಕಾಯ್ದೆ (Criminal Tribes Act) ತಂದರು. ಅಂದರೆ ಬ್ರಿಟಿಷ್ ಸರ್ಕಾರವು ಬುಡಕಟ್ಟು ಸಮುದಾಯಗಳನ್ನು ‘ಹುಟ್ಟಿನಿಂದಲೇ ಅಪರಾಧಿಗಳು’ ಎಂದು ಘೋಷಿಸಿತು. ಈ ಇತಿಹಾಸ ನಮಗೆ ತಿಳಿದಿರಬೇಕು. ಇಂದು ನಾವು ಮತ ಹಾಕಬೇಕಾದರೆ ನಿಮ್ಮ ಜನನ ಪ್ರಮಾಣಪತ್ರ ನೀಡಿ ಎಂದು ಕೇಳುತ್ತೇವೆ, ಹಾಗಿರುವಾಗ ಈ ಆದಿವಾಸಿಗಳು ಯಾವ ಹೋರಾಟದ ಹಾದಿ ತುಳಿದು ಬಂದವರು ಎಂದು ನಮಗೆ ತಿಳಿದಿರಬೇಕು” ಎಂದು ಹೇಳಿದರು.

ಅವಿಭಜಿತ ಧಾರವಾಡ ಜಿಲ್ಲೆಗಳಲ್ಲಿ ಬ್ರಿಟಿಷರ ತಿಜೂರಿ ಲೂಟಿ ಮಾಡುವುದೇ ಪ್ರಮುಖವಾಗಿ ರೈತಾಪಿ ಹೋರಾಟವಾಗಿತ್ತು. ಆದರೆ ಯಾಕಾಗಿ? ರೈತರ ಮೇಲೆ ಹೇರಲಾದ ಅನ್ಯಾಯದ ತೆರಿಗೆಯ ವಿರುದ್ಧದ ಹೋರಾಟ ಅದಾಗಿತ್ತು. 20ನೇ ಶತಮಾನದ ಕಾರ್ಮಿಕರು ನಡೆಸಿದ ಹೋರಾಟವನ್ನೂ ನಾವು ಗಮನಿಸಬೇಕು. ಕಾರ್ಮಿಕರ ಬಹುಪಾಲು ಕಾಯ್ದೆಗಳು ಆ ಕಾಲದಲ್ಲಿ ಜಾರಿಗೆ ಬಂದಿದ್ದು. ಈ ಕಾರ್ಮಿಕರಿಗೆ ಅಖಂಡ ಭಾರತದ ಕಲ್ಪನೆಯಿತ್ತಾ? ಅವರಿಗೆ ತಮ್ಮನ್ನು ಸುಳಿಗೆ ಮಾಡುತ್ತಿದ್ದವರಿಂದ ಮುಕ್ತಿ ಬೇಕಿತ್ತು ಅಷ್ಟೇ” ಎಂದು ತಿಳಿಸಿದರು.

“ಇದು ವಸಾಹತುಶಾಹಿಗಳ ವಿರುದ್ಧದ ಚಳವಳಿ. ಇದನ್ನು ಬ್ರಿಟಿಷರ, ಬಿಳಿಯರ ವಿರುದ್ಧದ ಹೋರಾಟ ಎಂದು ಕರೆಯಲಾಗದು. ಯಾಕೆಂದರೆ ಕಾಂಗ್ರೆಸ್‌ನ ನಾಲ್ಕು ಅಧಿವೇಶನದ ನಾಯಕತ್ವ ವಹಿಸಿದ್ದು ಬ್ರಿಟಿಷರು ಅಥವಾ ಇತರೆ ದೇಶಿಯರು. ಹಾಗಾಗಿ ಇದು ವಸಾಹತುಶಾಹಿಗಳ ವಿರುದ್ಧದ ಚಳವಳಿ. ಇಡೀ ಜನಾಂಗದ ವಿರುದ್ಧದ ಚಳವಳಿಯಲ್ಲ. ಹಾಗೆಯೇ ಅಹಿಂಸಾತಾತ್ಮಕವಾಗಿ ಸಂಗ್ರಾಮ ನಡೆಸಬಹುದು ಎಂದು ತೋರಿಸಿಕೊಂಡದ್ದು ಭಾರತ” ಎಂದರು.

“ಈ ದೇಶ ರೂಪುಗೊಂಡಿದ್ದು ಸ್ವಾತಂತ್ರ್ಯ ಸಂಗ್ರಾಮದಲ್ಲಿ. ಹಾಗಾಗಿ ಭಾರತದ ರಾಷ್ಟ್ರವಾದ ಬ್ರಿಟಿಷರನ್ನು ಹೊರಗೋಡಿಸಿದ್ದು ಮಾತ್ರವಲ್ಲ. ಇಲ್ಲಿ ವೈವಿಧ್ಯತೆ ಇದೆ. ಬೇರೆ ಬೇರೆ ಸಮುದಾಯ ಪಾಲ್ಗೊಂಡಿದೆ. ಇದರ ಬಗ್ಗೆಯೂ ನಮಗೆ ತಿಳಿದಿರಬೇಕು. ಇದನ್ನು ಒಪ್ಪದವರು ವೈವಿಧ್ಯತೆಯನ್ನು ನಿರಾಕರಿಸುವವರು. ನಮ್ಮ ದೇಶವನ್ನು ಹಿಂದಕ್ಕೆ ಕರೆದುಕೊಂಡು ಹೋಗಲು ಬಯಸುವವರು ಮಾತ್ರ ಇದನ್ನು ವಿರೋಧಿಸಲು ಸಾಧ್ಯ” ಎಂದು ಅಭಿಪ್ರಾಯಿಸಿದರು.

ಇನ್ನು ಈ ಸಂದರ್ಭದಲ್ಲೇ ನಡೆದ ಸಂವಾದದಲ್ಲಿ ಎತ್ತಿದ್ದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, “ಕಾಂಗ್ರೆಸ್ ಸಂವಿಧಾನಪದ. ಬಿಜೆಪಿಯದ್ದು ಮನುಸ್ಮೃತಿಪರ ಎನ್ನಬಹುದು. ಆದರೆ ಇಷ್ಟು ಸರಳವಾಗಿ ಹೇಳಲಾಗದು. ಮಹಾತ್ಮ ಗಾಂಧಿ, ಬಾಬಾ ಸಾಹೇಬರದ್ದು ಒಂದೇ ರೀತಿಯ ನಿಲುವು ಇರಲಿಲ್ಲ. ಹಾಗೆಯೇ ಭಗತ್‌ ಸಿಂಗ್, ಮಹಾತ್ಮ ಗಾಂಧಿ ಅವರ ನಿಲುವು ಒಂದೇ ಆಗಿರಲಿಲ್ಲ” ಎಂದು ತಿಳಿಸಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಲಿ: ಇಸಿಐ ವಿವರಣೆ ತಿರಸ್ಕರಿಸಿದ ಸಿಪಿಐಎಂ; ಸಿಇಸಿ ಪದಚ್ಯುತಿಗೆ ಆಗ್ರಹ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರ...

ಮುದ್ದೇಬಿಹಾಳ | ದಾಸೋಹಿ ರೈತ ಉತ್ಪಾದಕ ಸಹಕಾರಿ ಸಂಘದ ಆರ್ಥಿಕ ಚಟುವಟಿಕೆ: ಗವಿಸಿದ್ದೇಶ್ವರ ಶ್ರೀಗಳಿಂದ ಚಾಲನೆ

ರೈತರೇ ಮಾಲೀಕರಾಗಿ, ರೈತರ ಆರ್ಥಿಕ ಸಬಲೀಕರಣವನ್ನೇ ಕೇಂದ್ರವಾಗಿಟ್ಟುಕೊಂಡು ಅಸ್ತಿತ್ವಕ್ಕೆ ಬಂದಿರುವ ದಾಸೋಹಿ...

ಸಮುದ್ರದಲ್ಲಿ ಅಲೆಗಳು ಭೋರ್ಗರೆಯುತ್ತಿರುವಾಗ ಈಜುವುದು ನನಗಿಷ್ಟ: ವೈರಲ್ ಆಯ್ತು ರಾಹುಲ್ ಗಾಂಧಿ ‘X’ ಪೋಸ್ಟ್

ಸಮುದ್ರದಲ್ಲಿ ಅಲೆಗಳು ಭೋರ್ಗರೆಯುತ್ತಿರುವಾಗ ಈಜುವುದು ನನಗಿಷ್ಟ ಎಂದು ಕಾಂಗ್ರೆಸ್ ನಾಯಕ ಹಾಗೂ...

ಗವಿಸಿದ್ದೇಶ್ವರ ಸ್ವಾಮೀಜಿ ದಸರಾ ಉದ್ಘಾಟನೆ ಆಹ್ವಾನ ತಿರಸ್ಕರಿಸಿದ್ದಾರೆಂಬ ಸುಳ್ಳುಸುದ್ದಿ: ತಪ್ಪಿತಸ್ಥನ ವಿರುದ್ಧ FIR

ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ಆಹ್ವಾನವನ್ನು...